For Quick Alerts
ALLOW NOTIFICATIONS  
For Daily Alerts

ವೇದಾಂತ ಕಂಪನಿಯಿಂದ ದೇಶದ 4.2 ಕೋಟಿ ಜನರಿಗೆ ನೆರವು

|

ಬೆಂಗಳೂರು, ಸೆಪ್ಟಂಬರ್ 03: ವಿಶ್ವದ ಅತ್ಯಂತ ದೊಡ್ಡ ನೈಸರ್ಗಿಕ ಸಂಪನ್ಮೂಲ ಕಂಪನಿಗಳಲ್ಲಿ ಒಂದಾಗಿರುವ ವೇದಾಂತ ಲಿಮಿಟೆಡ್ ಭಾರತದಾದ್ಯಂತ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ಯೋಜನೆಗಳಡಿಯಲ್ಲಿ 4.23 ಕೋಟಿ ಜನರ ಜೀವನದ ಮೇಲೆ ಧನಾತ್ಮಕವಾದ ಪರಿಣಾಮವನ್ನು ಉಂಟುಮಾಡಿದೆ.

ಸಾಮಾಜಿಕ ಅಭಿವೃದ್ಧಿ ಉಪಕ್ರಮಗಳ ಕುರಿತಾದ ವರದಿಯನ್ನು ಬಿಡುಗಡೆ ಮಾಡಿರುವ ಕಂಪನಿಯು ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಅನೇಕ ಅರ್ಥಪೂರ್ಣವಾದ ಸಿಎಸ್‍ಆರ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ದೇಶದ ಅತ್ಯಂತ ಜವಾಬ್ದಾರಿಯುತವಾದ ಸಾಮಾಜಿಕ ಹೊಣೆಗಾರಿಕೆ ಕಾರ್ಪೊರೇಟ್‍ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಹಣಕಾಸು ಸಾಲಿನಲ್ಲಿ ಕಂಪನಿಯು ಹಲವಾರು ಸಿಎಸ್‍ಆರ್ ಚಟುವಟಿಕೆಗಳಿಗೆ 331 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ. ಇವುಗಳಲ್ಲಿ ಪ್ರಮುಖವಾಗಿ ಸಾಂಕ್ರಾಮಿಕ ಪರಿಹಾರ ಕಾರ್ಯಗಳು, ಮಕ್ಕಳ ಯೋಗಕ್ಷೇಮ & ಶಿಕ್ಷಣ, ಮಹಿಳೆಯರ ಸಬಲೀಕರಣ, ಆರೋಗ್ಯ ರಕ್ಷಣೆ, ಸುಸ್ಥಿರ ಕೃಷಿ & ಜಾನುವಾರು ಹಿತರಕ್ಷಣೆ, ಯುವ ಸಮುದಾಯಕ್ಕೆ ಮಾರುಕಟ್ಟೆ ಸಂಬಂಧಿತ ಕೌಶಲ್ಯ ನೀಡುವುದು, ಪರಿಸರ ರಕ್ಷಣೆ & ಪುನರ್ ಸ್ಥಾಪನೆ, ಸಮುದಾಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸೇರಿವೆ.

' ಕೊರೊನಾ ವೈರಸ್ ವಿರುದ್ಧ ಹೋರಾಡಲು ನಾನು 100 ಕೋಟಿ ಮೀಸಲಿಡುತ್ತಿದ್ದೇನೆ. ದೇಶಕ್ಕೆ ಅಗತ್ಯವಿರುವ ಸಮಯದಲ್ಲಿ ಈ ಹಣ ಬಳಕೆಯಾಗಬೇಕಿದೆ. ದಿನಗೂಲಿ ಕಾರ್ಮಿಕರು, ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರರು ಬಹಳ ಕಷ್ಟ ಸನ್ನಿವೇಶ ಎದುರಿಸುತ್ತಿದ್ದಾರೆ. ಅವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ನಮ್ಮಿಂದ ಸಾಧ್ಯವಾದ ಸಹಾಯ ಮಾಡುತ್ತಿದ್ದೇನೆ'' ಎಂದು ವೇದಾಂತ ರಿಸೋರ್ಸಸ್‍ನ ಅಧ್ಯಕ್ಷ ಅನಿಲ್ ಅಗರ್‌ವಾಲ್ ಹೇಳಿದ್ದಾರೆ.

ಸಮಗ್ರ ಸಾಮಾಜಿಕ ಪರಿಣಾಮ ವರದಿ

ಸಮಗ್ರ ಸಾಮಾಜಿಕ ಪರಿಣಾಮ ವರದಿ

ಸಮಗ್ರ ಸಾಮಾಜಿಕ ಪರಿಣಾಮ ವರದಿಯು ವೇದಾಂತದ ಸಿಎಸ್‍ಆರ್ ನೀತಿಯನ್ನು ತೆರೆದಿಟ್ಟಿದೆ. ಇದರಲ್ಲಿ ಪ್ರಮುಖವಾಗಿ ವೇದಾಂತದ ಉದ್ದೇಶಗಳು ಮತ್ತು ಕಾರ್ಯಯೋಜನೆಗಳು, ಅನುಷ್ಠಾನ ಮತ್ತು ಆಡಿಟ್ ಮಾರ್ಗಸೂಚಿಗಳು ಸೇರಿದ್ದು, ದೇಶಾದ್ಯಂತ ಶಿಕ್ಷಣ, ಸುಸ್ಥಿರವಾದ ಜೀವನೋಪಾಯ, ಕೌಶಲ್ಯ, ಮಹಿಳಾ ಸಬಲೀಕರಣ, ಪರಿಸರ, ಕ್ರೀಡೆ, ಕುಡಿಯುವ ನೀರು, ಸ್ಯಾನಿಟೇಷನ್ ಮತ್ತು ಸಮುದಾಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ 56 ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.

ಗ್ರಾಮೀಣ ಉನ್ನತಿ ಕಾರ್ಯಕ್ರಮಗಳಿಗೆ 5,000 ಕೋಟಿ

ಗ್ರಾಮೀಣ ಉನ್ನತಿ ಕಾರ್ಯಕ್ರಮಗಳಿಗೆ 5,000 ಕೋಟಿ

ಈ ವರ್ಷದ ಆರಂಭದಲ್ಲಿ ವೇದಾಂತ ಅನಿಲ್ ಅಗರ್‍ವಾಲ್ ಫೌಂಡೇಷನ್ (ಎಎಎಫ್) ಮೂಲಕ ಕಾರ್ಯಗತಗೊಳಿಸುವ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿತ್ತು ಮತ್ತು ಸಮಾಜಕ್ಕೆ ಹಿಂತಿರುಗಿಸುವ ಭಾಗವಾಗಿ ತನ್ನ ಗ್ರಾಮೀಣ ಉನ್ನತಿ ಕಾರ್ಯಕ್ರಮಗಳಿಗೆ 5,000 ಕೋಟಿ ರೂಪಾಯಿಗಳನ್ನು ನೀಡುವ ಭರವಸೆ ನೀಡಿದೆ. ಎಎಎಫ್‍ನ ಸ್ವಸ್ಥ್ಯ ಗಾಂವ್ ಅಭಿಯಾನ'ದಡಿ 12 ರಾಜ್ಯಗಳ 1000 ಕ್ಕೂ ಅಧಿಕ ಗ್ರಾಮಗಳಿಗೆ ಆರೋಗ್ಯ ರಕ್ಷಣೆ ಸೇವೆಗಳನ್ನು ನೀಡಲಿದ್ದು, ಇದರಿಂದ 2 ಮಿಲಿಯನ್ ಜನರಿಗೆ ಅನುಕೂಲವಾಗಲಿದೆ.

ಇದಲ್ಲದೇ, ಎಎಎಫ್ ತನ್ನ ಫ್ಲ್ಯಾಗ್‍ಶಿಪ್ ಆಗಿರುವ ನಂದಘರ್ ಕಾರ್ಯಕ್ರಮವನ್ನು ಭಾರತ ಸರ್ಕಾರದ ಮಹಿಳಾ & ಮಕ್ಕಳ ಕಲ್ಯಾಣ (ಎಂಒಡಬ್ಲ್ಯುಸಿಡಿ) ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತಂದಿದ್ದು, ಇದರಡಿ ಪೌಷ್ಠಿಕಾಂಶ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. 11 ರಾಜ್ಯಗಳಲ್ಲಿ ಸುಮಾರು 2400 ನಂದಘರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ 13.7 ಲಕ್ಷ ಅಂಗನವಾಡಿಗಳಲ್ಲಿನ 7 ಕೋಟಿ ಮಕ್ಕಳು ಮತ್ತು 2 ಕೋಟಿ ಮಹಿಳೆಯರ ಜೀವನಗಳಲ್ಲಿ ಪರಿವರ್ತನೆ ತರುತ್ತಿದೆ.

 

ವೇದಾಂತ ರಿಸೋರ್ಸಸ್‍ನ ಅಧ್ಯಕ್ಷ ಅನಿಲ್

ವೇದಾಂತ ರಿಸೋರ್ಸಸ್‍ನ ಅಧ್ಯಕ್ಷ ಅನಿಲ್

ವರದಿ ಬಿಡುಗಡೆ ಮಾಡಿ ಮಾತನಾಡಿದ ವೇದಾಂತ ರಿಸೋರ್ಸಸ್‍ನ ಅಧ್ಯಕ್ಷ ಅನಿಲ್ ಅಗರ್‌ವಾಲ್ ಅವರು, "ವೇದಾಂತ ಒಂದು ಜವಾಬ್ದಾರಿಯುತವಾದ ನೈಸರ್ಗಿಕ ಸಂಪನ್ಮೂಲಗಳ ಕಂಪನಿಯಾಗಿದೆ ಮತ್ತು ಯಾವಾಗಲೂ ಸಮಾಜ ಅಥವಾ ಸಮುದಾಯಕ್ಕೆ ಹಿಂತಿರುಗಿಸುವ ಉದ್ದೇಶಗಳನ್ನು ಕಾರ್ಯಗತಗೊಳಿಸುತ್ತಾ ಬರುತ್ತಿದೆ. ಹಲವು ವರ್ಷಗಳಿಂದ ವೇದಾಂತ ಆರೋಗ್ಯ ರಕ್ಷಣೆ, ಶಿಕ್ಷಣ, ಕೌಶಲ್ಯ ಮತ್ತು ಜೀವನೋಪಾಯಗಳನ್ನು ಒದಗಿಸುವ ಮೂಲಕ ಸಮಾಜದ ಜೀವನಗಳ ಮೇಲೆ ಸಕಾರಾತ್ಮಕವಾದ ಪರಿಣಾಮಗಳನ್ನು ಬೀರುತ್ತಿದೆ. ಇದರೊಂದಿಗೆ ನಮ್ಮ ಸಮುದಾಯಗಳ ಅಭಿವೃದ್ಧಿ ಮಾಡುವ ಮೂಲಕ ಸಮುದಾಯಗಳ ವಿಶ್ವಾಸವನ್ನು ವೃದ್ಧಿಸಿಕೊಳ್ಳುತ್ತಾ ಬರುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ನಾವು ನಿರಂತರವಾಗಿ ನಡೆಸಲಿದ್ದೇವೆ'' ಎಂದರು.

ನಿರ್ದೇಶಕಿ ಪ್ರಿಯಾ ಅಗರ್‌ವಾಲ್ ಹೆಬ್ಬಾರ್

ನಿರ್ದೇಶಕಿ ಪ್ರಿಯಾ ಅಗರ್‌ವಾಲ್ ಹೆಬ್ಬಾರ್

ವೇದಾಂತ ರಿಸೋರ್ಸಸ್‍ನ ನಿರ್ದೇಶಕಿ ಪ್ರಿಯಾ ಅಗರ್‌ವಾಲ್ ಹೆಬ್ಬಾರ್ ಅವರು ಮಾತನಾಡಿ, "ಕಳೆದ ಹಲವು ವರ್ಷಗಳಿಂದ ವೇದಾಂತ ತನ್ನ ಸಿಎಸ್‍ಆರ್ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಅತ್ಯಂತ ಪರಿಣಾಮಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಆದರೆ, ಈ ಸಮಯದಲ್ಲಿ ನಮ್ಮ ಸಾಂಪ್ರದಾಯಿಕ ಚಟುವಟಿಕೆಗಳ ಹೊರತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಯಿತು. ಇದರ ಮೂಲಕ ಸಾಂಕ್ರಾಮಿಕದ ಅವಧಿಯಲ್ಲಿ ಜನರ ಜೀವನವನ್ನು ರಕ್ಷಣೆ ಮಾಡುವ ಗುರುತರವಾದ ಜವಾಬ್ದಾರಿ ನಮ್ಮದಾಗಿತ್ತು. ಪ್ರತಿಯೊಬ್ಬ ತಾಯಿ ಮತ್ತು ಮಗುವು ಬೆಳವಣಿಗೆ ಹೊಂದಬೇಕು ಎಂಬುದರ ಮೂಲತತ್ತ್ವದಡಿ ನಾವು ನಂದಘರ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದಲ್ಲದೇ, ಇದೇ ಮೊದಲ ಬಾರಿಗೆ ನಾವು ವಿಶ್ವದರ್ಜೆ ಮೂಲಸೌಕರ್ಯಗಳನ್ನು ಒದಗಿಸುವುದು, ಜಾನುವಾರುಗಳಿಗೆ ಚಿಕಿತ್ಸಾ ಸೇವೆಗಳು, ತರಬೇತಿ ಸೌಲಭ್ಯ ಮತ್ತು ಆಶ್ರಯ ನೀಡುವುದಕ್ಕೆ ಆದ್ಯತೆ ನೀಡಿದ್ದೇವೆ. ಇದಕ್ಕಾಗಿ ಜಾಗತಿಕ ಶಿಕ್ಷಣ ಸಂಸ್ಥೆಗಳು ಮತ್ತು ಜ್ಞಾನಾಧಾರಿತ ಸಂಸ್ಥೆಗಳ ಜತೆಯಲ್ಲಿ ಸಹಭಾಗಿತ್ವ ಮಾಡಿಕೊಂಡಿದ್ದೇವೆ''ಎಂದು ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ

ಹಲವಾರು ಉಪಕ್ರಮಗಳ ಭಾಗವಾಗಿ ವೇದಾಂತ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಲು ನೆರವಾಗುತ್ತಿದೆ. ಇದಕ್ಕಾಗಿ ವೇದಾಂತ 101 ಕೋಟಿ ರೂಪಾಯಿಗಳನ್ನು ಪಿಎಂ-ಕೇರ್ಸ್ ಫಂಡ್‍ಗೆ ನೀಡಿರುವುದು ಮತ್ತು 100 ಕೋಟಿ ರೂಪಾಯಿಗಳನ್ನು ಸಮುದಾಯಗಳಿಗೆ ಬೆಂಬಲ ನೀಡುವುದು, ದಿನಗೂಲಿ ನೌಕರರಿಗೆ ನೆರವಾಗುವುದು, ಆರೋಗ್ಯರಕ್ಷಣೆ ಮತ್ತು ನೌಕರರ ಕಲ್ಯಾಣಕ್ಕಾಗಿ ಕಾರ್ಪಸ್ ನಿಧಿಗೆ ದೇಣಿಗೆ ನೀಡುವುದು ಸೇರಿದಂತೆ 201 ಕೋಟಿ ರೂಪಾಯಿಗಳನ್ನು ನೀಡಿದೆ. ವೇದಾಂತದ ಕೋವಿಡ್ ಕೇರ್ ಉಪಕ್ರಮಗಳಿಂದಾಗಿ 15 ಲಕ್ಷಕ್ಕೂ ಅಧಿಕ ಜನರಿಗೆ ನೆರವಾಗಿದೆ.

ಇದಲ್ಲದೇ, ಈ ವರ್ಷ ವೇದಾಂತ ಕೇರ್ಸ್ ಅಡಿಯಲ್ಲಿ 10 ಸ್ಥಳಗಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ 100 ಕ್ರಿಟಿಕಲ್ ಕೇರ್ ಬೆಡ್ಸ್ ಅನ್ನು ಒದಗಿಸಿದೆ. ಇದುವರೆಗೆ ಕೋವಿಡ್ ಪೀಡಿತ ರೋಗಿಗಳಿಗೆ 20 ಲಕ್ಷ ಲೀಟರ್‌ಗೂ ಅಧಿಕ ಆಮ್ಲಜನಕವನ್ನು ಪೂರೈಸಲಾಗಿದೆ.

 

English summary

Vedanta's CSR initiatives impacted lives of 4.23 crore people in FY21

Vedanta on Thursday said it has spent Rs 331 crore in 2020-21 fiscal on its corporate social responsibility (CSR) programmes that positively impacted the lives of 4.23 crore beneficiaries.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X