For Quick Alerts
ALLOW NOTIFICATIONS  
For Daily Alerts

5ಜಿ ಸ್ಮಾರ್ಟ್ ಸಿಟಿ ಸಲ್ಯೂಷನ್ಸ್ ಪ್ರಯೋಗಕ್ಕಾಗಿ ಎಲ್ & ಟಿ ಜತೆ ವಿ ಪಾಲುದಾರಿಕೆ

|

ಮುಂಬೈ, ಅಕ್ಟೋಬರ್ 18:5 ಜಿ ಆಧಾರಿತ ಸ್ಮಾರ್ಟ್ ಸಿಟಿ ಸಲ್ಯೂಷನ್‌ಗಳನ್ನು ಸರ್ಕಾರ ಹಂಚಿಕೆ ಮಾಡಿದ 5ಜಿ ತರಂಗಗುಚ್ಛಗಳಲ್ಲಿ ಪರೀಕ್ಷಿಸಲು ಪೈಲಟ್ ಯೋಜನೆ ಜಾರಿಗೊಳಿಸಲು ಪ್ರಮುಖ ಟೆಲಿಕಾಂ ಆಪರೇಟರ್, ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮತ್ತು ಪ್ರಮುಖ ಇಂಜಿನಿಯರಿಂಗ್ ಮತ್ತು ನಿರ್ಮಾಣ ಸಮೂಹವಾಗಿರುವ ಲಾರ್ಸನ್ & ಟೂಬ್ರೊದ ಸ್ಮಾರ್ಟ್ ವರ್ಲ್ಡ್ & ಕಮ್ಯುನಿಕೇಷನ್ ವಹಿವಾಟು ವಿಭಾಗ ಪಾಲುದಾರಿಕೆ ಮಾಡಿಕೊಂಡಿವೆ.

ಐಒಟಿಯಲ್ಲಿ ನಿರ್ಮಿಸಲಾದ ಮತ್ತು ಎಲ್ & ಟಿಯ ಸ್ಮಾರ್ಟ್ ಸಿಟಿ ಪ್ಲಾಟ್‍ಫಾರ್ಮ್ 'ಫ್ಯೂಷನ್' ಪ್ರಯೋಜನವನ್ನು ಪಡೆದುಕೊಂಡು ಐಓಟಿ, ವಿಡಿಯೋ ಎಐ ತಂತ್ರಜ್ಞಾನಗಳ ಆಧಾರದಲ್ಲಿ ನಿರ್ಮಿಸಲಾದ 5ಜಿ ಬಳಕೆಯ ಪ್ರಕರಣಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಕಂಪನಿಗಳು ಸಹಭಾಗಿತ್ವ ಮಾಡಿಕೊಂಡಿವೆ. ಈ ಮೂಲಕ ನಗರೀಕರಣ, ಸುರಕ್ಷತೆ & ಭದ್ರತೆಯ ಸವಾಲುಗಳನ್ನು ಬಗೆಹರಿಸಲಿದ್ದು, ಪುಣೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸುವ ಈ ಯೋಜನೆಯಲ್ಲಿ ಸ್ಮಾರ್ಟ್ ಸಲ್ಯೂಷನ್‌ಗಳನ್ನು ನಾಗರಿಕರಿಗೆ ಒದಗಿಸಲಿವೆ.

ವೋಡಾಫೋನ್ ಐಡಿಯಾದ ಅಭಿಜಿತ್ ಕಿಶೋರ್

ವೋಡಾಫೋನ್ ಐಡಿಯಾದ ಅಭಿಜಿತ್ ಕಿಶೋರ್

5 ಜಿ ಪ್ರಯೋಗಗಳು ಮತ್ತು ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ವೋಡಾಫೋನ್ ಐಡಿಯಾ ಲಿಮಿಟೆಡ್‍ನ ಮುಖ್ಯ ಉದ್ಯಮ ವ್ಯವಹಾರ ಅಧಿಕಾರಿ ಅಭಿಜಿತ್ ಕಿಶೋರ್, "ದೂರಸಂಪರ್ಕ ಪರಿಹಾರಗಳು ಸ್ಮಾರ್ಟ್ ಮತ್ತು ಸುಸ್ಥಿರ ನಗರಗಳನ್ನು ನಿರ್ಮಿಸುವ ಬೆನ್ನೆಲುಬು. 5 ಜಿ ತಂತ್ರಜ್ಞಾನದ ಆಗಮನವು ನಗರ ಬೆಳವಣಿಗೆಯ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ಸ್ಮಾರ್ಟ್ ಸಿಟಿಯ ಸಮರ್ಥನೀಯ ಸೃಷ್ಟಿಗೆ ಬೆಂಬಲಿಸಲು ಕಟ್ಟಕಡೆಯ ಪರಿಹಾರಗಳನ್ನು ಒದಗಿಸಲು ಸಂಪೂರ್ಣ ಹೊಸ ಅವಕಾಶಗಳನ್ನು ತೆರೆಯುತ್ತದೆ. 5 ಜಿ ಆಧಾರಿತ ಸ್ಮಾರ್ಟ್ ಸಿಟಿ ಪರಿಹಾರಗಳನ್ನು ಪರೀಕ್ಷಿಸಲು ಮತ್ತು ಭವಿಷ್ಯದ ನಗರಗಳನ್ನು ರೂಪಿಸಲು ಸಹಾಯ ಮಾಡುವ ಪರಿಹಾರಗಳನ್ನು ಕಂಡುಹಿಡಿಯಲು ನಮ್ಮ ಪರಸ್ಪರ ಪರಿಣತಿಯನ್ನು ಬಳಸಿಕೊಳ್ಳಲು ವಿಐ ಹಾಗೂ ಲಾರ್ಸನ್ & ಟೂಬ್ರೊ ಜೊತೆ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ" ಎಂದು ಹೇಳಿದರು.

Array

Array

"ನಿರಂತರವಾಗಿ ವಿಕಸನಗೊಳ್ಳುತ್ತಿರುವ ಈ ಜಗತ್ತಿನಲ್ಲಿ, ನಾವು ಸ್ಮಾರ್ಟ್ ಮತ್ತು ಅಧಿಕ ಬುದ್ಧಿಮತ್ತೆಯ ಪರಿಹಾರಗಳ ಬೇಡಿಕೆಯಲ್ಲಿ ಘಾತೀಯ ಏರಿಕೆಯನ್ನು ಕಾಣುತ್ತಿದ್ದೇವೆ ಮತ್ತು ಎಲ್ & ಟಿ ಸ್ಮಾರ್ಟ್ ವರ್ಲ್ಡ್ ಐಒಟಿ ಮತ್ತು ದೂರಸಂಪರ್ಕ ಪ್ರದೇಶಗಳಲ್ಲಿ ಇತ್ತೀಚಿನ ತಂತ್ರಜ್ಞಾನದ ಆವಿಷ್ಕಾರಗಳನ್ನು ಸಮಾಜಕ್ಕೆ ಲಾಭದಾಯಕವಾಗಿಸಲು ಬದ್ಧವಾಗಿದೆ. ವೊಡಾಫೋನ್ ಐಡಿಯಾದೊಂದಿಗೆ ಪಾಲುದಾರಿಕೆ ಹೊಂದಲು ನಾವು ಉತ್ಸುಕರಾಗಿದ್ದೇವೆ. ಭಾರತೀಯ ನಗರಗಳಾದ್ಯಂತ ಹಲವಾರು ಸ್ಮಾರ್ಟ್ ಪರಿಹಾರಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಕಸ್ಟಮೈಸ್ಡ್, ಐಒಟಿ-ಚಾಲಿತ 5 ಜಿ ಪರಿಹಾರಗಳನ್ನು ವಿವಿಧ ಉದ್ಯಮ ಮತ್ತು ಉದ್ದಿಮೆಗಳಿಗೆ ಅಭಿವೃದ್ಧಿಪಡಿಸಲು ನಮ್ಮ ಅನುಭವದ ಪ್ರಯೋಜನ ಬಳಸಿಕೊಳ್ಳಲಿದ್ದೇವೆ ಎಂದು ಎಲ್ & ಟಿಯ ಪೂರ್ಣಾವಧಿ ನಿರ್ದೇಶಕ, ರಕ್ಷಣೆ & ಸ್ಮಾರ್ಟ್ ಟೆಕ್ನಾಲಜೀಸ್ ವಿಭಾಗದ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಜೆಡಿ ಪಾಟೀಲ್ ಹೇಳಿದರು.

"ಈ ನಿರ್ದಿಷ್ಟ ಉಪಕ್ರಮವು ಎಲ್ & ಟಿ ಯ ಸಂಪರ್ಕಿತ ಸೇವೆಗಳ ವೈವಿಧ್ಯಮಯ ಶ್ರೇಣಿಗಳಲ್ಲಿ ಒಂದಾಗಿದೆ, ಇದು ಡಿಜಿಟಲ್ ಮತ್ತು ಸಂಪರ್ಕಿತ ಸೇವೆಗಳ ಡೊಮೇನ್‍ನಲ್ಲಿ ಮೌಲ್ಯವರ್ಧಿತ ಮತ್ತು ಕ್ರಿಯಾತ್ಮಕ ಒಳನೋಟಗಳನ್ನು ಒದಗಿಸಲು 5 ಜಿ ಸಾಮಥ್ರ್ಯಗಳನ್ನು ನಿಯಂತ್ರಿಸುತ್ತದೆ. ಆರೋಗ್ಯ ಸೇವೆ ಸೇರಿದಂತೆ ತೀವ್ರತರ ರೋಗಿಯ ಆರೋಗ್ಯ ಸ್ಥಿತಿಯ ಸಕಾಲಿಕ ಸಂವಹನವು ಆರೋಗ್ಯ ರಕ್ಷಣೆ ವೃತ್ತಿಪರರಿಗೆ ಜೀವಗಳನ್ನು ಉಳಿಸಲು ಕೂಡಾ ನೆರವಾಗುತ್ತದೆ" ಎಂದು ಪಾಟೀಲ್ ವಿವರಿಸಿದರು.

5ಜಿ ಆಧಾರಿತ ಸ್ಮಾರ್ಟ್ ಮತ್ತು ಸುರಕ್ಷಿತ ನಗರ ಅಪ್ಲಿಕೇಶನ್

5ಜಿ ಆಧಾರಿತ ಸ್ಮಾರ್ಟ್ ಮತ್ತು ಸುರಕ್ಷಿತ ನಗರ ಅಪ್ಲಿಕೇಶನ್

ವಿ ಮತ್ತು ಲಾರ್ಸನ್ & ಟೂಬ್ರೊ ನಡುವಿನ ಪಾಲುದಾರಿಕೆಯು 5ಜಿ ಸೇವೆಗಳಾದ ವರ್ಧಿತ ಮೊಬೈಲ್ ಬ್ರಾಡ್‍ಬ್ಯಾಂಡ್ (ಇಎಂಬಿಬಿ), ಅಲ್ಟ್ರಾ ರಿಲಿಬಿಬಲ್ ಲೋ ಲೇಟೆನ್ಸಿ ಕಮ್ಯುನಿಕೇಷನ್ಸ್ (ಯುಆರ್‍ಎಲ್‍ಎಲ್‍ಸಿ) ಮತ್ತು ಮಲ್ಟಿ-ಆಕ್ಸೆಸ್ ಎಡ್ಜ್ ಕಂಪ್ಯೂಟಿಂಗ್ (ಎಂಇಸಿ) ಗಳನ್ನು ಒಳಗೊಂಡ ಹಲವಾರು 5ಜಿ ಆಧಾರಿತ ಬಳಕೆಯ ಪ್ರಕರಣಗಳನ್ನು ಪರೀಕ್ಷೆಗೆ ಗುರಿಪಡಿಸುವ ಗುರಿಯನ್ನು ಹೊಂದಿದೆ. 5ಜಿಯಲ್ಲಿ ಸ್ಮಾರ್ಟ್ ಸಿಟಿ ಅಪ್ಲಿಕೇಶನ್‍ಗಳು ಮತ್ತು ವ್ಯಾಪಾರ ಮಾದರಿಗಳ ಕಾರ್ಯಕ್ಷಮತೆಯ ಅಗತ್ಯತೆಗಳನ್ನು ವಿಶ್ಲೇಷಿಸಲು, 5ಜಿ ಆಧಾರಿತ ಸ್ಮಾರ್ಟ್ ಮತ್ತು ಸುರಕ್ಷಿತ ನಗರ ಅಪ್ಲಿಕೇಶನ್‍ಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ಮತ್ತು ಪ್ರಯೋಗ ಫಲಿತಾಂಶಗಳನ್ನು ದೃಶ್ಯೀಕರಿಸಲು ಹಾಗೂ ವಿಶ್ಲೇಷಿಸಲು ಮತ್ತು ಡೇಟಾ ವಿಶ್ಲೇಷಣಾ ಸಾಧನಗಳನ್ನು ಬಳಸಲು ಇದು ಸಹಾಯ ಮಾಡುತ್ತದೆ.

ವಿಐ ಬ್ಯುಸಿನೆಸ್ ಸ್ಮಾರ್ಟ್ ಸಿಟಿಗಳಿಗೆ ತನ್ನ ಐಒಟಿ, ಮೊಬಿಲಿಟಿ, ಫಿಕ್ಸ್‍ಡ್ ಲೈನ್ ಡೇಟಾ, ಬಿಸಿನೆಸ್ ಕಮ್ಯುನಿಕೇಶನ್ ಮತ್ತು ಕ್ಲೌಡ್ ಸಲ್ಯೂಷನ್‌ಗಳ ಶ್ರೇಣಿಯನ್ನು ಒದಗಿಸುತ್ತಿದೆ.

3.7 ಜಿಬಿಪಿಎಸ್‍ಗಿಂತ ಹೆಚ್ಚಿನ ವೇಗ 5ಜಿ ಟ್ರಯಲ್ ನೆಟ್‍ವರ್ಕ್

3.7 ಜಿಬಿಪಿಎಸ್‍ಗಿಂತ ಹೆಚ್ಚಿನ ವೇಗ 5ಜಿ ಟ್ರಯಲ್ ನೆಟ್‍ವರ್ಕ್

ವಿ ತನ್ನ 5ಜಿ ಪ್ರಯೋಗವನ್ನು ಕ್ಲೌಡ್ ಕೋರ್, ಹೊಸ ಪೀಳಿಗೆಯ ಸಾರಿಗೆ ಮತ್ತು ರೇಡಿಯೋ ಪ್ರವೇಶ ಜಾಲದ ಎಂಡ್-ಟು-ಎಂಡ್ ಕ್ಯಾಪ್ಟಿವ್ ನೆಟ್‍ವರ್ಕ್‍ನ ಸೆಟಪ್‍ನಲ್ಲಿ ಪುಣೆ ನಗರದಲ್ಲಿ ನಿಯೋಜಿಸಿದೆ. ಅದರ ಆರಂಭಿಕ ಪರೀಕ್ಷಾ ಫಲಿತಾಂಶಗಳಲ್ಲಿ ವಿ ಎಂಎಂ ವೇವ್ ಸ್ಪೆಕ್ಟ್ರಮ್ ಬ್ಯಾಂಡ್‍ನಲ್ಲಿ ಅತಿ ಕಡಿಮೆ ಸುಪ್ತತೆಯೊಂದಿಗೆ 3.7 ಜಿಬಿಪಿಎಸ್‍ಗಿಂತ ಹೆಚ್ಚಿನ ವೇಗವನ್ನು ಸಾಧಿಸಿದೆ. ಈ ವೇಗಗಳನ್ನು 5ಜಿ ಸ್ಟ್ಯಾಂಡ್-ನಾನ್ ನೆಟ್ವರ್ಕ್ ಆರ್ಕಿಟೆಕ್ಚರ್ ಮತ್ತು ಎನ್‍ಆರ್ ರೇಡಿಯೋಗಳನ್ನು ಬಳಸಿಕೊಂಡು ಅತ್ಯಾಧುನಿಕ ಉಪಕರಣಗಳೊಂದಿಗೆ ಸಾಧಿಸಲಾಗಿದೆ.

ಡಿಜಿಟಲ್ ಇಂಡಿಯಾದ ಹೊಸ ಯುಗಕ್ಕೆ ನಾಂದಿ

ಡಿಜಿಟಲ್ ಇಂಡಿಯಾದ ಹೊಸ ಯುಗಕ್ಕೆ ನಾಂದಿ

ವಿ ಗೆ 26ಜಿಎಚ್‍ಝೆಡ್ ಮತ್ತು 3.5 ಜಿಎಚ್‍ಝೆಡ್ ಸ್ಪೆಕ್ಟ್ರಮ್ ಅನ್ನು ತಮ್ಮ 5ಜಿ ನೆಟ್‍ವರ್ಕ್ ಪ್ರಯೋಗಗಳು ಮತ್ತು ಬಳಕೆಯ ಪ್ರಕರಣಗಳಿಗಾಗಿ, ಡಿಓಟಿಯಿಂದ ಎಂಎಂವೇವ್ ಬ್ಯಾಂಡ್‍ನಲ್ಲಿ ಹಂಚಿಕೆ ಮಾಡಲಾಗಿದೆ. ವಿ ತನ್ನ ಓಇಎಂ ಪಾಲುದಾರರೊಂದಿಗೆ ಗರಿಷ್ಠ 1.5 ಜಿಬಿಪಿಎಸ್ ವೇಗವನ್ನು 3.5 ಜಿಎಚ್‍ಝೆಡ್ ಬ್ಯಾಂಡ್ 5ಜಿ ಟ್ರಯಲ್ ನೆಟ್‍ವರ್ಕ್‍ನಲ್ಲಿ ಸಾಧಿಸಿದೆ.

5ಜಿ ನೆಟ್‍ವರ್ಕ್‍ನ ಹೆಚ್ಚಿನ ವೇಗ ಮತ್ತು ಕಡಿಮೆ ಸುಪ್ತತೆಯ ಗುಣಲಕ್ಷಣಗಳು ಸುಧಾರಿತ ಕಣ್ಗಾವಲು ಮತ್ತು ವೀಡಿಯೋ ಸ್ಟ್ರೀಮಿಂಗ್/ಪ್ರಸಾರದಂತಹ ಸಾಮರ್ಥ್ಯಗಳನ್ನು 5ಜಿ ಸ್ಮಾರ್ಟ್ ಸಿಟಿಗಳು ಮತ್ತು ಸ್ಮಾರ್ಟ್ ಫ್ಯಾಕ್ಟರಿಗಳ ವಿಕಾಸಕ್ಕೆ ಅನುವು ಮಾಡಿಕೊಡುತ್ತದೆ. ಸ್ಮಾರ್ಟ್ ಸಿಟಿ ಮತ್ತು ಇಂಡಸ್ಟ್ರಿ 4.0 5 ಜಿ ನಿಯೋಜನೆಯೊಂದಿಗೆ ವೇಗಗೊಳ್ಳುತ್ತದೆ ಮತ್ತು ಡಿಜಿಟಲ್ ಇಂಡಿಯಾದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ.

English summary

Vi Partners Larsen & Toubro for Trials of Smart City Solutions on 5G

Leading telecom operator, Vodafone Idea Limited (VIL) and Smart World & Communication business of leading Engineering & Construction conglomerate Larsen & Toubro have partnered, for a pilot project to test 5G-based Smart City solutions, as part of its ongoing 5G trials on Govt. allocated 5G spectrum.
Story first published: Monday, October 18, 2021, 18:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X