For Quick Alerts
ALLOW NOTIFICATIONS  
For Daily Alerts

ಪೇಟಿಎಂ ಜೊತೆ ಪ್ರಪಾತಕ್ಕೆ ಬಿದ್ದ 10 ಕಂಪನಿಗಳು; ಯಾವ ಷೇರು ಕೊಂಡರೆ ಉತ್ತಮ?

|

ನವದೆಹಲಿ, ನ. 25: ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಹಳಷ್ಟು ಕಂಪನಿಗಳು ನಷ್ಟ ತೋರಿಸಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ 4 ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಸುಮಾರು 1,100ಕ್ಕೂ ಹೆಚ್ಚು ಕಂಪನಿಗಳು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ನಷ್ಟ ಕಂಡಿವೆ.

ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಬರೋಬ್ಬರಿ 7,562.8 ಕೋಟಿ ರೂ ನಷ್ಟ ಹೊಂದಿರುವುದು ಅದರ ವರದಿಯಿಂದ ತಿಳಿದುಬರುತ್ತದೆ. ಈ ಕ್ವಾರ್ಟರ್‌ನಲ್ಲಿ ಅತಿಹೆಚ್ಚು ನಷ್ಟ ಹೊಂದಿದ ಕಂಪನಿ ಎಂಬ ಮುಜುಗರದ ದಾಖಲೆ ವೊಡಾಫೋನ್‌ಗೆ ಸಿಕ್ಕಿದೆ.

ಶೇ. 70ರಷ್ಟು ಕುಸಿದ ಪೇಟಿಎಂ ಷೇರು ಬೆಲೆ; ಕೊಳ್ಳಲು ಇದು ಸಕಾಲವಾ?ಶೇ. 70ರಷ್ಟು ಕುಸಿದ ಪೇಟಿಎಂ ಷೇರು ಬೆಲೆ; ಕೊಳ್ಳಲು ಇದು ಸಕಾಲವಾ?

ಇತ್ತೀಚೆಗೆ ಪೇಟಿಎಂ ಕಂಪನಿ ನಷ್ಟದಲ್ಲಿ ಮುಂದುವರಿದಿರುವುದು, ಅದರ ಷೇರುಗಳು ಪ್ರಪಾತಕ್ಕೆ ಬಿದ್ದಿರುವುದು ದೊಡ್ಡ ಸುದ್ದಿ ಆಗಿದೆ. ಪೇಟಿಎಂಗಿಂತಲೂ ಹೆಚ್ಚು ನಷ್ಟ ಅನುಭವಿಸಿದ 9 ಕಂಪನಿಗಳಿವೆ. ಹಲವು ಕಂಪನಿಗಳ ಷೇರುಗಳು ಗಣನೀಯವಾಗಿ ಇಳಿಮುಖವಾಗಿದೆ.

ಕಳೆದ 1 ವರ್ಷದ ಅವಧಿಯಲ್ಲಿ ಷೇರುಪೇಟೆಯಲ್ಲಿ ಹೊಂದಿದ್ದ ಗರಿಷ್ಠ ಬೆಲೆಗೆ ಹೋಲಿಸಿದರೆ ಪೇಟಿಎಂ ಷೇರುಗಳು ಶೇ. 70ಕ್ಕಿಂತ ಹೆಚ್ಚು ಬೆಲೆ ಕಳೆದುಕೊಂಡಿವೆ. ವೊಡಾಫೋನ್ ಐಡಿಯಾದ ಷೇರು ಕೂಡ ಶೇ. 50ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.

ಒಂದು ವರ್ಷದಲ್ಲಿ ಶೇ. 30 ಲಾಭ ಕೊಡುತ್ತಾ ಈ ಆಲ್ಕೋಹಾಲ್ ಕಂಪನಿಯ ಷೇರು?ಒಂದು ವರ್ಷದಲ್ಲಿ ಶೇ. 30 ಲಾಭ ಕೊಡುತ್ತಾ ಈ ಆಲ್ಕೋಹಾಲ್ ಕಂಪನಿಯ ಷೇರು?

ವೊಡಾಫೋನ್ ಬಳಿಕ ಸೆಪ್ಟೆಂಬರ್ ಕ್ವಾರ್ಟರ್‌ನಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿರುವ ಎಚ್‌ಪಿಸಿಎಲ್ ಕಂಪನಿಯ ಷೇರು ಬೆಲೆ ಕೂಡ ಶೇ. 36ರಷ್ಟು ಕಡಿಮೆಯಾಗಿದೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದ ಕಂಪನಿಗಳು

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದ ಕಂಪನಿಗಳು

1) ವೊಡಾಫೋನ್ ಐಡಿಯಾ: 7,562.8 ಕೋಟಿ ರೂ (ಶೇ. 50ಕ್ಕೂ ಹೆಚ್ಚು ಷೇರು ಕುಸಿತ)
2) ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ (ಎಂಆರ್‌ಪಿಎಲ್): 1,789.14 ಕೋಟಿ ರೂ ನಷ್ಟ (ಶೇ. 59ಕ್ಕೂ ಹೆಚ್ಚು ಷೇರು ಕುಸಿತ)
3) ಎಚ್‌ಪಿಸಿಎಲ್: 2,172 ಕೋಟಿ ರೂ (ಶೇ. 36ಕ್ಕೂ ಹೆಚ್ಚು ಷೇರು ಕುಸಿತ)
4) ಇಂಟರ್‌ಗ್ಲೋಬ್ ಏವಿಯೇಶನ್: 1585.49 ಕೋಟಿ ರೂ
5) ಸ್ಪೈಸ್‌ಜೆಟ್: 837.88 ಕೋಟಿ ರೂ
6) ವಾರೋಕ್ ಎಂಜಿನಿಯರಿಂಗ್
7) ಮ್ಯಾಕ್ರೋಟೆಕ್ ಡೆವಲಪರ್ಸ್
8) ಮಹಾನಗರ್ ಟೆಲಿಫೋನ್ ನಿಗಮ್
9) ಜೇಪೀ ಇನ್‌ಫ್ರಾಟೆಕ್
10) ಒನ್97 ಕಮ್ಯೂನಿಕೇಶನ್ಸ್ (ಪೇಟಿಎಂನ ಮಾಲೀಕ ಸಂಸ್ಥೆ): 588.8 ಕೋಟಿ ರೂ.

ಹೂಡಿಕೆ ಮಾಡಬಹುದಾ?

ಹೂಡಿಕೆ ಮಾಡಬಹುದಾ?

ಷೇರುಪೇಟೆಯಲ್ಲಿ ಯಾವ ಷೇರಿನ ಮೇಲೆ ಹೂಡಿಕೆ ಮಾಡಬಹುದು ಎಂದು ನಿರ್ಧರಿಸಲು ಹಲವರು ಬೇರೆ ಬೇರೆ ಮಾನದಂಡ ಉಪಯೋಗಿಸುತ್ತಾರೆ. ಕೆಲವರು ಓಡುವ ಕುದುರೆಗಳಂತಹ ಷೇರುಗಳ ಬೆನ್ನ ಹತ್ತುತ್ತಾರೆ. ಅಂದರೆ, ಭರ್ಜರಿಯಾಗಿ ಏರಿಕೆಯಾಗುತ್ತಿರುವ ಷೇರುಗಳನ್ನು ಕೊಳ್ಳುತ್ತಾರೆ. ಇನ್ನು ಕೆಲವರು, ಭರ್ಜರಿಯಾಗಿ ಏರಿ ನಂತರ ಕೆಳಗೆ ಕುಸಿದ ಷೇರುಗಳನ್ನು ಕೊಳ್ಳುತ್ತಾರೆ. ಈ ಎರಡನೇ ರೀತಿಯಲ್ಲಿ ಯೋಚಿಸುವವರ ನಿರೀಕ್ಷೆ ಏನೆಂದರೆ ಈ ಷೇರು ಚಕ್ರದ ರೀತಿ ಇನ್ಮುಂದೆ ಮೇಲ್ಮುಖವಾಗಿ ಹೋಗುತ್ತದೆ ಎಂದುಕೊಳ್ಳುತ್ತಾರೆ. ಸಾಮಾನ್ಯ ಹೂಡಿಕೆದಾರರಲ್ಲಿ ಇಂಥ ನಿರೀಕ್ಷೆ ಹೆಚ್ಚೇ ಇರುತ್ತದೆ.

ಆದರೆ ಹಿನ್ನಡೆ ಕಂಡಿರುವ ಎಲ್ಲಾ ಷೇರುಗಳೂ ಮತ್ತೆ ಮೇಲೇರುತ್ತವೆ ಎಂದು ಭಾವಿಸುವುದು ತಪ್ಪು ಎನ್ನುತ್ತಾರೆ ಹೂಡಿಕೆ ತಜ್ಞರು. ಒಂದು ಕಂಪನಿಯ ಹಣಕಾಸು ಸ್ಥಿತಿ, ಮುಂದಿನ ಹಾದಿ, ಆ ಕಂಪನಿಯ ಮಾರುಕಟ್ಟೆ ಕ್ಷೇತ್ರ, ಆ ಮಾರುಕಟ್ಟೆಯ ಭವಿಷ್ಯದ ಸ್ಥಿತಿ ಇದೆಲ್ಲವನ್ನೂ ತಜ್ಞರು ವಿಶ್ಲೇಷಿಸಿ ಯಾವ ಕಂಪನಿ ಎಷ್ಟು ಆದಾಯ ತರುತ್ತದೆ, ಎಷ್ಟು ನಷ್ಟ ಉಂಟು ಮಾಡುತ್ತದೆ ಎಂದು ಲೆಕ್ಕ ಹಾಕುತ್ತಾರೆ.

 

ಯಾವುದಕ್ಕೆ ಹೂಡಬೇಕು, ಬಾರದು?

ಯಾವುದಕ್ಕೆ ಹೂಡಬೇಕು, ಬಾರದು?

ವೊಡಾಫೋನ್ ಐಡಿಯಾ, ಪೇಟಿಎಂ ಷೇರುಗಳು ಪ್ರಪಾತಕ್ಕೆ ಬಿದ್ದರೂ ವಿಶ್ಲೇಷಕರು ಈ ಕಂಪನಿಗಳ ಷೇರುಗಳ ಮೇಲೆ ಈಗಲೇ ಹಣ ಹಾಕಬೇಡಿ ಎಂದು ಹೂಡಿಕೆದಾರರಿಗೆ ಸಲಹೆ ನೀಡುತ್ತಾರೆ.

ಐಟಿ, ಬ್ಯಾಂಕಿಂಗ್ ಮತ್ತು ಆಟೊಮೊಬೈಲ್ ಕ್ಷೇತ್ರದ ಸಂಸ್ಥೆಗಳ ಷೇರುಗಳು ಮೇಲೆ ಹಣ ಹಾಕಬಹುದು ಎಂಬುದು ಹಲವು ಹಣಕಾಸು ವಿಶ್ಲೇಷಣಾ ಸಂಸ್ಥೆಗಳ ಶಿಫಾರಸು.

ದೊಡ್ಡ ಬಂಡವಾಳದ ಬ್ಯಾಂಕುಗಳು, ಕೈಗಾರಿಕೆ, ರಿಯಲ್ ಎಸ್ಟೇಟ್, ವಿದ್ಯುತ್, ಆಟೊಮೊಬೈಲ್, ಫಾರ್ಮಾ, ಗ್ಯಾಸ್, ಇನ್ಷೂರೆನ್ಸ್ ಈ ಕ್ಷೇತ್ರದ ಷೇರುಗಳನ್ನು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಸಂಸ್ಥೆ ರೆಕಮೆಂಡ್ ಮಾಡಿದೆ.

ಇನ್ನು, ಸಣ್ಣ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಶಕ್ತಿ ಉತ್ಪಾದನೆ ಸಂಸ್ಥೆಗಳ ಷೇರುಗಳಿಂದ ನಷ್ಟವಾಗಬಹುದು ಎಂಬುದು ಅದರ ಅನಿಸಿಕೆ.

 

English summary

Vodafone Idea Tops The List Of Highest Loss Making Companies This Quarter

Paytm company has lost more than 70% of value of its share from its 52-week high after reporting loss in Q2. But Vodafone Idea has shown loss of over Rs. 7,500 in the same quarter. It is the biggest loss among listed companies.
Story first published: Friday, November 25, 2022, 19:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X