For Quick Alerts
ALLOW NOTIFICATIONS  
For Daily Alerts

ಎಂಎಸ್‍ಎಂಇ ಸಬಲೀಕರಣಕ್ಕೆ ವಾಧ್ವಾನಿ ಫೌಂಡೇಷನ್ ಕರೆ

|

ಅಂತರರಾಷ್ಟ್ರೀಯ ಎಂಎಸ್‍ಎಂಇ ದಿನದ ಅಂಗವಾಗಿ ಜಾಗತಿಕ ಮಟ್ಟದ ಲಾಭೋದ್ದೇಶವಿಲ್ಲದ ಸ್ವಯಂ ಸೇವಾ ಸಂಸ್ಥೆಯಾಗಿರುವ ವಾಧ್ವಾನಿ ಫೌಂಡೇಷನ್ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್‍ಎಂಇ ವಲಯದ ಉದ್ದಿಮೆಗಳು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯಗಳೊಂದಿಗೆ ಸಬಲೀಕರಣಗೊಳಿಸಲು ಮುಂದಾಗಿದೆ.

 

ಅಂತಾರಾಷ್ಟ್ರೀಯ ಎಂಎಸ್‍ಎಂಇ ದಿನದ ಹಿನ್ನೆಲೆಯಲ್ಲಿ ಈ ವಲಯವು ಎದುರಿಸುತ್ತಿರುವ ಸಂಕಷ್ಟಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ಈ ಎಂಎಸ್‍ಎಂಇಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಉತ್ಸಾಹಭರಿತ ವಲಯಕ್ಕೆ ಹೆಚ್ಚಿನ ತೀವ್ರತೆ ಮತ್ತು ಕಾರ್ಯತಂತ್ರದ ರಚನಾತ್ಮಕ ಬೆಂಬಲದೊಂದಿಗೆ ಮಾತ್ರ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ನಗದು ಹರಿವು, ವೇತನ, ಸಾಲಗಾರರ ಮೇಲೆ ಒತ್ತಡ ಹೇರುವುದು ಮತ್ತು ಅದರ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ಬೆಳವಣಿಗೆ ಎಲ್ಲಿದೆ ಎಂದು ಕಂಡುಹಿಡಿಯುವ ಬಹುಮುಖ್ಯ ಸವಾಲುಗಳನ್ನು ಎದುರಿಸುವ ಮೂಲಕ ಕ್ಷೇತ್ರವನ್ನು ಸ್ಥಿರಗೊಳಿಸುವುದು ಅತ್ಯಗತ್ಯವಾಗಿದೆ.

 
ಎಂಎಸ್‍ಎಂಇ ಸಬಲೀಕರಣಕ್ಕೆ ವಾಧ್ವಾನಿ ಫೌಂಡೇಷನ್ ಕರೆ

ಇಂತಹ ಕ್ಲಿಷ್ಟಕರವಾದ ಮತ್ತು ಸವಾಲಿನ ಸಮಯದಲ್ಲಿ ಮತ್ತು ಎಂಎಸ್‍ಎಂಇ ದಿನ 2021 ರ ಅಂಗವಾಗಿ ಮಾತನಾಡಿದ ವಾಧ್ವಾನಿ ಅಡ್ವಾಂಟೇಜ್‍ನ ಕಾರ್ಯಕಾರಿ ಉಪಾಧ್ಯಕ್ಷ ಸಮೀರ್ ಸಾತೆ ಅವರು, "ಸಾಂಕ್ರಾಮಿಕವು ಜಗತ್ತನ್ನು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು ತೊಂದರೆಗೊಳಿಸುತ್ತಿರುವುದರಿಂದ ಎಂಎಸ್‍ಎಂಇಗಳಿಗೆ ಗಮನ, ಕಾಳಜಿ, ಪೋಷಣೆ ಮತ್ತು ನವಜೀವನ ಪಡೆಯುವುದು ಅಗತ್ಯವಾಗಿದೆ. ಅದು ವಿಫಲವಾದರೆ ವ್ಯವಹಾರ, ವಾಣಿಜ್ಯ, ಅರ್ಥಶಾಸ್ತ್ರ ಮತ್ತು ಜೀವನೋಪಾಯಗಳ ಮಟ್ಟ ಕುಸಿಯುತ್ತದೆ ಹಾಗೂ ಯಾವುದೇ ಸಮಯದಲ್ಲೂ ಅದು ಇಂಗಿ ಹೋಗಬಹುದು'' ಎಂದು ಅಭಿಪ್ರಾಯಪಟ್ಟರು.

ಎಂಎಸ್‍ಎಂಇ ವಲಯವು ದೇಶದ ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಲಾಗಿದೆ. ಇದು ಜಿಡಿಪಿ ಮತ್ತು ಉದ್ಯೋಗ ಉತ್ಪಾದನೆಯಲ್ಲಿ ಆರ್ಥಿಕತೆಯ ಶೇ.30 ಕ್ಕಿಂತ ಹೆಚ್ಚು ಕೊಡುಗೆಯನ್ನು ನೀಡುತ್ತದೆ. ಕೋವಿಡ್ ಸಾಂಕ್ರಾಮಿಕವು ದೇಶದ ಸಂಪೂರ್ಣ ಎಂಎಸ್‍ಎಂಇ ವಲಯದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಂಎಸ್‍ಎಂಇಗಳನ್ನು ಬೆಂಬಲಿಸುವುದು ಅತ್ಯಗತ್ಯವಾಗಿದೆ. ಕಳೆದ 1 ವರ್ಷದಲ್ಲಿ ವಾಧ್ವಾನಿ ಫೌಂಡೇಷನ್ 550 ಎಂಎಸ್‍ಇಗಳು ಮತ್ತು ಅವುಗಳ 5000 ಉದ್ಯೋಗಿಗಳಿಗೆ ನೆರವು ನೀಡಿದೆ.

English summary

Wadhwani Foundation Has Helped 550 SME's and its over 5000 employees

Wadhwani Foundation on the eve of International MSME day. The foundation has helped 550 SME's and its over 5000 employees over the past year.
Story first published: Friday, June 25, 2021, 13:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X