ಫೆಬ್ರವರಿ 1ರಂದು ಕೇಂದ್ರ ಬಜೆಟ್ ದಿನ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ 'ವೀಕೆಂಡ್ ಮೂಡ್' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಂಗಳವಾರ ಎಫ್‌ಸಿಸಿಐನಲ್ಲಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಗಮನಿಸಿದ್ದರು. ಈ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಬಹುಶಃ ಉತ್ತರಿಸಲು ಸಿದ್ಧರಿಲ್ಲದ ಪ್ರಶ್ನೆಯೊಂದನ್ನು ಕೇಳಲಾಯಿತು. ಪತ್ರಿಕೆಗಳೊಂದಿಗೆ ಅವರು ಸಂವಹನ ನಡೆಸಲು ಕುಳಿತಾಗ "ಬಜೆಟ್ ದಿನದಂದು ಸೆನ್ಸೆಕ್ಸ್ ಏಕೆ ಸಂತೋಷವಾಗಿರಲಿಲ್ಲ?" ಎಂದು ಕೇಳಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಾರುಕಟ್ಟೆಯ ತೀವ್ರ ಕುಸಿತಕ್ಕೆ 'ವಾರಾಂತ್ಯದ ಮನಸ್ಥಿತಿ' (ವೀಕೆಂಡ್ ಮೂಡ್) ಎಂದು ದೂಷಿಸಿದ್ದಾರೆ. ಹೂಡಿಕೆದಾರರು ಸೋಮವಾರದಂದು 'ನಿಜವಾದ ಕಾರ್ಯ ಕ್ರಮದಲ್ಲಿ' ಇದ್ದಾರೆ ಎಂದು ಅವರು ಹೇಳಿದರು.

ಫೆಬ್ರವರಿ 1ರಂದು ವಾರಾಂತ್ಯದ ಮನಸ್ಥಿತಿ. ಆದರೆ ಇಂದು ಸೋಮವಾರ. ಸೋಮವಾರ ನಿಜವಾದ ಕೆಲಸದ ಮನಸ್ಥಿತಿ, ಮತ್ತು ಇಂದಿನ ಮನಸ್ಥಿತಿ ಅವರು ಸಂತೋಷವಾಗಿರುತ್ತಾರೆ ಅಲ್ಲವೇ ಎಂದರು.
ಕೇಂದ್ರ ಬಜೆಟ್ ದಿನ ಎನ್‌ಎಸ್‌ಇ ನಿಫ್ಟಿ 11,661 ಅಂಶಕ್ಕೆ ತಲುಪಿದ್ದು, 300 ಪಾಯಿಂಟ್‌ಗಳಷ್ಟು ಕಡಿಮೆಯಾಗಿತ್ತು, ಆದರೆ ಬಿಎಸ್‌ಇ ಸೆನ್ಸೆಕ್ಸ್ 39,735 ಕ್ಕೆ ತಲುಪಿದೆ - ಹಿಂದಿನ 40,723 ಕ್ಕೆ ಹೋಲಿಸಿದರೆ 987.96 ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ. ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಹೂಡಿಕೆದಾರರ ಅಸಮಾಧಾನಕ್ಕೆ ಈ ಕುಸಿತವು ಮುಖ್ಯವಾಗಿ ಕಾರಣವಾಗಿದೆ.
ಆದಾಗ್ಯೂ, ಮಾರುಕಟ್ಟೆಗಳು ಫೆಬ್ರವರಿ 3 ರಂದು ಚೇತರಿಕೆಯನ್ನು ತೋರಿಸಿದವು, ಸೂಚ್ಯಂಕವು 137 ಪಾಯಿಂಟ್‌ಗಳಷ್ಟು ಹೆಚ್ಚಾಯಿತು. ಮಂಗಳವಾರ ಸೆನ್ಸೆಕ್ಸ್ 800 ಪಾಯಿಂಟ್‌ಗಳಷ್ಟು ಏರಿಕೆಗೊಂಡಿದ್ದು, 40,670 ಅಂಶಗಳನ್ನು ದಾಟಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications