For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ವಿರುದ್ಧವಿರುವ ಆರೋಪಗಳೇನು?

|

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೋಚರ್ ಹಾಗೂ ಅವರ ದೀಪಕ್ ಕೋಚರ್‌ ಅವರನ್ನು ಶುಕ್ರವಾರ ಸಿಬಿಐ ಬಂಧನ ಮಾಡಿದೆ. ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ ಸಾಲ ವಂಚನೆ ಪ್ರಕರಣದಲ್ಲಿ ದಂಪತಿಯನ್ನು ಸಿಬಿಐ ಬಂಧನ ಮಾಡಿದೆ.

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೋಚರ್ ಅವರನ್ನು ಸಿಬಿಐ ತನ್ನ ಮುಖ್ಯ ಕಚೇರಿಗೆ ಬರುವಂತೆ ನೋಟಿಸ್ ನೀಡಿದೆ. ಬಳಿಕ ಪ್ರಶ್ನಿಸಿ ಬಂಧನವನ್ನು ಮಾಡಿದೆ. ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ, ವಿಚಾರಣೆಗೆ ಸಹಕಾರ ನೀಡದ ಕಾರಣದಿಂದಾಗಿ ಬಂಧನ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಗಮನಿಸಿ: ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ, ಇಲ್ಲಿದೆ ನೂತನ ದರಗಮನಿಸಿ: ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ, ಇಲ್ಲಿದೆ ನೂತನ ದರ

ಐಸಿಐಸಿಐ ಬ್ಯಾಂಕ್, ವಿಡಿಯೋಕಾನ್ ಗ್ರೂಪ್‌ನ ಸಾಲ ವಂಚನೆ ಪ್ರಕರಣದಲ್ಲಿ ಸಿಬಿಐ ಪೊಲೀಸರ ವಿಚಾರಣೆಗೆ ಕೋರಿದೆ. ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಗ್ರೂಪ್‌ಗೆ ನೀಡಿರುವ ಸಾಲದಲ್ಲಿ ವಂಚನೆ ನಡೆದಿದೆ ಎಂಬ ಆರೋಪವಾಗಿದೆ. ಹಾಗಾದರೆ ಚಂದಾ ಕೋಚರ್ ವಿರುದ್ಧವಿರುದ ಬೇರೆ ಆರೋಪಗಳೇನು, ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ವಿರುದ್ಧವಿರುವ ಆರೋಪಗಳೇನು?

ಚಂದಾ ಕೋಚರ್ ವಿರುದ್ಧವಿರುದ ಬೇರೆ ಆರೋಪಗಳೇನು?

ಚಂದಾ ಕೋಚರ್, ಆಕೆಯ ಪತಿ ದೀಪಕ್ ಕೋಚರ್‌ ಹಾಗೂ ವಿಡಿಯೋಕಾನ್ ಗ್ರೂಪ್ ಪ್ರೊಮೋಟರ್ ವೇಣುಗೋಪಲ್ ದೂತ್ ಭ್ರಷ್ಟಾಚಾರ ಮಾಡಿದ್ದಾರೆ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪವಿದೆ. ಸಾಲ ವಂಚನೆ ಪ್ರಕರಣದ ಎಫ್‌ಐಆರ್‌ನಲ್ಲಿ ನುಪವರ್ ರಿನಿವೇಬಲ್ಸ್ (ಎನ್‌ಆರ್‌ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರು ಕೂಡಾ ಉಲ್ಲೇಖವಾಗಿದೆ.

ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?

ಸಿಬಿಐ ಪ್ರಕಾರ ವಿಡಿಯೋಕಾನ್ ಗ್ರೂಪ್ ಸಂಸ್ಥೆಗೆ 3,250 ಕೋಟಿ ರೂಪಾಯಿ ಸಾಲ ಮಂಜೂರು ಆಗಿದೆ. ಆದರೆ ಈ ಸಾಲವನ್ನು ಮಂಜೂರು ಮಾಡುವಾಗ ಆರ್‌ಬಿಐ ನಿಯಮ ಹಾಗೂ ಐಸಿಐಸಿಐ ಬ್ಯಾಂಕ್ಸ್ ಕ್ರೆಡಿಟ್ ಪಾಲಿಸಿಯನ್ನು ಉಲ್ಲಂಘನೆ ಮಾಡಲಾಗಿದೆ.

ದೀಪಕ್ ಕೋಚರ್‌ನ ನುಪವರ್ ರಿನಿವೇಬಲ್ಸ್ ಮೇಲೆ ವೇಣುಗೋಪಲ್ ದೂತ್ 64 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ವಿಡಿಯೋಕಾನ್ ಗ್ರೂಪ್ ಪ್ರೊಮೋಟರ್ ವೇಣುಗೋಪಲ್ ದೂತ್ ಈ ಹೂಡಿಕೆಯನ್ನು ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಡೆಟ್ (ಎಸ್‌ಇಪಿಎಲ್) ಮೂಲಕ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಪ್ರಕಾರ ಈ ಮೊತ್ತವನ್ನು ದೀಪಕ್ ಕೋಚರ್ ನಿರ್ವಹಣೆ ಮಾಡುವ ಪಿನ್ನಾಕಲ್ ಎನರ್ಜಿ ಟ್ರಸ್ಟ್‌ಗೆ ವರ್ಗಾವಣೆ ಮಾಡಲಾಗಿದೆ. 2010ರಿಂದ 2012ರ ನಡುವೆ ಈ ಹಣ ವರ್ಗಾವಣೆಗಳು ನಡೆದಿದೆ.

ವಿಡಿಯೋಕಾನ್‌ ಗ್ರೂಪ್‌ ಹಾಗೂ ಅದಕ್ಕೆ ಸಂಬಂಧಿಸಿ ಸಂಸ್ಥೆಗೆ ಐಸಿಐಸಿಐ ಬ್ಯಾಂಕ್‌ನಿಂದ 1,875 ಕೋಟಿ ರೂಪಾಯಿಯನ್ನು ಆರು ಬಾರಿ ಸಾಲ ರೂಪದಲ್ಲಿ ನೀಡಲಾಗಿದೆ. 2009ರಿಂದ 2011ರ ನಡುವೆ ಈ ಸಾಲವನ್ನು ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಇನ್ನು ಚಂದಾ ಕೋಚರ್‌ ಇದ್ದ ಸಾಲ ಮಂಜೂರು ಮಾಡುವ ಕಮಿಟಿಯೂ 300 ಕೋಟಿ ರೂಪಾಯಿ ಹಾಗೂ 750 ಕೋಟಿ ರೂಪಾಯಿಯ ಸಾಲವನ್ನು ಮಂಜೂರು ಮಾಡಿದೆ.

ವೇಣುಗೋಪಲ್ ದೂತ್ 300 ಕೋಟಿ ರೂಪಾಯಿ ಸಾಲವನ್ನು ಪಡೆದ ಬೆನ್ನಲ್ಲೇ 2009ರ ಸೆಪ್ಟೆಂಬರ್‌ನಲ್ಲಿ 64 ಕೋಟಿ ರೂಪಾಯಿಯನ್ನು ನುಪವರ್‌ಗೆ ವರ್ಗಾವಣೆ ಮಾಡಿದ್ದಾರೆ. ಚಂದಾ ಕೋಚರ್‌ ಐಸಿಐಸಿಐ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ಆಗಿ ಮೇ 2009ರಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಾಲವನ್ನು ನಾನ್‌-ಪರ್ಫಾರ್ಮಿಂಗ್ ಅಸೆಟ್ ಆಗಿ ಪರಿಗಣಿಸಲಾಗಿದೆ. ಬ್ಯಾಂಕ್ ಸುಮಾರು 1,730 ಕೋಟಿ ರೂಪಾಯಿಯ ನಷ್ಟವನ್ನು ಹೊಂದಿದೆ. "ಎನ್‌ಆರ್‌ಎಲ್ (ನುಪವರ್ ರಿನಿವೇಬಲ್) ಮೊದಲ ಬಾರಿಗೆ ಇಷ್ಟು ಹೂಡಿಕೆ ಮಾಡಿದೆ. ಚಂದಾ ಕಚೋರ್ ಕಾನೂನುಬಾಹಿರವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ," ಎಂದು ಆರೋಪಿಸಲಾಗಿದೆ.

English summary

What are the allegations against ICICI Bank Ex-CEO, Explained in Kannada

Former ICICI Bank CEO and MD Chanda Kochhar, her husband Deepak Kochhar were arrested by the CBI on Friday in a loan fraud case worth over Rs 3,000 crore. Explained in Kannada.
Story first published: Saturday, December 24, 2022, 14:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X