For Quick Alerts
ALLOW NOTIFICATIONS  
For Daily Alerts

ಭಾರತದ ರಸ್ತೆಗಳಿಗೆ ತಕ್ಕಂತಹ ಸುರಕ್ಷಿತ ಎಸ್‌ಯುವಿಗಳು: ಕ್ರ್ಯಾಶ್‌ ಪರೀಕ್ಷೆಯಲ್ಲಿ 5 ಸ್ಟಾರ್‌ ರೇಟಿಂಗ್‌

|

ಕಾರು ಖರೀದಿಸಬೇಕು ಎನ್ನುವುದು ಹಲವರ ಜೀವಮಾನದ ಕನಸಾಗಿರುತ್ತದೆ. ಸ್ವಂತ ಕಾರನ್ನು ಹೊಂದಬೇಕು ಎಂಬುದು ಬಹುದೊಡ್ಡ ಬಯಕೆಯಾಗಿರುತ್ತದೆ. ಅದರಲ್ಲೂ ಕುಟುಂಬದವರನ್ನು ಕಾರಿನಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕಾಗಿರುವುದು ಅಷ್ಟೇ ಜವಾಬ್ದಾರಿಯು ಆಗಿರುತ್ತದೆ.

ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ನೀವು ಕಾರನ್ನು ಖರೀದಿಸಲು ಹೊರಟರೆ, ನೀವು ಕಾರಿನ ವಿನ್ಯಾಸ ಹಾಗೂ ಅದರ ಸುರಕ್ಷತೆ ವೈಶಿಷ್ಟ್ಯಗಳಿಗೆ ಪ್ರಾಮುಖ್ಯತೆ ನೀಡಬೇಕು. ಕಾರು ಅದರ ನೋಟ ಮತ್ತು ಡ್ರೈವ್‌ಗೆ ಮಾತ್ರವಲ್ಲದೆ ರಸ್ತೆಯಲ್ಲಿ ನಿಮ್ಮ ಸುರಕ್ಷತೆಗೂ ಉತ್ತಮವಾಗಿರಬೇಕು. ಇಂದು ಭಾರತೀಯ ಮಾರುಕಟ್ಟೆಯಲ್ಲಿ ಇಂತಹ ಹಲವು ಕಾರುಗಳಿವೆ, ಅವುಗಳ ಕಾರ್ಯಕ್ಷಮತೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುರಕ್ಷತಾ ಮಾನದಂಡಗಳ ಪ್ರಕಾರ ಉತ್ತಮವಾಗಿದೆ.

ಹೀಗೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಕೆಲವು ಎಸ್‌ಯುವಿ ಕಾರುಗಳ ಬಗ್ಗೆ ಹಾಗೂ ಅದರ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಕುರಿತಾಗಿ ಮಾಹಿತಿ ಈ ಕೆಳಗಿದೆ.

ಮಹೀಂದ್ರಾ XUV300

ಮಹೀಂದ್ರಾ XUV300

ಮಹೀಂದ್ರಾ XUV300 ದೇಶದ ಸುರಕ್ಷಿತ SUV ಗಳಲ್ಲಿ ಒಂದಾಗಿದೆ. 2020 ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಯಲ್ಲಿ XUV300 ಅನ್ನು 5-ಸ್ಟಾರ್ ಎಂದು ರೇಟ್ ನೀಡಲಾಗಿದೆ. ಇದರ ಹೊರತಾಗಿ, XUV300 ಸುರಕ್ಷತೆಗಾಗಿ 'ಸುರಕ್ಷಿತ ಆಯ್ಕೆ' ಕಾರ್ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 5 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ 4 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್‌ಗಳಲ್ಲಿ XUV300 ಯಾವುದೇ ಇತರ ಭಾರತೀಯ ಕಾರಿನ ಅತ್ಯುನ್ನತ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.

ಮಹೀಂದ್ರಾ XUV300 ಸುರಕ್ಷತೆಯ ವಿಷಯದಲ್ಲಿ ಇದು 7-ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್, ABS-EBD, ನಾಲ್ಕು ಡಿಸ್ಕ್ ಬ್ರೇಕ್‌ಗಳು, ಕಾರ್ನಿಂಗ್ ಬ್ರೇಕ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಮೌಂಟ್‌ನಂತಹ ವೈಶಿಷ್ಟ್ಯಗಳು ಸಿಗಲಿದೆ.

 Mahindra XUV700 ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ತಿಳಿದುಕೊಳ್ಳಿ Mahindra XUV700 ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ತಿಳಿದುಕೊಳ್ಳಿ

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್

ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಸಾಲಿನಲ್ಲಿ ನೆಕ್ಸಾನ್ ಎರಡನೇ ಸ್ಥಾನದಲ್ಲಿದೆ, ಇದು ಕೂಡ ಜಾಗತಿಕ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಿಂದ 5 ಸ್ಟಾರ್‌ಗಳನ್ನು ಪಡೆದಿದೆ. ಟಾಟಾ ನೆಕ್ಸಾನ್ ವಯಸ್ಕ ಪ್ರಯಾಣಿಕ ರಕ್ಷಣೆಗಾಗಿ 5 ಸ್ಟಾರ್‌ಗಳನ್ನು ಮತ್ತು ಮಕ್ಕಳ ವಿಚಾರದಲ್ಲಿ 3 ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಕ್ರ್ಯಾಶ್ ಪರೀಕ್ಷೆಯಲ್ಲಿ, ಜಾಗತಿಕ ಸಂಸ್ಥೆ ಟಾಟಾ ನೆಕ್ಸಾನ್‌ನ ರಚನೆಯು ಇತರ ಭಾರತೀಯ ಕಾರುಗಳಿಗಿಂತ ಹೆಚ್ಚು ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಟಾಟಾ ನೆಕ್ಸಾನ್‌ನಲ್ಲಿ ಅತ್ಯುತ್ತಮ ಸಾಲಿನಲ್ಲಿ ಒಂದಾಗಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಎಬಿಎಸ್-ಇಬಿಡಿ, ಐಸೊಫಿಕ್ಸ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮುಂತಾದ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

 ಟಾಟಾ ಟಿಯಾಗೊ NRG ಹೊಸ ಕಾರು ಬಿಡುಗಡೆ: ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ ಟಾಟಾ ಟಿಯಾಗೊ NRG ಹೊಸ ಕಾರು ಬಿಡುಗಡೆ: ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ

ಮಹೀಂದ್ರಾ ಥಾರ್‌

ಮಹೀಂದ್ರಾ ಥಾರ್‌

ಮಹೀಂದ್ರ ಥಾರ್ ಈ ಪಟ್ಟಿಯಲ್ಲಿ ದೇಶದ ಮೂರನೇ ಸುರಕ್ಷಿತ ಎಸ್‌ಯುವಿಯಾಗಿದ್ದು, ಜಾಗತಿಕ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ನೀಡಲಾಗಿದೆ. ಇದು ಭಾರತೀಯ ಕಾರು ತಯಾರಕ ಮಹೀಂದ್ರಾದ ಸುರಕ್ಷಿತ 4X4 ಆಫ್ ರೋಡ್ ಎಸ್‌ಯುವಿಯಾಗಿದೆ. ಮಹೀಂದ್ರ ಥಾರ್ ಅನ್ನು ಅಕ್ಟೋಬರ್ 2020 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ.

ಮಹೀಂದ್ರ ಥಾರ್‌ನ ಸುರಕ್ಷತಾ ವಿಚಾರದಲ್ಲಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಮೌಂಟ್, ಎಬಿಎಸ್-ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸರ್, 4 ಡಿಸ್ಕ್ ಬ್ರೇಕ್ ಇದೆ.

 

ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್

ಇತ್ತೀಚೆಗೆ, ಅಂತಾರಾಷ್ಟ್ರೀಯ ಕಾರು ಸುರಕ್ಷತೆ ರೇಟಿಂಗ್ ಸಂಸ್ಥೆ ಆಸಿಯಾನ್ ಎನ್‌ಸಿಎಪಿ 2021 ನಿಸಾನ್ ಮ್ಯಾಗ್ನೈಟ್‌ಗೆ 4 ಸ್ಟಾರ್ ರೇಟಿಂಗ್ ನೀಡಿದೆ. ಭಾರತದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಬೆಲೆ 5.49 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ (ಎಕ್ಸ್ ಶೋರೂಂ).

ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ಕಂಪನಿಯು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್-ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್, ಸೀಟ್ ಬೆಲ್ಟ್ ರಿಮೈಂಡರ್, ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ನಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

 

ಮಾರುತಿ ಸುಜುಕಿ ವಿಟ್ಹಾರಾ ಬ್ರೀಜಾ

ಮಾರುತಿ ಸುಜುಕಿ ವಿಟ್ಹಾರಾ ಬ್ರೀಜಾ

ಮಾರುತಿ ಸುಜುಕಿಯ ಹೆಚ್ಚಿನ ಕಾರುಗಳು ಜಾಗತಿಕ ಸುರಕ್ಷತಾ ಮಾನದಂಡಗಳ ವಿಚಾರದಲ್ಲಿ ತುಂಬಾ ಕಡಿಮೆ ರೇಟಿಂಗ್ ಹೊಂದಿದೆ. ಆದಾಗ್ಯೂ ಕಂಪನಿಯು ತನ್ನ ಕೆಲವು ಪ್ರಮುಖ ಕಾರುಗಳಲ್ಲಿ ಸುರಕ್ಷತೆಯನ್ನು ಸುಧಾರಿಸುವತ್ತ ಗಮನ ಹರಿಸಿದೆ. 2020 ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಮಾರುತಿ ವಿಟಾರಾ ಬ್ರೀಜಾ ಕಾಂಪ್ಯಾಕ್ಟ್ SUV ಗೆ 4 ಸ್ಟಾರ್ ರೇಟಿಂಗ್ ನೀಡಲಾಗಿದೆ. ಇದು ಭಾರತದಲ್ಲಿ ಕಂಪನಿಯ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಈ ಎಸ್‌ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್-ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಸೀಟ್ ಬೆಲ್ಟ್ ರಿಮೈಂಡರ್, ಸ್ವಯಂಚಾಲಿತ ಅಪಾಯದ ಎಚ್ಚರಿಕೆ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಐಸೋಫಿಕ್ಸ್ ಚೈಲ್ಡ್ ಮೌಂಟ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ.

 

English summary

What Are The Top 5 Safest SUVs In India: Mahindra, Tata Cars On Top List

Here the details of India's Top Five safest suv's which have five star rating from global NCAP crash test
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X