For Quick Alerts
ALLOW NOTIFICATIONS  
For Daily Alerts

'ನಾನು ಸಚಿವ ಆಗಿರದಿದ್ದರೆ ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡ್ತಿದ್ದೆ'

|

ಸಾಲ ಬಾಧೆಯಲ್ಲಿ ನರಳುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಮಾರಿದರೆ ಸಾಕು ಎಂದಿದೆ ಕೇಂದ್ರ ಸರ್ಕಾರ. ಗುರುವಾರದಂದು ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಒಂದು ವೇಳೆ ನಾನು ಸಚಿವನಾಗಿರದಿದ್ದರೆ ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡಿರುತ್ತಿದ್ದೆ ಎಂದಿದ್ದಾರೆ.

ಬಹಳ ಕಾಲದಿಂದಲೂ ಏರ್ ಇಂಡಿಯಾ ನಷ್ಟದಲ್ಲಿದೆ. ಕೊನೆಗೆ, ಏರ್ ಇಂಡಿಯಾದಿಂದ ಪೂರ್ತಿಯಾಗಿ ಬಂಡವಾಳ ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏರ್ ಇಂಡಿಯಾ, ಬಿಪಿಸಿಎಲ್ ಸೇರಿದಂತೆ ಇತರ ಕಂಪೆನಿಗಳಿಂದ ಬಂಡವಾಳ ಹಿಂತೆಗೆತ ಮಾಡುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಅವಧಿಯಲ್ಲಿ ಸರ್ಕಾರದ ತೆಕ್ಕೆಯಲ್ಲಿ ಇದ್ದಂಥವು ಬಹಳ ಕೆಟ್ಟ ಆರ್ಥಿಕ ರೂಪದಲ್ಲಿ ಇದ್ದವು ಎಂದಿದ್ದಾರೆ.

ಏರ್ ಇಂಡಿಯಾ ಮುಚ್ಚುವುದಿಲ್ಲ, ಆರ್ಥಿಕ ಸ್ಥಿತಿ ನಿಭಾಯಿಸಲಾಗುತ್ತಿದೆ !ಏರ್ ಇಂಡಿಯಾ ಮುಚ್ಚುವುದಿಲ್ಲ, ಆರ್ಥಿಕ ಸ್ಥಿತಿ ನಿಭಾಯಿಸಲಾಗುತ್ತಿದೆ !

ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಹಲವು ಕ್ರಮ ತೆಗೆದುಕೊಂಡೆವು. ಒಂದು ವೇಳೆ ಸರ್ಕಾರವು ಈ 'ಆಭರಣ'ಗಳ ಹಿಂತೆಗೆತಕ್ಕೆ ಯತ್ನಿಸಿದ್ದರೆ ದೊಡ್ಡ ಮೌಲ್ಯವೇನೂ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

'ನಾನು ಸಚಿವ ಆಗಿರದಿದ್ದರೆ ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡ್ತಿದ್ದೆ'

ಒಂದು ವೇಳೆ ಈ ದಿನ ನಾನು ಸಚಿವ ಆಗಿರದಿದ್ದರೆ ಏರ್ ಇಂಡಿಯಾಗೆ ಬಿಡ್ ಮಾಡಿರುತ್ತಿದ್ದೆ. ಚೆನ್ನಾಗಿ ನಿರ್ವಹಣೆ ಮಾಡಿದ ಏರ್ ಇಂಡಿಯಾ ಬಳಿ ಉತ್ತಮ ವಿಮಾನಗಳಿವೆ. ಇವು ಚಿನ್ನದ ಗಣಿಗೆ ಕಡಿಮೆ ಇಲ್ಲದಂತೆ ನನ್ನ ಮನಸಿಗೆ ತೋಚುತ್ತದೆ ಎಂದಿದ್ದಾರೆ. ಅಂದ ಹಾಗೆ ಪಿಯೂಷ್ ಗೋಯಲ್ ಅವರು ಕೇಂದ್ರದಲ್ಲಿ ರೈಲ್ವೆ ಜತೆಗೆ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾಗಿದ್ದಾರೆ.

English summary

What Minister Piyush Goyal Said About Air India Disinvestment?

Union government of India is in the process of Air India disinvestment. What minister Piyush Goyal said about Air India disinvestment, here is the details.
Story first published: Thursday, January 23, 2020, 20:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X