For Quick Alerts
ALLOW NOTIFICATIONS  
For Daily Alerts

ಲಂಚದ ಬಗ್ಗೆ ದೂರು ನೀಡುವವರಿಗೆ 50 ಸಾವಿರ ತನಕ ನಗದು ಪುರಸ್ಕಾರ

|

ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ, ಗುರುವಾರ ಪ್ರಸ್ತಾವವೊಂದಕ್ಕೆ ಒಪ್ಪಿಗೆ ಸೂಚಿಸಿದೆ. ಲಂಚದ ಪ್ರಕರಣಗಳನ್ನು ವರದಿ ಮಾಡಿ, 1 ಸಾವಿರದಿಂದ 50 ಸಾವಿರ ರುಪಾಯಿ ತನಕ ನಗದು ಪುರಸ್ಕಾರ ಪಡೆಯಿರಿ ಎಂದು ಜನರಿಗೆ ಆಹ್ವಾನ ನೀಡಿದೆ.

 

ಬಿಹಾರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ 16 ಪ್ರಸ್ತಾವಗಳಲ್ಲಿ ಇದೂ ಒಂದು. ಈ ನಿರ್ಧಾರದ ಅನ್ವಯ, ಲಂಚಕ್ಕಾಗಿ ಬೇಡಿಕೆ ಇಡುವ ಸಿಬ್ಬಂದಿ, ಅಧಿಕಾರಿಗಳ ಬಗ್ಗೆ ದೂರು ನೀಡುವ ಜನರಿಗೆ ರಾಜ್ಯ ಸರ್ಕಾರವು ನಗದು ಪುರಸ್ಕಾರವನ್ನು ನೀಡಲಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಬಹುಮಾನ ನಿಧಿಯನ್ನು ಸಹ ಸ್ಥಾಪಿಸಿದೆ.

 

ಈ ನಿಧಿಯ ಮೂಲಕ ದೂರುದಾರರು ಕೋರ್ಟ್ ಗೆ ಹೋಗಿಬರುವ ಖರ್ಚು, ಕೋರ್ಟ್ ವೆಚ್ಚಗಳು, ಆಹಾರ- ಪಾನೀಯಕ್ಕಾಗಿ ಹೆಚ್ಚುವರಿಯಾಗಿ 200 ರುಪಾಯಿ ಮೀಸಲಿಡಲಾಗುವುದು. ದೂರುದಾರರ ಗುರುತನ್ನು ಗೋಪ್ಯವಾಗಿ ಇಡಲಾಗುತ್ತದೆ.

ಲಂಚದ ಬಗ್ಗೆ ದೂರು ನೀಡುವವರಿಗೆ 50 ಸಾವಿರ ತನಕ ನಗದು ಪುರಸ್ಕಾರ

ಇದೇ ವೇಳೆ ಸಚಿವರ ಆಪ್ತ ಸಹಾಯಕರಿಗೆ ಹಾಗೂ ಕಾರ್ಯದರ್ಶಿಗಳಿಗೆ ಇದ್ದ ಪ್ರಯಾಣ ಭತ್ಯೆ ವಾರ್ಷಿಕ ಮೊತ್ತವನ್ನು 1.5 ಲಕ್ಷದಿಂದ 3 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ.

English summary

Who Report About Bribery Will Get 1 To 50 Thousand Cash Reward

Bihar government Thursday announced 1 to 50,000 reward to who report about bribery.
Story first published: Friday, February 28, 2020, 9:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X