For Quick Alerts
ALLOW NOTIFICATIONS  
For Daily Alerts

ಚೀನಾದ ಅಪ್ಲಿಕೇಷನ್ ನಿಷೇಧ ಆಯಿತು, ಮೊಬೈಲ್ ಫೋನ್ ಬಳಸಬಹುದಾ?

|

ಚೈನೀಸ್ ಸ್ಮಾರ್ಟ್ ಫೋನ್ ಗಳನ್ನು ಬಳಸುವ ಕೆಲವರಲ್ಲಿ ಪ್ರಶ್ನೆಗಳು ಎದ್ದಿವೆ. ಶಿಯೋಮಿ, ಒಪ್ಪೊ, ವಿವೋ ಅಥವಾ ರಿಯಾಲ್ಮಿ ಫೋನ್ ಗಳನ್ನು ಬಳಸುವುದು ಕೂಡ ಮುಂದೆ ಅಪಾಯವೇ ಎಂಬುದು ಅವರ ಪ್ರಶ್ನೆ. ಆದರೆ ನೆನಪಿಟ್ಟುಕೊಳ್ಳಬೇಕಾದದ್ದು ಏನೆಂದರೆ, ಐವತ್ತೊಂಬತ್ತು ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ ಎಂಬುದು ನಿಜ. ಆದರೆ ಇದರಿಂದ ಚೀನಾ ಫೋನ್ ಗಳಿಗೆ ಭಾರತದ ಮಾರ್ಕೆಟ್ ಮೇಲೆ ಇರುವ ಹಿಡಿತ ಮಾತ್ರ ಕಡಿಮೆ ಆಗಬಹುದು.

ಇತ್ತೀಚೆಗೆ ಚೀನಾ ಉತ್ಪನ್ನಗಳ ಬಗ್ಗೆಯೂ ಸಿಟ್ಟಿದೆ. ಆದರೆ ಈಗ ಸರ್ಕಾರದಿಂದ ಟಿಕ್ ಟಾಕ್, ಯುಸಿ ಬ್ರೌಸರ್, ಕ್ಯಾಮ್ ಸ್ಕ್ಯಾನರ್ ನಂಥದ್ದನ್ನು ನಿಷೇಧ ಮಾಡಿದ ಮೇಲೆ ತಾವು ಬಳಸುತ್ತಿರುವ ಫೋನ್ ಏನಾಗಬಹುದು ಎಂಬ ಪ್ರಶ್ನೆ ಸಹಜವಾಗಿ ಕೇಳಿಬರುತ್ತಿದೆ. ಹಲವರು ಚೀನಾದ ಈ ಫೋನ್ ಗಳನ್ನು ಖರೀದಿ ಮಾಡಿರುವುದೇ ಹೆಚ್ಚು ಫೀಚರ್ ಗಳಿವೆ ಹಾಗೂ ಬೆಲೆ ಕಡಿಮೆ ಎಂಬ ಕಾರಣಕ್ಕೆ. ಅಂದರೆ ಸ್ಯಾಮ್ಸಂಗ್ ಅಥವಾ ನೋಕಿಯಾ ಫೋನ್ ಗೆ ಹೋಲಿಕೆ ಮಾಡಿದಾಗ ಇಲ್ಲಿ ಬೆಲೆ ಕಡಿಮೆ.

ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್

ಈಗಾಗಲೇ ಚೀನಾ ಮೂಲದ ಕಂಪೆನಿಗಳ ಫೋನ್ ಇಟ್ಟುಕೊಂಡಿದ್ದರೆ ಏನು ಗತಿ? ಈಗ ಸರ್ಕಾರದಿಂದ ನಿಷೇಧ ಹೇರಿರುವ ಅಪ್ಲಿಕೇಷನ್ ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆಯೇ ವಿನಾ ಫೋನ್ ಗಳು ಕೆಲಸ ಮಾಡುತ್ತವೆ. ಆದರೆ ಇನ್ನು ಮುಂದೆ ಚೀನಾದ ಉತ್ಪನ್ನಗಳನ್ನು ಖರೀದಿ ಮಾಡುವಾಗ ಜನರು ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ ಎನ್ನುತ್ತಾರೆ ಫೋನ್ ಮಾರಾಟಗಾರರು.

ಚೀನಾದ ಅಪ್ಲಿಕೇಷನ್ ನಿಷೇಧ ಆಯಿತು, ಮೊಬೈಲ್ ಫೋನ್ ಬಳಸಬಹುದಾ?

ಸ್ಯಾಮ್ಸಂಗ್, ಆಪಲ್ ಹಾಗೂ ಇತರ ದೇಶಿ ಬ್ರ್ಯಾಂಡ್ ಮೊಬೈಲ್ ಫೋನ್ ಗಳಿಗೆ ಬೇಡಿಕೆ ಕಂಡುಬರಬಹುದು. ಇನ್ನು ಫೋನ್ ತಯಾರಿಕಾ ಕಂಪೆನಿಯ ಅಧ್ಯಕ್ಷರೊಬ್ಬರು ಮಾತನಾಡಿ, ಕೆಲವು ಮೊಬೈಲ್ ಫೋನ್ ಗಳಲ್ಲಿ ಚೀನಾದ ಅಪ್ಲಿಕೇಷನ್ ಗಳು ಅದಾಗಲೇ ಇನ್ ಸ್ಟಾಲ್ ಆಗಿರುತ್ತದೆ. ಅದರಲ್ಲಿ ಯುಸಿ ಬ್ರೌಸರ್ ಬಹಳ ಖ್ಯಾತಿ ಪಡೆದಿದೆ. ಅದಕ್ಕಾಗಿ ಆ ಕಂಪೆನಿಯವರಿಗೆ ಹಣ ಪಾವತಿಸಿರುತ್ತಾರೆ. ಇನ್ನು ಮುಂದೆ ಅವರೇನು ಮಾಡುತ್ತಾರೆ ಎಂಬ ಪ್ರಶ್ನೆ ಹಾಗೇ ಇದೆ ಎನ್ನುತ್ತಾರೆ.

English summary

Will Chinese Mobile Work Normally In India?

After Chinese app ban by Indian government, now question about whether Chinese company mobile phone work in India? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X