For Quick Alerts
ALLOW NOTIFICATIONS  
For Daily Alerts

ವಿಪ್ರೋ 3ನೇ ತ್ರೈಮಾಸಿಕ ವರದಿ: ನಿವ್ವಳ ಲಾಭ ಏರಿಕೆ

|

ದೇಶದ ಪ್ರಮುಖ ಐಟಿ ಸಂಸ್ಥೆ ವಿಪ್ರೋ ಲಿಮಿಟೆಡ್ ಬುಧವಾರದಂದು ತನ್ನ 3ನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಡಿಸೆಂಬರ್ 2021 ರ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 2,969 ಕೋಟಿ ರೂ.ಗೆ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 2,968 ಕೋಟಿ ರೂ ಗಳಿಸಿತ್ತು.

ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯವು ಶೇ 30 ರಷ್ಟು ಏರಿಕೆಯಾಗಿ 20,313 ಕೋಟಿ ರೂ. ದಾಖಲಾಗಿದ್ದು, ಹಿಂದಿನ ವರ್ಷ ಈ ಅವಧಿಯ ತ್ರೈಮಾಸಿಕದಲ್ಲಿ15,670 ಕೋಟಿ ರೂ ಗಳಿಸಿತ್ತು. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ನಿವ್ವಳ ಲಾಭವು ಬಹುತೇಕ ಒಂದೇ ಆಗಿತ್ತು. ಕಂಪನಿಯು ಹಿಂದಿನ ವರ್ಷದ ಅವಧಿಯಲ್ಲಿ 2,968 ಕೋಟಿ ರೂ ಬಂದಿತ್ತು.

CNBC-TV18 ಅಂದಾಜಿಸಲಾದ 3,560 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, Q3 FY22 ಗಾಗಿ ಬಡ್ಡಿ ಮತ್ತು ತೆರಿಗೆಗಳ ಕಡಿತಕ್ಕೂ (EBIT) ಮೊದಲಿನ ಗಳಿಕೆಯು 3,553.5 ಕೋಟಿ ರೂ ಬಂದಿದ್ದು, ಬಹುತೇಕ ನಿರೀಕ್ಷೆ ಮುಟ್ಟಿದೆ.

ವಿಪ್ರೋ 3ನೇ ತ್ರೈಮಾಸಿಕ ವರದಿ: ನಿವ್ವಳ ಲಾಭ ಏರಿಕೆ

"ವಿಪ್ರೋ ಸತತ ಐದನೇ ತ್ರೈಮಾಸಿಕದಲ್ಲಿ ಆದಾಯ ಮತ್ತು ಮಾರ್ಜಿನ್ ಗಳೆರಡರಲ್ಲೂ ಬಲವಾದ ಕಾರ್ಯಕ್ಷಮತೆಯನ್ನು ನೀಡಿದೆ. ಆರ್ಡರ್ ಬುಕಿಂಗ್ ಕೂಡ ಪ್ರಬಲವಾಗಿದೆ ಮತ್ತು ಕಳೆದ 12 ತಿಂಗಳುಗಳಲ್ಲಿ $100 ಮಿಲಿಯನ್‌ಗಿಂತಲೂ ಹೆಚ್ಚು ಆದಾಯದ ಲೀಗ್‌ನಲ್ಲಿ ನಾವು ಏಳು ಹೊಸ ಗ್ರಾಹಕರನ್ನು ಸೇರಿಸಿದ್ದೇವೆ," ಕಂಪನಿಯ ಸಿಇಒ ಮತ್ತು ನಿರ್ದೇಶಕ ಥಿಯೆರಿ ಡೆಲಾಪೋರ್ಟೆ ಪ್ರತಿಕ್ರಿಯಿಸಿದ್ದಾರೆ.

ಬುಧವಾರದಂದು ಎನ್‌ಎಸ್‌ಇಯಲ್ಲಿ ಕಂಪನಿಯ ಷೇರು 0.45% ಕಡಿಮೆಯಾಗಿ ರೂ 691 ಕ್ಕೆ ಕೊನೆಗೊಂಡಿದೆ.

ಈ ನಡುವೆ ಕಂಪನಿಯು ಪ್ರತಿ ಷೇರಿಗೆ ರೂ 1 ರ ಮಧ್ಯಂತರ ಲಾಭಾಂಶವನ್ನು ಸಹ ಘೋಷಿಸಿದೆ.

"ಕಾರ್ಯನಿರ್ವಹಣೆಯ ಮೆಟ್ರಿಕ್‌ಗಳಲ್ಲಿ ಮುಂದುವರಿದ ಸುಧಾರಣೆಯ ಕಾರಣದಿಂದ ಸಂಬಳ ಹೆಚ್ಚಳದ ಮೇಲೆ ಗಣನೀಯ ಹೂಡಿಕೆಗಳನ್ನು ಅಳವಡಿಸಿಕೊಂಡ ನಂತರ ನಾವು ದೃಢವಾದ ಕಾರ್ಯಾಚರಣೆಯ ಮಾರ್ಜಿನ್ ಗಳನ್ನು ತಲುಪಿಸಿದ್ದೇವೆ. ನಮ್ಮ ದಿನದ ಮಾರಾಟದ ಬಾಕಿಯನ್ನು ಕಡಿಮೆ ಮಾಡುವ ಮೂಲಕ ನಾವು ನಮ್ಮ ಕಾರ್ಯ ಬಂಡವಾಳ(working capital)ವನ್ನು ಸುಧಾರಿಸಿದ್ದೇವೆ. ಇದು ನಿವ್ವಳ ಆದಾಯದ 101.3 ಪ್ರತಿಶತದಷ್ಟು ಬಲವಾದ ಕಾರ್ಯಾಚರಣೆಯ ನಗದು ಹರಿವಿನ ಪರಿವರ್ತನೆಗೆ ಕಾರಣವಾಗಿದೆ." ಎಂದು ವಿಪ್ರೋದ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಹೇಳಿದ್ದಾರೆ.

English summary

Wipro Q3 net profit flat at Rs 2969 cr YoY

IT major Wipro Ltd on Wednesday reported nearly flat consolidated net profit at Rs 2,969 crore for the quarter ending December 2021. It was Rs 2,968 crore in the year-ago period.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X