For Quick Alerts
ALLOW NOTIFICATIONS  
For Daily Alerts

ಒಮ್ಮೆ ಅತಿ ಹೆಚ್ಚು ಕುಸಿದಿದ್ದ ಈ ಷೇರು ಈಗ ನಂಬರ್ 1

|

ಷೇರು ಮಾರುಕಟ್ಟೆಯೇ ಹಾಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಕೋಟಿಗಟ್ಟಲೆ ಸಂಪತ್ತನ್ನು ಹೆಚ್ಚಿಸುತ್ತದೆ. ಹಾಗೆಯೇ ಅಷ್ಟೇ ಮಟ್ಟಿಗೆ ತಳಮುಟ್ಟಿಸುತ್ತದೆ. ಇದಕ್ಕೆ ಉದಾಹರಣೆಯಂತಿದೆ ಯೆಸ್ ಬ್ಯಾಂಕ್ ಷೇರು. ಈ ಹಿಂದೆ ಭಾರೀ ನಷ್ಟಕ್ಕೆ ತುತ್ತಾಗಿದ್ದ ಯೆಸ್ ಬ್ಯಾಂಕ್ ಷೇರುಗಳು ಚೀನಿಪೇಟೆಯಲ್ಲಿ ಭಾರೀ ಮೌಲ್ಯ ಪಡೆದುಕೊಂಡಿದೆ. ಜಾಗತಿಕವಾಗಿ ಅತಿದೊಡ್ಡ ಕುಸಿತ ಕಂಡಿದ್ದ ಯೆಸ್ ಬ್ಯಾಂಕ್ ಷೇರುಗಳು ಇದೀಗ 1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 7,147 ಕೋಟಿ 75 ಲಕ್ಷ)ಗೂ ಹೆಚ್ಚು ಮೌಲ್ಯವನ್ನ ಮರಳಿ ಸಂಪಾದಿಸಿದೆ.

ನವೆಂಬರ್ 4(ಸೋಮವಾರ) ಅನುಭವಿ ಹೂಡಿಕೆದಾರ ರಾಕೇಶ್ ಜುಂಜನ್ ವಾಲ 1.29 ಕೋಟಿ ಯೆಸ್ ಬ್ಯಾಂಕ್ ಷೇರುಗಳನ್ನು ಮುಕ್ತ ಮಾರುಕಟ್ಟೆ ಮೂಲಕ ಖರೀದಿಸಿದ್ದರು. ದೇಶದ ಬೃಹತ್‌ ಹೂಡಿಕೆದಾರರಲ್ಲಿ ಒಬ್ಬರಾದ ರಾಕೇಶ್ ಜುಂಜುನ್ ವಾಲ 86.89 ಕೋಟಿ ರುಪಾಯಿಯಷ್ಟು ಯೆಸ್ ಬ್ಯಾಂಕ್‌ ಷೇರುಗಳನ್ನು ಖರೀದಿಸಿದಾಗ ಪ್ರತಿ ಷೇರಿನ ಬೆಲೆ 67.1 ರುಪಾಯಿ ಇತ್ತು. ಹೀಗೆ ದೊಡ್ಡ ಮೊತ್ತದ ಷೇರು ಖರೀದಿ ಆದ ಮೇಲೆ ಯೆಸ್ ಬ್ಯಾಂಕ್‌ ಷೇರುಗಳಿಗೆ ಚೈತನ್ಯ ಸಿಕ್ಕಂತಾಯಿತು. ಷೇರುಪೇಟೆಯಲ್ಲಿ ಹೂಡಿಕೆದಾರರ ವಿಶ್ವಾಸಗಳಿಸಿತು.

ಒಮ್ಮೆ ಅತಿ ಹೆಚ್ಚು ಕುಸಿದಿದ್ದ ಈ ಷೇರು ಈಗ ನಂಬರ್ 1

ಯೆಸ್ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೇಳಿಕೆ ಪ್ರಕಾರ, ಜಾಗತಿಕ ಹೂಡಿಕೆದಾರರಿಂದ 1.2 ಬಿಲಿಯನ್ ಮೊತ್ತದ ಪ್ರಸ್ತಾಪವನ್ನು ಸ್ವೀಕರಿಸಿದೆ. ಮತ್ತು ಹೆಚ್ಚುವರಿಯಾಗಿ 8 ಬಿಡ್ ಗಳನ್ನು ಸ್ವೀಕರಿಸಲಾಗಿದ್ದು, ಇವುಗಳ ಮೌಲ್ಯ 1.5 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

ಟಾಪ್ 10 ಕಂಪೆನಿಗಳ ಪೈಕಿ 4ರ ಬಂಡವಾಳ 55,681 ಕೋಟಿ ಖಲ್ಲಾಸ್ ಟಾಪ್ 10 ಕಂಪೆನಿಗಳ ಪೈಕಿ 4ರ ಬಂಡವಾಳ 55,681 ಕೋಟಿ ಖಲ್ಲಾಸ್

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ಷೇರುಗಳು ಒಟ್ಟಾರೆ 600.08 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದವು. ಮೇ 6 ರಂದು 166.25 ರೂಪಾಯಿ ಮೌಲ್ಯದ ಯೆಸ್ ಬ್ಯಾಂಕ್ ಷೇರುಗಳು ಅಕ್ಟೋಬರ್ 1 ರ ವೇಳೆಗೆ ಭಾರೀ ಕುಸಿತ ಅನುಭವಿಸಿ ಪ್ರತಿ ಷೇರಿನ ಬೆಲೆ 32 ರೂಪಾಯಿಗೆ ತಲುಪಿತ್ತು. ಆದರೆ ಜಾಗತಿಕ ಹೂಡಿಕೆದಾರರ ಬಂಡವಾಳದ ಹರಿವಿನಿಂದ ಯೆಸ್ ಬ್ಯಾಂಕ್‌ನ ಷೇರುಗಳು ಚೇತರಿಸಿಕೊಂಡಿದ್ದು, 70 ರೂಪಾಯಿ ಗಡಿದಾಟಿದೆ.

English summary

Yes Bank Stock Now Is The Top Global Gainer

Once most beaten stock Yes bank stock now is the top global gainer with a market cap of more than 1 billion US Dollar
Story first published: Monday, November 11, 2019, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X