For Quick Alerts
ALLOW NOTIFICATIONS  
For Daily Alerts

ಎಚ್ಚರ..ಎಚ್ಚರ.. Zoom App ಸುರಕ್ಷಿತವಲ್ಲ :ಕೇಂದ್ರ ಸರ್ಕಾರ ಸೂಚನೆ

|

ಬಹಳ ಕಡಿಮೆ ಸಮಯದಲ್ಲಿ ದಿಢೀರ್ ಎಂದು ಜನಪ್ರಿಯವಾಗಿದ್ದ ಝೂಮ್ ಆ್ಯಪ್ ಸುರಕ್ಷಿತವಲ್ಲ ಎಂದು ಬಳಕೆದಾರರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಏಕಕಾಲಕ್ಕೆ ನೂರು ಜನರನ್ನು ಸೇರಿಸಿಕೊಳ್ಳಬಹುದಾದ ಉಚಿತ ವಿಡಿಯೋ ಕಾಲ್ ಝೂಮ್ ಆ್ಯಪ್ ಸುರಕ್ಷಿತವಲ್ಲ. ಈ ಹಿನ್ನೆಲೆಯಲ್ಲಿ ಕಚೇರಿ ಮೀಟಿಂಗ್, ಆಫೀಸ್ ಟ್ರೈನಿಂಗ್ ಗೆ ಬಳಸಿಕೊಳ್ಳದಂತೆ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಝೂಮ್ ಆ್ಯಪ್ ಸುರಕ್ಷಿತವಲ್ಲ ಎಂಬ ಹಿನ್ನೆಲೆಯಲ್ಲಿ ಖಾಸಗಿ ಬಳಕೆದಾರರಿಗೂ ಕೂಡಾ ನಿಯಮಾವಳಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಯಾರು ವೈಯಕ್ತಿಕ ಉದ್ದೇಶಕ್ಕಾಗಿ ಝೂಮ್ ಬಳಸುವವರು ಕೂಡಾ ಎಚ್ಚರದಿಂದ ಇರಬೇಕು ಎಂದು ಕೇಂದ್ರ ಸೂಚನೆ ನೀಡಿದೆ.

ದಿಢೀರನೆ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿತ್ತು

ದಿಢೀರನೆ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿತ್ತು

ದೇಶಾದ್ಯಂತ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದ್ದ ನಂತರ ದೇಶದಲ್ಲಿ ದಿಢೀರನೆ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ದ್ವಿಗುಣವಾಗಿತ್ತು. ಕಚೇರಿಗಳಲ್ಲಿ ವಿಡಿಯೋ ಕಾಲ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಝೂಮ್ ಆ್ಯಪ್ ಬಳಕೆ ಹೆಚ್ಚಾಗಿತ್ತು ಎಂದು ವರದಿ ವಿವರಿಸಿದೆ.

ವೈಯಕ್ತಿಕವಾಗಿ ಬಳಸಿದರೂ ಸೇಫ್ ಇಲ್ಲ

ವೈಯಕ್ತಿಕವಾಗಿ ಬಳಸಿದರೂ ಸೇಫ್ ಇಲ್ಲ

ಝೂಮ್ ಆ್ಯಪ್ ಬಳಕೆ ಸುರಕ್ಷಿತವಲ್ಲ, ಒಂದು ವೇಳೆ ವೈಯಕ್ತಿಕವಾಗಿ ಬಳಸುತ್ತಿದ್ದರು ಕೂಡಾ ಅವರಿಗೆ ಈಗಾಗಲೇ ಸಿಇಆರ್ ಟಿ ಇಂಡಿಯಾದ ಮೂಲಕ ವಿವರವಾದ ಸಲಹೆಯ ಮಾರ್ಗಸೂಚಿಯನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರದ ಸೂಚನೆಯಿಂದ ಎಚ್ಚೆತ್ತ Zoom App

ಕೇಂದ್ರ ಸರ್ಕಾರದ ಸೂಚನೆಯಿಂದ ಎಚ್ಚೆತ್ತ Zoom App

ಭಾರತ ಸರ್ಕಾರ ಈ ರೀತಿಯಾಗಿ ಯಾವಾಗ ಆ್ಯಪ್ ಸೇಫ್ ಇಲ್ಲ ಬಳಸಬೇಡಿ ಎಂದು ಹೇಳಿದ ಬಳಿಕ ಕಂಪನಿಯು ಎಚ್ಚೆತ್ತುಕೊಂಡಿದೆ. ತನ್ನ ಬಳಕೆದಾರರಿಗೆ ಸರ್ಕಾರದ ಸೂಚನೆ ಕುರಿತು ಬಳಕೆದಾರರ ಗೊಂದಲವನ್ನು ಬಗೆಹರಿಸುವ ಪ್ರಯತ್ನ ನಡೆಸಿದೆ. 'ಝೂಮ್ ಬಳಕೆದಾರರ ಸುರಕ್ಷತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದಿದೆ.


''ವಿಶ್ವದ ಅತಿದೊಡ್ಡ ಹಣಕಾಸು ಸೇವಾ ಕಂಪನಿಗಳು ಮತ್ತು ದೂರಸಂಪರ್ಕ ಪೂರೈಕೆದಾರರಿಂದ ಹಿಡಿದು, ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳವರೆಗೆ ಹೆಚ್ಚಿನ ಸಂಖ್ಯೆಯ ಜಾಗತಿಕ ಸಂಸ್ಥೆಗಳು ನಮ್ಮ ಬಳಕೆದಾರ, ನೆಟ್‌ವರ್ಕ್ ಮತ್ತು ಡೇಟಾ ಸೆಂಟರ್ ಲೇಯರ್‌ಗಳ ಸಮಗ್ರ ಭದ್ರತಾ ವಿಮರ್ಶೆಗಳನ್ನು ಮಾಡಿವೆ. ಮತ್ತು ಹೆಚ್ಚಿನವರು ಝೂಮ್ ಬಳಕೆಯನ್ನು ಮುಂದುವರಿಸಿದ್ದಾರೆ ಎಂದು'' ಝೂಮ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಗೂಗಲ್, ಸ್ಪೇಸ್ ಎಕ್ಸ್‌ನಿಂದ ಈಗಾಗಲೇ ಬ್ಯಾನ್

ಗೂಗಲ್, ಸ್ಪೇಸ್ ಎಕ್ಸ್‌ನಿಂದ ಈಗಾಗಲೇ ಬ್ಯಾನ್

ಭಾರತದ ಗೃಹ ಸಚಿವಾಲಯ ಝೂಮ್ ಆ್ಯಪ್ ಸೇಫ್ ಅಲ್ಲ ಎಂದು ಎಚ್ಚರಿಕೆ ನೀಡುವ ಮೊದಲೇ ಗೂಗಲ್ ಮತ್ತು ಸ್ಪೇಸ್ ಎಕ್ಸ್‌ನಂತಹ ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳು ಅಧಿಕೃತವಾಗಿ ಝೂಮ್ ಆ್ಯಪ್ ಬಳಸುವುದನ್ನು ನಿಷೇಧಿಸಿವೆ.


ಇತ್ತೀಚೆಗೆ ಸುಮಾರು 5,30,000 ಝೂಮ್ ಖಾತೆಗಳ ಪಟ್ಟಿಯನ್ನು ಡಾರ್ಕ್‌ವೆಬ್‌ನಲ್ಲಿ ಗುರುತಿಸಲಾಗಿದೆ ಮತ್ತು ಗುಪ್ತಚರ ಸಂಸ್ಥೆಯೊಂದು ಪ್ರತಿ ಖಾತೆಗೆ ಸುಮಾರು 15 ಪೈಸೆ ಕೊಟ್ಟು ಖರೀದಿಸಲು ಸಾಧ್ಯವಾಗಿದೆ.

ಭದ್ರತೆ ಹೆಚ್ಚಿಸಲು ಮುಂದಾದ Zoom App ಕಂಪನಿ

ಭದ್ರತೆ ಹೆಚ್ಚಿಸಲು ಮುಂದಾದ Zoom App ಕಂಪನಿ

ಆರೋಪ ಮತ್ತು ಭದ್ರತಾ ಲೋಪದೋಷಗಳನ್ನು ಎದುರಿಸಲು, ಯಾವುದೇ ಹೊಸ ವೈಶಿಷ್ಟ್ಯಗಳನ್ನು ಸೇರಿಸುವ ಬದಲು, ಅಪ್ಲಿಕೇಶನ್‌ನ ಸುರಕ್ಷತೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು 90 ದಿನಗಳನ್ನು ಅದಕ್ಕಾಗಿ ಮೀಸಲಿರಿಸಿದೆ. ಇತ್ತೀಚೆಗೆ, ಕಂಪನಿಯು ಅಪ್ಲಿಕೇಶನ್‌ನ ಬಳಕೆದಾರರಿಗಾಗಿ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.

ಪಾಸ್‌ವರ್ಡ್‌ಗಳನ್ನು ಹೆಚ್ಚು ಸಂಕೀರ್ಣಗೊಳಿಸಲಾಗಿದೆ ಮತ್ತು ಹೆಚ್ಚುವರಿ ಸುರಕ್ಷತೆಗಾಗಿ ರ್ಯಾಂಡಮ್ ಸಭೆ ಐಡಿಗಳನ್ನು ಸಹ ಉದ್ದಗೊಳಿಸಲಾಗಿದೆ.
ಇದರ ಜೊತೆಗೆ ಜೂಮ್ ವೇಟಿಂಗ್ ರೂಮ್ ಮತ್ತು ಡ್ಯುಯಲ್ ಪಾಸ್‌ವರ್ಡ್‌ಗಳಂತಹ ಕೆಲವು ಭದ್ರತಾ ವೈಶಿಷ್ಟ್ಯಗಳನ್ನು ಸಹ ಪರಿಚಯಿಸಿದೆ. ವೇಟಿಂಗ್ ರೂಮ್ ಕಾನ್ಫರೆನ್ಸ್ ಕರೆಗೆ ಯಾರು ಸೇರುತ್ತಿದ್ದಾರೆ ಎಂಬುದರ ಕುರಿತು ಹೋಸ್ಟ್‌ಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

English summary

Zoom App Is Not A Safe Platform Says Home Ministry

Ministry of Home Affairs (MHA) has warned the Zoom app users that the video-conferencing application is not safe for usage. zoom responds to warning issued by govt
Story first published: Friday, April 17, 2020, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X