For Quick Alerts
ALLOW NOTIFICATIONS  
For Daily Alerts

ಸುರಕ್ಷತೆಯ ಸಮಸ್ಯೆಯಿದ್ದರೂ 300 ಮಿಲಿಯನ್ ಗಡಿದಾಟಿದ Zoom ಆ್ಯಪ್ ಬಳಕೆದಾರರು

|

ಆ್ಯಪ್ ಬಳಕೆ ಸುರಕ್ಷಿತವಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದರೂ ಝೂಮ್ ಆ್ಯಪ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ ಹೊರತು ಕಮ್ಮಿ ಆಗಿಲ್ಲ. ಕಳೆದ ಮೂರು ವಾರಗಳಲ್ಲಿ ಆನ್‌ಲೈನ್ ಮೀಟಿಂಗ್ ಅಪ್ಲಿಕೇಶನ್‌ನ ಬಳಕೆಯಲ್ಲಿ 50 ಪರ್ಸೆಂಟ್ ಏರಿಕೆ ಕಂಡುಬಂದಿದೆ ಎಂದು ಕಂಪನಿ ವರದಿ ಮಾಡಿದೆ.

ಏಪ್ರಿಲ್ 1 ರಂದು ಸುಮಾರು 200 ಮಿಲಿಯನ್‌ನಷ್ಟು ಝೂಮ್ ಆ್ಯಪ್ ಬಳಸುತ್ತಿದ್ದರೂ, ಆದರೆ ಏಪ್ರಿಲ್ 21 ರಂದುಬ300 ದಶಲಕ್ಷಕ್ಕೂ ಹೆಚ್ಚು ಜನರು ಝೂಮ್ ವೀಡಿಯೊಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಬಳಸಿದ್ದಾರೆ. ಈ ಮೂಲಕ ಬಳಕೆದಾರರಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್ ಬುಧವಾರ ಹೇಳಿದ್ದಾರೆ.

ಸುರಕ್ಷತೆಯ ಸಮಸ್ಯೆಯಿದ್ದರೂ Zoom ಆ್ಯಪ್ ಬಳಕೆದಾರರಲ್ಲಿ ಹೆಚ್ಚಳ

"ಈ ಸವಾಲಿನ ಸಮಯದಲ್ಲಿ ಜೂಮ್ ಪ್ಲಾಟ್‌ಫಾರ್ಮ್ ನಮ್ಮ ಪ್ರೀತಿಯ ಬಳಕೆದಾರರಿಗೆ ನಂಬಲಾಗದಷ್ಟು ಅಮೂಲ್ಯವಾದ ಸೇವೆಯನ್ನು ಒದಗಿಸುತ್ತಿದೆ. ಪ್ರಪಂಚದಾದ್ಯಂತದ ಅನೇಕ ಉದ್ಯಮಗಳು, ಆಸ್ಪತ್ರೆಗಳು, ಶಿಕ್ಷಕರು ಮತ್ತು ಗ್ರಾಹಕರ ವಿಶ್ವಾಸವನ್ನು ಗಳಿಸುವುದನ್ನು ನಾವು ಮುಂದುವರೆಸುತ್ತಿರುವುದು ನಮಗೆ ರೋಮಾಂಚಗೊಳಿಸಿದೆ ಮತ್ತು ಗೌರವ ತಂದುಕೊಟ್ಟಿದೆ'' ಎಂದು ಎಂದು ಎರಿಕ್ ಯುವಾನ್ ಹೇಳಿದ್ದಾರೆ.

ಇಷ್ಟಲದೆ ನ್ಯೂಯಾರ್ಕ್ ವಹಿವಾಟಿನ ಮುಕ್ತಾಯದ ವೇಳೆಗೆ ಝೂಮ್ ಷೇರುಗಳು ಬುಧವಾರ 5 ಪರ್ಸೆಂಟ್‌ರಷ್ಟು ಏರಿಕೆಯಾಗಿ 150.25 ಡಾಲರ್‌ಗೆ ತಲುಪಿದೆ. ಈ ವರ್ಷ ಇಲ್ಲಿಯವರೆಗೆ ಷೇರು ದ್ವಿಗುಣಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕಕ್ಕೆ ಮುಂಚಿತವಾಗಿ, ಝೂಮ್ ವ್ಯವಹಾರ ಸಂವಹನಗಳ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ಸುಮಾರು 10 ಮಿಲಿಯನ್ ಜನರು ಅದರಲ್ಲೂ ಹೆಚ್ಚಾಗಿ ಕಚೇರಿ ಕೆಲಸಗಾರರು ಇದನ್ನು ಬಳಸುತ್ತಿದ್ದರು.

English summary

Zoom Daily Users Rises To 300 Million

Zoom company reported a 50% surge in use of the online meeting application in the past three weeks.
Story first published: Thursday, April 23, 2020, 10:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X