For Quick Alerts
ALLOW NOTIFICATIONS  
For Daily Alerts

PF ಹಣ ನುಂಗಿದ 17 ಸಾವಿರ ಕಂಪನಿಗಳು

By Mahesh
|

 PF ಹಣ ನುಂಗಿದ 17 ಸಾವಿರ ಕಂಪನಿಗಳು
ಬೆಂಗಳೂರು, ಮಾ.19: ಉದ್ಯೋಗಿಗಳ ಭವಿಷ್ಯ ನಿಧಿಗೆ ಕೊಕ್ಕೆ ಹಾಕುವ ಮೂಲಕ ಕೋಟಿಗಟ್ಟಲೆ ಹಣ ಲೂಟಿ ಮಾಡಿದ ಕಂಪನಿಗಳ ಸಂಖ್ಯೆ 17 ಸಾವಿರ ಮೀರಿದೆ.

ಸೆಪ್ಟೆಂಬರ್ 2012ರ ತನಕ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ ತಮಿಳುನಾಡಿನಲ್ಲಿ ಅತ್ಯಧಿಕ ಕಂಪನಿಗಳು ಪಿಎಫ್ ಹಣವನ್ನು ನುಂಗಿ ಹಾಕಿರುವುದು ಕಂಡು ಬಂದಿದೆ. ರಾಜಧಾನಿ ದೆಹಲಿಯ ಕಂಪನಿಗಳು ಅತ್ಯಧಿಕ ಬಾಕಿ ಮೊತ್ತ ಉಳಿಸಿಕೊಂಡಿರುವುದು ಪತ್ತೆಯಾಗಿದೆ.

ತಮಿಳುನಾಡಿನಲ್ಲಿ ಒಟ್ಟಾರೆ 17,309 ಕಂಪನಿಗಳು ಭವಿಷ್ಯ ನಿಧಿ (Employees' Provident Fund) ಮೊತ್ತ 313.47 ಕೋಟಿ ರು ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಕಾರ್ಮಿಕ ಖಾತೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಗೆ ಮಾಹಿತಿ ನೀಡಿದರು.

ಈ ರೀತಿ ವಂಚನೆಯಲ್ಲಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಆಂಧ್ರದಲ್ಲಿ 12,720 ಕಂಪನಿಗಳು 268.34 ಕೋಟಿ ರು ಕಟ್ಟದೆ ಯಾಮಾರಿಸಿದೆ. ದೆಹಲಿಯಲ್ಲಿ ಅತ್ಯಧಿಕ PF ಪೇಮೆಂಟ್ ಬಾಕಿ ಉಳಿದಿರುವುದು ಪತ್ತೆಯಾಗಿದೆ. ದೆಹಲಿ ಕಂಪನಿಗಳು ಸುಮಾರು 671.97 ಕೋಟಿ ರು ಬಾಕಿ ಉಳಿಸಿಕೊಂಡಿದೆ.

ದೆಹಲಿಯಲ್ಲಿ ಕೇವಲ 565 ಕಂಪನಿಗಳು ಮಾತ್ರ defaulters ಪಟ್ಟಿಯಲ್ಲಿದೆ. ಮಹಾರಾಷ್ಟ್ರದಲ್ಲಿ 7,013 ಕಂಪನಿಗಳು 536.99 ಕೋಟಿ ಬಾಕಿ ಉಳಿಸಿಕೊಂಡಿದೆ.ಒಟ್ಟಾರೆ ಭವಿಷ್ಯ ನಿಧಿ ಮೊತ್ತ ಸೆಪ್ಟೆಂಬರ್ 2012ಕ್ಕೆ ಅನ್ವಯವಾಗುವಂತೆ 3,853.06 ಕೋಟಿ ರು ಬರಬೇಕಿದೆ. ಒಟ್ಟಾರೆ 88,730 ಕಂಪನಿಗಳು PF ಪಾವತಿಸುವ ಗೋಜಿಗೆ ಹೋಗಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ತಿಳಿಯುವುದು ಈಗ ಸುಲಭ. ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್ ಲೈನ್ ಮುಖಾಂತರವೇ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. www.epfindia.com ಅಂತರ್ಜಾಲ ತಾಣ ಜಾಲಾಡಿ ನಮಗೆ ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. [ಆನ್‌ಲೈನ್‌ನಲ್ಲಿ ಪಿಎಫ್ ಮಾಹಿತಿ step by step]

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯ ನೂತನ ಸದಸ್ಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು 2013 ಮಾರ್ಚ್ 1 ರಿಂದ ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ತಡೆಹಿಡಿಯಲು Retirement fund body ನಿರ್ಧರಿಸಿದೆ.

English summary

Over 17,000 firms in TN default on PF deposits worth Rs 313 crore| PF ಹಣ ನುಂಗಿದ 17 ಸಾವಿರ ಕಂಪನಿಗಳು

Tamil Nadu had the highest number of provident fund (PF) defaulting companies up to September 2012, but the highest amount due was from companies based in the national capital, Delhi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X