For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ಸಾಲ ಇನ್ನಿಲ್ಲ

By Mahesh
|

ಬೆಂಗಳೂರು, ಜು.1: ವಿತ್ತೀಯ ಕೊರತೆ ನಿವಾರಣೆ, ರುಪಾಯಿ ಅಪಮೌಲ್ಯ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ಮೇಲಿನ ಸಾಲ ಪಡೆಯುತ್ತಿದ್ದ ಗ್ರಾಹಕರಿಗೆ ಶಾಕ್ ನೀಡಿದೆ.

ಚಿನ್ನದ ಆಮದು ಸುಂಕ ಹೆಚ್ಚಳ ಮಾಡಿ ಆಮದು ಚಿನ್ನಕ್ಕೆ ಕಡಿವಾಣ ಹಾಕಿದ ಮೇಲೆ ರುಪಾಯಿ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆಯಿತ್ತು. ಆದರೆ, ರುಪಾಯಿ ಅಪಮೌಲ್ಯ ತಪ್ಪಿಸಲು ಆರ್ ಬಿಐ ಹೊಸ ಕ್ರಮ ಹುಟ್ಟುಹಾಕಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಚಿನ್ನದ ಖರೀದಿ ಮಾಡಿದ ಗ್ರಾಹಕರು ಅದನ್ನು equated monthly instalments (EMIs), ಆಗಿ ಪರಿವರ್ತಿಸಲು ಇದ್ದ ಅವಕಾಶಕ್ಕೆ ಕತ್ತರಿ ಬೀಳಲಿದೆ. ಇದರ ಜೊತೆಗೆ ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ನಾಣ್ಯ ಖರೀದಿ ಮಾಡುವುದನ್ನು ನಿರ್ಬಂಧಿಸುವಂತೆ ಎಲ್ಲಾ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ.

ಸಾಮಾನ್ಯವಾಗಿ 10 ಸಾವಿರ ಮೌಲ್ಯಕ್ಕೂ ಅಧಿಕ ಖರೀದಿ ಮಾಡುವ ಗ್ರಾಹಕರಿಗೆ ಇಎಂಐ ಆಫರ್ ನೀಡಲಾಗುತ್ತಿತ್ತು. ಕೆಲವು ಇಎಂಐಗಳಲ್ಲಿ ಬಡ್ಡಿದರ ಇಳಿಕೆ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತಿತ್ತು. ಹೀಗಾಗಿ ಇದು ಜನಪ್ರಿಯ ಖರೀದಿ ವಿಧಾನವಾಗಿತ್ತು.

ಆದರೆ, ವಿತ್ತ ಸಚಿವ ಪಿ. ಚಿದಂಬರಂ ಅವರು ಚಿನ್ನ ಖರೀದಿ ಮಾಡದಂತೆ ನೇರವಾಗಿ ನಾಗರೀಕರಲ್ಲಿ ಮನವಿ ಮಾಡಿಕೊಂಡರೂ ಹಳದಿ ಲೋಹದ ವ್ಯಾಮೋಹ ಇನ್ನೂ ಬಿಟ್ಟಿಲ್ಲ.

ಸಾಲದ್ದಕ್ಕೆ ಚಿನ್ನದ ದರ ಇಳಿಕೆ ಗ್ರಾಹಕರ ಖರೀದಿಗೆ ಉತ್ತೇಜನ ನೀಡಿದೆ. ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್ ಗಳಲ್ಲಿ ಚಿನ್ನದ ನಾಣ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಯಿತು. ಆದರೆ, ಅಂಚೆಕಚೇರಿಯಲ್ಲಿ ನಾಣ್ಯ ಮಾರಾಟ ಮುಂದುವರೆಯಿತು.

ನಂತರ ಚಿನ್ನದ ನಾಣ್ಯದ ಮೇಲಿನ ಸಾಲ ಪಡೆಯುವ ಯೋಜನೆಗೂ ಸರ್ಕಾರ ಬ್ರೇಕ್ ಹಾಕಿತು, 50 ಗ್ರಾಮ್ ಗಿಂತ ಅಧಿಕ ತೂಗುವ ಚಿನ್ನದ ನಾಣ್ಯದ ಮೇಲೆ ಸಾಲ ನೀಡದಂತೆ ಬ್ಯಾಂಕ್ ಗಳಿಗೆ ಸೂಚಿಸಲಾಯಿತು. ಆದರೂ ಚಿನ್ನದ ಖರೀದಿ ಭರಾಟೆ ಮುಂದುವರೆದಿದ್ದು, ಇದನ್ನು ತಪ್ಪಿಸಲು ಹೊಸ ಕ್ರಮಕ್ಕೆ ಆರ್ ಬಿಐ ಮುಂದಾಗಲೇಬೇಕಾಯಿತು.

English summary

Now, you can't use credit card to buy gold jewellery on EMIs | ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ಸಾಲ ಇನ್ನಿಲ್ಲ

Reserve Bank of India (RBI) has asked banks not to convert gold purchases done through credit cards into equated monthly instalments (EMIs), besides mandating that cards should not be accepted for purchase of gold coins at branches.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X