ನವೋದ್ಯಮಗಳಿಗಾಗಿ (Startup) ಹಣ ಸಂಗ್ರಹಿಸುವುದು ಹೇಗೆ?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಹೊಸದಾಗಿ ಉದ್ಯಮಗಳನ್ನು ಪ್ರಾರಂಭಿಸಲು ಬಯಸುವವರ ಮುಖ್ಯ ಸಮಸ್ಯೆಯೆಂದರೆ ಫಂಡ್(ಹಣ) ಪಡೆಯುವುದಾಗಿದೆ. ಹೀಗಾಗಿಯೇ ಅನೇಕ ನವ ಉದ್ಯಮಿಗಳು ಪ್ರಾರಂಭಿಸಲು ಬಯಸುವ ಯೋಜನೆಗಳನ್ನು ಅರ್ಧಕ್ಕೆ ಕೈಬಿಡುತ್ತಾರೆ. ಈ ನಿಟ್ಟಿನಲ್ಲಿ ಅನೇಕ ಬ್ಯಾಂಕುಗಳು ಉದ್ಯಮದಾರರಿಗಾಗಿಯೇ ವ್ಯವಹಾರ ಸಾಲಗಳನ್ನು ನೀಡಲು ಮುಂದಾಗಿವೆ.
  ಸ್ಟಾರ್ಟ್ಅಪ್ ಗಳಿಗಾಗಿ ನೀವು ಸಾಲವನ್ನು ಪಡೆಯಲು ತಿಳಿದುಕೊಳ್ಳಬೇಕಾದ 10 ಸುಲಭ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ.

  1. ಬೂಟ್ಸ್ ಟ್ರ್ಯಾಪಿಂಗ್

  ನೀವು ಸ್ವಂತ ಉಳಿತಾಯ ಅಥವಾ ಹೂಡಿಕೆಯ ಮುಖಾಂತರ ಉದ್ಯಮವನ್ನು ಪ್ರಾರಂಭಿಸುವುದನ್ನು ಸಾಮಾನ್ಯವಾಗಿ ಬೂಟ್ಸ್ ಟ್ರ್ಯಾಪಿಂಗ್ ಎನ್ನಲಾಗುತ್ತದೆ. ಹೊಸ ಉದ್ಯಮಗಳಿಗಾಗಿ ಫಂಡ್ಸ್ ಪಡೆಯುವುದು ತುಂಬಾ ಕಷ್ಟ. ಹೀಗಾಗಿ ಸ್ವಂತ ಹೂಡಿಕೆ ಮಾಡುವುದರಿಂದಾಗಿ ಯಾವುದೇ ದಾಖಲಾತಿ ಅಥವಾ ನಿಯಮಗಳನ್ನು ಅನುಸರಿಸುವ ಅಗತ್ಯ ಇರುವುದಿಲ್ಲ.  ಭಾರತದಲ್ಲಿನ 15 ಕ್ರೌಡ್ ಫಂಡಿಂಗ್ ಸಂಸ್ಥೆಗಳು

  2. ಏಂಜೆಲ್ ಇನ್ವೆಸ್ಟ್ಮೆಂಟ್

  ಈಕ್ವಿಟಿ ಮಾಲೀಕತ್ವದ ವಿನಿಮಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ ಹೊಸ ಉದ್ಯಮದಾರರಿಗೆ ಪ್ರೋತ್ಸಾಹಿಸಲು ಏಂಜೆಲ್ ಹೂಡಿಕೆದಾರರು ಮುಂದಾಗಿದ್ದಾರೆ.
  ಗೂಗಲ್, ಯಾಹೂ, ಅಲಿಬಾಬಾ ದಂತಹ ಅನೇಕ ಯಶಸ್ವಿ ಉದ್ಯಮಗಳು ಏಂಜೆಲ್ ಹೂಡಿಕೆದಾರರ ಸಹಾಯವನ್ನು ಪಡೆದಿವೆ.

  3. ವೆಂಚರ್ ಕ್ಯಾಪಿಟಲ್

  ವೆಂಚರ್ ಕ್ಯಾಪಿಟಲ್ ನವರು ವೃತ್ತಿಪರ ಹೂಡಿಕೆದಾರರಾಗಿದ್ದು ಎಲ್ಲಿ ಹೆಚ್ಚೆಚ್ಚು ಲಾಭ ಮತ್ತು ಬೆಳವಣಿಗೆ ಸಾಧ್ಯವಿದೆ ಅಲ್ಲಿ ಮಾತ್ರ ಹೂಡಿಕೆ ಮಾಡುತ್ತ್ತಾರೆ. ಇವರು ವ್ಯವಹಾರದಲ್ಲಿ ಈಕ್ವಿಟಿಯ ವಿರುದ್ದವಾಗಿ ಹೂಡಿಕೆ ಮಾಡಲು ಬಯಸುತ್ತಾರೆ.
  ಯೋಜನೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ಸಂಸ್ಥೆಯ ಬೆಳವಣಿಗೆಗಾಗಿ ಪರಿಣಿತರ ಮುಖಾಂತರ ಸಹಾಯ ಮಾಡುತ್ತಾರೆ.

  4. NBFC ಮೂಲಕ ಸಾಲ

  ಬ್ಯಾಂಕುಗಳಲ್ಲದ ಅನೇಕ ಹಣಕಾಸು ಸಂಸ್ಥೆಗಳು ಹೊಸ ಉದ್ಯಮದಾರರಿಗೆ ಸಾಲವನ್ನು ಮಂಜೂರು ಮಾಡುತ್ತವೆ. ಕಿರುಬಂಡವಾಳ(ಮೈಕ್ರೊಫೈನಾನ್ಸ್) ಸಂಸ್ಥೆಗಳು ಸಿಮಿತವಾದ ಪ್ರಕ್ರಿಯಾ ಅವಧಿಗಾಗಿ ಸಾಲವನ್ನು ನೀಡುತ್ತವೆ.

  5. ಸ್ಟಾರ್ಟ್ಅಪ್ ಇಂಡಿಯ

  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಉದ್ಯಮದಾರರನ್ನು ಪ್ರೋತ್ಸಾಹಿಸಲು, ಉತ್ತಮವಾದ ಬ್ಯುಸಿನೆಸ್ ಯೋಜನೆಗಳಿಗಾಗಿ ಸಾಲವನ್ನು ನೀಡಲು ಸ್ಟಾರ್ಟ್ಅಪ್ ಇಂಡಿಯ ಯೋಜನೆಯನ್ನು ಪ್ರಾರಂಭಿಸಿದ್ದು ಆ ಮೂಲಕ ಸಹ ಸಾಲವನ್ನು ಪಡೆಯಬಹುದಾಗಿದೆ.

  6. ಕ್ರೌಡ್ ಫಂಡಿಂಗ್

  ಒಂದೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಣ ಪಡೆಯುವ ವಿಧಾನ ಇದಾಗಿದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಸೋಷಿಯಲ್ ಮಿಡಿಯಾ ಮತ್ತು ಕ್ರೌಡ್ ಫಂಡಿಂಗ್ ವೇದಿಕೆ ಮುಖಾಂತರ ನಡೆಯುತ್ತದೆ.

  7. ಇನ್ಕ್ಯುಬೆಟರ್ಸ್

  ಕೆಲ ಸಂಸ್ಥೆಗಳು ಹಣ ಮತ್ತು ಮಾರ್ಗದರ್ಶನದ ಕೊಡುವುದರ ಜೊತೆಗೆ ಬಾಹ್ಯಾಕಾಶ ಮತ್ತು ಇತರ ಉಪಕರಣಗಳನ್ನು ಸ್ಟಾರ್ಟ್ಅಪ್ ಟೀಮ್ ನವರಿಗೆ ಪೂರೈಸುತ್ತವೆ.

  8. ವೇಗವರ್ಧಕಗಳು

  ಇವು ಇನ್ಕ್ಯುಬೆಟರ್ಸ್ ನಂತೆಯೆ ಕಾರ್ಯವನ್ನು ನಿರ್ವಹಿಸುತ್ತಿದ್ದು, ಸಿಮೀತ ಅವಧಿಗಾಗಿ ಹಣ ಮತ್ತು ಮಾರ್ಗದರ್ಶನ ಮಾಡುತ್ತವೆ.

  9. ಕ್ರೆಡಿಟ್ ಕಾರ್ಡುಗಳು

  ಕ್ರೆಡಿಟ್ ಕಾರ್ಡುಗಳು ಸಹ ಉಪಕರಣಗಳನ್ನು ಖರೀದಿಸಲು ಮತ್ತು ಆಫಿಸ್ಸಿನ ವ್ಯವಸ್ಥೆ ಮಾಡಲು ಉಪಯೋಗಕಾರಿಯಾಗಿದೆ. ಕ್ಯಾಶ್ ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟುಗಳನ್ನು ಸಹ ಕ್ರೆಡಿಟ್ ಕಾರ್ಡುಗಳನ್ನು ಬಳಸುವುದರ ಮೂಲಕ ಪಡೆಯಬಹುದಾಗಿದೆ.

  10. ಅಡಮಾನ ಸ್ವತ್ತುಗಳು

  ಅಲ್ಪಾವಧಿಯ ಅವಶ್ಯಕತೆಗಳನ್ನು ಪೂರೈಸಲು ನಿಮ್ಮ ಬಳಿ ಇರುವ ವಸ್ತುಗಳನ್ನು ಅಡವಿಟ್ಟು ಸಾಲವನ್ನು ಪಡೆಯಬಹುದಾಗಿದೆ.

  English summary

  10 Ways To Raise Funds For Your Startup In India

  Lack of funding is the major reason why some of the startups do not take off. However, there are many banks which offer business loan to startups. There are many other institutions out there who are happy to help and invest in your startups if you are able to convince for the same.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more