For Quick Alerts
ALLOW NOTIFICATIONS  
For Daily Alerts

ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ. ಭಾರತದ ಯಾವುದೇ

By Siddu Thorat
|

ಆಧಾರ್ ಯೋಜನೆ 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾಗಿದ್ದು, ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಬಳಸುವಂತೆ ಹೇಳುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ.

ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ. ಭಾರತದ ಯಾವುದೇ ಮೂಲೆಗೆ ಹೋದರೂ ವಿಳಾಸ ಮತ್ತು ಗುರುತಿನ ದಾಖಲಾತಿಯಾಗಿ ಆಧಾರ್ ನಂಬರ್ ಬಳಕೆಯಾಗಲಿದೆ. ಅಲ್ಲದೆ UIDAI ವೆಬ್ಸೈಟ್ ಮೂಲಕ ಇ-ಆಧಾರ್ ಡೌನಲೋಡ್ ಮಾಡಿಕೊಳ್ಳುವುದು ಸಹ ಆಧಾರ್ ಕಾರ್ಡ್ ನಷ್ಟೆ ಮಾನ್ಯವಾಗಿರುತ್ತದೆ. ಈ 20 ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ

ಆದರೂ, ಸರ್ಕಾರ ಇದನ್ನು ಇಲ್ಲಿಯವರೆಗೆ ಕಡ್ಡಾಯ ಮಾಡಿಲ್ಲದಿದ್ದರೂ ಎಲ್ಲ ವ್ಯವಹಾರಗಳಿಗಂತೂ ಆಧಾರ್ ಬೇಕಾಗುತ್ತದೆ. ಆಧಾರ್ ನಂಬರ್ ಹೊಂದುವುದರಿಂದ ವಿಳಾಸ ಮತ್ತು ಗುರುತಿನ ಚೀಟಿ ಕೊಡುವಾಗ ಉದ್ಭವಿಸುವ ಜಗಳ ಮತ್ತು ಗೊಂದಲಗಳನ್ನು ಇದು ನಿವಾರಿಸುತ್ತದೆ. ಅಲ್ಲದೆ ಆಧಾರ್ ನಂಬರ್ ಕೊಡುವುದರಿಂದ ಬೇರೆ ಯಾವುದೇ ಗುರುತಿನ ಚೀಟಿಗಳನ್ನು ಕೊಡಬೇಕಾದ ಅಗತ್ಯವಿರುವುದಿಲ್ಲ. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

ಜೊತೆಗೆ ಕೆವಾಯ್ಸಿಯ(KYC) ಸರಿಯಾದ ಪರಿಶೀಲನಾ ಪ್ರಕ್ರಿಯೆಗಾಗಿ ಯುಐಡಿಎಐ(UIDAI) ಬಿಡುಗಡೆಗೊಳಿಸಿದ ಇ-ಕೆವಾಯ್ಸಿ (e-KYC) ಸೇವೆಯನ್ನು ಎಲ್ಲ ಹಣಕಾಸು ಸೇವೆಗಳು ಸ್ವೀಕರಿಸುತ್ತಿವೆ. ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಆಧಾರ್ ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬರು ಇದನ್ನು ಅನೇಕ ಹಂತಗಳಲ್ಲಿ ಲಿಂಕ್ ಮಾಡಬೇಕಾಗುತ್ತದೆ. ಹಾಗೇ ಲಿಂಕ್ ಮಾಡಿದಾಗ ಸಿಗುವ ಅನೇಕ ಲಾಭಗಳ ಪಟ್ಟಿ ಇಲ್ಲಿದೆ ನೋಡಿ... (ಆಧಾರ್ ಲಿಂಕ್)

ಎಲ್ಪಿಜಿ ಸಬ್ಸಿಡಿ(LPG Subsidy)

ಎಲ್ಪಿಜಿ ಸಬ್ಸಿಡಿ(LPG Subsidy)

ಆಧಾರ್ ಕಾರ್ಡ್ ಮೇಲಿನ 12 ಅಂಕೆಗಳ ಗುರುತಿನ ಸಂಖ್ಯೆಯನ್ನು ಬಳಸುವುದರಿಂದ ಎಲ್ಪಿಜಿ ಸಬ್ಸಿಡಿ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದಾಗಿದೆ. ಈ ಸೌಲಭ್ಯವನ್ನು ಪಡೆಯಲು ನಿಮ್ಮ ವಿಭಾಗದ ಹಂಚಿಕೆದಾರರನ್ನು ಭೇಟಿಯಾಗಿ 17 ಅಂಕೆಯ LPG ಗ್ರಾಹಕ ಸಂಖ್ಯೆಯನ್ನು ಆಧಾರ್ ನಂಬರಿನೊಂದಿಗೆ ಲಿಂಕ್ ಮಾಡಬೇಕು. ಹೀಗೆ ಮಾಡುವುದರಿಂದ ನೇರವಾಗಿ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಮಧ್ಯವರ್ತಿಗಳ ಕಿರಿಕಿರಿಯೂ ಇರುವುದಿಲ್ಲ.

ಜನ್ ಧನ್ ಯೋಜನೆ

ಜನ್ ಧನ್ ಯೋಜನೆ

ಗಿನ್ನಿಸ್ ದಾಖಲೆ ಸೇರಿರುವ ಪ್ರಧಾನ ಮಂತ್ರಿ ಜನಧನ ಯೋಜನೆಯ (PMJDY) ಬ್ಯಾಂಕ್ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್/ನಂಬರ್ ಒಂದಿದ್ದರೆ ಸಾಕು. ಬೇರೆ ಯಾವ ಗುರುತಿನ ಚೀಟಿಯೂ ಬೇಕಾಗಿಲ್ಲ. ಅಲ್ಲದೇ ಬೇರೆ ದಾಖಲಾತಿಗಳನ್ನು ಕೊಟ್ಟ ನಂತರವೂ PMJDY ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಇದು ಜೀವನ ಮತ್ತು ಅಪಘಾತ ವಿಮೆಯಾಗಿದ್ದು, ಶೂನ್ಯ ಉಳಿತಾಯದ ಖಾತೆಯಾಗಿರುತ್ತದೆ. ಸೌಲಭ್ಯಗಳನ್ನು ರೂಪೇ ಕಾರ್ಡ್(RuPay) ಎಂಬುದಾಗಿ ಕರೆಯಲಾಗುತ್ತದೆ.

10 ದಿನಗಳಲ್ಲಿ ಪಾಸ್ಪೋರ್ಟ್

10 ದಿನಗಳಲ್ಲಿ ಪಾಸ್ಪೋರ್ಟ್

ನೀವು ಆಧಾರ್ ಕಾರ್ಡ್ ಹೊಂದಿದ್ದಲ್ಲಿ ಪಾಸ್ಪೋರ್ಟ್ ಗಾಗಿ (Passport) ತಿಂಗಳು ಗಟ್ಟಲೆ ಅಲೆಯಬೇಕಾದ, ಕಾಯಬೇಕಾದ ಅಗತ್ಯವಿಲ್ಲ. ಕೇವಲ ಹತ್ತು ದಿನಗಳಲ್ಲಿ ನಿಮಗೆ ಪಾಸ್ಪೋರ್ಟ್ ಸಿಗುತ್ತದೆ. ಈ ನಿಯಮದ ಅಡಿಯಲ್ಲಿ ಸಮಯವನ್ನು ಉಳಿಸು ಮತ್ತು ಗ್ರಾಹಕರಿಗೆ ಅನುಕೂವಾಗುವ ದೃಷ್ಟಿಯಿಂದ ಪೊಲೀಸ್ ವಿಚಾರಣೆ ಹಾಗೂ ಪರಿಶೀಲನೆ ತದನಂತರದಲ್ಲಿ ಮಾಡಲಾಗುವುದು. ಸರ್ಕಾರದ ಕಾಯಿದೆ ಪ್ರಕಾರ ಪಾಸ್ಪೋರ್ಟ್ ಬೇಕಾದಲ್ಲಿ ಆಧಾರ್ ಲಿಂಕ್ ಕೊಡುವುದು ಕಡ್ಡಾಯವಾಗಿರುತ್ತದೆ.

ಡಿಜಿಟಲ್ ಲಾಕರ್

ಡಿಜಿಟಲ್ ಲಾಕರ್

ಭಾರತ ಸರ್ಕಾರ ಡಿಜಿಟಲ್ ಲಾಕರ್ ವ್ಯವಸ್ಥೆಯನ್ನು ಘೋಷಿಸಿದ್ದು, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ದಾಖಲಾತಿಗಳನ್ನು ಸರ್ಕಾರದ ಸರ್ವರ್ ನಲ್ಲಿ ಸಂಗ್ರಹಿಸಿಡಬಹುದು. ಸೈನ್ ಅಪ್ ಪ್ರಕ್ರಿಯೆಗಾಗಿ ಪ್ರತಿಯೊಬ್ಬರೂ ಹನ್ನೆರಡು ಅಂಕೆಯ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.

ಚುನಾವಣಾ ಚೀಟಿ ಲಿಂಕ್ (Voter Card Linking)

ಚುನಾವಣಾ ಚೀಟಿ ಲಿಂಕ್ (Voter Card Linking)

9 ಮಾರ್ಚ್, 2015ರಿಂದ ಆಧಾರ್ ಕಾರ್ಡ್ ನಂಬರನ್ನು
ಚುನಾವಣಾ ಚೀಟಿಯೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ನಕಲಿ ಮತದಾರರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿದೆ. ಒಂದು ಸಲ ಆಧಾರ್ ಲಿಂಕ್ ಮಾಡಿದರೆ ಕಾನೂನು ಬಾಹಿರವಾಗಿ ಒಂದಂಕ್ಕಿಂತ ಹೆಚ್ಚಿನ ಚುನಾವಣಾ ಚೀಟಿಗಳನ್ನು ಪಡೆಯುವುದು ಕಷ್ಟ. ಹೀಗಾಗಿ ನೀವು ಸ್ವತಹ ಅಧಿಕಾರಿಗಳನ್ನು ಭೇಟಿಯಾಗಿ ಆಧಾರ್ ಲಿಂಕ್ ಮಾಡಿಸಬೇಕಾಗುತ್ತದೆ.

ತಿಂಗಳ ಪಿಂಚಣಿ

ತಿಂಗಳ ಪಿಂಚಣಿ

ಪ್ರತಿ ರಾಜ್ಯದ ಪಿಂಚಣಿದಾರರು ತಮ್ಮ ತಿಂಗಳ ಪಿಂಚಣಿಯನ್ನು ಪಡೆಯಬೇಕಾದಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇದರಿಂದಾಗಿ ಪಿಂಚಣಿ ಪಡೆಯುವ ಸಂದರ್ಭದಲ್ಲಿ ಅಲೆಯುವ ಹಾಗೂ ಅಧಿಕಾರಿಗಳ ಕಾಲು ಹಿಡಿಯುವ ಪರಿಸ್ಥಿತಿ ತಪ್ಪಲಿದೆ.

ಪ್ರಾವಿಡೆಂಟ್ ಫಂಡ್

ಪ್ರಾವಿಡೆಂಟ್ ಫಂಡ್

ಪಿಂಚಣಿದಾರರಂತೆಯೇ ಪ್ರಾವಿಡೆಂಟ್ ಫಂಡ್ ಮೊತ್ತವನ್ನು ಖಾತೆದಾರರು ಪಡೆಯಬೇಕಾದಲ್ಲಿ ನೌಕರರ ಪ್ರಾವಿಡೆಂಟ್ ಫಂಡ್ ನಿಧಿ ಸಂಸ್ಥೆ(EPFO) ಯೊಂದಿಗೆ ಆಧಾರ್ ನಂಬರ್ ಲಿಂಕ್ ಮಾಡಬೇಕಾಗುತ್ತದೆ.

ಹೊಸ ಖಾತೆ ತೆರೆಯಲು

ಹೊಸ ಖಾತೆ ತೆರೆಯಲು

ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಬೇಕಾದಲ್ಲಿಯೂ ಸಹ ಆಧಾರ್ ನಂಬರ್ ಕೊಡಬೇಕಾಗಿರುವುದನ್ನು ಗಮನಿಸಬೇಕಾಗುತ್ತದೆ. ಇದು ವಿಳಾಸದ ದಾಖಲಾತಿಯಾಗಿ ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ದಾಖಲಾತಿಗಳನ್ನು ಕೊಡುವುದನ್ನು ತಪ್ಪಿಸಬಹುದಾಗಿದೆ.

ಡಿಜಿಟಲ್ ಜೀವನ ಪತ್ರ(Digital Life Certificate)

ಡಿಜಿಟಲ್ ಜೀವನ ಪತ್ರ(Digital Life Certificate)

ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆಯವರು ಈ ಯೋಜನೆಯನ್ನು ಘೋಷಿಸಿದ್ದು ಡಿಜಿಟಲ್ ಜೀವನ ಪತ್ರಕ್ಕಾಗಿ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.
"ಪಿಂಚಣಿದಾರರ ಜೀವನ ಪ್ರಮಾಣ" ಎಂಬ ಹೆಸರಿನಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಪಿಂಚಣಿದಾರರು ಸ್ವತಹ ಪಿಂಚಣಿ ಏಜೆನ್ಸಿಗೆ ಭೇಟಿ ಕೊಟ್ಟು ಸೌಲಭ್ಯವನ್ನು ಪಡೆಯಬಹುದಾಗಿದೆ.

ಸೆಬಿ(SEBI)

ಸೆಬಿ(SEBI)

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದಾಗ ಆಧಾರ್ ಲಿಂಕ್ ಮಾಡಬೇಕಾಗುತ್ತದೆ ಎಂದು ಸೆಬಿ ತಿಳಿಸಿದ್ದು, ಇದು ಗುರುತಿನ ದಾಖಲಾತಿಯಾಗಿ ಕಾರ್ಯನಿರ್ವಹಿಸಲಿದೆ.

ಆದಾಯ ತೆರಿಗೆ

ಆದಾಯ ತೆರಿಗೆ

ಆಧಾರ್ ಕಾರ್ಡ್ ನಂಬರನ್ನು ಪ್ಯಾನ್ ನಂಬರಿಗೆ ಲಿಂಕ್ ಮಾಡಬಹುದಾಗಿದೆ. ಆದಾಯ ತೆರಿಗೆ ವೆಬ್ಸೈಟ್ ನೊಂದಿಗೆ ನಿಮ್ಮ ಆಧಾರ್ ಲಿಂಕ್ ಮಾಡುವುದರಿಂದ ತೆರಿಗೆ ಫೈಲ್ ಮಾಡಿದ ನಂತರ ಕೇಂದ್ರಿಯ ಪ್ರಕ್ರಿಯಾ ಕೇಂದ್ರಕ್ಕೆ(ಸಿಪಿಸಿ) ಐಟಿಆರ್ವಿ(ITRV ) ಕಳುಹಿಸಬೇಕಾಗಿಲ್ಲ. ಇದರಿಂದಾಗಿ ತೆರಿಗೆ ಪಾವತಿಸುವ ಪ್ರಕ್ರಿಯೆ ಬೇಗ ಮುಗಿದು ನಿಮಗೆ ರಿಫಂಡ್ ಸಹ ಬೇಗ ಸಿಗುತ್ತದೆ.

ಒಟ್ಟಿನಲ್ಲಿ ದೇಶದಲ್ಲಿ ಸುಭದ್ರತೆ, ಸುಸ್ಥಿರತೆ, ಸುಕ್ಷೇಮ, ಸುರಕ್ಷತೆ ಸಾಧ್ಯ ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಆಧಾರ್ ಲಿಂಕ್ ನಿಂದಾಗಿ ಭ್ರಷ್ಟಾಚಾರ, ದುರುಪಯೋಗ, ಕ್ರಿಮಿನಲ್ ಅಪರಾಧ ಇತ್ಯಾದಿಗಳು ಗಣನೀಯವಾಗಿ ಕಡಿಮೆಯಾಗಲಿವೆ.

ಆಧಾರ್ ಕಾರ್ಡ್

English summary

11 Benefits You Lose If You Do Not Link Your Aadhaar Number

Aadhaar number is a 12 digit unique number which is isued by UIDAI. It can linked to a host of services, which help you to get more benefits, apart from convenience. This number will act as proof of identity and address, anywhere in India. Even aadhaar letter, e-Aadhaar downloaded from UIDAI website is accepted by many regulating bodies. SC allowed some of the government bodies to link aadhar for the convenience of the people. it is on voluntry basis
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X