For Quick Alerts
ALLOW NOTIFICATIONS  
For Daily Alerts

ಬಡವನಿಗೆ ಬರೆ.. ಶ್ರೀಮಂತನಿಗೆ ಹೊರೆ!! ಸಿಲಿಂಡರ್ (LPG) ಬೆಲೆ ರೂ. 73 ಹೆಚ್ಚಳ

ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಅಡುಗೆ ಅನಿಲ (ಎಲ್ಪಿಜಿ) ದರವನ್ನು ಪ್ರತಿ ಸಿಲಿಂಡರ್ ಗೆ ರೂ. 7 ಹಾಗು ಸಬ್ಸಿಡಿ ರಹಿತಿ ಸಿಲಿಂಡರ್ ದರವನ್ನು ರೂ. 73.50ಕ್ಕೆ ಹೆಚ್ಚಿಸಲಾಗಿದೆ.

By Siddu
|

ಬಡವನಿಗೆ ಬರೆ.. ಶ್ರೀಮಂತನಿಗೆ ಹೊರೆ..!! ಇನ್ನುಮುಂದೆ ಅಡುಗೆ ಮನೆಯಲ್ಲಿ ಸಿಲಿಂಡರ್ ಸದ್ದು ಜೋರಾಗಲಿದೆ! ಮನೆಯ ಅಡುಗೆ ದುಬಾರಿಯಾಗಲಿದೆ!!

 

ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಅಡುಗೆ ಅನಿಲ (ಎಲ್ಪಿಜಿ) ದರವನ್ನು ಪ್ರತಿ ಸಿಲಿಂಡರ್ ಗೆ ರೂ. 7 ಹಾಗು ಸಬ್ಸಿಡಿ ರಹಿತಿ ಸಿಲಿಂಡರ್ ದರವನ್ನು ರೂ. 73.50ಕ್ಕೆ ಹೆಚ್ಚಿಸಲಾಗಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಸಬ್ಸಿಡಿ ರದ್ದು

ಸಬ್ಸಿಡಿ ರದ್ದು

2018ರ ಮಾರ್ಚ್ ವೇಳೆಗೆ ಎಲ್ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ಹೆಚ್ಚಿಸುತ್ತಿವೆ.

ಪರಿಷ್ಕೃತ ದರ

ಪರಿಷ್ಕೃತ ದರ

ಸಿಲಿಂಡರ್ ಪರಿಷ್ಕೃತ ದರಕ್ಕೆ ಅನುಗುಣವಾಗಿ ಬೆಂಗಳೂರಿನಲ್ಲಿ ಸಬ್ಸಿಡಿ ದರದಲ್ಲಿ ನೀಡುವ ಸಿಲಿಂಡರ್ ಬೆಲೆ ರೂ. 485.50 ಇರಲಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆ ರೂ. 487.18ರಷ್ಟಿದ್ದು, ಈ ಹಿಂದೆ ರೂ. 479.77 ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ. 73.30ರಷ್ಟು ಹೆಚ್ಚಿದ್ದು, ಸೆಪ್ಟಂಬರ್ 1ರಿಂದ ದೆಹಲಿಯ ಪರಿಷ್ಕೃತ ಸಿಲಿಂಡರ್ ದರ ರೂ. 597.50ರಷ್ಟಾಗಿದೆ.

ಪ್ರತಿ ತಿಂಗಳು ದರ ಏರಿಕೆ
 

ಪ್ರತಿ ತಿಂಗಳು ದರ ಏರಿಕೆ

ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ರೂ. 4ರಷ್ಟು ಹೆಚ್ಚಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವ ಧಮೇಂದ್ರ ಪ್ರಧಾನ್ ಅವರು ಜುಲೈ 31 ಲೋಕಸಭೆಯಲ್ಲಿ ಹೇಳಿದ್ದರು. 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ

ಹಿಂದಿನ ಆದೇಶ

ಹಿಂದಿನ ಆದೇಶ

ರೂ. 4 ಏರಿಕೆ 14.2 ಕೆ.ಜಿ ತೂಕದ ಗ್ಯಾಸ್ ಗೆ ಅನ್ವಯವಾಗುತ್ತದೆ. ಈ ಹಿಂದಿನ ಯೋಜನೆಯಂತೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ ರೂ. 2 ಏರಿಕೆ ಮಾಡಲು ಆದೇಶಿಸಲಾಗಿತ್ತು. ಆದರೆ ಈ ಪ್ರಮಾಣದ ಏರಿಕೆಯಿಂದ ಸಬ್ಸಿಡಿ ರದ್ದಾಗುವುದಿಲ್ಲ. ಹೀಗಾಗಿ ಮಾರ್ಚ್ 2018ರ ಹೊತ್ತಿಗೆ ಏರಿಕೆ ಪ್ರಮಾಣವನ್ನು ರೂ. 4 ಏರಿಸಲು ಸೂಚಿಸಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹಿಂದೆ ತಿಳಿಸಿದ್ದರು.

ನಷ್ಟ ಭರಿಸಲು ಬೆಲೆ ಏರಿಕೆ

ನಷ್ಟ ಭರಿಸಲು ಬೆಲೆ ಏರಿಕೆ

ಆಗಸ್ಟ್‌ 1ರಂದು ಪ್ರತಿ ಸಿಲಿಂಡರ್‌ಗೆ ರೂ. 2.31ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಹೀಗಾಗಿ, ಕಳೆದ ತಿಂಗಳ ಕೊರತೆಯನ್ನು ಸರಿದೂಗಿಸಲು ತೈಲ ಕಂಪನಿಗಳು ಈ ಬಾರಿ ರೂ. 7 ಏರಿಕೆ ಮಾಡಿವೆ.

ವರ್ಷಕ್ಕೆ ಸಿಲಿಂಡರ್ ಎಷ್ಟು?

ವರ್ಷಕ್ಕೆ ಸಿಲಿಂಡರ್ ಎಷ್ಟು?

ಒಂದು ವರ್ಷದಲ್ಲಿ ಒಂದು ಕುಟುಂಬ 14.2 kg ತೂಕದ 12 ಸಿಲಿಂಡರ್ ಗಳನ್ನು ಮಾತ್ರ ಸಬ್ಸಿಡಿ ದರದಲ್ಲಿ ಪಡೆಯಲು ಅವಕಾಶವಿದೆ. ಇದಕ್ಕೂ ಹೆಚ್ಚಿನ ಸಿಲಿಂಡರ್ ಗಳು ಬೇಕಾದಲ್ಲಿ ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ.

ಸೀಮೆಎಣ್ಣೆ ದರ ಏರಿಕೆ

ಸೀಮೆಎಣ್ಣೆ ದರ ಏರಿಕೆ

ಪಡಿತರ ವ್ಯವಸ್ಥೆ ಅಡಿಯಲ್ಲಿ (PDS) ದೊರೆಯುವ ಸೀಮೆಎಣ್ಣೆ ಬೆಲೆಯನ್ನು ಪ್ರತಿ ಲೀಟರ್‌ಗೆ 25 ಪೈಸೆಯಷ್ಟು ಏರಿಸಲಾಗಿದೆ. ಎಲ್ಪಿಜಿ ಸಿಲಿಂಡರ್‌ಗೆ ಅನ್ವಯಿಸುವ ನೀತಿಯನ್ನು ಸೀಮೆಎಣ್ಣೆಗೂ ಜಾರಿಗೊಳಿಸಲಾಗುತ್ತಿದೆ. 2016ರ ಜುಲೈ ತಿಂಗಳಿನಿಂದ ಪ್ರತಿ 15 ದಿನಗಳಿಗೊಮ್ಮೆ ಪ್ರತಿ ಲೀಟರ್‌ಗೆ 25ಪೈಸೆಯಷ್ಟು ಹೆಚ್ಚಿಸಲಾಗುತ್ತಿದೆ.

ಬಡವರಿಗೆ ಭಾರೀ ಹೊಡೆತ

ಬಡವರಿಗೆ ಭಾರೀ ಹೊಡೆತ

ಎಲ್ಪಜಿ ಸಬ್ಸಿಡಿ ರದ್ದು ಹಾಗೂ ಪ್ರತಿ ತಿಂಗಳು ನಾಲ್ಕು ಏರಿಕೆ ಬಡವರಿಗೆ, ಮಧ್ಯಮ ವರ್ಗದವರಿಗೆ ಬಿಸಿ ಭಾರೀ ಹೊಡೆತ ನೀಡಲಿದೆ. ಈಗಾಗಲೇ ಸಿಲಿಂಡರ್ ಗೆ ರೂ. 2 ದರದಂತೆ ಹತ್ತು ಬಾರಿ ಬೆಲೆ ಏರಿಸಲಾಗಿದೆ. ಇದೀಗ ರೂ. 4 ಏರಿಸುವಂತೆ ಆದೇಶ ಹೊರಡಿಸಲಾಗಿದ್ದು, ಸೆಪ್ಟಂಬರ್ ನಲ್ಲಿ 7 ರೂಪಾಯಿ ಏರಿಸಲಾಗಿದೆ. ಸರ್ಕಾರದ ಸಬ್ಸಿಡಿ ಸಂಪೂರ್ಣ ರದ್ದಾಗುವವರೆಗೆ ಇಲ್ಲವೇ ಮುಂದಿನ ಆದೇಶದವರೆಗೆ ಎಲ್ಪಿಜಿ ದರ ಏರಿಕೆ ಜಾರಿಯಲ್ಲಿರಲಿದೆ.

ಕೇಂದ್ರದ ಉಜ್ವಲ ರಾಜ್ಯದ ಅನಿಲಭಾಗ್ಯ..?

ಕೇಂದ್ರದ ಉಜ್ವಲ ರಾಜ್ಯದ ಅನಿಲಭಾಗ್ಯ..?

ಕೇಂದ್ರ ಸರ್ಕಾರ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುತ್ತಿದೆ. ಕೇಂದ್ರದ ಉಜ್ವಲ ಯೋಜನೆ ಮಾದರಿಯಲ್ಲಿ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ(ಗ್ಯಾಸ್) ಪೂರೈಸಲಿದೆ. ಸಬ್ಸಿಡಿ ಅಡಿ ಎಲ್‌ಪಿಜಿ ಸಿಲಿಂಡರ್‌ ಬಳಸುತ್ತಿರುವವರ ಒಟ್ಟು ಸಂಖ್ಯೆ 18.11 ಕೋಟಿ ಆಗಿದ್ದು, ಕೇಂದ್ರದ ಉಜ್ವಲ ಯೋಜನೆ ಅಡಿ 2.5 ಕೋಟಿ ಮಹಿಳೆಯರು ಉಚಿತ ಎಲ್‌ಪಿಜಿ ಸಿಲಿಂಡರ್‌ ಪಡೆಯುತ್ತಿದ್ದಾರೆ. ಆದರೆ ಮುಂದಿನ ಪರಿಸ್ಥಿತಿ ಕೊಂಚ ಗಂಭೀರವಾಗಿರಲಿದೆ.

ಸಬ್ಸಿಡಿ ರದ್ದಾದರೆ ಬಡವರಿಗೆ/ಮಧ್ಯಮ ವರ್ಗದವರಿಗೆ ಹೊರೆ

ಸಬ್ಸಿಡಿ ರದ್ದಾದರೆ ಬಡವರಿಗೆ/ಮಧ್ಯಮ ವರ್ಗದವರಿಗೆ ಹೊರೆ

ಒಂದು ವೇಳೆ ಎಲ್ಪಜಿ ಸಬ್ಸಿಡಿ ರದ್ದಾಗಿ, ಪ್ರತಿ ತಿಂಗಳು ನಾಲ್ಕು ಏರಿಕೆ ಮಾಡಿದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಭಾರೀ ಹೊರೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಈಗಾಗಲೇ ಸಿಲಿಂಡರ್ ಗೆ ರೂ. 2 ದರದಂತೆ ಹತ್ತು ಬಾರಿ ಬೆಲೆ ಏರಿಸಲಾಗಿದೆ. ಕಳೆದ ತಿಂಗಳು ರೂ. 4, ಈ ತಿಂಗಳು ರೂ. 7 ಏರಿಸಲಾಗಿದೆ. ಇದು ಜನಸಾಮಾನ್ಯರನ್ನು ಕೆರಳಿಸಿತ್ತು. ಈಗಾಗಲೇ ಜಿಎಸ್ಟಿ ಜಾರಿಯಿಂದಾಗಿ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ ಸಿಲಿಂಡರ್ ಮೇಲಿನ ಸಹಾಯಧನ ರದ್ದುಪಡಿಸಿದರೆ ಬಡವರಿಗೆ ಇನ್ನಷ್ಟು ಹೊರೆಯಾಗಲಿದ್ದು, ಬಡಜನರ ದಿನನಿತ್ಯದ ಖರ್ಚುಗಳು ಏರಿಕೆಯಾಗಲಿವೆ.

ಅನಾಣ್ಯೀಕರಣ, ಜಿಎಸ್ಟಿ ಮತ್ತು ಜಾಗತಿಕ ಪರಿಣಾಮ

ಅನಾಣ್ಯೀಕರಣ, ಜಿಎಸ್ಟಿ ಮತ್ತು ಜಾಗತಿಕ ಪರಿಣಾಮ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗುವ ಮುನ್ನ ಎಲ್ಪಿಜಿ ಸಿಲಿಂಡರ್‌ ಮೇಲೆ ತೆರಿಗೆ ಇರಲಿಲ್ಲ. ಆದರೆ ಜಿಎಸ್ಟಿ ಜಾರಿ ನಂತರ ಶೇ. 5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್‌ ದರ ಜಾಗತಿಕ ತೈಲ ದರಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಅನಾಣ್ಯೀಕರಣದಿಂದಾಗಿ ಜಿಡಿಪಿ ಶೇ. 5.7ಕ್ಕೆ ಕುಸಿತ ಕಂಡಿದೆ. ಕಳೆದ ಮೂರು ವರ್ಷಗಳ ಹಿಂದಿನ ಕನಿಷ್ಟ ಮಟ್ಟಕ್ಕೆ ಆರ್ಥಿಕ ಅಭಿವೃದ್ಧಿ ದರ ಇಳಿದಿದೆ.

English summary

LPG price hiked by Rs 7 per cylinder

Subsidised cooking gas (LPG) price was on Friday raised by over ₹7 per cylinder, in line with the government’s decision to hike prices every month so that all subsidises are eliminated by this fiscal-end.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X