For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಅತೀ ಹೆಚ್ಚು ಸಂಬಳ ನೀಡುವ 11 ಸರ್ಕಾರಿ ಉದ್ಯೋಗಗಳು

ಜನರು 5-10 ವರ್ಷಗಳವರೆಗೆ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದಕ್ಕಾಗಿ ಒತ್ತಾಡುತ್ತಿರುತ್ತಾರೆ. ಯಾಕಂದರೆ ಸರ್ಕಾರಿ ನೌಕರಿ ಎಂದರೆ ಭದ್ರತೆ ಇರುತ್ತೆ ಮತ್ತು ಕೈ ತುಂಬಾ ಸಂಬಳ ಸಿಗುತ್ತೆ. ಸಂಸಾರ ನಡೆಸುವುದಕ್ಕೆ ಸುಲಭ ಅನ್ನುವುದು ಎಲ್ಲರ ಲೆಕ್ಕ.

|

ಜನರು 5-10 ವರ್ಷಗಳವರೆಗೆ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದಕ್ಕಾಗಿ ಒತ್ತಾಡುತ್ತಿರುತ್ತಾರೆ. ಯಾಕಂದರೆ ಸರ್ಕಾರಿ ನೌಕರಿ ಎಂದರೆ ಭದ್ರತೆ ಇರುತ್ತೆ ಮತ್ತು ಕೈ ತುಂಬಾ ಸಂಬಳ ಸಿಗುತ್ತೆ. ಸಂಸಾರ ನಡೆಸುವುದಕ್ಕೆ ಸುಲಭ ಅನ್ನುವುದು ಎಲ್ಲರ ಲೆಕ್ಕಾಚಾರ. ಭಾರತದಲ್ಲಿ ಅಂತಹ ಕೆಲವು ಸರ್ಕಾರಿ ಕೆಲಸಗಳಿವೆ. ಅವು ಒಮ್ಮೆಲೆ ಎಂತವರನ್ನಾದರೂ ನಾನು ಈ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಅನ್ನಿಸುವಂತಿವೆ. ನೀವು ಊಹಿಸಿಕೊಳ್ಳಿ, ಸರ್ಕಾರಿ ಕಾರು, 10 ಲಕ್ಷ ತಿಂಗಳ ಸಂಬಳ ಮತ್ತು ಎರಡು ಎಕರೆಯ ಸರ್ಕಾರಿ ಬಂಗಲೆಯಲ್ಲಿ ವಾಸವಿರುವ ಅದೃಷ್ಟ ಯಾರಿಗುಂಟು ಯಾರಿಗಿಲ್ಲ... ಆದರೆ ಇಂತಹ ಕೆಲಸ ಪಡೆಯುವುದು ಮತ್ತು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಒಂದಷ್ಟು ಬುದ್ಧಿವಂತಿಕೆ ಬೇಕಾಗುತ್ತದೆ.

 

ಆದರೆ ನಾವಿಲ್ಲಿ ಕೆಲವು ಸಿಂಪಲ್ ಆಗಿರುವ ಸರ್ಕಾರಿ ಕೆಲಸವನ್ನು ಪಟ್ಟಿ ಮಾಡಿದ್ದೇವೆ. ಅದನ್ನು ಒಬ್ಬ ಸಾಮಾನ್ಯ ಕೂಡ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

1. PSU ಉದ್ಯೋಗ

1. PSU ಉದ್ಯೋಗ

ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿವಿಧ ಸೌಲಭ್ಯಗಳಿರುತ್ತವೆ. PSU ಕೆಲಸಗಾರರಿಗೆ ಒಳ್ಳೆ ಸಂಬಳ ಜೊತೆಗೆ ಉಳಿದುಕೊಳ್ಳಲು ಮನೆಯ ವ್ಯವಸ್ಥೆ, ಮೆಡಿಕಲ್ ಸೌಲಭ್ಯಗಳು ಮತ್ತು ಇತರೆ ಸರಕಾರಿ ಸವಲತ್ತುಗಳನ್ನು ಒದಗಿಸಲಾಗುತ್ತದೆ.
ಭಾರತೀಯ ಕಲ್ಲಿದ್ದಲು ಇಲಾಖೆ( Coal India Limited (CIL)) ತಮ್ಮ ಕೆಲಸಗಾರರಿಗೆ ಹೆಚ್ಚು ಕಡಿಮೆ ರೂ. 10 ಲಕ್ಷ ಸಂಬಳವನ್ನು ವರ್ಷಕ್ಕೆ ನೀಡುತ್ತದೆ.
ಭಾರತೀಯ ಇಂಧನ ಇಲಾಖೆ (Indian Oil Corporation (IOC)) 8 ರಿಂದ 9 ಲಕ್ಷ ಸಂಬಳವನ್ನು ನೀಡುತ್ತೆ.

2. ನಾಗರೀಕ ವಲಯದ ಸೇವೆ

2. ನಾಗರೀಕ ವಲಯದ ಸೇವೆ

ನಾಗರೀಕ ವಲಯದ ಸೇವೆ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ IAS ಆಫೀಸರ್ ಗಳು. ಇದು ಗೌರವಾನ್ವಿತ ಹುದ್ದೆಗಳಲ್ಲಿ ಪ್ರಮುಖವಾದದ್ದು. IAS ಆಫೀಸರ್ ಗಳು ಒಳ್ಳೆಯ ಸಂಬಳ ಪಡೆದು ಖುಷಿ ಪಡಬಹುದು. ಬಹಳಷ್ಟು ಅಧಿಕಾರ ಮತ್ತು ಸಮಾಜದಲ್ಲಿ ಬಹಳ ಗೌರವ ಸಿಗುವ ಹುದ್ದೆ ಇದು. ಐಎಎಸ್ ಆಫೀಸರ್ ಗಳು ಕ್ಯಾಬಿನೆಟ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಲ್ಲಿ ಅವರ ಪ್ರಾರಂಭಿಕ ಸಂಬಳ ಎಷ್ಟಿರುತ್ತೆ ಗೊತ್ತಾ..
ಮೂಲ ವೇತನ - ರೂ. 90,000
ಡಿ.ಎ - ರೂ. 96,300
ಎಚ್ ಆರ್ ಎ - ರೂ. 27,000
ಟಿ.ಎ - ರೂ. 5,280
ಒಟ್ಟು - ರೂ. 2,18,580

3. ವಿಜ್ಞಾನಿಗಳು
 

3. ವಿಜ್ಞಾನಿಗಳು

ವಿಜ್ಞಾನಿಗಳು ಅವರು ಓದಿರುವ ವಿದ್ಯಾರ್ಹತೆಯ ಆಧಾರದಲ್ಲಿ "SC" ಮತ್ತು "SD" ಎಂದು ಎರಡು ಕೆಟಗರಿಯಲ್ಲಿ ವಿಂಗಡಿಸಿ ಕೆಲಸ ನೀಡಲಾಗುತ್ತದೆ.

ಪ್ರಾಥಮಿಕ ಹಂತದ ವಿಜ್ಞಾನಿಗಳು ಅಥವಾ ಇಂಜಿನಿಯರ್ ಗಳು ‘SC'
ಮೂಲ ಸಂಬಳ ರೂ. 21000
ಡಿ.ಎ - ರೂ. 23790
ಎಚ್ಆರ್ಎ - ರೂ. 6300 (ಪ್ರದೇಶಕ್ಕೆ ಅನುಗುಣವಾಗಿ ಶೇ. 10 ರಿಂದ 30 ತನಕ ಬದಲಾವಣೆಯಾಗುತ್ತದೆ.)
ಟಿ.ಎ - ರೂ. 3200 ಬೆಂಗಳೂರಿನಲ್ಲಿ (ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತೆ)
ಡಿಎ ಮೇಲಿನ ಟಿಎ ರೂ. 3616
ಒಟ್ಟು ರೂ. 57,906

4. ವೈದ್ಯರು

4. ವೈದ್ಯರು

ಭಾರತದಲ್ಲಿ ವೈದ್ಯಕೀಯ ವೃತ್ತಿಗೆ ಭಾರೀ ಬೇಡಿಕೆ ಇದೆ. ವೈದ್ಯರುಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ವೃತ್ತಿಯಲ್ಲಿ ಅರ್ಹತೆ ಪಡೆದವರಿಗೆ ಒಳ್ಳೆಯ ಕರಿಯರ್ ಅವಕಾಶಗಳಿವೆ. ಎಂಬಿಬಿಎಸ್ ಅಥವಾ ಇಂಟರ್ನಿಶಿಪ್ ಮುಗಿಸಿದ ವೈದ್ಯರ ಪ್ರಾಥಮಿಕ ಸಂಬಳವೇ ರೂ. 10000 ದಿಂದ 20000 ಇದೆ. ಈ ಸಂಬಳ ಅವರ ವಿದ್ಯಾ ವಿಶೇಷತೆಯ ಆಧಾರದಲ್ಲಿ ಬದಲಾವಣೆ ಇದೆ. ವಿದ್ಯಾರ್ಹತೆ, ಕೆಲಸದ ಅನುಭವ, ವೈಯಕ್ತಿಕ ಕೌಶಲಗಳ ಆಧಾರದಲ್ಲಿ ಈ ಸಂಬಳ ಹೆಚ್ಚುತ್ತಾ ಹೋಗುತ್ತೆ.
ಕರಾರಿನ ಮೂಲಕ ಕೆಲಸಕ್ಕೆ ಸೇರಿರುವ ವೈದ್ಯರಿಗೆ ರೂ. 12000 ದಿಂದ 30000 ಸಂಬಳ ಸಿಗುತ್ತದೆ. ಅದು ಅವರ ವೈದ್ಯಕೀಯ ಅನುಭವ ಮತ್ತು ವಿದ್ಯಾರ್ಹತೆಯನ್ನು ಅವಲಂಬಿಸಿದೆ. ಭಾರತೀಯ ವೈದ್ಯಕೀಯ ಸಚಿವಾಲಯವು ಹಳ್ಳಿಗಳಲ್ಲಿ ವೈದ್ಯ ವೃತ್ತಿ ನಿರ್ವಹಿಸುವವರಿಗೆ ಶೇ. 25 ರಿಂದ ಶೇ. 50ರಷ್ಟು ಸಂಬಳವನ್ನು ಹೆಚ್ಚು ನೀಡುತ್ತದೆ. ಸರ್ಜರಿಯಲ್ಲಿ ಓದು ಮುಗಿಸಿದ ವೈದ್ಯರಿಗೆ ಕೂಡಲೇ ಮುಂಬೈಯಲ್ಲಿ ರೂ. 35000 ತಿಂಗಳ ಸಂಬಳ ಹಾಗೂ ದೆಹಲಿಯಲ್ಲಿ ರೂ. 70,000 ತಿಂಗಳ ಸಂಬಳ ಸಿಗಲಿದೆ. ನಂತರ ಅವರು ಸಬ್ ಸ್ಪೆಷಲೈಜೇಷನ್ ಇಲ್ಲವೇ ಜನರಲ್ ಸರ್ಜನ್ ಆಗಿ ಪ್ರಾಕ್ಟೀಸ್ ಕೈಗೊಂಡರೆ ತಿಂಗಳಿಗೆ ರೂ. 100000ವರೆಗಿನ ಸಂಬಳವನ್ನು ನಿರೀಕ್ಷಿಸಬಹುದು. ಸಬ್ ಸ್ಪೆಷಲಿಸ್ಟ್ ಗಳು ಇದಕ್ಕಿಂತಲೂ ಹೆಚ್ಚಿನ ಸಂಬಳ ನಿರೀಕ್ಷಿಸಬಹುದು. ದೇಶದಲ್ಲಿ ಅತೀ ಹೆಚ್ಚು ಅಂದರೆ ರೂ. 1,50,000 ಸಂಬಳ ಪಡೆಯುತ್ತಿರುವ ಸ್ಪೆಷಲಿಸ್ಟ್ ವೈದ್ಯರು ಗಳೂ ಕೂಡ ಇದ್ದಾರೆ.

5. ವಿಶ್ವವಿದ್ಯಾಲಯದ ಪ್ರೊಫೆಸರ್

5. ವಿಶ್ವವಿದ್ಯಾಲಯದ ಪ್ರೊಫೆಸರ್

ದೇಶದ ಏಳಿಗೆಯಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಶಾಲೆಯ ಶಿಕ್ಷಕರಿಗೆ ಕಡಿಮೆ ಸಂಬಳ ಇದೆ. ಆದರೆ ಪ್ರೊಫೆಷನರ್ ಕೋರ್ಸ್ ಗಳು ಮತ್ತು ಕಾಲೇಜುಗಳ ಶಿಕ್ಷಕರಿಗೆ ಇಲ್ಲವೆ ಅಧ್ಯಾಪಕರಿಗೆ ಉತ್ತಮ ಸಂಬಳವನ್ನು ನೀಡಲಾಗುತ್ತದೆ. ಪ್ರೊಫೆಸರ್ ಗಳು, ಪೋಸ್ಟ್ ಸೆಕೆಂಡರಿ ಮತ್ತು ಮಾಸ್ಟರ್ ಡಿಗ್ರಿ ಎಜುಕೇಷನ್ ನ ಅಧ್ಯಾಪಕರುಗಳಿಗೆ ರೂ. 9,55,627 ಸಂಬಳವನ್ನು ವರ್ಷಕ್ಕೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಹೇಳಿಕೊಡುವ ಸಾಮರ್ಥ್ಯದ ಆಧಾರದ ಮೇಲೆ ಇಲ್ಲೂ ಕೂಡ ಇವರ ಸಂಬಳ ನಿರ್ಧರಿತವಾಗುತ್ತೆ. ಸ್ವಲ್ಪ ಅನುಭವವಾದದಲ್ಲಿ ಈ ಕೆಲಸ ನಿಮಗೆ ಬಹಳ ಗೌರವ ಮತ್ತು ಉತ್ತಮ ಸಂಬಳವನ್ನು ದೊರಕಿಸಿ ಕೊಡುತ್ತದೆ.

6. ಭಾರತೀಯ ಕರಾವಳಿ ಸಿಬ್ಬಂದಿ

6. ಭಾರತೀಯ ಕರಾವಳಿ ಸಿಬ್ಬಂದಿ

ಭಾರತೀಯ ಕರಾವಳಿ ಸಿಬ್ಬಂದಿ (Indian coast guard or ICG) ಅಂದರೆ ನಮ್ಮ ಭಾರತೀಯ ನೌಕಾನೆಲೆ. ಸಂಬಳ ಮತ್ತು ಇತರೆ ಸವಲತ್ತುಗಳ ಬಹಳ ಅಧಿಕವಾಗಿರುತ್ತದೆ. ಸರ್ಕಾರಿ ಕೆಲಸಗಳಲ್ಲೇ ಅತೀ ಹೆಚ್ಚು ಸಂಬಳ ಸಿಗುವ ಕೆಲಸಗಳಲ್ಲಿ ಇದೂ ಒಂದು. ಈ ಕೆಲಸಕ್ಕೆ ಎರಡು ರೀತಿಯ ಜನರು ಅಪ್ಲೈ ಮಾಡಬಹುದು. ಒಂದು ದೇಶ ಸೇವೆ ಮಾಡಬೇಕೆಂದು ಬಯಸುವವರು ಮತ್ತು ಇಂತಹ ಕೆಲಸ ಮಾಡಲು ಉತ್ಸುಕರಾಗಿರುವವರು, ಹೆಚ್ಚಿನ ಸಂಬಳಕ್ಕೆ ಆಸೆ ಪಡುವವರು, ನೌಕಾನೆಲೆಯ ಅಧಿಕಾರಿಗಳ ಜೀವನಶೈಲಿಯಿಂದ ಪ್ರಭಾವಿತರಾಗಿರುವವರು ಈ ಕೆಲಸಕ್ಕೆ ಸೇರಿಕೊಳ್ಳಬಹುದು.. ಬಹಳ ಒತ್ತಡವಿರುವ ಕೆಲಸವೇನಲ್ಲ. ಆದರೆ ಜಾಗೃತೆ ಬಹಳ ಮುಖ್ಯ.
ಶ್ರೇಯಾಂಕ ಮತ್ತು ಸಂಬಳ
ಅಸಿಸ್ಟೆಂಟ್ ಕಮಾಂಡೆಂಟ್ Rs. 15600-39100 with Grade Pay Rs 5400/
ಡೆಪ್ಯುಟಿ ಕಮಾಂಡೆಂಟ್ Rs. 15600-39100 with Grade Pay Rs 6600/-
ಕಮಾಂಡೆಂಟ್ (Junior Grade) Rs. 15600-39100 with Grade Pay Rs 7600/-
ಕಮಾಂಡೆಂಟ್ Rs. 37400-67000 with Grade Pay Rs 8700/-
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ Rs. 37400-67000 with Grade Pay Rs 8900/-
ಜನರಲ್ ಇನ್ಸ್ಪೆಕ್ಟರ್ Rs. 37400-67000 with Grade Pay Rs 10000/-
ಡೈರೆಕ್ಟರ್ ಜನರಲ್ Rs. 37400-67000 with Grade Pay Rs 12000/-
ಇದರ ಜೊತೆಗೆ ಡಿಎ, ಟಿಎ, ಕಿಟ್ ಮೈಂಟೇನೆನ್ಸ್ ಭತ್ಯೆಗಳು ಒಳಗೊಂಡಿರುತ್ತದೆ. ಹಾರಾಟದ ಭತ್ಯೆ, ದ್ವೀಪ ಕ್ಷೇತ್ರದ ಭತ್ಯೆ, ಸಮುದ್ರದಲ್ಲಿ ಕೆಲಸ ಮಾಡಿದರೆ ಭತ್ಯೆ ಇವುಗಳು ನೀವು ಕೆಲಸ ಮಾಡುತ್ತಿರುವ ಪ್ರದೇಶದ ಆಧಾರದಲ್ಲಿ ನೀಡಲಾಗುತ್ತದೆ.

7. ರಕ್ಷಣಾ ಕೆಲಸಗಳು

7. ರಕ್ಷಣಾ ಕೆಲಸಗಳು

ರಕ್ಷಣಾ ಕೆಲಸಗಳಾದ ಭಾರತೀಯ ನೌಕಾನೆಲೆ, ವಾಯುನೆಲೆ, ಭೂ ನೆಲೆಯ ಸರ್ಕಾರಿ ಕೆಲಸಗಳಲ್ಲಿ ಉತ್ತಮ ಸಂಬಳವನ್ನು ನೀಡಲಾಗುತ್ತದೆ. ಸಾವಿರಕ್ಕೂ ಅಧಿಕ ಯುವಕರು ಈ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ. ಆದರೆ ಅವರು NDA or CDS ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಸಂಬಳ ಮತ್ತು ಇತರೆ ಸೌಕರ್ಯಗಳು ಈ ಕೆಲಸದಲ್ಲಿ ಅತ್ಯುತ್ತಮವಾಗಿದೆ. ಪ್ರಾರಂಭಿಕ ಸಂಬಳವೇ ತಿಂಗಳಿಗೆ ರೂ. 65000 ಇರುತ್ತದೆ. ಮನೆ ಭತ್ಯೆ, ಪ್ರವಾಸ ಭತ್ಯೆ, ಮಿಲಿಟರಿ ಸರ್ವೀಸ್ ಪೇ, ಗ್ರೇಡ್ ಪೇ, ಬೇಸಿಕ್ ಪೇ, ಟೆಕ್ ಪೇ ಇವೆಲ್ಲವನ್ನು ಇದು ಒಳಗೊಂಡಿದೆ. ಅಂತಿಮವಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಗೌರವಾನ್ವಿತವಾಗಿ ಬದುಕಲು ಈ ಕೆಲಸ ಹೇಳಿ ಮಾಡಿಸಿದಂತಿದೆ. ಇದಿಷ್ಟೇ ಅಲ್ಲದೆ ಹಲವು ಬೋನಸ್ ಮತ್ತು ಸೌಕರ್ಯಗಳು ಈ ಕೆಲಸದಲ್ಲಿ ಸಿಗಲಿದೆ.

8. ರೈಲ್ವೇ ಇಲಾಖೆಯಲ್ಲಿ ಇಂಜಿನಿಯರ್ ಗಳು

8. ರೈಲ್ವೇ ಇಲಾಖೆಯಲ್ಲಿ ಇಂಜಿನಿಯರ್ ಗಳು

ಬೇರೆ ಯಾವುದೋ ಕಂಪೆನಿಗಳಲ್ಲಿ ಇಂಜಿನಿಯರ್ ಗಳಾಗಿ ಕೆಲಸ ಮಾಡುವವರಿಗಿಂತ ರೈಲ್ವೇ ಇಲಾಖೆಯಲ್ಲಿ ಇಂಜಿನಿಯರ್ ಗಳಾಗಿ ಕೆಲಸ ಮಾಡುವವರಿಗೆ ಹೆಚ್ಚು ಸಂಬಳ ದೊರಕುತ್ತದೆ. ಸರ್ಕಾರಿ ಇಂಜಿನಿಯರ್ ಗಳಿಗೆ ಸಮಾಜದಲ್ಲಿ ಗೌರವ ಹೆಚ್ಚು. ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ಕೊಟ್ಟು ಕೆಲಸ ಮಾಡುವ ಉದ್ದೇಶದಿಂದಾಗಿ ಇವರಿಗೆ ಪ್ರವಾಸ ಭತ್ಯೆಯನ್ನು ನೀಡಲಾಗುತ್ತೆ. ವಾಹನ ಸೌಲಭ್ಯ ಮತ್ತು ಅದಕ್ಕೊಬ್ಬ ಚಾಲಕ ಸೇರಿದಂತೆ ಹಲವು ಸವಲತ್ತುಗಳನ್ನು ಸರ್ಕಾರಿ ಇಂಜಿನಿಯರ್ ಗಳಿಗೆ ನೀಡಲಾಗುತ್ತದೆ. ಭಾರತೀಯ ರೈಲ್ವೇಯ ಸೀನಿಯರ್ ಇಂಜಿನಿಯರ್ ಸಂಬಳ ರೂ. 6,01,866. ರೂ. 4,64,296 ದಿಂದ 7,09,342 ರೂ.ವರೆಗೆ ಇಂಜಿನಿಯರ್ ಗಳಿಗೆ ಸಂಬಳ ನೀಡಲಾಗುತ್ತೆ.

9. ಎಸ್ಬಿಐ ಬ್ಯಾಂಕ್ ಉದ್ಯೋಗಿಗಳು

9. ಎಸ್ಬಿಐ ಬ್ಯಾಂಕ್ ಉದ್ಯೋಗಿಗಳು

ದೇಶದಲ್ಲಿ ಅತೀ ಹೆಚ್ಚು ಲಾಭ ಗಳಿಕೆಯ ಉದ್ಯೋಗವಕಾಶವೆಂದರೆ ಬ್ಯಾಂಕಿಂಗ್ ಸೆಕ್ಟರ್. ಕೆಲಸದ ಒತ್ತಡ ಬಹಳ ಕಡಿಮೆ ಮತ್ತು ಸಂಬಳ ಕೂಡ ಒಳ್ಳೆ ರೀತಿಯಲ್ಲಿದ್ದು, ಉತ್ತಮ ಸಲವತ್ತುಗಳನ್ನು ಕೂಡ ಕೊಡಲಾಗುತ್ತದೆ. ಐಬಿಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಬ್ಯಾಂಕ್ ಉದ್ಯೋಗಿಗಳಾಗಬಹುದು. ಬೇರೆ ಬೇರೆ ಬ್ಯಾಂಕ್ ಗಳಿಗೆ ಬೇರೆ ಪರೀಕ್ಷೆಗಳಿವೆ. ಬೇರೆ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದ್ದಲಿ ಎಸ್ ಬಿ ಐ ಬ್ಯಾಂಕ್ ಉದ್ಯೋಗಿಗಳಿಗೆ ಸಂಬಳ ಹೆಚ್ಚು.
ಆರಂಭಿಕ ಸಂಬಳವೇ ರು. 16900 ಇದ್ದು, ವರ್ಷಕ್ಕೆ 4 ಬಾರಿ ಸಂಬಳವನ್ನು ಹೆಚ್ಚಿಸಲಾಗುತ್ತದೆ. Rs. 14500-600/7-18700-700/2-20100-800/7-25700 ಸಂಬಳವು ಸ್ಕೇಲ್ ಒಂದರಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಇರುತ್ತದೆ. ಅಷ್ಟೇ ಅಲ್ಲ ಇವರು D.A, H.R.A ಮತ್ತು C.C.A ಸವಲತ್ತುಗಳಿಗೂ ಅರ್ಹರು. ಇದು ಪ್ರದೇಶ ಮತ್ತು ಬ್ಯಾಂಕ್ ಗಳ ನಿಯಮಾವಳಿಗೆ ಅನುಸಾರವಾಗಿ ನಿರ್ಧರಿತವಾಗಿರುತ್ತದೆ. ಮುಂಬೈ ನಲ್ಲಿ ಕೆಲಸ ಮಾಡುವ ಬ್ಯಾಂಕ್ ಉದ್ಯೋಗಿಯೊಬ್ಬ ಕಡಿಮೆ ಅಂದರೂ ವರ್ಷಕ್ಕೆ ರೂ. 8,55,000 ಸಂಬಳ ಪಡೆಯಬಹುದಾಗಿದೆ.

10. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು

10. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು

SSC-CGL ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಇಲ್ಲಿ ಉದ್ಯೋಗವಕಾಶವನ್ನು ಒದಗಿಸಲಾಗುತ್ತದೆ. CGL ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪ್ರಾಮುಖ್ಯತೆ ನೀಡುವ ಪ್ರಮುಖ ಉದ್ಯೋಗಗಳಲ್ಲಿ ಇದೂ ಒಂದು. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಉತ್ತಮ ಸಂಬಳದ ನಿರೀಕ್ಷೆಯಿಂದಾಗಿ ಈ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಿದೇಶದಲ್ಲಿ ಕೆಲಸ ನಿರ್ವಹಿಸುವುದಾದರೆ US $1,800 to $2,900 (Rs 1,17,000 to 1,88,500) ಸಂಬಳ ಸಿಗುತ್ತದೆ. ಆದರೆ ಇದು ನೀವು ಯಾವ ದೇಶದಲ್ಲಿ ಕೆಲಸ ಮಾಡಬೇಕು ಅನ್ನುವುದರ ಆಧಾರದಲ್ಲಾಗಿರುತ್ತದೆ. ವಿದೇಶಿ ಭತ್ಯೆಗಳೂ ಕೂಡ ಸಿಗಲಿದೆ. ಅಸಿಸ್ಟೆಂಟ್ ಆಗಿ ಆಯ್ಕೆ ಆಗಿರುವವರಿಗೆ ಸಾಮಾನ್ಯವಾಗಿ 3 ವರ್ಷ ಒಂದು ದೇಶದಲ್ಲಿ ಕೆಲಸ ಮಾಡಲು ಪೋಸ್ಟಿಂಗ್ ಮಾಡಲಾಗುತ್ತದೆ. ಅದು 6 ವರ್ಷವೂ ಆಗಿರಬಹುದು. ನಂತರ ಅಲ್ಲಿಂದ ಪುನಃ ಭಾರತಕ್ಕೆ ಕರೆಸಿಕೊಳ್ಳುವ ಸಾಧ್ಯತೆಯೂ ಇರುತ್ತೆ ಇಲ್ಲವೇ ಮತ್ತೊಂದು ದೇಶಕ್ಕೂ ನಿಮ್ಮನ್ನ ವರ್ಗಾವಣೆ ಮಾಡುವ ಸಾಧ್ಯತೆ ಇರುತ್ತದೆ. ನೀವು ಸರ್ಕಾರಿ ವೆಚ್ಚದಲ್ಲಿ ಬೇರೆಬೇರೆ ದೇಶವನ್ನು ನೋಡಲು ಬಯಸುತ್ತೀರಾದರೆ ಖಂಡಿತ ಈ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

11. ಆದಾಯ ತೆರಿಗೆ ಅಧಿಕಾರಿಗಳು

11. ಆದಾಯ ತೆರಿಗೆ ಅಧಿಕಾರಿಗಳು

ಆದಾಯ ತೆರಿಗೆ ಅಧಿಕಾರಿಗಳಿಗೆ, SSC-CGL ಪರೀಕ್ಷೆ ಅನ್ವಯ ಉತ್ತೀರ್ಣರಾದವರಿಗೆ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಇದೆ. ಆದರೆ ಆದಾಯ ತೆರಿಗೆ ಇನ್ಸ್ಪೆಕ್ಟರ್ ಹುದ್ದೆಗೆ ಹೆಚ್ಚಿನ ಬೇಡಿಕೆ ಇದೆ. ಯಾಕೆಂದರೆ ಇದಕ್ಕೆ ಸಮಾಜದಲ್ಲಿ ಗೌರವ ಹೆಚ್ಚು. ರೂ. 9300 ರಿಂದ 34800 ರೂ. ಸಂಬಳವನ್ನು ಇವರಿಗೆ ನೀಡಲಾಗುತ್ತದೆ. ಅದು ಅವರ ವಿದ್ಯಾರ್ಹತೆಯನ್ನು ಅವಲಂಬಿಸಿರುತ್ತೆ. 30 ಲೀಟರ್ ಪೆಟ್ರೋಲ್ ಹಣ, ಬಿಎಸ್ ಎನ್ ಎಲ್ ಸಿಮ್ ಕಾರ್ಡ್, 1 ಜಿಬಿ ಇಂಟರ್ ನೆಟ್ ಬಳಕೆಗೆ ಅವಕಾಶ ಹೀಗೆ ಹಲವು ಸವಲತ್ತುಗಳನ್ನು ನೀಡಲಾಗುತ್ತದೆ.

Read more about: jobs india money finance news salary
English summary

Highest Salary Paying Government Jobs in India

There are few high salaried government jobs in India which can cause anyone drool.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X