For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬಡ್ಡಿದರ, ಬ್ಯಾಲೆನ್ಸ್ ಲೆಕ್ಕ ಹಾಕುವುದು ಹೇಗೆ?

ಕಾರ್ಮಿಕ ಭವಿಷ್ಯ ನಿಧಿ ಅಥವಾ ಇಪಿಎಫ್ ಇದು ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ನೌಕರರಿಗಾಗಿ ರೂಪಿಸಲಾಗಿರುವ ಉಳಿತಾಯ ಯೋಜನೆಯಾಗಿದೆ.

|

ಕಾರ್ಮಿಕ ಭವಿಷ್ಯ ನಿಧಿ ಅಥವಾ ಇಪಿಎಫ್ ಇದು ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ನೌಕರರಿಗಾಗಿ ರೂಪಿಸಲಾಗಿರುವ ಉಳಿತಾಯ ಯೋಜನೆಯಾಗಿದೆ. ಇಪಿಎಫ್‌ನ ಬಡ್ಡಿ ಲೆಕ್ಕಾಚಾರ ಮಾಡುವುದು, ಇಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ವಿವರ ತಿಳಿದುಕೊಳ್ಳುವುದು ಇಂದಿಗೂ ಬಹುತೇಕರಿಗೆ ಕಬ್ಬಿಣದ ಕಡಲೆಯಾಗಿವೆ. ಇಪಿಎಫ್‌ನಲ್ಲಿ ಬಡ್ಡಿ ಲೆಕ್ಕ ಹಾಕುವುದು ಹಾಗೂ ಬ್ಯಾಲೆನ್ಸ್ ಬಗೆಗಿನ ವಿವರಗಳನ್ನು ಒಮ್ಮೆ ತಿಳಿದುಕೊಂಡಲ್ಲಿ ಗೊಂದಲಗಳಿಂದ ಮುಕ್ತವಾಗಬಹುದಾಗಿದೆ. ಬಡ್ಡಿ ಲೆಕ್ಕಾಚಾರ ಹಾಗೂ ಇನ್ನಿತರ ವಿವರಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು, ಗಮನವಿಟ್ಟು ಓದಿ ನೀವೂ ತಿಳಿದುಕೊಳ್ಳಿ. ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು

ಇಪಿಎಫ್ ವಂತಿಗೆ ಪ್ರಮಾಣ

ಇಪಿಎಫ್ ವಂತಿಗೆ ಪ್ರಮಾಣ

ಇಪಿಎಫ್ ಖಾತೆಗೆ ಉದ್ಯೋಗಿ ಹಾಗೂ ಉದ್ಯೋಗದಾತರಿಬ್ಬರೂ ಸಲ್ಲಿಸುವ ವಂತಿಗೆಯನ್ನು ಆಧರಿಸಿ ಬಡ್ಡಿ ಲೆಕ್ಕ ಮಾಡಲಾಗುತ್ತದೆ. ಉದ್ಯೋಗಿಯ ಒಟ್ಟು ಮೂಲ ಸಂಬಳ ಹಾಗೂ ತುಟ್ಟಿ ಭತ್ಯೆಯ ಶೇ. 10 ಅಥವಾ 12 ರಷ್ಟು ಮೊತ್ತವನ್ನು ಇಪಿಎಫ್‌ಗೆ ವಂತಿಗೆಯಾಗಿ ನೀಡಬೇಕಾಗುತ್ತದೆ. ಇಷ್ಟೇ ಪ್ರಮಾಣದ ವಂತಿಗೆಯನ್ನು ಉದ್ಯೋಗದಾತ ಸಹ ಇಪಿಎಫ್ ಖಾತೆಗೆ ತನ್ನ ವಂತಿಗೆಯಾಗಿ ನೀಡುತ್ತಾನೆ.
ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ 20 ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಉದ್ದಿಮೆ ನಷ್ಟದಲ್ಲಿದ್ದಲ್ಲಿ ಅಥವಾ ಇನ್ನಾವುದೇ ಇಪಿಎಫ್‌ಓ ನಿಯಮಾವಳಿಗಳ ಅಡಿಯಲ್ಲಿ ಬರುತ್ತಿದ್ದರೆ ಮಾತ್ರ ಇಪಿಎಫ್ ವಂತಿಗೆ ಪ್ರಮಾಣ ಶೇ.10 ಕ್ಕೆ ಸೀಮಿತವಾಗಿರುತ್ತದೆ.

ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಅವರ ಟೇಕ್ ಹೋಂ ಸ್ಯಾಲರಿ ಹೆಚ್ಚಿಸುವ ಸಲುವಾಗಿ ಕಳೆದ 2018 ರ ಬಜೆಟ್‌ನಲ್ಲಿ ಕೇಂದ್ರ ಸರಕಾರ ಕೆಲ ಉತ್ತೇಜನಕಾರಿ ಕ್ರಮಗಳನ್ನು ಜಾರಿಗೆ ತಂದಿದೆ. ಇದರನ್ವಯ ಯಾವುದೇ ಮಹಿಳಾ ಉದ್ಯೋಗಿ ತಾನು ಕೆಲಸಕ್ಕೆ ಸೇರಿದ ಮೊದಲ ಮೂರು ವರ್ಷಗಳ ಕಾಲ ಶೇ. 8 ರಷ್ಟು ಮಾತ್ರ ಇಪಿಎಫ್ ವಂತಿಗೆ ಸಲ್ಲಿಸಿದರೆ ಸಾಕು. ಈ ಮುಂಚೆ ಇದು (ಸಂಸ್ಥೆಯ ಸ್ವರೂಪವನ್ನು ಆಧರಿಸಿ) ಶೇ. 10 ಹಾಗೂ 12 ರಷ್ಟಿತ್ತು. ಆದಾಗ್ಯೂ ಉದ್ಯೋಗದಾತರು ಸಲ್ಲಿಸಬೇಕಾದ ವಂತಿಗೆ ಪ್ರಮಾಣ ಮಾತ್ರ ಮುಂಚಿನಂತೆ ಶೇ. 10 ಅಥವಾ 12 ರಷ್ಟೇ ಇದೆ. ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಇಪಿಎಫ್ ವಂತಿಗೆಯ ಹೊಸ ನಿಯಮ

ಇಪಿಎಫ್ ವಂತಿಗೆಯ ಹೊಸ ನಿಯಮ

ಅಷ್ಟೆ ಅಲ್ಲದೆ ಹೊಸ ಇಪಿಎಫ್‌ಓ ನಿಯಮಾವಳಿಗಳ ಅಡಿಯಲ್ಲಿ ಇಪಿಎಫ್ ಸದಸ್ಯರಾಗಿರುವ ಉದ್ಯೋಗಿಗಳು ಯಾವುದೇ ವಂತಿಗೆಯನ್ನು ಸಲ್ಲಿಸಬೇಕಾಗಿಲ್ಲ. ಅಂದರೆ ಉದ್ಯೋಗಿಯ ಆರಂಭದ ಮೂರು ವರ್ಷಗಳ ಕಾಲ ವಂತಿಗೆಯನ್ನು (ಇಪಿಎಫ್ ಹಾಗೂ ಇಪಿಎಸ್ ಎರಡಕ್ಕೂ) ಕೇಂದ್ರ ಸರಕಾರವೇ ಭರಿಸಲಿದೆ. ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸೇರಿ ಮಾರ್ಚ್ 31, 2019 ರ ಅವಧಿಯೊಳಗೆ ಹೊಸದಾಗಿ ಇಪಿಎಫ್ ಸದಸ್ಯರಾಗುವವರಿಗೆ ಸರಕಾರದ ಹೊಸ ಸೌಲಭ್ಯ ಸಿಗಲಿವೆ. ಜೊತೆಗೆ ಮಾಸಿಕ 15 ಸಾವಿರವರೆಗೆ ಸಂಬಳ ಪಡೆಯುವ ಹಾಗೂ ಎಪ್ರಿಲ್ 1, 2016 ರಂದು ಅಥವಾ ಅದರ ನಂತರ ಇಪಿಎಫ್ ಸದಸ್ಯರಾದವರಿಗೂ ಹೊಸ ನಿಯಮ ಅನ್ವಯವಾಗಲಿದೆ.

ಇಪಿಎಫ್ ವಂತಿಗೆ ಲೆಕ್ಕಾಚಾರ

ಇಪಿಎಫ್ ವಂತಿಗೆ ಲೆಕ್ಕಾಚಾರ

ಮಾಸಿಕ 15 ಸಾವಿರ ರೂ. ವರೆಗಿನ ಸಂಬಳ (ಮೂಲ ಸಂಬಳ ಹಾಗೂ ತುಟ್ಟಿ ಭತ್ಯೆ ಸೇರಿಸಿ) ಆಧರಿಸಿ ವಂತಿಗೆಯ ಪ್ರಮಾಣ ನಿರ್ಧರಿಸಲಾಗುತ್ತದೆ. ಆದಾಗ್ಯೂ ಪ್ರಸ್ತುತ ಉದ್ಯೋಗಿಯ ಸಂಬಳ ನಿಗದಿತ 15 ಸಾವಿರ ರೂ. ಮೀರುತ್ತಿದ್ದರೆ ಅಂಥ ಸಂದರ್ಭಗಳಲ್ಲಿ 3 ಸ್ಟ್ಯಾಂಡರ್ಡ್ ನಿಯಮಗಳ ಪ್ರಕಾರ ವಂತಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಈ 3 ರಲ್ಲಿ ಯಾವುದೇ ಒಂದು ನಿಯಮಾವಳಿಯನ್ನು ಅಳವಡಿಸಿಕೊಳ್ಳಲು ಉದ್ಯೋಗ ನೀಡಿದ ಸಂಸ್ಥೆ (ಮಾಲೀಕ ಅಥವಾ ಉದ್ಯೋಗದಾತರು) ಸ್ವತಂತ್ರವಾಗಿರುತ್ತದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

ಇಪಿಎಫ್ ವಂತಿಗೆ ಲೆಕ್ಕ ಮಾದರಿ

ಇಪಿಎಫ್ ವಂತಿಗೆ ಲೆಕ್ಕ ಮಾದರಿ

ಇಪಿಎಫ್ ವಂತಿಗೆ ಲೆಕ್ಕ ಮಾಡುವ ಬಗ್ಗೆ ಒಂದು ಮಾದರಿ ಉದಾಹರಣೆಯನ್ನು ಇಲ್ಲಿ ಗಮನಿಸೋಣ.
1. ಉದ್ಯೋಗಿಯ ಮೂಲ ಸಂಬಳ + ತುಟ್ಟಿ ಭತ್ಯೆ : 50,000 ರೂ.
2. ಇಪಿಎಫ್ ಗೆ ಉದ್ಯೋಗಿಯ ವಂತಿಗೆ ಪ್ರಮಾಣ : ಶೇ.12 * (ಗುಣಿಸು) 50,000 ರೂ. = 6000 ರೂ.
3. ಇಪಿಎಫ್‌ಗೆ ಉದ್ಯೋಗದಾತನ ವಂತಿಗೆ : 50,000 ರೂ.ಗಳ ಮೇಲೆ ಶೇ.3.67 = ಶೇ. 3.67 * (ಗುಣಿಸು) 50000 = 1835 ರೂ. ...(A)
4. ಉದ್ಯೋಗಿಯ ಪೆನ್ಷನ್ ನಿಧಿಗೆ (ಇಪಿಎಸ್) ಉದ್ಯೋಗದಾತನ ವಂತಿಗೆ : ಶೇ. 8.33 * (ಗುಣಿಸು) 50000 ರೂ. = 4165 ರೂ. ...(I)
5. ಇಪಿಎಸ್ ಅಡಿ 15000 ರೂ. ಆದಾಯ ಮಿತಿಗೊಳಪಟ್ಟು ಉದ್ಯೋಗದಾತನ ವಂತಿಗೆ : 15000 ರೂ.ಗಳ ಶೇ. 8.33 ರಷ್ಟು = 1249.50 ರೂ. ...(II)
6. ಆದಾಯ ಮಿತಿಯ ಮೇಲೆ ಉದ್ಯೋಗದಾತನಿಂದ ಇಪಿಎಸ್‌ಗೆ ಹೆಚ್ಚುವರಿ ವಂತಿಗೆ (ಕ) - (ಚ) : ರೂ. 4165- ರೂ. 1249.50 = 2915.50 ರೂ. ...(B)
7. (ಬಿ) ಯಲ್ಲಿನ ಹೆಚ್ಚುವರಿ ಮೊತ್ತವನ್ನು ಉದ್ಯೋಗದಾತನಿಂದ ಪಾವತಿಸಲಾದ ಇಪಿಎಫ್ ಮೊತ್ತ (ಎ) ಗೆ ಸೇರಿಸಿದಲ್ಲಿ : 2915.50 + 1835 = 4750.50 ರೂ.

ಅಂದರೆ ಅಂತಿಮವಾಗಿ ಇಪಿಎಫ್‌ಗೆ ಉದ್ಯೋಗದಾತ ಸಲ್ಲಿಸುವ ವಂತಿಗೆ ರೂ. 4750 ಗಳಾಗುತ್ತದೆ. (ಒಟ್ಟು ಮೊತ್ತವನ್ನು ಇಪಿಎಫ್ ನಿಯಮಾವಳಿಗಳ ಪ್ರಕಾರ ರೌಂಡ್ ಆಫ್ ಮಾಡಲಾಗಿದೆ.)

ಸಮೀಕರಣ ವಿಧಾನ

ಸಮೀಕರಣ ವಿಧಾನ

ಮೇಲಿನ ವಿಧಾನದ ಹೊರತಾಗಿ ಅದೇ ಲೆಕ್ಕವನ್ನು ಸಮೀಕರಣ ಬಳಸಿ ಮಾಡಿದಲ್ಲಿ, ಮೂಲ ಸಂಬಳ (ತುಟ್ಟಿ ಭತ್ಯೆ ಸೇರಿಸಿ)ದ ಶೇ. 12 ರಷ್ಟು - (ಕಳೆಯುವುದು) 15000 ರೂ.ಗಳ ಶೇ. 8.33 ರಷ್ಟು ಲೆಕ್ಕ ಹಾಕಿದರೆ ನಮಗೆ ಸಿಗುವುದು:
50000 * (ಗುಣಿಸು) ಶೇ. 12 - (ಕಳೆ) 15000 ರೂ.ಗಳ ಶೇ. 8.33 ರಷ್ಟು = 4750.50
ಮೊತ್ತವನ್ನು ರೌಂಡ್ ಆಫ್ ಮಾಡಿದಾಗ ನಮಗೆ ಸಿಗುವ ಮೊತ್ತ ರೂ. 4750
ಅಂದರೆ ಹಂತಗಳಲ್ಲಿ ಹಾಗೂ ಸಮೀಕರಣ ಎರಡೂ ರೀತಿಯ ಲೆಕ್ಕಾಚಾರ ಒಂದೇ ರೀತಿಯ ಫಲಿತಾಂಶ ನೀಡುತ್ತವೆ.

ಹೀಗೆ ಉದ್ಯೋಗಿ ಹಾಗೂ ಉದ್ಯೋಗದಾತ ಇಬ್ಬರ ವಂತಿಗೆಯನ್ನು ಲೆಕ್ಕ ಮಾಡಿದ ನಂತರ ಇದರ ಮೇಲೆ ಸಿಗುವ ಬಡ್ಡಿಯನ್ನು ಲೆಕ್ಕ ಹಾಕಬಹುದು.

ಕ್ಲೋಸಿಂಗ್ ಬ್ಯಾಲೆನ್ಸ್ ಲೆಕ್ಕಾಚಾರ

ಕ್ಲೋಸಿಂಗ್ ಬ್ಯಾಲೆನ್ಸ್ ಲೆಕ್ಕಾಚಾರ

ಆಯಾ ತಿಂಗಳ ಆರಂಭದಲ್ಲಿ ಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಆಧರಿಸಿ ಬಡ್ಡಿ ಲೆಕ್ಕಾಚಾರ ಮಾಡಲಾಗುತ್ತದೆ. ಮೊದಲ ತಿಂಗಳು ಖಾತೆಯಲ್ಲಿ ಬ್ಯಾಲೆನ್ಸ್ ಸೊನ್ನೆ ಆಗಿರುವುದರಿಂದ ಮೊದಲ ತಿಂಗಳ ಬಡ್ಡಿ ಗಳಿಕೆ ಸಹ ಸೊನ್ನೆ ಆಗುತ್ತದೆ. ಎರಡನೇ ತಿಂಗಳಲ್ಲಿ ಮೊದಲ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಆಧರಿಸಿ ಬಡ್ಡಿ ಲೆಕ್ಕ ಮಾಡಲಾಗುತ್ತದೆ. ಅಂದರೆ ಇದು ಎರಡನೇ ತಿಂಗಳ ಓಪನಿಂಗ್ ಬ್ಯಾಲೆನ್ಸ್ ಆಗಿರುತ್ತದೆ. ಮೊದಲು ತಿಂಗಳು ಉದ್ಯೋಗಿ ಹಾಗೂ ಉದ್ಯೋಗದಾತನ ವಂತಿಗೆಗಳೆರಡನ್ನೂ ಸೇರಿಸಿ ಮೊದಲ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಲೆಕ್ಕ ಮಾಡಲಾಗುತ್ತದೆ. ಅದೇ ರೀತಿ ಎರಡನೇ ತಿಂಗಳಿನ ಕ್ಲೋಸಿಂಗ್ ಬ್ಯಾಲೆನ್ಸ್ ಆಧರಿಸಿ ಮೂರನೇ ತಿಂಗಳಿನ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಎರಡನೇ ತಿಂಗಳಿಗಾಗಿ ಉದ್ಯೋಗಿ ಹಾಗೂ ಉದ್ಯೋಗದಾತರು ಸಲ್ಲಿಸುವ ವಂತಿಗೆಗಳು ಹಾಗೂ ಮೊದಲ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಸೇರಿಸಿ ಎರಡನೇ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಲೆಕ್ಕ ಮಾಡಲಾಗುತ್ತದೆ.

ನಿರ್ದಿಷ್ಟ ವರ್ಷದ ಕೊನೆಯಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತರ ಒಟ್ಟು ವಂತಿಗೆಯ ಮೊತ್ತ ಹಾಗೂ ವರ್ಷದ ಆಯಾ ತಿಂಗಳಲ್ಲಿ ಜಮೆಯಾದ ಬಡ್ಡಿಯನ್ನು ಒಟ್ಟು ಸೇರಿಸಲಾಗುತ್ತದೆ. ಹೀಗೆ ಸಿಗುವ ಮೊತ್ತವೇ ಆ ನಿರ್ದಿಷ್ಟ ವರ್ಷದ ಇಪಿಎಫ್ ಖಾತೆಯ ಕ್ಲೋಸಿಂಗ್ ಬ್ಯಾಲೆನ್ಸ್ ಆಗಿರುತ್ತದೆ. ಇದೇ ಮೊತ್ತ ಎರಡನೇ ವರ್ಷದ ಓಪನಿಂಗ್ ಬ್ಯಾಲೆನ್ಸ್ ಆಗುತ್ತದೆ. ಎರಡನೇ ವರ್ಷದ ಓಪನಿಂಗ್ ಬ್ಯಾಲೆನ್ಸ್ ಆಧರಿಸಿ ಎರಡನೇ ವರ್ಷದ ಪ್ರಥಮ ತಿಂಗಳ ಬಡ್ಡಿಯನ್ನು ಲೆಕ್ಕ ಮಾಡಲಾಗುತ್ತದೆ.

ಇದನ್ನು ಲೆಕ್ಕಾಚಾರ ರೂಪದಲ್ಲಿ ನೋಡೋಣ.
ವರ್ಷದ ಕೊನೆಯಲ್ಲಿ ಒಟ್ಟು ಇಪಿಎಫ್ ಬ್ಯಾಲೆನ್ಸ್ = 12 ತಿಂಗಳ ಕೊನೆಯಲ್ಲಿ ಇರುವ ಬ್ಯಾಲೆನ್ಸ್ (ಉದ್ಯೋಗಿ ಹಾಗೂ ಉದ್ಯೋಗದಾತನ ವಂತಿಗೆಯ ಒಟ್ಟು ಮೊತ್ತ) + ವರ್ಷದಲ್ಲಿನ ಪ್ರತಿ ತಿಂಗಳು ಜಮೆಯಾದ ಬಡ್ಡಿಯ ಒಟ್ಟು ಮೊತ್ತ = 1,29,000 + 5055 = 1,34,055 ರೂ.

ಹಣ ಹಿಂಪಡೆಯಲು ನಿಬಂಧನೆಗಳು

ಹಣ ಹಿಂಪಡೆಯಲು ನಿಬಂಧನೆಗಳು

ಇಪಿಎಫ್ ಖಾತೆಯಿಂದ ಹಣ ಹಿಂಪಡೆಯುವ ಬಗ್ಗೆ ಕೆಲ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಉದ್ಯೋಗಿಗೆ 58 ವರ್ಷಗಳಾದ ಸಂದರ್ಭದಲ್ಲಿ ಇಪಿಎಫ್ ನ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಹಾಗೆಯೇ ಯಾವುದೇ ಇಪಿಎಫ್ ವಂತಿಗೆದಾರ ಸತತ 2 ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಗೆ ನಿರುದ್ಯೋಗಿಗಳಾಗಿ ಉಳಿದಲ್ಲಿ ಸಹ ಮೊತ್ತವನ್ನು ಮರಳಿ ಪಡೆಯಬಹುದು. ಇನ್ನು ಇಪಿಎಫ್‌ಓ ನಿಯಮಾವಳಿಗಳಿಗೆ ಒಳಪಟ್ಟು ಕೆಲ ಸಂದರ್ಭಗಳಲ್ಲಿ ಶೇ. 90 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಅದರಂತೆ ಉದ್ಯೋಗಿಗೆ 57 ವರ್ಷ ವಯಸ್ಸಾದ ಸಂದರ್ಭದಲ್ಲಿ ಯಾವುದೇ ಷರತ್ತುಗಳಿಲ್ಲದೆ ಶೇ. 90 ರಷ್ಟು ಮೊತ್ತವನ್ನು ಮರಳಿ ಪಡೆಯಬಹುದು.

ಅನ್ವಯವಾಗುವ ತೆರಿಗೆಗಳು

ಅನ್ವಯವಾಗುವ ತೆರಿಗೆಗಳು

ಇಪಿಎಫ್‌ಗೆ ಅನ್ವಯಿಸಬಹುದಾದ ತೆರಿಗೆಗಳ ಬಗ್ಗೆ ನೋಡುವುದಾದರೆ, 5 ವರ್ಷಗಳವರೆಗೆ ಸತತವಾಗಿ ಉದ್ಯೋಗದಲ್ಲಿದ್ದು ನಂತರ ಖಾತೆಯಿಂದ ಹಿಂಪಡೆಯುವ ಮೊತ್ತಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. 5 ವರ್ಷಕ್ಕೂ ಮುನ್ನ ಹಣ ಹಿಂಪಡೆಯುವುದಾದರೆ ಅಂಥ ಮೊತ್ತವು ಆದಾಯ ತೆರಿಗೆ ನಿಯಮಗಳಿಗೆ ಒಳಪಡುತ್ತದೆ ಹಾಗೂ ಆಯಾ ಕಾಲದಲ್ಲಿ ಜಾರಿಯಲ್ಲಿರುವ ತೆರಿಗೆ ನಿಯಮಗಳಂತೆ ತೆರಿಗೆ ಕಟ್ಟಬೇಕಾಗುತ್ತದೆ.

English summary

How to calculate Employees' Provident Fund balance and interest

Interest on the Employees' Provident Fund (EPF) is calculated on the contributions made by the employee as well as the employer.
Story first published: Monday, November 19, 2018, 10:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X