For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶ ತಿಳಿದುಕೊಳ್ಳಿ..

ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಅವರ ವಿವಾಹದ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ.

|

ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಅವರ ವಿವಾಹದ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ತಮ್ಮ ಹೆಣ್ಣು ಮಗುವಿಗಾಗಿ ಈ ಯೋಜನೆಯನ್ನು ಪಡೆಯುವ ಮುನ್ನ ಪಾಲಕರು ಕೆಲ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈಗಾಗಲೇ ಈ ಯೋಜನೆಯ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿದ್ದರೂ ಇನ್ನೂ ಕೆಲ ಸೂಕ್ಷ್ಮ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಬೆಳಕು ಚೆಲ್ಲಲಾಗಿದ್ದು, ನೀವೂ ಓದಿ ತಿಳಿದುಕೊಳ್ಳಿ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

 

ಹೆಣ್ಣು ಮಗುವಿಗೆ ಯಾವ ವಯಸ್ಸಿನಲ್ಲಿ ಹಣ ಬೇಕಾಗಬಹುದು?

ಹೆಣ್ಣು ಮಗುವಿಗೆ ಯಾವ ವಯಸ್ಸಿನಲ್ಲಿ ಹಣ ಬೇಕಾಗಬಹುದು?

ಹೆಣ್ಣು ಮಗುವಿಗೆ ಯಾವ ನಿರ್ದಿಷ್ಟ ವಯಸ್ಸಿನಲ್ಲಿ ಆರ್ಥಿಕ ಅಗತ್ಯ ಎದುರಾಗಬಹುದು ಎಂಬುದನ್ನು ನಿಖರವಾಗಿ ಆಂದಾಜಿಸಲು ಆಗದು. ಹೀಗಾಗಿಯೇ ಆರ್ಥಿಕ ಅಗತ್ಯತೆಗಳಿಗೆ ಸರಿ ಹೊಂದುವಂತೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕೆಲ ಅಂಶಗಳನ್ನು ಅಳವಡಿಸಲಾಗಿದೆ. ಯೋಜನೆಗೆ ಒಳಪಡುವ ಮುನ್ನ ಪಾಲಕರು ಹೆಣ್ಣು ಮಗುವಿನ ಜೀವನದ ಐದು ಪ್ರಮುಖ ಸಂದರ್ಭಗಳನ್ನು ಗಮನದಲ್ಲಿಡಬೇಕಾಗುತ್ತದೆ. ಉದಾಹರಣೆಗೆ ಪ್ರಸ್ತುತ ಮಗುವಿನ ವಯಸ್ಸು ಹಾಗೂ ಮಗುವಿನ ವಿವಾಹ ಹಾಗೂ ಉನ್ನತ ಶಿಕ್ಷಣದ ಸಮಯ ಯಾವಾಗ ಎದುರಾಗಬಹುದು ಎಂಬ ವಿಷಯಗಳ ಬಗ್ಗೆ ಅಂದಾಜು ಇರಬೇಕಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ಖಾತೆ ತೆರೆಯುವುದು (0 ಯಿಂದ 10 ವರ್ಷ ವಯಸ್ಸು)

ಖಾತೆ ತೆರೆಯುವುದು (0 ಯಿಂದ 10 ವರ್ಷ ವಯಸ್ಸು)

10 ವರ್ಷಕ್ಕೂ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬಹುದು. (ಖಾತೆ ಆರಂಭಿಸುವ ದಿನದಂದು ಮಗುವಿಗೆ 10 ವರ್ಷ ಮೀರಿರಬಾರದು). ಇದಕ್ಕೆ ಮಗುವಿನ ಜನನ ದಿನಾಂಕದ ಪುರಾವೆಯ ದಾಖಲೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಲು ಅವಕಾಶವಿದ್ದು, ಒಂದೇ ಮಗುವಿನ ಹೆಸರಲ್ಲಿ ಎರಡು ಖಾತೆ ಹೊಂದಲು ಅವಕಾಶವಿಲ್ಲ. ಯೋಜನೆಯ ಅವಧಿಯನ್ನು ಲೆಕ್ಕ ಹಾಕಲು ಮಗುವಿನ ವಯಸ್ಸು ಹೇಗೆ ಪ್ರಮುಖ ಮಾನದಂಡವಾಗುತ್ತದೆ ಎಂಬುದನ್ನು ತಿಳಿಯೋಣ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

5 ನೇ ವರ್ಷದಲ್ಲಿ
 

5 ನೇ ವರ್ಷದಲ್ಲಿ

ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಿದ 5 ವರ್ಷಗಳ ನಂತರ ಅವಧಿಪೂರ್ವ ಖಾತೆ ಬಂದ್ ಮಾಡಲು ಅರ್ಜಿ ಸಲ್ಲಿಸಬಹುದು. ಆದರೆ ಈ ರೀತಿ ಮಾಡಲು ಕೆಲ ಬಿಗಿಯಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರಾಣಕ್ಕೆ ಕುತ್ತು ತರಬಲ್ಲ ಕೆಲ ಗಂಭೀರ ಕಾಯಿಲೆ ಅಥವಾ ಇನ್ನಿತರ ಕೆಲ ಕಾರಣಗಳಿಂದ ಖಾತೆಯನ್ನು ಅವಧಿಪೂರ್ವ ನಿಲ್ಲಿಸಬಹುದು. ಆದರೆ ಹೀಗೆ ಖಾತೆ ನಿಲ್ಲಿಸಿದ ಸಂದರ್ಭದಲ್ಲಿ ಖಾತೆಯಲ್ಲಿ ಜಮೆಯಾಗಿರುವ ಹಣಕ್ಕೆ ಸಾಮಾನ್ಯ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆಯ ಬಡ್ಡಿಯನ್ನು ಆಕರಿಸುತ್ತ ಹೋಗಲಾಗುತ್ತದೆ.

10 ವರ್ಷಗಳಲ್ಲಿ

10 ವರ್ಷಗಳಲ್ಲಿ

ಖಾತೆ ಹೊಂದಿದ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ದಾಟಿದ ನಂತರ ಮಗು ತಾನಾಗಿಯೇ ಖಾತೆಯನ್ನು ನಿರ್ವಹಣೆ ಮಾಡಲು ಅವಕಾಶವಿದೆ. ತನ್ನ ಖಾತೆಗೆ ತಾನೇ ಕಂತುಗಳನ್ನು ಹೆಣ್ಣು ಮಗು ಪಾವತಿಸಬಹುದು. ಜೊತೆಗೆ ಪಾಲಕರು ಸಹ ವಂತಿಗೆಯನ್ನು ನೀಡಬಹುದು.

15 ವರ್ಷಗಳಲ್ಲಿ

15 ವರ್ಷಗಳಲ್ಲಿ

ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಲು ಕನಿಷ್ಠ 250 ರೂ. (ಈ ಮೊದಲು 1000 ರೂ. ಇತ್ತು) ಆರಂಭಿಕ ಠೇವಣಿ ಅಗತ್ಯ. ಇದರ ನಂತರ ವಾರ್ಷಿಕವಾಗಿ ಕನಿಷ್ಠ 250 ರೂ. (ಈ ಮೊದಲು 1000 ರೂ. ಇತ್ತು) ಮತ್ತು ಗರಿಷ್ಠ 1.5 ಲಕ್ಷ ರೂ. ವಂತಿಗೆಯನ್ನು ಖಾತೆಗೆ ಪಾವತಿಸಬಹುದು. ಖಾತೆ ತೆರೆದ ಆರಂಭಿಕ 15 ವರ್ಷಗಳವರೆಗೆ ವಂತಿಗೆ ಪಾವತಿಸಿ ಖಾತೆಯನ್ನು ಸಕ್ರಿಯವಾಗಿಡಬಹುದು. 9 ವರ್ಷದ ಮಗುವಿನ ಹೆಸರಲ್ಲಿ ಖಾತೆ ಆರಂಭಿಸಿದ ಸಂದರ್ಭದಲ್ಲಿ ಮಗುವಿಗೆ 24 ವರ್ಷಗಳಾಗುವವರೆಗೆ ವಂತಿಗೆ ಪಾವತಿಸಬೇಕಾಗುತ್ತದೆ. ಇನ್ನು ಮಗುವಿನ 24 ರಿಂದ 30 ವರ್ಷ ವಯಸ್ಸಿನ ಅವಧಿಯಲ್ಲಿ (ಖಾತೆ ಪಕ್ವವಾದ ಅವಧಿ) ಖಾತೆಯಲ್ಲಿ ಜಮೆಯಾಗಿರುವ ಹಣಕ್ಕೆ ಬಡ್ಡಿ ಸಂದಾಯವಾಗುತ್ತ ಹೋಗುತ್ತದೆ. ಇದೊಂದು ದೀರ್ಘಾವಧಿ ಉಳಿತಾಯ ಯೋಜನೆಯಾಗಿದ್ದು ಇದರಲ್ಲಿನ ಭಾಗಶಃ ಅಥವಾ ಸಂಪೂರ್ಣ ಹಣ ಹಿಂಪಡೆಯುವಿಕೆಯು ಖಾತೆಯನ್ನು ಅವಧಿಪೂರ್ವ ನಿಲ್ಲಿಸಲು ಸಲ್ಲಿಸುವ ಅರ್ಜಿಯ ಮೇಲೆ ಆಧರಿತವಾಗಿರುತ್ತದೆ.

18 ವರ್ಷಗಳಲ್ಲಿ

18 ವರ್ಷಗಳಲ್ಲಿ

ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಸಂದರ್ಭದಲ್ಲಿ ಹಣ ಹಿಂಪಡೆಯುವ ಮತ್ತೊಂದು ಅವಕಾಶ ಸಿಗುತ್ತದೆ. ಆದರೆ ಯೋಜನೆಯ ನಿಯಮಗಳ ಪ್ರಕಾರ ಖಾತೆಯಲ್ಲಿನ ಮೊತ್ತವು ಕೇವಲ ಖಾತೆ ಹೊಂದಿದ ಹೆಣ್ಣು ಮಗಳ ಅವಶ್ಯಕತೆಗಳಿಗೆ ಮಾತ್ರ ಬಳಸಬೇಕು ಹಾಗೂ ಬೇರೆಯವರು ಯಾವುದೇ ಕಾರಣಕ್ಕೂ ಈ ಹಣವನ್ನು ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಹಂತದಲ್ಲಿ ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ.50 ರಷ್ಟನ್ನು ಮಗುವಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಿಂಪಡೆಯಲು ಅವಕಾಶವಿದೆ.
ಈ ರೀತಿ ಹಣ ಹಿಂಪಡೆಯಬೇಕಾದರೆ ಕೇವಲ ಅರ್ಜಿ ಸಲ್ಲಿಸಿದರೆ ಸಾಕಾಗದು. ಹೆಣ್ಣು ಮಗು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆಯಲಿರುವ ಶಿಕ್ಷಣ ಸಂಸ್ಥೆಯಿಂದ ದೃಢೀಕರಣ ಪತ್ರ ಅಥವಾ ಶುಲ್ಕ ಕಟ್ಟಿದ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆದಾಗ್ಯೂ ವಿದ್ಯಾಭ್ಯಾಸದ ವಾಸ್ತವ ಖರ್ಚುಗಳನ್ನು ಆಧರಿಸಿ ಅಷ್ಟೆ ಪ್ರಮಾಣದ ಮೊತ್ತವನ್ನು ಮಾತ್ರ ಹಿಂಪಡೆಯಲು ಸಾಧ್ಯ.

21 ವರ್ಷಗಳಲ್ಲಿ

21 ವರ್ಷಗಳಲ್ಲಿ

ಖಾತೆ ತೆರೆಯುವಾಗ ಮಗುವಿನ ವಯಸ್ಸು ಎಷ್ಟೇ ಇದ್ದರೂ ಖಾತೆ ಆರಂಭಿಸಿದ 21 ವರ್ಷಗಳವರೆಗೆ ಖಾತೆ ಜಾರಿಯಲ್ಲಿರುತ್ತದೆ. ಅಂದರೆ ಮಗುವಿಗೆ 9 ವರ್ಷವಾದಾಗ ಖಾತೆ ಆರಂಭಿಸಿದಲ್ಲಿ ಮಗುವಿಗೆ 30 ವರ್ಷ ವಯಸ್ಸಾಗುವವರೆಗೆ ಖಾತೆ ಜಾರಿಯಲ್ಲಿರುತ್ತದೆ. ಆದಾಗ್ಯೂ ತಮ್ಮ ಮಗಳಿಗೆ 18 ವಯಸ್ಸು ಪೂರ್ಣಗೊಂಡಿದ್ದು ಅವಳ ಮದುವೆ ಖರ್ಚಿಗಾಗಿ ಹಣ ಬೇಕೆಂದು ಪಾಲಕರು ಅರ್ಜಿ ಸಲ್ಲಿಸಬಹುದು. ಮದುವೆ ದಿನಾಂಕದಂದು ತಮ್ಮ ಮಗಳಿಗೆ 18 ವರ್ಷ ಪೂರ್ಣಗೊಂಡಿವೆ ಎಂಬ ಬಗ್ಗೆ ಪಾಲಕರು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಪರ್ಯಾಯ ಹೂಡಿಕೆ ಯೋಜನೆ

ಪರ್ಯಾಯ ಹೂಡಿಕೆ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ ಇದು ಹೆಣ್ಣು ಮಗುವಿನ ಆರ್ಥಿಕ ಅಗತ್ಯತೆಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ರೂಪಿಸಲಾದ ಯೋಜನೆಯಾಗಿದೆ. ಹಾಗೆಯೇ ಮತ್ತೊಂದು ಸಾರ್ವಜನಿಕ ಉಳಿತಾಯ ಯೋಜನೆಯಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಇದು 15 ವರ್ಷದ ಯೋಜನೆಯಾಗಿದ್ದು, ಇದು ಸಾಲ ಪಡೆಯುವ ಹಾಗೂ ಭಾಗಶಃ ಹಣ ಹಿಂಪಡೆಯುವಿಕೆ ಸೌಲಭ್ಯಗಳನ್ನು ಒಳಗೊಂಡಿದೆ. ಪಿಪಿಎಫ್ ಖಾತೆ ಆರಂಭಿಸಿದ 15 ವರ್ಷಗಳ ನಂತರ ಪ್ರತಿ ಬಾರಿ 5 ವರ್ಷಗಳ ಅವಧಿಗೆ ಇದನ್ನು ವಿಸ್ತರಿಸಬಹುದಾಗಿದ್ದು, ಇದರಲ್ಲಿನ ಮೊತ್ತವನ್ನು ಬೇರೆ ಅಗತ್ಯತೆಗಳಿಗೆ ಬಳಸುವ ಅವಕಾಶವೂ ಇದೆ.

ಕೊನೆ ಮಾತು

ಕೊನೆ ಮಾತು

ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ ಅಥವಾ ವಿವಾಹ ಸಂದರ್ಭಗಳಲ್ಲಿ ಹಣದುಬ್ಬರ ಹಾಗೂ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಾಸ್ತವವಾಗಿ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ಪಾಲಕರು ಮೊದಲು ಲೆಕ್ಕ ಹಾಕಬೇಕು. ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಾವಧಿ ಯೋಜನೆ ಆಗಿರುವುದರಿಂದ ದೀರ್ಘಾವಧಿಯ ಅವಶ್ಯಕತೆಗಳಿಗಾಗಿ ಪರ್ಯಾಯವಾಗಿ ಇಕ್ವಿಟಿಗಳಲ್ಲಿ ಸಹ ಹೂಡಿಕೆ ಮಾಡಬಹುದು. ಮಗುವಿನ ವಿದ್ಯಾಭ್ಯಾಸಕ್ಕಾಗಿ ತೆಗೆದಿರಿಸಬಹುದಾದ ಮೊತ್ತದಲ್ಲಿ ಕೆಲ ಭಾಗವನ್ನು ಮಾತ್ರ ಸುಕನ್ಯಾ ಸಮೃದ್ಧಿಯಲ್ಲಿ ಹಾಕಿ ಇನ್ನುಳಿದ ಕೆಲ ಭಾಗವನ್ನು ಪರ್ಯಾಯ ಯೋಜನೆಯಲ್ಲಿ ಹೂಡಬಹುದು.
ಆದಾಯ ತೆರಿಗೆ ಸೆಕ್ಷನ್ 80ಸಿ ಪ್ರಕಾರ ತೆರಿಗೆ ವಿನಾಯಿತಿಯ 1.5 ಲಕ್ಷ ರೂ. ಮೊತ್ತವನ್ನು ಈಗಾಗಲೇ ಹೂಡಿಕೆ ಮಾಡಿದವರು ಸಹ ಪರ್ಯಾಯ ಹೂಡಿಕೆಯ ಬಗ್ಗೆ ಯೋಚಿಸಬಹುದು. ಇನ್ನು ಇಡೀ ಕುಟುಂಬಕ್ಕೆ ಆಧಾರವಾಗಬಲ್ಲ ಟರ್ಮ ಇನ್ಸೂರೆನ್ಸ್ ಪಾಲಿಸಿ ಕೊಳ್ಳುವುದು ಸಹ ಜಾಣತನವಾಗಿದೆ. 10 ವರ್ಷದ ಹೆಣ್ಣು ಮಗುವಿಗೆ ಹೋಲಿಸಿದಲ್ಲಿ ಅದಕ್ಕೂ ಚಿಕ್ಕ ವಯಸ್ಸಿನ ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿ ಆದಾಯ ಪಡೆಯುವ ಅವಧಿ ಸುದೀರ್ಘವಾಗಿರುತ್ತದೆ. ಆದಾಗ್ಯೂ ಸುಕನ್ಯಾ ಸಮೃದ್ಧಿ ಯೋಜನೆಯೊಂದು ಉತ್ತಮ ಉಳಿತಾಯ ಯೋಜನೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

English summary

Sukanya Samriddhi Yojana: Important watchouts before you invest

The investors, on the other hand, need to keep in mind five important years or time spans before investing in Sukanya Samriddhi Yojana.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X