For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಸರ್ಕಾರದ ರೈತರ ಕಲ್ಯಾಣ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.

|

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ರೈತರ ಸಾಲ ಮನ್ನಾ ಒಂದೇಡೆಯಾದರೆ ಕೃಷಿ ವಲಯದ ನವೀನ ಯೋಜನೆಗಳ ಮುಖಾಂತರ ರೈತರಿಗೆ ಹಣಕಾಸು ಬೆಂಬಲ ಹಾಗು ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿದೆ.
ರಾಜ್ಯ ಸರ್ಕಾರ 2019-20ರ ಬಜೆಟ್ ನಲ್ಲಿ ರೈತರ ಕಲ್ಯಾಣ ಯೋಜನೆಗಳಿಗಾಗಿ ರೂ. 46,853 ಕೋಟಿ ಮೀಸಲಿಟ್ಟಿದೆ.

 

ರೈತರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳ ಪಟ್ಟಿ ಇಲ್ಲಿ ನೀಡಲಾಗಿದೆ..

ಸಂಸ್ಕರಣಾ ಘಟಕ

ಸಂಸ್ಕರಣಾ ಘಟಕ

ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ಗುಣಮಟ್ಟ ವಿಶ್ಲೇಷಣಾ ಮತ್ತು ಸಂಸ್ಕರಣಾ ಘಟಕ ಸ್ಥಾಪನೆ

ಗುಣಮಟ್ಟ ವಿಶ್ಲೇಷಣಾ ಮತ್ತು ಸಂಸ್ಕರಣಾ ಘಟಕ ಸ್ಥಾಪನೆ

ಕೃಷಿ ಉತ್ಪನ್ನಗಳ ಬಾಳಿಕೆ ಹೆಚ್ಚಿಸಲು ಗುಣಮಟ್ಟ ವಿಶ್ಲೇಷಣೆ ಮತ್ತು ಸಂಸ್ಕರಣೆ ಘಟಕಗಳನ್ನು ರಾಜ್ಯದಲ್ಲಿ 5 ಸ್ಥಳಗಳಲ್ಲಿ ಅಳವಡಿಸಲಾಗುವುದು
ಬಜೆಟ್ ಮೀಸಲು ರೂ. 160 ಕೋಟಿ

ರೈತರ ಬೆಳೆ ಸಾಲ ಮನ್ನಾ
 

ರೈತರ ಬೆಳೆ ಸಾಲ ಮನ್ನಾ

ರೈತರ ಬೆಲೆ ಸಾಲ ಮನ್ನಾ ಕುಮಾರಸ್ವಾಮಿ ಸಕಾ್ರದ ಹೆಗ್ಗಳಿಕೆಯಾಗಿದ್ದು, ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಮನ್ನಾ ಮಾಡಲಾಗಿದೆ. ರೈತರ ಸುಮಾರು ೧೨ ಲಕ್ಷ ಖಾತೆಗಳಿಗೆ 5,400 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರೈತರ ಸಾಲ ಮನ್ನಾಕ್ಕೆ ಸಹಕಾರಿ ಬ್ಯಾಂಕುಗಳಿಗೆ ರೂ. 6150 ಕೋಟಿ ಹಾಗು ವಾಣಿಜ್ಯ ಬ್ಯಾಂಕುಗಳಿಗೆ ರೂ. 6500 ಕೋಟಿ ಮೀಸಲು. ಜೂನ್ ಒಳಗೆ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮಖಯಗೊಳ್ಳಲಾಗುವುದು. ಸಾಲ ಮನ್ನಾಕ್ಕಾಗಿ ಒಟ್ಟು ರೂ. ೧೨,೬೫೦ ಕೋಟಿ ಮೀಸಲಿರಿಸಲಾಗಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ರೈತ ಸಿರಿ

ರೈತ ಸಿರಿ

ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟರ್ ರೂ. 10,000 ಪ್ರೋತ್ಸಾಹ ಧನ ನೀಡಲಾಗುವುದು. ರೈತ ಸಿರಿ ಯೋಜನೆಗೆ ರೂ. 10 ಕೋಟಿ ಹಾಗು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ರೂ. 46,850 ಕೋಟಿ ಮೀಸಲು ಇಡಲಾಗಿದೆ.

ಗೃಹ ಲಕ್ಷ್ಮೀ ಬೆಳೆ ಸಾಲ

ಗೃಹ ಲಕ್ಷ್ಮೀ ಬೆಳೆ ಸಾಲ

ಸಣ್ಣ ಭೂ ಹಿಡುವಳಿದಾರ ರಯತರಿಗೆ ಚಿನ್ನದ ಮೇಲೆ 3% ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅಂದರೆ ರೈತ ಮಹಿಳೆಯರ ಚಿನ್ನದ ಮೇಲೆ ಶೇ. 3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಕರಾವಳಿ ಪ್ಯಾಕೇಜ್

ಕರಾವಳಿ ಪ್ಯಾಕೇಜ್

ಕರಾವಳಿ ಪ್ರದೇಶದ ಭತ್ತದ ಇಳುವರಿ ಸುಧಾರಣೆಗೆ ಪ್ರತಿ ಹೆಕ್ಟರ್ ರೂ. 7,500 ಕೋಟಿ ಪ್ರೋತ್ಸಾಹ ಧನ.

ರೈತ ಕಣಜ
ರೈತ ಕಣಜ ಯೊಜನೆಯಡಿ ಕನಿಷ್ಟ ಬೆಂಬಲ ಬೆಲೆ ಇರುವ ಬೆಳೆಗಳಿಗೆ ರೂ ಬಜೆಟ್. 512 ಕೋಟಿ ಮೀಸಲು.

ಹಾಲುತ್ಪಾದಕರಿಗೆ ಪ್ರೋತ್ಸಾಹ ಧನ

ಹಾಲುತ್ಪಾದಕರಿಗೆ ಪ್ರೋತ್ಸಾಹ ಧನ

ಹಾಲುತ್ಪಾದಕರ ಪ್ರೋತ್ಸಾಹ ಧನ ರೂ. 5 ರಿಂದ ರೂ. 6 ಏರಿಕೆ ಮಾಡಲಾಗಿದೆ. ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗಾಗಿ ಬಜೆಟ್ ನಲ್ಲಿ ರೂ. 2500 ಕೋಟಿ ಮೀಸಲು.

ಬೆಲೆ ಕೊರತೆ ಪಾವತಿ ಯೋಜನೆ

ಬೆಲೆ ಕೊರತೆ ಪಾವತಿ ಯೋಜನೆ

ಕೊರತೆ ಪಾವತಿ ಯೋಜನೆಯಡಿಯಲ್ಲಿ ಈರುಳ್ಳಿ, ಆಲೂಗಡ್ಡೆ, ಟೊಮೇಟೊ ಬೆಂಬಲ ಬೆಲೆಯನ್ನು ರೂ. 50 ಕೋಟಿ ಹಾಗು ಪ್ರಮುಖ 6 ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ರೂ. 10 ಕೋಟಿ ಮೀಸಲು ಇಡಲಾಗಿದೆ.

ಕೃಷಿ ಹೊಂಡ

ಕೃಷಿ ಹೊಂಡ

ರಾಜ್ಯದ ಒಣ ಪ್ರದೇಶಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವ ಉದ್ದೇಶದಿಂದ ರೂ. 120 ಕೋಟಿ ಅನುದಾನ ಮೀಸಲಿಡಲಾಗಿದೆ. ಸಾವಯವ ಕೃಷಿ ಉತ್ತೇಜನಕ್ಕೆ ರೂ. ೩೫ ಕೋಟಿ ಮೀಸಲಿಡಲಾಗಿದೆ.

ದ್ರಾಕ್ಷಿ ಮತ್ತು ದಾಳಿಂಬೆ ವಿಶೇಷ ಪ್ಯಾಕೇಜ್

ದ್ರಾಕ್ಷಿ ಮತ್ತು ದಾಳಿಂಬೆ ವಿಶೇಷ ಪ್ಯಾಕೇಜ್

ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಯುವ ರೈತರಿಗೆ ರೂ. 150 ಕೋಟಿ ಮೀಸಲು.
ಜಲಾನಯನ ಅಬಿವೃದ್ಧಿ
ಜಲಾನಯನ ಕಾರ್ಯಕ್ರಮಗಳಿಗೆ ರೂ. 100 ಕೋಟಿ ನಿಗದಿಪಡಿಸಲಾಗಿದೆ.

ಶೂನ್ಯ ಬಜೆಟ್ ಬೇಸಾಯ

ಶೂನ್ಯ ಬಜೆಟ್ ಬೇಸಾಯ

ಶೂನ್ಯ ಬಜೆಟ್ ಬೇಸಾಯಕ್ಕಾಗಿ ಕೃಷಿ ಉಪಕರಣಗಳಿಗಾಗಿ ರೂ. 40 ಕೋಟಿ ಇಡಲಾಗಿದೆ.

ಸಿಎಂ ಮೈಕ್ರೋ ನೀರಾವರಿ ಯೋಜನೆಗಳು
ಶೇ. 90 ಸಬ್ಸಿಡಿಯಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲು ರೂ. 368 ಕೋಟಿ ಮೀಸಲಿಡಲಾಗಿದೆ.

ರೇಷ್ಮೆ ಕೃಷಿ

ರೇಷ್ಮೆ ಕೃಷಿ

ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಪುನರುಜ್ಜೀವನಗೊಳಿಸಲು ಹಾಗು ಕಚ್ಚಾ ರೇಷ್ಮೆ ಬೆಲೆ ಖಚಿತಪಡಿಸಿಕೊಳ್ಳಲು ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರ ರೇಷ್ಮೆ ಮಾರುಕಟ್ಟೆಯ ಬಲವರ್ಧನೆಗಾಗಿ ರೂ. 10 ಕೋಟಿ ರೂಪಾಯಿ ಮೀಸಲಿಟ್ಟಿದೆ. ರೇಷ್ಮೆ ಕಾರ್ಮಿಕರ ಹೊಸ ತಾಂತ್ರಿಕತೆ ಹೆಚ್ಚಳಕ್ಕೆ ಆಧ್ಯತೆ ನಿಡಲಾಗುವುದು.

ಮೀನುಗಾರಿಕೆ

ಮೀನುಗಾರಿಕೆ

ಮೀನುಗಾರರ ಪ್ರೋತ್ಸಾಹಕ್ಕಾಗಿ ಮೀನುಗಾರಿಕೆ ಮಾಡುವವರ ದೋಣಿಗಳಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ. 50ರಷ್ಟು ಅನುದಾನ ನೀಡಲಾಗುವುದು.

ಇಸ್ರೇಲ್ ಮಾದರಿ ಕೃಷಿ

ಇಸ್ರೇಲ್ ಮಾದರಿ ಕೃಷಿ

ಕಳೆದ ಬಜೆಟ್ ನಲ್ಲಿ ಮಂಡಿಸಿರುವಂತೆ ಇಸ್ರೇಲ್ ಮಾದರಿಯ ತಂತ್ರಜ್ಞಾನ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಮಳೆ ಆಶ್ರಯ ಇರದ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಕೆಗೆ ಆಧ್ಯತೆ. ಕನಿಷ್ಟ ನೀರನ್ನು ಬಳಸಿಕೊಂಡು ಲಾಭದಾಯಕ ಕೃಷಿಗಾಗಿ ರೂ. 145 ಕೋಟಿ ಮೀಸಲು. ಇದಕ್ಕಾಗಿ ರೈತರ ಜೊತೆಗೆ ಸಭೆ ನಡೆಸಿ ನಂತರ ಅನುಷ್ಠಾನ ಮಾಡಲಾಗುವುದು.

ನೀರಾವರಿ ಮತ್ತು ವಿದ್ಯುತ್

ನೀರಾವರಿ ಮತ್ತು ವಿದ್ಯುತ್

ರೈತರಿಗೆ ವಿದ್ಯುಚ್ಚಕ್ತಿ ಒದಗಿಸಲು ೪೦ ಸಾವಿರ ಹೊಸ ಟ್ರಾನ್ಸಫಾರ್ಮರ್ ಅಳವಡಿಕೆ ಮಾಡಲಾಗುವುದು. ನೀರಾವರಿ ಪಂಪಸೇಟ್, ಭಾಗ್ಯಜ್ಯೋತಿ , ಕುಟೀರ ಜ್ಯೋತಿ ಸಹಾಯಧನ ರೂ. ೧೧,೨೫೦ ಕೋಟಿಗೆ ಏರಿಕೆ ಮಾಡಲಾಗಿದೆ.
ವಿವಿಧ ನೀರಾವರಿ ಯೋಜನೆಗಳಿಗೆ ಮತ್ತು ರೈತರಿಗೆ ಮುಕ್ತ ವಿದ್ಯುತ್ ಪೂರೈಕೆಗಾಗಿ ರೂ. 27,153 ಕೋಟಿ ಮೀಸಲು

English summary

Karnataka Government Farmers Schemes, Here is a complete list

The CM HD Kumaraswami led Karnataka Government has launched various welfare schemes for the state farmers.
Story first published: Thursday, February 21, 2019, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X