For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು 18ರ ಒಳಗೆ ಕೋಟ್ಯಾಧಿಪತಿಯಾಗಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ನಮ್ಮಲ್ಲಿ ತುಂಬಾ ಜನ ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಶ್ರಮ ಪಟ್ಟರೆ, ಇನ್ನೂ ಕೆಲವರು ಕಾಳಜಿ ವಹಿಸುವುದಿಲ್ಲ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಎಫ್ಡಿಗಳಲ್ಲಿ ಹೂಡಿಕೆ ಮಾಡುತ್ತಾರೆ.

|

ನಮ್ಮಲ್ಲಿ ತುಂಬಾ ಜನ ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಶ್ರಮ ಪಟ್ಟರೆ, ಇನ್ನೂ ಕೆಲವರು ಕಾಳಜಿ ವಹಿಸುವುದಿಲ್ಲ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಎಫ್ಡಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಿಂದೆ ನಿಮ್ಮ ತಂದೆಯವರು ನಿಮ್ಮ ಹೆಸರಿನಲ್ಲಿ ಹಣ ಇಟ್ಟಂತೆ ಈಗ ನೀವೂ ಕೂಡ ನಿಮ್ಮ ಮಕ್ಕಳ ಹೆಸರಿನಲ್ಲಿ ಹಣ ಹೂಡಬೇಕಲ್ಲವೇ?

ನಿಮ್ಮ ಮಗುವಿಗೆ ಉತ್ತಮ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಜೀವನಶೈಲಿಗಾಗಿ ಅತ್ಯುತ್ತಮವಾದದನ್ನು ನೀಡಲು ಬಯಸುತ್ತೀರಿ. ಸಂಭವನೀಯ ರೀತಿಯಲ್ಲಿ ನಿಮ್ಮ ಮಗುವಿನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನೀವು ಬಯಸುತ್ತೀರಿ. ಮಕ್ಕಳೇ ನಿಮ್ಮ ಪ್ರಪಂಚ ಆಗಿರುವುದರಿಂದ ನೀವು ಲಭ್ಯವಿರುವ ಅತ್ಯುತ್ತಮ ಹಣಕಾಸು ವಿಧಾನಗಳಲ್ಲಿ ಉಳಿಸಲು ಮತ್ತು ಹೂಡಿಕೆ ಮಾಡಲು ಸಿದ್ಧರಿರುತ್ತಿರಿ. ನಿಮ್ಮ ಮಕ್ಕಳಿಗಾಗಿ ಉತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ..

ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ

ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ

ಉಳಿತಾಯ ಖಾತೆ ಮತ್ತು ಎಫ್ಡಿಗಳ ಮೇಲೆ ಬಡ್ಡಿದರಗಳು ಕೆಳಮುಖವಾಗಿ ಸಾಗುವುದರಿಂದ ಮ್ಯೂಚುವಲ್ ಫಂಡ್ ಗಳಂತಹ ಉಪಕರಣಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ.ಆದರೆ, ನಿಮ್ಮ ಚಿಕ್ಕ ಮಗುವಿಗೆ (18 ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು) ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಬಹುದೆಂದು ನಿಮಗೆ ತಿಳಿದಿದೆಯೆ? ಉತ್ತಮ ಆದಾಯ ಕೊಡಬಲ್ಲ ಉತ್ತಮ ರೇಟಿಂಗ್ ನ ಮ್ಯೂಚುವಲ್ ಫಂಡ್ ನಿಮ್ಮ ಆಯ್ಕೆಯಾಗಿರಲಿ.

ಮಕ್ಕಳ ಹೆಸರಲ್ಲಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದೆ?

ಮಕ್ಕಳ ಹೆಸರಲ್ಲಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದೆ?

ಅಪ್ರಾಪ್ತ ವಯಸ್ಕರು ಸಹ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
ಹೌದು, ನಿಮ್ಮ ಪ್ರಶ್ನೆ ಸರಿಯಾಗಿ ಇದೆ. ಅಪ್ರಾಪ್ತ ವಯಸ್ಕರು ಸಹ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಚಿಕ್ಕ ಮಗುವಿನ ಪರವಾಗಿ ಪಾಲಕರು ಅಥವಾ ಕಾನೂನು ಪಾಲಕರು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಬಂಡವಾಳ ಹೂಡಬಹುದು ಮತ್ತು ವಹಿವಾಟು ಮಾಡಬಹುದು. 

ಹೂಡಿಕೆ ಆರಂಭ ಹೇಗೆ?

ಹೂಡಿಕೆ ಆರಂಭ ಹೇಗೆ?

ಮ್ಯೂಚುವಲ್ ಫಂಡ್ ಮೂಲಕ ಮಕ್ಕಳ ಹೆಸರಿನಲ್ಲಿಯೂ ಹಣ ಹೂಡಿಕೆ ಮಾಡಬಹುದು.
ಮಕ್ಕಳ ಹೆಸರಿನಲ್ಲಿಯೇ ಮ್ಯೂಚುವಲ್ ಫಂಡ್ ಶುರು ಮಾಡಬಹುದು. ಮಕ್ಕಳ ಪರವಾಗಿ ಹೂಡಿಕೆ, ವಹಿವಾಟು ಪೋಷಕರೇ ಮಾಡಬಹುದು. ಇದಕ್ಕಾಗಿ ಮಕ್ಕಳ ಜನ್ಮ ದಾಖಲೆ ಬೇಕು. ಮಕ್ಕಳ ಹೆಸರಿನಲ್ಲಿ ಪಾಸ್ ಪೋರ್ಟ್ ಇದ್ದರೆ ಅದನ್ನು ದಾಖಲೆ ರೂಪದಲ್ಲಿ ನೀಡಬಹುದು. ಇದರ ಜೊತೆ ತಂದೆಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಸಿಪ್ ನಲ್ಲಿ ಪ್ರತಿ ತಿಂಗಳು ಠೇವಣಿ ಇಡಿ

ಸಿಪ್ ನಲ್ಲಿ ಪ್ರತಿ ತಿಂಗಳು ಠೇವಣಿ ಇಡಿ

ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan)ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಯ ಅತ್ಯಂತ ಜನಪ್ರಿಯ ರೂಪವಾಗಿದೆ. ಸಿಪ್ ಮೂಲಕ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ. ಇಲ್ಲಿ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಹೂಡಿಕೆ ಮಾಡಿದರೆ ಸಾಕು. ಮಗುಗೆ 18 ವರ್ಷ ತುಂಬಿದ ನಂತರ ಸಂಪೂರ್ಣ ಹಣ ಮಗುವಿನ ಹೆಸರಿನಲ್ಲಿ ವರ್ಗಾಯಿಸಲ್ಪಡುತ್ತದೆ.

18 ವರ್ಷಕ್ಕೆ ನಿಮ್ಮ ಮಗು ಕೋಟ್ಯಾಧಿಪತಿ?

18 ವರ್ಷಕ್ಕೆ ನಿಮ್ಮ ಮಗು ಕೋಟ್ಯಾಧಿಪತಿ?

ಪಾಲಕರು ನಿಯಮಿತವಾಗಿ ಹಣ ಹೂಡಿಕೆ ಮಾಡಿದರೆ ಮಕ್ಕಳಿಗೆ 18 ವರ್ಷ ತುಂಬುವ ವೇಳೆಗೆ ನಿಮ್ಮ ಮಗು ಕೋಟ್ಯಾಧಿಪತಿ ಆಗುವುದರಲ್ಲಿ ಸಂಶಯವಿಲ್ಲ.
ನಿಮ್ಮ ಮಗು 18 ವರ್ಷ ತುಂಬುವ ವೇಳೆಗೆ ಕೋಟ್ಯಾಧಿಪತಿ ಆಗಬೇಕೆಂದು ಬಯಸಿದ್ದರೆ ಮಗು ಹುಟ್ಟಿದ ವರ್ಷವೇ ರೂ. 5000 ಹೂಡಿಕೆ ಮಾಡಿ. ಈ ಮೊತ್ತವನ್ನು ಪ್ರತಿ ವರ್ಷ ಶೇ. 15 ರಷ್ಟು ಹೆಚ್ಚಿಸುತ್ತಾ ಹೋಗಿ. ಸರಾಸರಿ ಪ್ರತಿ ವರ್ಷ ಶೇ. 12 ರಷ್ಟು ರಿಟರ್ನ್ ಸಿಗುತ್ತಿದೆ ಎಂದಾದರೆ ಮಗುವಿಗೆ 18 ವರ್ಷ ತುಂಬುತ್ತಿದ್ದಂತೆ ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಾವ ದಾಖಲೆಗಳು ಬೇಕಾಗುತ್ತವೆ?

ಯಾವ ದಾಖಲೆಗಳು ಬೇಕಾಗುತ್ತವೆ?

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಮೈನರ್ ಖಾತೆಗಾಗಿ ಅಗತ್ಯವಿರುವ ದಾಖಲೆಗಳ ವಿವರ ಇಲ್ಲಿದೆ.
ಮೈನರ್ ವಯಸ್ಸಿನ ಪುರಾವೆ: ನಿಮ್ಮ ಮಗುವಿನ ಪುರಾವೆಗಾಗಿ ಜನನ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಸಂಬಂಧದ ಪುರಾವೆ: ನೀವು ಮಗುವಿನೊಂದಿಗೆ ಹೊಂದಿರುವ ಸಂಬಂಧದ ಕುರಿತು ದಾಖಲೆ ಒದಗಿಸಬೇಕು.
ಗಾರ್ಡಿಯನ್ ದಾಖಲೆ: ಪೋಷಕರ ದಾಖಲಾತಿ KYC ನಿಯಮಗಳಿಗೆ ಅನುಸಾರವಾಗಿ ಕಡ್ಡಾಯವಾಗಿರಬೇಕು.
ಬ್ಯಾಂಕ್ ಖಾತೆ ವಿವರ: ಹೂಡಿಕೆ ಮೊತ್ತ ನಿಮ್ಮ ಖಾತೆಯ ಮೂಲಕ (ಪೋಷಕರ / ಪಾಲಕರ) ಪಾವತಿಸಲು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಬೇಕಾಗುತ್ತದೆ. ನಿಮ್ಮ ಬ್ಯಾಂಕಿನ ಸ್ವೀಕೃತಿ ಪತ್ರದೊಂದಿಗೆ ಮೂರನೇ ವ್ಯಕ್ತಿಯ ಘೋಷಣೆ ಫಾರ್ಮ್ ಅನ್ನು ಸಲ್ಲಿಸಿ.

ನಿಮ್ಮ ಮಗು 18 ವರ್ಷವಾದ ನಂತರ?

ನಿಮ್ಮ ಮಗು 18 ವರ್ಷವಾದ ನಂತರ?

ಹಣವು ನಿಮ್ಮ ಮಗುವಿನ ಹೆಸರಿನಲ್ಲಿರುವುದರಿಂದ, ನಿಮ್ಮ ಮಗು ವಯಸ್ಕರಾದ ಮೇಲೆ ಹಣ ಪಡೆದುಕೊಳ್ಳುವ ಅಧಿಕಾರವನ್ನು ನೀವು ಹೊಂದಿರುವುದಿಲ್ಲ. ಆದ್ದರಿಂದ, ಪ್ಯಾನ್ ಮತ್ತು ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಮೊದಲ ಹೆಜ್ಜೆ. ಮಗುವಿನ ಬ್ಯಾಂಕ್ ಖಾತೆಯನ್ನು ಮೈನರ್ ಖಾತೆಯಿಂದ ವಯಸ್ಕರ ಖಾತೆಗೆ ಬದಲಾಯಿಸಿ.
ನಿಮ್ಮ SIP ಶಾಶ್ವತವಾದರೂ ನಿಮ್ಮ ಮಗುವು ಹದಿನೆಂಟು ವರ್ಷ ತಲುಪುವವರೆಗೆ ಮಾತ್ರ ನಿಮ್ಮ SIP ಮಾನ್ಯವಾಗಿರುತ್ತದೆ.

ಮಗುವನ್ನು ನಾಮಿನಿ ಮಾಡಿ ಹೂಡಿಕೆ ಮಾಡಿದರೆ?

ಮಗುವನ್ನು ನಾಮಿನಿ ಮಾಡಿ ಹೂಡಿಕೆ ಮಾಡಿದರೆ?

ಅನಗತ್ಯ ಕಾಗದದ ಕೆಲಸ ಮತ್ತು ನಿಯಮಗಳನ್ನು ತಪ್ಪಿಸಲು ನೀವು ಬಯಸಿದರೆ ನಿಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವುದರ ಬದಲು ಆಯಾ ಮ್ಯೂಚುವಲ್ ಫಂಡ್ ನಲ್ಲಿ ನಿಮ್ಮ ಹೆಸರಿನಲ್ಲಿ ಹೂಡಿಕೆ ಮಾಡಿ. ಜೊತೆಗೆ ನಿಮ್ಮ ಮಗುವಿಗೆ ನಾಮಿನಿಯನ್ನಾಗಿ ಮಾಡಿ. ಇದರಿಂದ ನೀವು ಜಂಟಿ-ಖಾತೆದಾರರಾಗಬಹುದು ಮತ್ತು ಅಗತ್ಯವಿರುವಾಗ ವಹಿವಾಟು ನಡೆಸಬಹುದು. ಈ ಆಯ್ಕೆಯಿಂದ ನಿಮ್ಮ ವಹಿವಾಟು ಸರಳವಾಗುತ್ತದೆ ಮತ್ತು ಅದನ್ನು ನಿರ್ವಹಿಸಲು ಸುಲಭವಾಗುತ್ತದೆ. ನಿಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವುದು ಹೇಗೆ?

English summary

Should Your child become a billionaire within the age of 18? Complete Details Here

You wish to provide the best for your child — education, health-care, and lifestyle. You intend to secure your child’s future in every possible way.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X