For Quick Alerts
ALLOW NOTIFICATIONS  
For Daily Alerts

ಅತಿಹೆಚ್ಚು ಬಡ್ಡಿದರ ಒದಗಿಸುವ ಈ 5 ಫಿಕ್ಸೆಡ್ ಡಿಪಾಸಿಟ್ (ಎಫ್ಡಿ) ಆಯ್ಕೆ ನಿಮ್ಮದಾಗಿರಲಿ..

ಪ್ರಸ್ತುತ ಬಡ್ಡಿದರಗಳು ಸಾಕಷ್ಟು ಕುಸಿದಿರುವುದರಿಂದ, ಉತ್ತಮ ಆದಾಯದ ಜೊತೆಗೆ ನಿಮಗೆ ಉತ್ತಮ ಬಡ್ಡಿದರವನ್ನು ನೀಡುವ ಎಫ್‌ಡಿಗಳನ್ನು ನೋಡುವ ಸಮಯ. ನಿಮಗೆ ಉತ್ತಮ ಬಡ್ಡಿದರಗಳನ್ನು ನೀಡುವ ಮತ್ತು ಸುರಕ್ಷಿತವಾಗಿರುವ 5 ಎಫ್‌ಡಿಗಳು ಇಲ್ಲಿವೆ.

|

ಭಾರತದಲ್ಲಿ ಹೆಚ್ಚಿನ ಹೂಡಿಕೆದಾರರು ಫಿಕ್ಸೆಡ್ ಡಿಪಾಸಿಟ್ (ಎಫ್ಡಿ) ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲೂ ವೇತನ ಪಡೆಯುವವರಲ್ಲಿ ಹೆಚ್ಚಿನವರ ನೆಚ್ಚಿನ ಹೂಡಿಕೆ ಆಯ್ಕೆ ಎಫ್ಡಿ ಆಗಿದೆ. ಹೀಗಾಗಿ ನಮ್ಮಲ್ಲಿ ಅನೇಕರು ಅತಿಹೆಚ್ಚು ಬಡ್ಡಿದರ ಒದಗಿಸುವ ಬ್ಯಾಂಕ್, ಕಂಪನಿಗಳ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುತ್ತಾರೆ.
ಪ್ರಸ್ತುತ ಬಡ್ಡಿದರಗಳು ಸಾಕಷ್ಟು ಕುಸಿದಿರುವುದರಿಂದ, ಉತ್ತಮ ಆದಾಯದ ಜೊತೆಗೆ ನಿಮಗೆ ಉತ್ತಮ ಬಡ್ಡಿದರವನ್ನು ನೀಡುವ ಸ್ಥಿರ ಠೇವಣಿ (ಎಫ್‌ಡಿ)ಗಳನ್ನು ನೋಡುವ ಸಮಯ. ನಿಮಗೆ ಉತ್ತಮ ಬಡ್ಡಿದರಗಳನ್ನು ನೀಡುವ ಮತ್ತು ಸುರಕ್ಷಿತವಾಗಿರುವ 5 ಎಫ್‌ಡಿಗಳು ಇಲ್ಲಿವೆ.

ಐಡಿಎಫ್‌ಸಿ

ಐಡಿಎಫ್‌ಸಿ

ಐಡಿಎಫ್‌ಸಿ ಬ್ಯಾಂಕ್ ತನ್ನ 2 ವರ್ಷದ ಠೇವಣಿಯ ಮೇಲೆ ಶೇ. 8.5 ರಷ್ಟು ಬಡ್ಡಿದರವನ್ನು ನಿಮಗೆ ನೀಡುತ್ತದೆ. ಅದೇ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರವು ಶೇ.9 ಆಗಿದೆ. ಇದು ಬಹುಶಃ ದೇಶದ ಯಾವುದೇ ವಾಣಿಜ್ಯ ಬ್ಯಾಂಕಿನಿಂದ ಅತ್ಯಧಿಕವಾಗಿದೆ ಎನ್ನಬಹುದು. 1 ವರ್ಷದಿಂದ 2 ವರ್ಷಗಳ ಕಡಿಮೆ ಅವಧಿಯ ಠೇವಣಿ ಮೇಲೆ ಶೇಕಡಾ 7.75 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಬಡ್ಡಿದರಗಳು ಕುಸಿಯುವ ಸಾಧ್ಯತೆ ಇರುವುದರಿಂದ ದೀರ್ಘಾವಧಿಯ ಠೇವಣಿ ಆಯ್ಕೆ ಮಾಡಬೇಕೆಂದು ನಾವು ಸೂಚಿಸುತ್ತೇವೆ. ಈ ಬ್ಯಾಂಕ್ ದೇಶಾದ್ಯಂತ ಶಾಖೆಗಳನ್ನು ಹೊಂದಿದ್ದು, ಬ್ಯಾಂಕ್ ಖಾತೆ ತೆರೆಯಲು ಆನ್‌ಲೈನ್ ಸೌಲಭ್ಯವನ್ನು ಸಹ ಪಡೆಯಬಹುದು.

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್ ತನ್ನ 36 ರಿಂದ 60 ತಿಂಗಳ ಠೇವಣಿಯ ಮೇಲೆ ಶೇ. 8.60 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಬಡ್ಡಿದರವು ಶೇಕಡಾ 8.95ರಷ್ಟಿದೆ. ಇದು ಉತ್ತಮವಾದ ಆದಾಯ ಎನ್ನಬಹುದು. 15 ತಿಂಗಳ ಠೇವಣಿಯ ವಿಶೇಷ ಅವಧಿಯೂ ಇದ್ದು, ಅಲ್ಲಿ ಬಡ್ಡಿದರವು ಶೇ. 8.05 ಆಗಿರುತ್ತದೆ. ಆದರೆ, ಇಲ್ಲಿ ಪಾವತಿಸಬೇಕಾದ ಕನಿಷ್ಠ ಮೊತ್ತ ರೂ. 1 ಲಕ್ಷ. ಇಲ್ಲಿರುವ ಎಫ್‌ಡಿಗಳನ್ನು ಎಎಎ ಎಂದು ರೇಟ್ ಮಾಡಲಾಗಿದ್ದು, ತುಲನಾತ್ಮಕವಾಗಿ ಸುರಕ್ಷಿತವೆಂದು ಪರಿಗಣಿಸಬಹುದು.

ಕೆಟಿಡಿಎಫ್‌ಸಿ

ಕೆಟಿಡಿಎಫ್‌ಸಿ

ಕೆಟಿಡಿಎಫ್‌ಸಿ ಕೇರಳ ಸರ್ಕಾರ ಒಡೆತನದ ಸಂಸ್ಥೆಯಾಗಿದ್ದು, ಇದು ಸ್ಥಿರ ಠೇವಣಿಗಳ ಮೇಲೆ ಶೇ. 8.50 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇಲ್ಲಿ ನೀಡಲಾಗುವ ಬಡ್ಡಿದರವು 1, 2 ಮತ್ತು 3 ವರ್ಷಗಳ ಅವಧಿಯಲ್ಲಿರುತ್ತದೆ. ಹಿರಿಯ ನಾಗರಿಕರಿಗೆ ಶೇ. 0.25ರಷ್ಟು ಹೆಚ್ಚುವರಿ ಇದ್ದು, ಬಡ್ಡಿದರವನ್ನು ಶೇ. 8.75ರವರೆಗೆ ಪಾವತಿಸುತ್ತದೆ.
ಕುತೂಹಲಕಾರಿಯಾಗಿ, ಇಳುವರಿ ಮೂರು ವರ್ಷಗಳಲ್ಲಿ ಶೇ. 9.96 ರವರೆಗೆ ಹಾಗು ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಯಲ್ಲಿ ಶೇ. 10.55ರವರೆಗೆ ಸಿಗುವ ಸಾಧ್ಯತೆ ಇರುತ್ತದೆ. ಇದು ಅತ್ಯಂತ ಸುರಕ್ಷಿತ ಠೇವಣಿ. ಬಡ್ಡಿ ಕಡಿತ ರೂ. 5,00ಕ್ಕಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಇರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.

ಮಹೀಂದ್ರಾ ಫೈನಾನ್ಸ್

ಮಹೀಂದ್ರಾ ಫೈನಾನ್ಸ್

ಮಹೀಂದ್ರಾ ಫೈನಾನ್ಸ್ ಕಂಪನಿ, ಶೇ. 9 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದು ಬಹುಶಃ ಎನ್‌ಬಿಎಫ್‌ಸಿಯಿಂದ ಬಲವಾದ ನಿರ್ದಿಷ್ಟತೆ, ವಿಶ್ವಾಸಾರ್ಹತೆ ಹೊಂದಿರುವ ಮತ್ತು ಅತ್ಯಧಿಕ ಎಎಎ ರೇಟಿಂಗ್ ಹೊಂದಿರುವ ಕಂಪನಿ. ಶೇಕಡಾ 9 ರ ಬಡ್ಡಿದರವು ಆನ್ಲೈನ್‌ನಲ್ಲಿ 33 ತಿಂಗಳು 40 ತಿಂಗಳು ಸ್ಥಿರ ಠೇವಣಿ ಮೇಲೆ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಮಾತ್ರ ಲಭ್ಯ. ದೈಹಿಕವಾಗಿ ಅರ್ಜಿ ಸಲ್ಲಿಸುವವರಿಗೆ, ಮೇಲೆ ತಿಳಿಸಿದ ಅವಧಿಯಲ್ಲಿ ಬಡ್ಡಿದರವು ಶೇಕಡಾ 8.85ರಷ್ಟು ಸಿಗುತ್ತದೆ.

ಶ್ರೀರಾಮ್ ಸಿಟಿ ಯೂನಿಯನ್

ಶ್ರೀರಾಮ್ ಸಿಟಿ ಯೂನಿಯನ್

ಇದು ಎಎಎ ರೇಟೆಡ್ ಸ್ಥಿರ ಠೇವಣಿಯಾಗಿದೆ. ಶ್ರೀರಾಮ್ ಸಿಟಿ ಯೂನಿಯನ್ 3 ವರ್ಷಗಳವರೆಗೆ ಶೇ. 9ರಷ್ಟು ಬಡ್ಡಿದರವನ್ನು ನೀಡುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಬಡ್ಡಿದರಗಳು ಕುಸಿಯುದ್ದರು ಇದು ಉತ್ತಮ ಬಡ್ಡಿದರ ಎಂದು ಪರಿಗಣಿಸಬಹುದು. ಆದಾಗ್ಯೂ, ಎನ್‌ಬಿಎಫ್‌ಸಿ ಠೇವಣಿಗಳು ತುಲನಾತ್ಮಕವಾಗಿ ಅಸುರಕ್ಷಿತವಾಗಿವೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ.

English summary

Here are 5 Fixed Deposit (FDs) that offer the highest interest rate

With interest rates having fallen a great deal, it is time to look at FDs that offer you superior rate of interest, along with good returns. Here are 5 FDs that offer you the best interest rates and are safe.
Story first published: Wednesday, August 7, 2019, 10:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X