For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಆಕಾಶದಲ್ಲಿರುವಾಗ ಹೂಡಿಕೆದಾರರ ಕಾಲು ನೆಲದ ಮೇಲಿದ್ದು ಹೇಗೆ ಯೋಚಿಸಬೇಕು?

By ಅನಿಲ್ ಆಚಾರ್
|

ಕೊರೊನಾಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಉತ್ತೇಜನ ಪ್ಯಾಕೇಜ್, ಕಾರ್ಪೊರೇಟ್ ಗಳಿಕೆಯಲ್ಲಿನ ಚೇತರಿಕೆ ಮತ್ತು ನಿರೀಕ್ಷೆಗಿಂತ ಉತ್ತಮ ಆರ್ಥಿಕ ದತ್ತಾಂಶಗಳು ಇವೆಲ್ಲ ಸೇರಿ ಜಾಗತಿಕ ಷೇರು ಮಾರ್ಕೆಟ್ ಎತ್ತರದಲ್ಲಿದೆ. ಅದರ ಜತೆಗೆ ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳು ಕೂಡ ಹೊಸ ದಾಖಲೆ ಬರೆಯುತ್ತಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು, ನವೆಂಬರ್ ನಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ನಿವ್ವಳವಾಗಿ 60,358 ಕೋಟಿ ರುಪಾಯಿಯನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದ್ದಾರೆ. ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರೀಸ್ ಲಿ. (ಎನ್ ಎಸ್ ಡಿಎಲ್) ಮೂಲಕ ಎಫ್ ಪಿಐ ದತ್ತಾಂಶಗಳು ಲಭ್ಯವಾಗಲು ಶುರುವಾದ ಮೇಲೆ ಈಕ್ವಿಟಿ ಸೆಗ್ಮೆಂಟ್ ನಲ್ಲಿ ಹೂಡಿಕೆಯಾದ ಅತಿ ಹೆಚ್ಚಿನ ಮೊತ್ತ ಇದು.

 

ಷೇರು ಮಾರ್ಕೆಟ್ ನಲ್ಲಿ ಸನ್ನಿವೇಶ ಹೇಗಿದೆ ಅಂದರೆ, ಬಿಎಸ್ ಇ 500 ಸೂಚ್ಯಂಕದಲ್ಲಿ ಟಾಟಾ ಪವರ್, ಮಾರುತಿ ಸುಜುಕಿ, ಸನ್ ಫಾರ್ಮಾ, ಅದಾನಿ ಎಂಟರ್ ಪ್ರೈಸಸ್, ಟಾಟಾ ಕೆಮಿಕಲ್ಸ್ ಮತ್ತು ಅದಾನಿ ಪವರ್ ಸೇರಿ 65 ಕಂಪೆನಿ ಷೇರುಗಳು ಕೇವಲ ನಾಲ್ಕು ಟ್ರೇಡಿಂಗ್ ಸೆಷನ್ ನಲ್ಲಿ 10ರಿಂದ 50 ಪರ್ಸೆಂಟ್ ಏರಿಕೆ ಕಂಡಿವೆ.

100 ರುಪಾಯಿಯಿಂದ ಹೂಡಿಕೆ ಆರಂಭಿಸಬಹುದಾದ ಎಸ್ ಐಪಿ ಅನುಕೂಲಗಳೇನು?

ಇನ್ನು ಕಳೆದ ಶುಕ್ರವಾರ 250ಕ್ಕೂ ಹೆಚ್ಚು ಕಂಪೆನಿ ಷೇರುಗಳು ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದ್ದರೆ, 400ಕ್ಕೂ ಹೆಚ್ಚು ಷೇರುಗಳು ಒಂದು ದಿನದ ಗರಿಷ್ಠ ಮಿತಿಯ ಏರಿಕೆಯನ್ನು ಮುಟ್ಟಿವೆ. ಷೇರು ಮಾರುಕಟ್ಟೆಯಲ್ಲಿ ಪರಿಸ್ಥಿತಿ ಹೀಗಿರುವಾಗ ಗಮನದಲ್ಲಿ ಇರಬೇಕಾದ ಹಾಗೂ ತೆಗೆದುಕೊಳ್ಳಬೇಕಾದ ಮೂರು ಕ್ರಮಗಳೇನು ಎಂಬ ವಿವರಣೆಗಾಗಿ ಮುಂದೆ ಓದಿ.

ಏರಿಕೆ ಕಾಣುತ್ತಲೇ ಇರುವ ಷೇರಿನ ಮೇಲೆ ದೊಡ್ಡ ಮೊತ್ತದ ಹೂಡಿಕೆ ಬೇಡ

ಏರಿಕೆ ಕಾಣುತ್ತಲೇ ಇರುವ ಷೇರಿನ ಮೇಲೆ ದೊಡ್ಡ ಮೊತ್ತದ ಹೂಡಿಕೆ ಬೇಡ

ಪ್ರತಿ ದಿನವೂ ಷೇರು ಮಾರುಕಟ್ಟೆ ಹೊಸ ದಾಖಲೆ ಎಂಬ ಹೆಡ್ಡಿಂಗ್ ನೋಡುತ್ತಲೇ ಇದ್ದರೆ ದೊಡ್ಡ ಮೊತ್ತವನ್ನು ಹಾಕಿ, ಶೀಘ್ರವಾಗಿ ದೊಡ್ಡ ಲಾಭ ಮಾಡಿಬಿಡಬಹುದು ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಇಂಥ ಆಲೋಚನೆ ಸರಿಯಲ್ಲ. ಮಾರ್ಕೆಟ್ ಹೇಗಿರುತ್ತದೆ ಹಾಗೂ ಸ್ಪಂದಿಸುತ್ತದೆ ಎಂದು ತಿಳಿಯುವುದು ಸಲೀಸಲ್ಲ. ಅದರಲ್ಲೂ ಮಾರುಕಟ್ಟೆ ತಜ್ಞರಾಗಿದ್ದರೂ ಹೀಗೆ ಆಗುತ್ತದೆ ಎಂದು ನೂರು ಪರ್ಸೆಂಟ್ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಆದ್ದರಿಂದ ಯಾವ ಸಂದರ್ಭದಲ್ಲಿ ಷೇರು ಮಾರ್ಕೆಟ್ ನಿಂದ ಹಣ ತೆಗೆದು, ಹೊರಬರಬೇಕು ಎಂಬ ಬಗ್ಗೆ ಸರಿಯಾದ ನಿರ್ಧಾರ ಮಾಡಲಿಲ್ಲ ಅಂದರೆ ನಷ್ಟ ಅನಿಭವಿಸಬೇಕಾಗುತ್ತದೆ. ಬಹುತೇಕ ಷೇರುಗಳು ಹೆಚ್ಚಿನ ಬೆಲೆಗೆ ವಹಿವಾಟು ನಡೆಸುತ್ತಿರುವುದರಿಂದ ದೀರ್ಘಾವಧಿಗೆ ಹೂಡಿಕೆ ಮಾಡುವುದು ಸಹ ಅಪಾಯಕಾರಿಯೇ. ಮಹತ್ತರವಾದ ಲಾಭ ಕೂಡ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.

ಗುಣಮಟ್ಟದ ಷೇರುಗಳಲ್ಲಿನ ಹೂಡಿಕೆ ಮುಂದುವರಿಸಿ
 

ಗುಣಮಟ್ಟದ ಷೇರುಗಳಲ್ಲಿನ ಹೂಡಿಕೆ ಮುಂದುವರಿಸಿ

ಗುಣಮಟ್ಟದ ಷೇರುಗಳನ್ನು ಒಳ್ಳೆ ಲಾಭ ಬಂದಲ್ಲಿ ಅವುಗಳನ್ನು ಮಾರಾಟ ಮಾಡುವುದಕ್ಕೆ ಸರಿಯಾದ ಸಮಯ ಇದು. ಲಾರ್ಜ್ ಕ್ಯಾಪ್ ಷೇರುಗಳನ್ನು ಮಾರಾಟ ಮಾಡಿ, ಗುಣಮಟ್ಟದ- ಕಡಿಮೆ ದರದ ಮಿಡ್ ಕ್ಯಾಪ್ ಗಳು ಮತ್ತು ಸ್ಮಾಲ್ ಕ್ಯಾಪ್ ಗಳ ಮೇಲೆ ಹೂಡಿಕೆ ಮಾಡಿ. ಮಿಡ್ ಕ್ಯಾಪ್ ಅಥವಾ ಸ್ಮಾಲ್ ಕ್ಯಾಪ್ ಮೇಲೆ ಹೂಡಿಕೆ ಮಾಡುವಾಗ ಬೆಳವಣಿಗೆಗೆ ಇರುವ ಅವಕಾಶಗಳ ಮೌಲ್ಯಮಾಪನ ಮಾಡಬೇಕು. ಉತ್ತಮ ಗುಣಮಟ್ಟದ ಲಾರ್ಜ್ ಕ್ಯಾಪ್ ಷೇರು ಮಾರಿ, ಸ್ಥಿರತೆ ಇಲ್ಲದ- ಅಪಾಯಕಾರಿ ಕಂಪೆನಿಗಳ ಮೇಲೆ ಹಣ ಹೂಡುವುದು ಸರಿಯಲ್ಲ. ಒಂದು ವೇಳೆ ಹೆಚ್ಚುವರಿ ಹಣ ಇದ್ದಲ್ಲಿ ನಂಬಿಕಸ್ತ- ಭರವಸೆಯ ಸ್ಮಾಲ್ ಮತ್ತು ಮಿಡ್ ಕಂಪೆನಿಗಳ ಮೇಲೆ ಹಣ ಹಾಕಬಹುದು. ಉತ್ತಮ ರಿಟರ್ನ್ಸ್ ನೀಡುತ್ತಿರುವ ಲಾರ್ಜ್ ಕ್ಯಾಪ್ ಷೇರುಗಳನ್ನು ಹಾಗೇ ಉಳಿಸಿಕೊಳ್ಳಬಹುದು. ಸ್ಮಾಲ್ ಕ್ಯಾಪ್ಸ್ ಅಂದರೆ ಅಪಾಯವೂ ಹೆಚ್ಚು, ರಿಟರ್ನ್ಸ್ ದೊರೆಯುವ ಅವಕಾಶವೂ ಜಾಸ್ತಿ. ಈಗಿನ ಗುಣಮಟ್ಟದ ಲಾರ್ಜ್ ಕ್ಯಾಪ್ ಪ್ರೊಫೈಲ್ ಜತೆಗೆ ಅವುಗಳನ್ನು ಸೇರಿಸುವುದರಿಂದ ಅಪಾಯವನ್ನು ಹಂಚಿಕೆ ಮಾಡಿದಂತಾಗುತ್ತದೆ. ಆದರೆ ನೆನಪಿನಲ್ಲಿಡಿ, ಲಾರ್ಜ್ ಕ್ಯಾಪ್ ಷೇರುಗಳನ್ನು ಮಾರಿ, ಸ್ಮಾಲ್ ಕ್ಯಾಪ್ ಷೇರುಗಳನ್ನು ಆರಿಸಿಕೊಳ್ಳುವುದು ಅಪಾಯದ ಪ್ರಮಾಣವನ್ನೇ ಬದಲಿಸುತ್ತದೆ, ಅರ್ಥಾತ್ ಹೆಚ್ಚು ಮಾಡುತ್ತದೆ.

ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆ ಮುಂದುವರಿಸಿ

ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆ ಮುಂದುವರಿಸಿ

ಮ್ಯೂಚುವಲ್ ಫಂಡ್ ಗಳನ್ನು ಸಕ್ರಿಯವಾಗಿ ತಜ್ಞರೇ ನಿರ್ವಹಣೆ ಮಾಡುತ್ತಾರೆ. ಅವರ ಕೆಲಸ ಏನೆಂದರೆ, ಅಪಾಯವನ್ನು ಸರಿತೂಗಿಸಿಕೊಂಡು ಹೋಗುವುದು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಮಟ್ಟಿಗೆ ಗರಿಷ್ಠ ರಿಟರ್ನ್ಸ್ ನೀಡುವುದು. ಆದ್ದರಿಂದ ಯಾವುದೇ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ. ಷೇರು ಮಾರುಕಟ್ಟೆ ಏರಿಕೆ ಹಾದಿಯಲ್ಲಿ ಮುಂದಕ್ಕೆ ಸಾಗುವಾಗ ರಿಟರ್ನ್ಸ್ ಸ್ವಲ್ಪ ಕಡಿಮೆ ಇರುತ್ತದೆ. ಆದರೆ ಅಪಾಯವನ್ನು ಸರಿತೂಗಿಸಿಕೊಂಡು ಹೋಗುವ ಫಂಡ್ ಮ್ಯಾನೇಜರ್ ಗಳ ಬುದ್ಧಿವಂತಿಕೆಯಿಂದಾಗಿ ದೊಡ್ಡ ಮಟ್ಟದ ನಷ್ಟವಾಗಲ್ಲ. ನೀವು ಒಂದು ವೇಳೆ ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಿದ್ದಲ್ಲಿ ದೀರ್ಘಾವಧಿಗೆ ಅವರು ಸಂಪತ್ತು ಸೃಷ್ಟಿಸುವುದಕ್ಕೆ ಸಹಾಯ ಮಾಡುತ್ತಾರೆ. ಆದ್ದರಿಂದ ತಾಳ್ಮೆ ಅಗತ್ಯ. ಹಾಗೂ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (ಎಸ್ ಐಪಿ) ಮುಂದುವರಿಸಿಕೊಂಡು ಹೋಗಿ ಮತ್ತು ಹಣ ಹಾಕಿರುವ ಫಂಡ್ ನ ಬೆಳವಣಿಗೆ ಗಮನಿಸುತ್ತಾ ಇರಿ.

ಭಾವನೆಗಳು ಸವಾರಿ ಮಾಡದಿರಲಿ

ಭಾವನೆಗಳು ಸವಾರಿ ಮಾಡದಿರಲಿ

ವಿಪರೀತ ಉತ್ಸಾಹ ಕಂಡುಬರುವ ಮಾರ್ಕೆಟ್ ನಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು. ಭಾವನೆಗಳು ನಿರ್ಧಾರವನ್ನು ತೀರ್ಮಾನಿಸುವಂತಾಗಬಾರದು. ನಿಮಗೆ ಗೊತ್ತಿರುವ/ಅರ್ಥವಾಗುವ ವಿಷಯಗಳಿಗೆ ಮಾತ್ರ ಬದ್ಧವಾಗಿರಿ. ಕಂಪೆನಿಯ ಮೂಲಭೂತ ಅಂಶಗಳಲ್ಲಿ (ಫಂಡಮೆಂಟಲ್ಸ್) ಯಾವುದೇ ಬದಲಾವಣೆ ಆಗದೆ ಸುಮ್ಮನೆ ಏರುತ್ತಾ ಸಾಗುವ ಷೇರುಗಳಿಂದ ದೂರ ಇರಿ. ಸುಲಭವಾಗಿ ಹಣ ಮಾಡುವುದಕ್ಕಿಂತ ನಿಮ್ಮ ಆರ್ಥಿಕ ಗುರಿಯ ಬಗ್ಗೆ ಲಕ್ಷ್ಯ ಇರಲಿ.

ಈ ಲೇಖನವು ಮಾಹಿತಿಗಾಗಿಯೇ ವಿನಾ ಯಾವುದೇ ಖರೀದಿ ಅಥವಾ ಮಾರಾಟಕ್ಕೆ ಶಿಫಾರಸಲ್ಲ. ಈ ಲೇಖನದ ಆಧಾರದಲ್ಲಿ ಏನಾದರೂ ಹಾನಿ ಅಥವಾ/ಮತ್ತು ನಷ್ಟ ಸಂಭವಿಸಿದಲ್ಲಿ ಅದಕ್ಕು ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಲಿ. ಅದರ ಸಹವರ್ತಿ ಸಂಸ್ಥೆಗಳು, ಲೇಖಕರು ಜವಾಬ್ದಾರರಲ್ಲ.

English summary

3 Things To Keep It In Mind When Stock Market Is At Record Highs

When stock market at record high, Here are 3 things to keep it in mind.
Story first published: Monday, December 7, 2020, 12:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X