For Quick Alerts
ALLOW NOTIFICATIONS  
For Daily Alerts

42%ನಷ್ಟು ಬೆಲೆ ಹೆಚ್ಚಳ ಆಗುವ ಸಾಮರ್ಥ್ಯ ಇರುವ 5 ಷೇರುಗಳು

|

ದೀಪಾವಳಿ ಸಂದರ್ಭ ಹಿಂದೂಗಳಿಗೆ ಅತ್ಯಂತ ಪವಿತ್ರವಾದದ್ದು. ಇಂಥ ವೇಳೆ ಷೇರು ಖರೀದಿ ಮಾಡುವ ಪದ್ಧತಿ ಇದು. ಕನಿಷ್ಠ ಒಂದು ಷೇರನ್ನಾದರೂ ಆ ದಿನದಂದು ಖರೀದಿ ಮಾಡಿದರೆ ಲಕ್ಷ್ಮೀ ಅನುಗ್ರಹ ದೊರೆಯುತ್ತದೆ ಹಾಗೂ ಮನೆಗೆ ಸಂಪತ್ತು ಬರುತ್ತದೆ ಎಂಬ ಆರ್ಥಿಕ ವಿಚಾರಕ್ಕೆ ಧಾರ್ಮಿಕ ನಂಬಿಕೆ ಇದೆ.

ಐದು ಟ್ರೇಡಿಂಗ್ ಸೆಷನ್ ನಲ್ಲಿ 8381 ಕೋಟಿ ರು. FPI ನಿವ್ವಳ ಹೂಡಿಕೆಐದು ಟ್ರೇಡಿಂಗ್ ಸೆಷನ್ ನಲ್ಲಿ 8381 ಕೋಟಿ ರು. FPI ನಿವ್ವಳ ಹೂಡಿಕೆ

ಇನ್ನೇನು ಈ ವರ್ಷದ ದೀಪಾವಳಿ ಕಣ್ಣೆದುರು ಇದೆ. ಷೇರು ಬ್ರೋಕಿಂಗ್ ಕಂಪೆನಿಯಾದ ಮೋತಿಲಾಲ್ ಓಸ್ವಾಲ್ ನಿಂದ ಈ ಹಬ್ಬದ ಸೀಸನ್ ಗಾಗಿ ಷೇರು ಖರೀದಿಗೆ ಶಿಫಾರಸು ಮಾಡಲಾಗಿದೆ. ಈ ಐದು ಷೇರುಗಳನ್ನು ಡೆಲಿವರಿಗೆ ಖರೀದಿ ಮಾಡುವುದಕ್ಕೆ ಸಲಹೆ ನೀಡಲಾಗಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್ ದರ 42%ನಷ್ಟು ಹೆಚ್ಚಳ ಆಗುವ ಸಾಮರ್ಥ್ಯ ಇದೆ ಎಂದು ಬ್ರೋಕಿಂಗ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಭಿಪ್ರಾಯ ಪಟ್ಟಿದೆ. "ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಭಾರ್ತಿ ಉತ್ತಮ ಸಾಧನೆ ಮಾಡಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ಮೊಬೈಲ್ EBITDA ಬೆಳವಣಿಗೆ ಒಟ್ಟಾಗಿ 16% ಆಗಿರುವುದು ಸಾಕ್ಷಿಯಾಗಿದೆ. 10 ಮಿಲಿಯನ್ ಚಂದಾದಾರರ ಕಾರಣಕ್ಕೆ ARPU 5% ಚೇತರಿಕೆಗೆ ಸಾಕ್ಷಿಯಾಗಿದೆ," ಎಂದು ಹೇಳಲಾಗಿದೆ. ಮೋತಿಲಾಲ್ ಓಸ್ವಾಲ್ ನಿಂದ ಷೇರಿನ ಬೆಲೆಯನ್ನು 650 ರುಪಾಯಿ ತಲುಪುವ ಸಾಮರ್ಥ್ಯ ಇದೆ ಎಂಬ ಗುರಿ ನಿಗದಿ ಮಾಡಲಾಗಿದೆ. ಸದ್ಯಕ್ಕೆ ಭಾರ್ತಿ ಏರ್ ಟೆಲ್ ಷೇರಿನ ಬೆಲೆ 473 ರುಪಾಯಿ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಮೋತಿಲಾಲ್ ಓಸ್ವಾಲ್ ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 300 ರುಪಾಯಿ ಎಂದು ಗುರಿ ನಿಗದಿ ಮಾಡಲಾಗಿದೆ. ಇದನ್ನು ಪರ್ಸೆಂಟ್ ಗೆ ಬದಲಿಸಿ ಹೇಳಬೇಕೆಂದರೆ, 37% ಆಗುತ್ತದೆ. ಎಸ್ ಬಿಐ ಆದಾಯ ನಾರ್ಮಲೈಸೇಷನ್ ಆರಂಭವಾಗಿದೆ ಎಂದು ಭಾವಿಸುತ್ತೇವೆ. ಪಿಎಸ್ ಯು ಬ್ಯಾಂಕ್ ಗಳಲ್ಲೇ ಇದು ಅತ್ಯುತ್ತಮವಾದದ್ದು. ಆರೋಗ್ಯಕರವಾದ ಪಿಸಿಆರ್ 71 ಪರ್ಸೆಂಟ್ ಇದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಎಸ್ ಬಿಐ ದರ 220 ರುಪಾಯಿಯಲ್ಲಿ ಇದೆ.

ಕ್ರಾಂಪ್ಟನ್ ಕನ್ಸ್ಯೂಮರ್

ಕ್ರಾಂಪ್ಟನ್ ಕನ್ಸ್ಯೂಮರ್

ಫ್ಯಾನ್ ಗಳು ಮತ್ತು ಪಂಪ್ ಗಳ ಮಾರುಕಟ್ಟೆಯಲ್ಲಿನ ಪಾಲು ಕ್ರಾಂಪ್ಟನ್ ಇನ್ನಷ್ಟು ಒಟ್ಟು ಮಾಡಿಕೊಂಡಿದೆ. ವಾಟರ್ ಹೀಟರ್ ಸೆಗ್ಮೆಂಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಈಚೆಗೆ ಬೇಡಿಕೆ ಹೆಚ್ಚಾಗಿದೆ. ಬೆಳವಣಿಗೆಗೆ ಇನ್ನೂ ಅವಕಾಶ ಇದೆ ಎಂದು ಮೋತಿಲಾಲ್ ಓಸ್ವಾಲ್ ಅಭಿಪ್ರಾಯ ಪಟ್ಟಿದೆ.

ಹೀರೋ ಮೋಟೋ ಕಾರ್ಪ್

ಹೀರೋ ಮೋಟೋ ಕಾರ್ಪ್

ಇತರ ದ್ವಿಚಕ್ರ ವಾಹನಗಳ ತಯಾರಕರಿಗೆ ಹೋಲಿಸಿದರೆ ಚೇತರಿಕೆ ಅತ್ಯುತ್ತಮವಾಗಿದೆ. ಏಕೆಂದರೆ ಗ್ರಾಮೀಣ ಕೇಂದ್ರಿತ ಪೋರ್ಟ್ ಫೋಲಿಯೋ ಮೇಲೆ ಗಮನ ಹರಿಸಿರುವುದು ಕಾರಣವಾಗಿದೆ. ಎಂಟ್ರಿ ಹಾಗೂ ಎಕ್ಸ್ ಕ್ಯೂಟಿವ್ ಸೆಗ್ಮೆಂಟ್ ನಲ್ಲಿ ಮುಂಚೂಣಿಯಲ್ಲಿದೆ. BS6 ಉತ್ಪಾದನೆಯ ನಂತರ ಸ್ಪರ್ಧೆಯಲ್ಲಿ ಹೀರೋ ಮೋಟೋ ಕಾರ್ಪ್ ಪ್ರಮುಖವಾಗಿದೆ. ಕಂಪೆನಿಯ ದ್ವಿಚಕ್ರ ವಾಹನ ಬೇಡಿಕೆ ಮುಂದುವರಿಯಲಿದೆ ಎನ್ನಲಾಗಿದೆ. ಸದ್ಯಕ್ಕೆ ಷೇರಿನ ಬೆಲೆ 2957 ರುಪಾಯಿ ಇದೆ.

ಅಲ್ಟ್ರಾಟೆಕ್ ಸಿಮೆಂಟ್

ಅಲ್ಟ್ರಾಟೆಕ್ ಸಿಮೆಂಟ್

ಅಲ್ಟ್ರಾಟೆಕ್ ಸಿಮೆಂಟ್ ಗೆ ದೇಶದಾದ್ಯಂತ ಸಿಮೆಂಟ್ ವಿತರಣೆಯ ಜಾಲ ಇದೆ. ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ವಿತರಣೆ ಮಾಡುತ್ತದೆ ಅಲ್ಟ್ರಾಟೆಕ್ ಸಿಮೆಂಟ್. ಈ ಕಾರಣಕ್ಕೆ ಭಾರತದಲ್ಲಿ ರೀಟೇಲ್ ಮತ್ತು ಇನ್ ಸ್ಟಿಟ್ಯೂಷನಲ್ (ನಾನ್ ಟ್ರೇಡ್) ಸಿಮೆಂಟ್ ಬೇಡಿಕೆಗೆ ಅಲ್ಟ್ರಾಟೆಕ್ ಸಿಮೆಂಟ್ ಪ್ರಮುಖ ಆಯ್ಕೆ ಆಗಿರಲಿದೆ. ಅಲ್ಟ್ರಾಟೆಕ್ ಸಿಮೆಂಟ್ ಷೇರಿನ ಬೆಲೆ ಸದ್ಯಕ್ಕೆ 4625 ರುಪಾಯಿ ಇದೆ.

English summary

5 Stocks Have Potential Upside Of 42 Percent

Diwali special stocks: Here is the list of 5 stocks that have potential upside of 42 percent according to Motilal Oswal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X