For Quick Alerts
ALLOW NOTIFICATIONS  
For Daily Alerts

ನೀವು ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಈ 8 ಲಾಭಗಳು ಸಿಗಲಿವೆ

|

ಜೀವನದಲ್ಲಿ ಹೆಚ್ಚು ದುಡ್ಡು ಮಾಡಬೇಕು, ಕಾರು, ಬಂಗಲೆ ಖರೀದಿಸಬೇಕು, ಒಂದಿಷ್ಟು ಕೋಟಿ ಹಣ ಮಾಡಿ ಬಿಟ್ಟರೆ ಜೀವನ ನೆಮ್ಮದಿಯಾಗಿರುತ್ತೆ ಎಂದು ಕನಸು ಕಾಣುವವರೇ ಹೆಚ್ಚು. ದುಡ್ಡಿದ್ದರೆ ತಾನಾಗಿಯೇ ನೆಮ್ಮದಿಯು ಬರುತ್ತದೆ ಎಂದು ನಂಬಿದವರು ಇದ್ದಾರೆ. ಹಾಗಿದ್ದರೆ ಹಣ ನೆಮ್ಮದಿ ತಂದು ಕೊಡುತ್ತಾ? ಆಸ್ತಿ, ಬಂಗಲೆಯಿದ್ದರೆ ಮಾತ್ರ ಸುಖವಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಸಹಜ

ಗುಡ್‌ ರಿಟರ್ನ್ಸ ಕನ್ನಡದ ಓದುಗರಿಗೆ ಈ ಲೇಖನದ ಮೂಲಕ ಕನಿಷ್ಠ ಜೀವನಶೈಲಿಯಿಂದಾಗುವ ಲಾಭಗಳನ್ನು ತಿಳಿಸಲಿದ್ದೇವೆ? ನೆಮ್ಮದಿಯಿಂದ ಬದುಕಲು ಕೋಟಿಗಟ್ಟಲೆ ಹಣ ಬೇಕಾಗಿಲ್ಲ ಎಂಬುದು ಈ ಲೇಖನದ ಹಿಂದಿನ ಉದ್ದೇಶ. ಹಾಗಿದ್ದರೆ ಕನಿಷ್ಠ ಜೀವನ ಶೈಲಿ ಎಂದರೇನು ಮತ್ತು ಅದರ ಲಾಭಗಳೇನು ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.

1. ಯಾವುದು ಮುಖ್ಯವೋ ಅದನ್ನಷ್ಟೇ ಇಟ್ಟುಕೊಳ್ಳಲು ಸಾಧ್ಯ

1. ಯಾವುದು ಮುಖ್ಯವೋ ಅದನ್ನಷ್ಟೇ ಇಟ್ಟುಕೊಳ್ಳಲು ಸಾಧ್ಯ

ನಮಲ್ಲಿ ಕೋಟಿ ರುಪಾಯಿ ಇಲ್ಲದಿದ್ದರೂ ಖುಷಿಯಿಂದರಲು ಸಾಧ್ಯವಿದೆ. ಕನಿಷ್ಠೀಯತಾವಾದವು ಉದ್ದೇಶಪೂರ್ವಕವಾಗಿ ನಿಜವಾಗಿಯೂ ತನಗೆ ಅಗತ್ಯವಿರುವ ಸಂಗತಿಗಳನ್ನು ಬೆಂಬಲಿಸುತ್ತದೆ. ನಮ್ಮ ಜೀವನಕ್ಕೆ ಅಗತ್ಯವಿರುವ ವಸ್ತುಗಳೊಂದಿಗೆ ಮಾತ್ರ ಜೀವನ ಸಾಗಿಸುವುದಾಗಿದೆ. ನಿಮ್ಮ ಮನೆಯಲ್ಲಿ ಎಲ್ಲವೂ ಇರಬೇಕು ಎಂದು ಬಯಸುವುದು ಸಾಮಾನ್ಯ. ಆದರೆ ಅಗತ್ಯತೆಗೆ ತಕ್ಕಂತೆ ಬದುಕುವುದೇ ಕನಿಷ್ಠ ಜೀವನವಾಗಿದೆ. ಅಂದರೆ ಮುಖ್ಯ ವಿಷಯಗಳತ್ತ ಮಾತ್ರ ಗಮನ ಹರಿಸುವುದು.

2. ಹೆಚ್ಚು ಸ್ವಾತಂತ್ರ್ಯ

2. ಹೆಚ್ಚು ಸ್ವಾತಂತ್ರ್ಯ

ಕನಿಷ್ಠ ಜೀವನ ಶೈಲಿಯಿಂದಾಗಿ ನಿಮಗೆ ಹಣಕಾಸಿನ ಮುಗ್ಗಟ್ಟು ಇಲ್ಲವೇ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಣ ಮಾಡುವ ಮನಸ್ಸನ್ನೇ ಅಳವಡಿಸಿಕೊಂಡಿದ್ದರೆ ನಾವೆಲ್ಲಿ ಕಳೆದುಕೊಳ್ಳುತ್ತೀವಿ ಎಂಬ ಭಯ ಕಾಡುತ್ತಿರುತ್ತದೆ. ಆದರೆ ಕನಿಷ್ಠ ಜೀವನ ಶೈಲಿ ಅಳವಡಿಸಿಕೊಳ್ಳುವುದರಿಂದ ಸಾಲದ ಗೀಳು, ಹಣಕಾಸಿನ ಹೊರೆ ಮತ್ತು ಹೆಚ್ಚು ಹಣ ಮಾಡಲು ಹೆಚ್ಚು ಕೆಲಸ ಮಾಡಬೇಕು ಹೀಗೆ ನಾನಾ ರೀತಿಯ ಸವಾಲುಗಳಿಂದ ಸ್ವಾತಂತ್ರ್ಯ ನೀಡುತ್ತದೆ.

3. ಆರೋಗ್ಯ ಮತ್ತು ಹವ್ಯಾಸದ ಬಗ್ಗೆ ಗಮನಹರಿಸಲು ಸಾಧ್ಯ

3. ಆರೋಗ್ಯ ಮತ್ತು ಹವ್ಯಾಸದ ಬಗ್ಗೆ ಗಮನಹರಿಸಲು ಸಾಧ್ಯ

ಬಹುತೇಕ ಜನರು ನಮಗೆ ಜಿಮ್ ಮಾಡಲು, ಅಥವಾ ಹವ್ಯಾಸದ ಬಗ್ಗೆ ಗಮನಕೊಡಲು ಸಮಯವೇ ಇಲ್ಲ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಎಷ್ಟೇ ಪ್ರಯತ್ನಿಸಿದರು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯವನ್ನೇ ನೀಡಲಾಗುತ್ತಿಲ್ಲ? ಏನು ಮಾಡಬೇಕು ಎಂದು ಗೊತ್ತಾಗ್ತಿಲ್ಲ ಎಂದು ಕೊರಗುವುದನ್ನು ಕಂಡಿರುತ್ತೀರಿ. ಕನಿಷ್ಠ ಜೀವನ ಶೈಲಿಯಿಂದ ಇದೆಲ್ಲದರಿಂದ ಮುಕ್ತಿ ಸಿಗಲಿದೆ. ಹಣದ ಹಿಂದೆ ಬಿದ್ದು ಬದುಕುವ ಜನರು ಕಚೇರಿಯಲ್ಲೇ ಹೆಚ್ಚು ಸಮಯ ಕಳೆದು ಹೋದಾಗ ಕುಟುಂಬದೊಂದಿಗಿನ ಸಮಯ ಕಡಿಮೆಯಾಗಿರುತ್ತದೆ. ಆದರೆ ಇರುವುದರಲ್ಲಿ ನೆಮ್ಮದಿ ಕಾಣಬೇಕು ಎಂದು ಬಯಸುವವರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು, ಆರೋಗ್ಯದ ಕಡೆಗೆ ಗಮನ ಹರಿಸುವುದರ ಜೊತೆಗೆ ಹವ್ಯಾಸಗಳನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯ.

4. ಆಸ್ತಿ ಮಾಡಬೇಕೆಂಬ ಆಸೆಯು ಕಡಿಮೆಯಾಗಲಿದೆ

4. ಆಸ್ತಿ ಮಾಡಬೇಕೆಂಬ ಆಸೆಯು ಕಡಿಮೆಯಾಗಲಿದೆ

ಕನಿಷ್ಠ ಜೀವನ ಶೈಲಿಯ ಅಳವಡಿಕೆಯಿಂದಾಗುವ ಪ್ರಮುಖ ಲಾಭವು ಇದಾಗಿದೆ. ಹೆಚ್ಚಿನ ಹಣ ಗಳಿಕೆಯ ಆಸೆ, ಖರ್ಚು ಮುಂತಾದವುಗಳಿಂದ ಇದು ಮುಕ್ತಗೊಳಿಸುತ್ತದೆ. ಹಣದಿಂದ ಯಾರೂ ಸಂತೋಷ, ನೆಮ್ಮದಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನಮ್ಮ ಹತ್ತಿರ ಇರುವುದರಲ್ಲಿ ನಾವು ಬದುಕಿದರೆ , ಆಸ್ತಿ ಹಣ ಮಾಡಬೇಕೆಂಬ ಆಸೆಯು ಕಡಿಮೆಯಾಗಲಿದೆ. ಜೊತೆಗೆ ಟಿವಿಯಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತುಗಳನ್ನು ನೀಡಿ ಜನರನ್ನು ಆಕರ್ಷಿಸುವ ಬಲೆಗೆ ಬೀಳುವುದನ್ನು ತಪ್ಪಿಸುತ್ತದೆ.

5. ಹೆಚ್ಚು ಮನಸ್ಸಿಗೆ ಶಾಂತಿ ಸಿಗಲಿದೆ

5. ಹೆಚ್ಚು ಮನಸ್ಸಿಗೆ ಶಾಂತಿ ಸಿಗಲಿದೆ

ನಾವು ಹಣದ ಹಿಂದೆ ಬಿದ್ದಾಗ ಏನಾದರೂ ಕಳೆದುಕೊಳ್ಳುತ್ತೇವೆ ಎಂದು ಭಯದಲ್ಲೇ ಇರುತ್ತೇವೆ. ಅಂದರೆ ಭೌತಿಕ ಆಸ್ತಿಗಳ ಮೇಲೆ ಅಂಟಿಕೊಂಡಾಗ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಏಕೆಂದರೆ ಅದನ್ನು ಕಳೆದುಕೊಳ್ಳುವ ಭಯ ನಮ್ಮಲ್ಲಿಯೇ ಇರುತ್ತದೆ. ಆದರೆ ನಿಮ್ಮ ಜೀವನವು ಸರಳೀಕರಣಗೊಂಡಾಗ ಈ ವಿಷಯಗಳ ಬಗ್ಗೆ ನಿಮ್ಮ ಬಾಂಧ್ಯವವು ಕಳೆದುಕೊಳ್ಳಬಹುದು. ಅಂತಿಮವಾಗಿ ನಿಮಗೆ ಸಿಗುವುದು ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ.

6. ಹೆಚ್ಚು ಸಂತೋಷ ಸಿಗಲಿದೆ

6. ಹೆಚ್ಚು ಸಂತೋಷ ಸಿಗಲಿದೆ

ಕನಿಷ್ಠ ಜೀವನ ಶೈಲಿಯು ನಿಮಗೆ ಹೆಚ್ಚು ಸಂತೋಷ ತಂದುಕೊಡಲಿದೆ. ಇದಕ್ಕೆ ಕಾರಣ ನೀವು ಹೆಚ್ಚು ಹಣ ಮಾಡಬೇಕು ಎಂದು ಮುಂದಾಗದೇ ಇರುವುದರಲ್ಲಿ ನೆಮ್ಮದಿ ಕಾಣಲು ಪ್ರಯತ್ನಿಸುತ್ತೀರ. ಇದರಿಂದಾಗಿ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುವುದರ ಜೊತೆಗೆ ನಿಜವಾದ ಜೀವನವನ್ನು ಅರಿಯಲು ದಾರಿದೀಪವಾಗಿದೆ. ನಿಮ್ಮ ಆದ್ಯತೆಗಳನ್ನು ಕೇಂದ್ರೀಕರಿಸುವ ಜೊತೆಗೆ ನಿಮ್ಮಲ್ಲಿ ಏಕಾಗ್ರತೆಯನ್ನು ಕಾಣುವಿರಿ. ಆ ಮೂಲಕ ನೆಮ್ಮದಿಯ ಹಾಗೂ ಸಂತೋಷದ ಜೀವನವನ್ನು ಕಾಣುವಿರಿ.

7. ಸೋಲಿನ ಭಯ ಕಡಿಮೆ

7. ಸೋಲಿನ ಭಯ ಕಡಿಮೆ

ನೀವು ಯಾರಾದರೂ ಸನ್ಯಾಸಿಗಳನ್ನು ನೋಡಿದರೆ ಅವರಲ್ಲಿ ಸೋಲಿನ ಭಯವೇ ಇಲ್ಲದಿರುವುದನ್ನು ಕಾಣಬಹುದು. ಏಕೆಂದರೆ ಅವರಲ್ಲಿ ಕಳೆದುಕೊಳ್ಳುವುದು ಏನೂ ಇರುವುದಿಲ್ಲ. ಆದರೆ ನೀವು ಹಣ, ಆಸ್ತಿ ಮಾಡಬೇಕೆಂದು ಹಿಂದೆ ಬಿದ್ದಾಗ ಆಸೆಗಳು, ನಿರೀಕ್ಷೆಗಳು ಹೆಚ್ಚಾಗುತ್ತವೆ. ಈ ವೇಳೆ ಜೀವನದಲ್ಲಿ ನಾನೆಲ್ಲಿ ಸೋತು ಹೋಗುತ್ತೇನೆ ಎಂಬ ಭಯ ಇರುತ್ತದೆ. ಆದರೆ ಕನಿಷ್ಠ ಜೀವನಶೈಲಿಯಲ್ಲಿ ಇರೋದ್ರಲ್ಲಿ ನೆಮ್ಮದಿಯನ್ನು ಕಾಣಲು ಮನಸ್ಸು ಮಾಡುತ್ತೀರಿ. ಈ ಜೀವನದಲ್ಲಿ ನೀವು ಹೆಚ್ಚು ಏನು ಕಳೆದುಕೊಳ್ಳುವುದಾಗಿ, ಗಳಿಸುವುದಾಗಲಿ ಇರುವುದಿಲ್ಲ.

8. ಹೆಚ್ಚು ವಿಶ್ವಾಸ ಮೂಡುವುದು

8. ಹೆಚ್ಚು ವಿಶ್ವಾಸ ಮೂಡುವುದು

ಸಂಪೂರ್ಣ ಕನಿಷ್ಠ ಜೀವನವು ಪ್ರತ್ಯೇಕತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ. ಇದು ನಿಮ್ಮ ಸಂತೋಷದ ಅನ್ವೇಷಣೆಯಲ್ಲಿ ಹೆಚ್ಚು ವಿಶ್ವಾಸವನ್ನು ಮೂಡಿಸುತ್ತದೆ. ಅಂದರೆ ಈ ಜೀವನ ಶೈಲಿ ಅಳವಡಿಸಿಕೊಳ್ಳುವುದರ ಮೂಲಕ ಹೆಚ್ಚು ಸಂತೋಷ ಪಡೆದಲ್ಲಿ, ನಿಮ್ಮಲ್ಲಿ ಗೆಲ್ಲುವ, ಬದುಕುವ ವಿಶ್ವಾಸ ತಾನಾಗಿಯೇ ಹೆಚ್ಚುತ್ತದೆ.

English summary

8 Benefits Of Living Minimalist Lifestyle

These are the 8 benefits of living minimalist lifestyle
Story first published: Thursday, January 9, 2020, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X