For Quick Alerts
ALLOW NOTIFICATIONS  
For Daily Alerts

Akshaya Tritiya 2022: ಅಕ್ಷಯ ತೃತೀಯ: ಇಟಿಎಫ್-ಭೌತಿಕ ಚಿನ್ನ, ಯಾವುದು ಬೆಸ್ಟ್?

|

ಅಕ್ಷಯ ತೃತೀಯ ಮುಂತಾದ ಶುಭ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಸಂಪ್ರದಾಯವು ಹಿಂದೂ ಸಂಪ್ರದಾಯದ ಒಂದು ಭಾಗವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ ಸಮೃದ್ಧಿ ಮತ್ತು ಅದೃಷ್ಟವು ಬರಲಿದೆ.

ಅಕ್ಷಯ ತೃತೀಯದ ಇಡೀ ದಿನವೂ ಸುಮುಹೂರ್ತವೆಂದು ನಂಬಲಾಗಿದೆ. ಈ ದಿನದಂದು ಹೆಚ್ಚಿನ ಜನರು ಚಿನ್ನವ್ನನು ಖರೀದಿ ಮಾಡುತ್ತಾರೆ ಅಥವಾ ಚಿನ್ನಕ್ಕೆ ಹೂಡಿಕೆ ಮಾಡುತ್ತಾರೆ. ಈ ವರ್ಷ, ಅಕ್ಷಯ ತೃತೀಯವನ್ನು ಮೇ 3 ರಂದು ಆಚರಣೆ ಮಾಡಲಾಗುತ್ತದೆ.

ಅಕ್ಷಯ ತದಿಗೆ: ಚಿನ್ನದ ಇಟಿಎಫ್‌ನಿಂದ ಕಳೆದ 2 ವರ್ಷದಲ್ಲಿ 64.28% ಆದಾಯ ಅಕ್ಷಯ ತದಿಗೆ: ಚಿನ್ನದ ಇಟಿಎಫ್‌ನಿಂದ ಕಳೆದ 2 ವರ್ಷದಲ್ಲಿ 64.28% ಆದಾಯ

ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ದಿನದಂದು ಜನರು ನಾಣ್ಯಗಳಿಂದ ಹಿಡಿದು ಆಭರಣಗಳಿಂದ ಡಿಜಿಟಲ್ ಚಿನ್ನದವರೆಗೆ ಎಲ್ಲಾ ರೀತಿಯ ಚಿನ್ನವನ್ನು ಖರೀದಿಸುತ್ತಾರೆ. ಬದಲಾಗುತ್ತಿರುವ ಸಮಯದೊಂದಿಗೆ ಹೂಡಿಕೆದಾರರು ಭೌತಿಕ ಚಿನ್ನಕ್ಕಿಂತ ಹೆಚ್ಚಾಘು ಚಿನ್ನದ ಇಟಿಎಫ್ ಅನ್ನು ಆರಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಇಟಿಎಫ್ ಹಾಗೂ ಭೌತಿಕ ಚಿನ್ನದಲ್ಲಿ ಯಾವುದು ಬೆಸ್ಟ, ಲಾಭಗಳು ಏನು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ..

 ಅಕ್ಷಯ ತೃತೀಯ: ಇಟಿಎಫ್-ಭೌತಿಕ ಚಿನ್ನ,  ಯಾವುದು ಬೆಸ್ಟ್?

ಚಿನ್ನದ ಇಟಿಎಫ್ v/s ಭೌತಿಕ ಚಿನ್ನ

ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ಗಳ ಉತ್ಪನ್ನ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಮುಖ್ಯಸ್ಥ ಚಿಂತನ್ ಹರಿಯಾ ಈ ಬಗ್ಗೆ ಮಾತನಾಡಿ, "ಗೋಲ್ಡ್ ಇಟಿಎಫ್‌ಗಳು ಕೆಲವು ವಿಭಿನ್ನ ಪ್ರಯೋಜನಗಳನ್ನು ನೀಡುವುದರಿಂದ ಇದು ಉತ್ತಮ," ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಹಾಗೂ ಕಳ್ಳತನದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ಚಿನ್ನವನ್ನು ಡಿಮ್ಯಾಟ್ ರೂಪದಲ್ಲಿ ಇರಿಸಲಾಗುತ್ತದೆ. ಮೇಕಿಂಗ್ ಶುಲ್ಕವೂ ಇಲ್ಲ, ಇತರೆ ವೆಚ್ಚಗಳು ಕೂಡಾ ಇಲ್ಲ," ಎಂದು ತಿಳಿಸಿದ್ದಾರೆ.

 ಅಕ್ಷಯ ತೃತೀಯ: ಇಟಿಎಫ್-ಭೌತಿಕ ಚಿನ್ನ,  ಯಾವುದು ಬೆಸ್ಟ್?

"ಈ ಅಕ್ಷಯ ತೃತೀಯದಲ್ಲಿ ನೀವು ಚಿನ್ನವನ್ನು ಸ್ವಯಂ ಖರೀದಿಸಬಹುದು ಅಥವಾ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು ಅಥವಾ ಗೋಲ್ಡ್ ಇಟಿಎಫ್ ಮೂಲಕ ಉಡುಗೊರೆಯಾಗಿ ನೀಡಬಹುದು. ಗೋಲ್ಡ್ ಇಟಿಎಫ್‌ನ ಒಂದು ಯುನಿಟ್ 1 ಗ್ರಾಂ 99.50 ಚಿನ್ನಕ್ಕೆ ಸಮನಾಗಿರುತ್ತದೆ. ಇದು ಡಿಮ್ಯಾಟ್ ರೂಪದಲ್ಲಿ ಇರಲಿದೆ. ಆದ್ದರಿಂದ ಇಲ್ಲಿ ಪ್ರಯೋಜನವೆಂದರೆ ಭೌತಿಕ ಚಿನ್ನಕ್ಕಿಂತ ಕನಿಷ್ಠ ಹೂಡಿಕೆ ಮಾಡಬಹುದು," ಎಂದು ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಹೇಳಿದರು.

How to E-Verify ITR : ನಿಮ್ಮ ಆದಾಯ ತೆರಿಗೆ ರಿಟರ್ನ್: ಇ-ವೆರಿಫಿಕೇಷನ್ ಮಾಡುವುದು ಹೇಗೆ? How to E-Verify ITR : ನಿಮ್ಮ ಆದಾಯ ತೆರಿಗೆ ರಿಟರ್ನ್: ಇ-ವೆರಿಫಿಕೇಷನ್ ಮಾಡುವುದು ಹೇಗೆ?

ಗೋಲ್ಡ್ ಇಟಿಎಫ್‌ನ ಪ್ರಯೋಜನಗಳು ಏನು?

ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಭೌತಿಕ ಚಿನ್ನಕ್ಕಿಂತ ಚಿನ್ನದ ಇಟಿಎಫ್‌ಗಳನ್ನು ಖರೀದಿಸುವುದು ಎಷ್ಟು ಉತ್ತಮ, ಏನು ಪ್ರಯೋಜನ ಎಂಬುವುದನ್ನು ವಿವರಿಸಿದ್ದಾರೆ. ಇಲ್ಲಿದೆ ಮಾಹಿತಿ ಓದಿ..

* ಕಂಪನಿಗಳ ಷೇರುಗಳಂತಹ ಸ್ಟಾಕ್ ಎಕ್ಸ್ಚೇಂಜ್‌ಗಳಲ್ಲಿ ಈ ಯುನಿಟ್‌ಗಳನ್ನು ವ್ಯಾಪಾರ ಮಾಡುವುದರಿಂದ ನೀವು ಆನ್‌ಲೈನ್‌ನಲ್ಲಿ ಯುನಿಟ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಆದ್ದರಿಂದ ಇಟಿಎಫ್‌ಗಳು ಭೌತಿಕ ಚಿನ್ನದಂತೆ ದ್ರವವಾಗಿರುತ್ತವೆ.
* ಚಿನ್ನದ ಇಟಿಎಫ್‌ಗಳು ಭೌತಿಕ ಚಿನ್ನದ ವಿಷಯದಲ್ಲಿ ಭಿನ್ನವಾಗಿದೆ. ಭೌತಿಕ ಚಿನ್ನ ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ಬೆಲೆಯನ್ನು ಹೊಂದಿರುತ್ತದೆ. ಆದರೆ ಇಟಿಎಫ್ ಇಡೀ ಭಾರತದಲ್ಲಿ ಒಂದೇ ಬೆಲೆಯನ್ನು ಹೊಂದಿರುತ್ತದೆ.
* ಭೌತಿಕ ಚಿನ್ನವನ್ನು ಆಭರಣದ ರೂಪದಲ್ಲಿ ಖರೀದಿಸುವಾಗ, ಮೇಕಿಂಗ್ ಚಾರ್ಜ್‌ಗಳ ರೂಪದಲ್ಲಿ ಶೇಕಡ 30ರವರೆಗೆ ಹೆಚ್ಚುವರಿ ಪಾವತಿಸಬೇಕಾಗಬಹುದು. ಗೋಲ್ಡ್ ಇಟಿಎಫ್‌ಗಳಾದರೆ ವೆಚ್ಚದ ಅನುಪಾತವು ಸುಮಾರು ಶೇಕಡ 1 ಆಗಿದ್ದರೆ, ಬ್ರೋಕರೇಜ್ ಸುಮಾರು ಶೇಕಡ 0.5 ಆಗಿದೆ. ರೀದಿಸಿದ ಭೌತಿಕ ಚಿನ್ನದ ಮೌಲ್ಯವು ರೂ. 30 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇಕಡ 1ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಚಿನ್ನದ ಇಟಿಎಫ್ ಹೂಲ್ಡಿಂಗ್ಸ್ ಗಳಿಗೆ ತೆರಿಗೆ ಇಲ್ಲ.

English summary

Akshaya Tritiya on 3 May: Should you buy physical gold or Gold ETF?

Should you buy physical gold or Gold ETF this Akshaya Tritiya on 3 May.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X