For Quick Alerts
ALLOW NOTIFICATIONS  
For Daily Alerts

ಈಗ ಖರೀದಿಸಿ, ಮತ್ತೆ ಪಾವತಿ ಮಾಡಿ: ಆಪಲ್‌ನಲ್ಲಿ ಈಗ ಸಾಲ ವ್ಯವಸ್ಥೆ

|

ಆಪಲ್ ಕೂಡಾ ಈಗ ಖರೀದಿಸಿ ಮತ್ತೆ ಪಾವತಿ ಮಾಡಿ ವ್ಯವಸ್ಥೆಯನ್ನು ಆರಂಭ ಮಾಡಿದೆ. ಈ ವಾರದ ಆರಂಭದಲ್ಲಿ ಈ ವ್ಯವಸ್ಥೆಯನ್ನು ಘೋಷಣೆ ಮಾಡಲಾಗಿದೆ. 2022ರ ಜಾಗತಿಕ ಮಟ್ಟದ ಡೆವಲಪರ್ಸ್ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯು ಈ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆರಂಭವಾಗಲಿದೆ.

ಆಪಲ್ ಪೇ ಮೂಲಕ ಮಾಡಲಾದ ಖರೀದಿಗೆ ಈ ಆಫರ್ ಲಭ್ಯವಾಗಲಿದೆ. ಯಾವುದೇ ಖರೀದಿಯನ್ನು ಈ ಮೂಲಕ ಮಾಡಬಹುದಾಗಿದೆ. ಜನರು ತಾವು ಖರೀದಿ ಮಾಡಿದ ಮೊತ್ತವನ್ನು ನಾಲ್ಕು ವಿಭಾಗವಾಗಿ ವಿಂಗಡನೆ ಮಾಡಬಹುದಾಗಿದೆ. ಯಾವುದೇ ಬಡ್ಡಿದರವಿಲ್ಲ, ಶುಲ್ಕವೂ ಇಲ್ಲ. ನಾಲ್ಕು ತಿಂಗಳ ಕಾಲ ಪಾವತಿಯನ್ನು ಇಎಂಐ ರೂಪದಂತೆ ಪಾವತಿ ಮಾಡಬಹುದಾಗಿದೆ.

ಆದರೆ ಗ್ರಾಹಕರ ಕ್ರೆಡಿಟ್ ಚೆಕ್ ಮಾಡಲಿದೆ. ಬಳಕೆದಾರರ ಆರ್ಥಿಕ ಸ್ಥಿತಿಯ, ಮನೋಭಾವನೆಯ ಬಗ್ಗೆ ತಿಳಿದುಕೊಂಡು ಈ ತಂತ್ರಜ್ಞಾನವನ್ನು ಆರಂಭ ಮಾಡಲಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ. ಆಪಲ್ ಮುಖ್ಯವಾಗಿ ತನ್ನ ಆದಾಯವನ್ನು ಅಧಿಕ ಮಾಡುವ ನಿಟ್ಟಿನಲ್ಲಿ ಈ ಹೊಸ ಫೀಚರ್ ಆರಂಭ ಮಾಡಿದೆ. ಆದರೆ ಈ ಸಂದರ್ಭದಲ್ಲೇ ಇಂತಹ ಸೇವೆಯನ್ನು ಪಡೆಯುವುದರ ಅಪಾಯವನ್ನು ಕೂಡಾ ಗ್ರಾಹಕರು ತಿಳಿದಿರಬೇಕು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಹಲವು ಆಪ್‌ಗಳೊಂದಿಗೆ ಸ್ಪರ್ಧೆಗೆ ಆಪಲ್ ಸಜ್ಜು

ಹಲವು ಆಪ್‌ಗಳೊಂದಿಗೆ ಸ್ಪರ್ಧೆಗೆ ಆಪಲ್ ಸಜ್ಜು

ಆಪಲ್ ಈ ಪೇ ಲೇಟರ್ ವ್ಯವಸ್ಥೆಯ ಮೂಲಕ ಈ ರೀತಿಯ ವ್ಯವಸ್ಥೆಯನ್ನು ಹೊಂದಿರುವ ಆಪ್‌ಗಳೊಂದಿಗೆ ಸ್ಪರ್ಧೆಗೆ ಇಳಿಯಲಿದೆ. ಪ್ರಮುಖವಾಗಿ ಪೇಪಲ್, ಬ್ಲಾಕ್, ಕ್ಲರ್ನ, ಆಫ್ಟರ್ ಪೇಗೆ ಆಪಲ್ ಪೇ ಸ್ಪರ್ಧೆ ನೀಡಲಿದೆ. ಆಪಲ್ ತನ್ನ ಬ್ರಾಂಡ್ ನೇಮ್‌ನಿಂದಲೇ ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

 ಈ ವ್ಯವಸ್ಥೆ ಎಲ್ಲೆಲ್ಲಿ ಮೆಚ್ಚುಗೆ, ಆರಂಭ?

ಈ ವ್ಯವಸ್ಥೆ ಎಲ್ಲೆಲ್ಲಿ ಮೆಚ್ಚುಗೆ, ಆರಂಭ?

ಯುಎಸ್‌ನ ಶೇಕಡ 85ರಷ್ಟು ಚಿಲ್ಲರೆ ವ್ಯಾಪಾರಿಗಳು ಈ ಸೇವೆಗೆ ಸಮ್ಮತಿ ಸೂಚಿಸಿದ್ದಾರೆ. ಇನ್ನು ಆಸ್ಟೇಲಿಯಾದಲ್ಲ ಖರೀದಿ ಮಾಡಿ ಬಳಿಕ ಪಾವತಿ ಮಾಡುವ ವಿಧಾನವನ್ನು ಶೇಕಡ 26ರಷ್ಟು ವ್ಯಾಪಾರಿಗಳು ಸಮ್ಮತಿಸಿದ್ದಾರೆ. ಈಗ ಆಪಲ್ ಈ ಸೇವೆ ಆರಂಭಕ್ಕೆ ಮುಂದಾಗಿದೆ. ಇನ್ನು ಆಪಲ್‌ ಪೇ ಮೂಲಕ ತಮ್ಮ ವಸ್ತು ಮಾರಾಟ ಮಾಡಲು ಸಂಸ್ಥೆಗಳು ಈ ಆಪಲ್ ಪೇಗೆ ಪಾವತಿ ಮಾಡಬೇಕಾಗುತ್ತದೆ. ಈ ಮೂಲಕವೂ ಆಪಲ್ ಹಣವನ್ನು ಸಂಪಾದನೆ ಮಾಡುತ್ತದೆ. ಇನ್ನು ಈ ಖರೀದಿ ಮಾಡಿ ಬಳಿಕ ಪಾವತಿ ಮಾಡುವ ವಿಧಾನವನ್ನು ಜಾರಿಗೆ ತರಲು ಆಪಲ್ ಗೋಲ್ಡ್‌ಮ್ಯಾನ್ ಸಾಚ್ಸ್ ಜೊತೆ ಕೈಜೋಡಿಸಿದೆ.

 ಗ್ರಾಹಕರ ಮುಂದಿರುವ ಸವಾಲುಗಳು ಏನು?

ಗ್ರಾಹಕರ ಮುಂದಿರುವ ಸವಾಲುಗಳು ಏನು?

ಎಲ್ಲಾ ಗ್ರಾಹಕರಿಗೆ ಖರೀದಿ ಮಾಡಿ ಬಳಿಕ ಪಾವತಿ ಮಾಡುವ ವ್ಯವಸ್ಥೆಯು ಉತ್ತಮವಾಗಲಾರದು. ಮಧ್ಯಮ, ತಳಮಟ್ಟದ ಆರ್ಥಿಕ ಸ್ಥಿತಿ ಹೊಂದಿರುವ ಕುಟುಂಬಗಳು ಈ ವ್ಯವಸ್ಥೆಯ ಮೂಲಕ ಖರೀದಿ ಮಾಡಿ ಬಳಿಕ ಸಾಲದ ಹೊರೆಯಲ್ಲಿ ಮುಳುಗುವ ಸಾಧ್ಯತೆಗಳು ಇದೆ. ಇನ್ನು ಸಂಶೋಧನೆಯ ಪ್ರಕಾರ ಮೊದಲು ಖರೀದಿ ಮಾಡಿ ಬಳಿಕ ಪಾವತಿ ಮಾಡುವ ವ್ಯವಸ್ಥೆಯು ಜನರಲ್ಲಿ ತಮ್ಮ ಆರ್ಥಿಕ ಮಿತಿಯನ್ನು ಮೀರಿ ವಸ್ತುಗಳನ್ನು ಖರೀದಿ ಮಾಡುವ ಆಸೆಗೆ ದೂಡುತ್ತದೆ ಎಂದು ಹೇಳುತ್ತದೆ. ಇನ್ನು ಈ ಪಾವತಿ ವಿಧಾನದಲ್ಲಿ ಕೆಲವು ಷರತ್ತುಗಳು ಕೂಡಾ ಇರುವ ಸಾಧ್ಯತೆ ಇದೆ.

 ಯುವಕರ ಮೇಲಿನ ಪ್ರಭಾವ

ಯುವಕರ ಮೇಲಿನ ಪ್ರಭಾವ

ಸಂಶೋಧನೆಯ ಪ್ರಕಾರ ಈ ವ್ಯವಸ್ಥೆಯು ಹೆಚ್ಚಾಗಿ ಯುವಕರನ್ನು ಸೆಳೆಯುತ್ತದೆ. ಹಾಗೆಯೇ ಯುವಕರೇ ಅಧಿಕವಾಗಿ ಈ ರೀತಿ ಖರೀದಿ ಮಾಡಿ ಬಳಿಕ ಸಾಲದ ಹೊರೆಯಲ್ಲಿ ಬೀಳುತ್ತಾರೆ. ನಾವು ಈ ವ್ಯವಸ್ಥೆಯಲ್ಲಿ ಒಂದು ಕಂತು ಪಾವತಿಯನ್ನು ಮಾಡುವುದನ್ನು ಕೂಡಾ ಮಿಸ್ ಮಾಡಿದರೂ ಅದು ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

English summary

Apple Pay Later : Buy now, pay later: Apple will now lend you money to keep you spending

Apple Pay Later : Apple has joined buy now, pay later industry, with a customized service called Apple Pay Later. Know more.
Story first published: Thursday, June 9, 2022, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X