For Quick Alerts
ALLOW NOTIFICATIONS  
For Daily Alerts

ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ...

|

ಪ್ರಸ್ತುತ ಶಿಕ್ಷಣ ಎಂಬುವುದು ಅತೀ ಮುಖ್ಯವಾಗಿದೆ. ನಾವು ಪದವಿ, ಸ್ನಾತಕೋತ್ತರ ಮಾಡಿದರೂ ಅದಕ್ಕೆ ಅಧಿಕ ಮೌಲ್ಯವಿಲ್ಲದಂತಾಗಿದೆ. ಉನ್ನತ ಶಿಕ್ಷಣ ಪಡೆದಷ್ಟು ಉತ್ತಮ ಎಂಬ ಕಾಲ ಇದಾಗಿದೆ. ಆದರೆ ಈ ನಡುವೆ ಶಿಕ್ಷಣ ಶುಲ್ಕ ಕೂಡಾ ಗಗನಕ್ಕೆ ಏರಿದೆ. ಶಿಕ್ಷಣದ ವ್ಯಾಪಾರೀಕರಣದ ನಡುವೆ ನಾವು ಶೈಕ್ಷಣಿಕವಾಗಿ ಬಲಗೊಳ್ಳಲು ಸಾಲ ಅನೀವಾರ್ಯವಾಗಿದೆ. ಆದರೆ ನಾವು ಸಾಲ ಪಡೆಯುವ ಮುನ್ನ ಹಲವಾರು ಅಂಶಗಳನ್ನು ತಿಳಿದಿರಬೇಕಾಗುತ್ತದೆ.

ಹಲವಾರು ಮಂದಿ ಶಿಕ್ಷಣವನ್ನು ಪಡೆಯಲು ಸಾಲವನ್ನು ಮಾಡಿಕೊಳ್ಳುತ್ತಾರೆ. ಬ್ಯಾಂಕ್‌ಗಳಲ್ಲಿ ಶಿಕ್ಷಣಕ್ಕಾಗಿ ಸಾಲ ಲಭ್ಯವಾಗುತ್ತದೆಯಾದರೂ ಅದರ ಬಡ್ಡಿದರ ಮಾತ್ರ ತೀವ್ರ ಹೆಚ್ಚಳವಾಗಿದೆ. ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ ಬಳಿಕ ಈ ಶಿಕ್ಷಣ ಸಾಲದ ಬಡ್ಡಿದರ ಇನ್ನಷ್ಟು ಹೆಚ್ಚಳವಾಗುತ್ತಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುವುದಂತೂ ತೀರಾ ದುಬಾರಿಯಾಗಿದೆ.

ಶಿಕ್ಷಣ ಸಾಲ: ಬಾಕಿ ಉಳಿಸಿಕೊಂಡ ಸಾಲಗಾರರಲ್ಲಿ ನರ್ಸಿಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚು!ಶಿಕ್ಷಣ ಸಾಲ: ಬಾಕಿ ಉಳಿಸಿಕೊಂಡ ಸಾಲಗಾರರಲ್ಲಿ ನರ್ಸಿಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚು!

ನೀವು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಹಲವಾರು ವಿಚಾರಗಳನ್ನು ತಿಳಿದಿರುವುದು ಮುಖ್ಯವಾಗಿದೆ. ಇಲ್ಲಿ ನಾವು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಮಾನದಂಡ, ಅರ್ಜಿ ತಿರಸ್ಕೃತವಾದರೆ ಮಾಡುವುದು ಏನು, ಶಿಕ್ಷಣ ಸಾಲಕ್ಕೆ ಎಷ್ಟು ತೆರಿಗೆ, ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ....

 ಶಿಕ್ಷಣ ಸಾಲ ಪಡೆಯಲು ಬೇಕಾದ ಅರ್ಹತೆ

ಶಿಕ್ಷಣ ಸಾಲ ಪಡೆಯಲು ಬೇಕಾದ ಅರ್ಹತೆ

ಶಿಕ್ಷಣ ಸಾಲಕ್ಕೆ ಎಲ್ಲಾ ಸಾಲ ನೀಡುವ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಒಂದು ಮಾನದಂಡವನ್ನು ನಿಗದಿ ಮಾಡಿರುತ್ತದೆ. ಪ್ರಮುಖವಾಗಿ ನಾವು ಶಿಕ್ಷಣ ಪಡೆಯಲು ಬಯಸುವ ಸಂಸ್ಥೆಯು ಯುಜಿಸಿ ಅಥವಾ ಎಐಸಿಟಿಇ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿರಬೇಕು. ಅಥವಾ ಐಐಟಿ/ಐಐಎಂ ಆಗಿರಬೇಕು. ಸಾಮಾನ್ಯ ಕೋರ್ಸ್‌ಗಳಿಗೆ ಬ್ಯಾಂಕ್‌ಗಳು 25 ಲಕ್ಷದಿಂದ 50 ಲಕ್ಷದವರೆಗೆ ಶುಲ್ಕಕ್ಕಾಗಿ ಸಾಲವನ್ನು ನೀಡುತ್ತದೆ. ಆದರೆ ಸಂಸ್ಥೆ ಹಾಗೂ ಕೋರ್ಸ್ ಅನ್ನು ಆಧಾರಿಸಿ ಸಾಲದ ಮೊತ್ತ ಬದಲಾವಣೆ ಆಗುತ್ತದೆ. ನಾಲ್ಕು ಲಕ್ಷಕ್ಕಿಂತ ಅಧಿಕ ಮೊತ್ತದ ಸಾಲವಾದರೆ ಬ್ಯಾಂಕ್‌ಗಳು ಒಟ್ಟು ಅಗತ್ಯವಿರುವ ಸಾಲದ ಶೇಕಡ ಐದರಷ್ಟು ನೀಡಬಹುದು. ಆದರೆ ಎಲ್ಲವೂ ಕೋರ್ಸ್ ಮೇಲೆ ಆಧಾರಿತವಾಗಿರುತ್ತದೆ. ಹಾಗೆಯೇ ಕ್ರೆಡಿಟ್ ಸ್ಕೋರ್ ಕೂಡಾ ನೋಡಲಾಗುತ್ತದೆ. 7.5 ಲಕ್ಷ ಸಾಲವಾದರೆ ಪೋಷಕರನ್ನು ಸಹ ಸಾಲಗಾರರನ್ನಾಗಿ ಪರಿಗಣಿಸಿ ಸಾಲವನ್ನು ನೀಡಲಾಗುತ್ತದೆ. 7.5 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಸಾಲಕ್ಕೆ ಬೇರೆ ಸೊತ್ತನ್ನು ಅಡವಿಡಬೇಕಾಗುತ್ತದೆ. ಭಾರತದಲ್ಲಿ ಗರಿಷ್ಠ 15 ವರ್ಷಗಳ ಮರುಪಾವತಿ ಅವಧಿ ಇದೆ.

 ಶಿಕ್ಷಣ ಸಾಲದಲ್ಲಿ ಏನೆಲ್ಲಾ ಸೇರುತ್ತದೆ?

ಶಿಕ್ಷಣ ಸಾಲದಲ್ಲಿ ಏನೆಲ್ಲಾ ಸೇರುತ್ತದೆ?

ಶಿಕ್ಷಣ ವೆಚ್ಚ, ಹಾಸ್ಟೆಟ್ ವ್ಯವಸ್ಥೆಗಾಗಿ ತಗುಲುವ ವೆಚ್ಚ, ಸಮವಸ್ತ್ರ, ಗ್ರಂಥಾಲಯ/ಪ್ರಯೋಗಾಲಯ, ಕೋರ್ಸ್‌ಗೆ ಬೇಕಾದ ಬೇರೆ ಸೌಲಭ್ಯ, ಮರುಪಾವತಿ ಮಾಡಲಾಗುವ ಡೆಪಾಸಿಟ್, ಸಾರಿಗೆ ವೆಚ್ಚ ಮೊದಲಾದವುಗಳು ಈ ಶಿಕ್ಷಣ ಸಾಲದಲ್ಲೇ ಒಳಗೊಳ್ಳುತ್ತದೆ. ನಿಮ್ಮ ಸಾಲದ ಷರತ್ತು ಹಾಗೂ ನಿಯಮದಂತೆ ಎಲ್ಲಾ ವೆಚ್ಚದ ಬಿಲ್‌ಗಳು ಅಗತ್ಯವಾಗಿದೆ. ಇತರೆ ಖರ್ಚುಗಳಿಗೆ ಸರಿಯಾದ ಕಾರಣ ಮತ್ತು ದಾಖಲೆಗಳನ್ನು ನೀಡಿದರೆ ಬ್ಯಾಂಕ್‌ಗಳು ಇತರೆ ಖರ್ಚನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳುತ್ತದೆ.

 ಸಾಲದ ಅರ್ಜಿ ತಿರಸ್ಕೃತವಾದರೆ ಏನು ಮಾಡುವುದು?

ಸಾಲದ ಅರ್ಜಿ ತಿರಸ್ಕೃತವಾದರೆ ಏನು ಮಾಡುವುದು?

ಈ ನಡುವೆ ನಿಮ್ಮ ಸಾಲದ ಅರ್ಜಿ ತಿರಸ್ಕೃತವಾದರೆ ನೀವು ಏನು ಮಾಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಿಮ್ಮ ಅರ್ಜಿ ಯಾಕೆ ತಿರಸ್ಕೃತವಾಗಿದೆ ಎಂದು ನೀವು ತಿಳಿಯುವುದು ಅತೀ ಮುಖ್ಯವಾಗಿದೆ. ಕಾರಣ ತಿಳಿದರೆ ಮಾತ್ರ ನಿಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಾಗಲಿದೆ. ಅರ್ಜಿ ತಿರಸ್ಕಾರ ಮಾಡಲು ಹಲವಾರು ಕಾರಣಗಳು ಇರಬಹುದು. ಕ್ರೆಡಿಟ್ ಸ್ಕೋರ್, ಅರ್ಹತೆಗೂ ಅಧಿಕ ಸಾಲಕ್ಕಾಗಿ ಅರ್ಜಿ, ಯಾವುದೇ ಸಹ ಸಾಲಗಾರರು ಇಲ್ಲದಿರುವುದು (ಪೋಷಕರು/ಪಾಲಕರ ನಾಮಿನಿ), ಶಿಕ್ಷಣ ಸಂಸ್ಥೆ ಯುಜಿಸಿ ಅಥವಾ ಎಐಸಿಟಿಇ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಆಗದೆ ಇದ್ದಲ್ಲಿ ನಿಮಗೆ ಸಾಲ ಲಭ್ಯವಾಗದು. ಹೀಗಾದಾಗ ನೀವು ಎನ್‌ಬಿಎಫ್‌ಸಿಯನ್ನು ಸಂಪರ್ಕಿಸಿ ಸಾಲಕ್ಕಾಗಿ ಮನವಿ ಮಾಡಬೇಕಾಗುತ್ತದೆ. ಹಲವಾ ಎನ್‌ಬಿಎಫ್‌ಸಿಗಳು ಷರತ್ತನ್ನು ಕೊಂಚ ಸಡಿಲಿಕೆ ಮಾಡಿ ಸಾಲವನ್ನು ನೀಡುತ್ತದೆ. ಆದರೆ ಇದಕ್ಕೆ ತೀರಾ ಅಧಿಕ ಬಡ್ಡಿದರವಿರುತ್ತದೆ ಹಾಗೂ ಪ್ರೋಸೆಸಿಂಗ್ ಚಾರ್ಜ್ ಕೂಡಾ ಅಧಿಕವಾಗಿರುತ್ತದೆ.

 ಶಿಕ್ಷಣ ಸಾಲಕ್ಕೆ ಎಷ್ಟು ಬಡ್ಡಿದರ?

ಶಿಕ್ಷಣ ಸಾಲಕ್ಕೆ ಎಷ್ಟು ಬಡ್ಡಿದರ?

*ಪಿಎನ್‌ಬಿ, ಶೇಕಡ 6.95 ಬಡ್ಡಿದರ
*ಎಸ್‌ಬಿಐ, ಶೇಕಡ 7.00 ಬಡ್ಡಿದರ
*ಬ್ಯಾಂಕ್ ಆಫ್ ಬರೋಡ, ಶೇಕಡ 7.45 ಬಡ್ಡಿದರ
*ಐಸಿಐಸಿಐ ಬ್ಯಾಂಕ್, ಶೇಕಡ 9.25 ಬಡ್ಡಿದರ, ಶೇಕಡ 2ಕ್ಕಿಂತ *ಅಧಿಕ ಪ್ರೋಸೆಸಿಂಗ್ ಚಾರ್ಜ್+ಜಿಎಸ್‌ಟಿ
*ಆಕ್ಸಿಸ್ ಬ್ಯಾಂಕ್, ಶೇಕಡ 13.70 ಬಡ್ಡಿದರ, 10 ಲಕ್ಷದವರೆಗಿನ *ಸಾಲಕ್ಕೆ ಪ್ರೋಸೆಸಿಂಗ್ ಚಾರ್ಜ್ ಇಲ್ಲ
*ಎಚ್‌ಡಿಎಫ್‌ಸಿ ಕ್ರೆಡಿಲಾ, ಶೇಕಡ 11.55 ಬಡ್ಡಿದರ
*ಟಾಟಾ ಕ್ಯಾಪಿಟಲ್, ಶೇಕಡ 10.99 ಬಡ್ಡಿದರ, 2.75 *ಪ್ರೋಸೆಸಿಂಗ್ ಚಾರ್ಜ್+ಜಿಎಸ್‌ಟಿ

 ಶಿಕ್ಷಣ ಸಾಲಕ್ಕೆ ತೆರಿಗೆ ಪ್ರಯೋಜನ

ಶಿಕ್ಷಣ ಸಾಲಕ್ಕೆ ತೆರಿಗೆ ಪ್ರಯೋಜನ

ಸಾಲ ಪಡೆಯುವವರು ಸೆಕ್ಷನ್ 80E ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಪ್ರಮಾಣಿತ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ಗಳಿಂದ ಸಾಲ ಪಡೆದರೆ ಮಾತ್ರ ಈ ಪ್ರಯೋಜನ ಲಭ್ಯವಾಗಲಿದೆ. ನಿಮ್ಮ ಶಿಕ್ಷಣ ಸಾಲ ಅರ್ಜಿಯನ್ನು ಸಲ್ಲಿಕೆ ಮಾಡುವ ಮೊದಲು ಶಿಕ್ಷಣ ಪಡೆಯುವ ಸಂಸ್ಥೆಯ ಬಗ್ಗೆ, ಬ್ಯಾಂಕ್ ಬಗ್ಗೆ, ನಿಮ್ಮ ಮುಂದಿನ ಗುರಿಯ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ.

English summary

Planning to Take an Education Loan? Here's what you should know in Kannada

Providing the best education is what most parents want for their children. Applying for an Education Loan? You Should Know First. explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X