For Quick Alerts
ALLOW NOTIFICATIONS  
For Daily Alerts

17 ವರ್ಷದ ದಾಖಲೆ ಮುರಿದ ಸಗಟು ಹಣದುಬ್ಬರ: ಏ. ಶೇ15.08ಕ್ಕೆ ಏರಿಕೆ

|

ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡ 14.5 ಆಗಿತ್ತು. ಆದರೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 15.08ಕ್ಕೆ ಏರಿಕೆ ಕಂಡಿದೆ. ಆಹಾರ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ ಎಂದು ಮಂಗಳವಾರ ಅಧಿಕೃತ ಅಂಕಿಅಂಶಗಳು ತೋರಿಸಿವೆ. ಸುಮಾರು 17 ವರ್ಷದ ದಾಖಲೆಯನ್ನು ಏಪ್ರಿಲ್ ತಿಂಗಳಿನ ಸಗಟು ಹಣದುಬ್ಬರ ಮುರಿದಿದೆ.

 

ಏಪ್ರಿಲ್ ತಿಂಗಳಿನಲ್ಲಿ ಸಗಟು ಹಣದುಬ್ಬರವು ಭಾರತದಲ್ಲಿ ಶೇಕಡಾ 15.08 ಕ್ಕೆ ಏರಿದೆ, ಇದು ಕನಿಷ್ಠ 17 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಸರ್ಕಾರದ ಇತ್ತೀಚಿನ ಅಂಕಿಅಂಶಗಳು ತೋರಿಸಿವೆ. ಸಗಟು ಬೆಲೆ ಸೂಚ್ಯಂಕದಿಂದ (ಡಬ್ಲ್ಯುಪಿಐ) ಅಳೆಯಲ್ಪಡುವ ಈ ಹಣದುಬ್ಬರವು ಈಗ ಒಂದು ವರ್ಷದಿಂದ ಎರಡಂಕಿಗಳಲ್ಲಿ ಉಳಿದಿದೆ. ಹೆಚ್ಚಿನ ಜಾಗತಿಕ ಕಚ್ಚಾ ತೈಲದ ಕಾರಣದಿಂದಾಗಿ ಮುಂದಿನ ಕೆಲವು ತಿಂಗಳುಗಳವರೆಗೆ ಬೆಲೆ ಏರಿಕೆಯ ದರವು ಎರಡಂಕಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಹೇಳಿದರು.

ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗಲು ಕಾರಣ ಗೊತ್ತಾ?

ಸಗಟು ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡ 10.71ರಿಂದ ಶೇಕಡ 10.85ರಷ್ಟು ಏರಿಕೆಯಾಗಿದೆ. ಆದರೆ ಆಹಾರದ ಬೆಲೆಗಳು ಹಿಂದಿನ ತಿಂಗಳಿಗೆ ಹೋಲಿಸಿದರೆ ಕೊಂಚ ಏರಿಕೆ ಕಂಡಿದೆ. ಹಿಂದಿನ ತಿಂಗಳು ಆಹಾರದ ಹಣದುಬ್ಬರವು ಶೇಕಡ 8.71 ಆಗಿತ್ತು. ಆದರೆ ಈ ತಿಂಗಳು ಶೇಕಡ 8.88ಕ್ಕೆ ಏರಿದೆ ಎಂದು ಡೇಟಾ ತೋರಿಸಿದೆ.

17 ವರ್ಷದ ದಾಖಲೆ ಮುರಿದ ಸಗಟು ಹಣದುಬ್ಬರ: ಏ. ಶೇ15.08ಕ್ಕೆ ಏರಿಕೆ

ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ದತ್ತಾಂಶವು ಭಾರತದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡ 7.79ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ. ಇದು ಎಂಟು ವರ್ಷಗಳಲ್ಲಿ ಅತ್ಯಂತ ವೇಗವಾದ ಏರಿಕೆಯಾಗಿದೆ. ಆಹಾರ ಮತ್ತು ಇಂಧನ ಬೆಲೆಗಳ ಏರಿಕೆಯಿಂದಾಗಿ ದೇಶದಲ್ಲಿ ಹಣದುಬ್ಬರ ಏರಿಕೆ ಕಾಣುತ್ತಿದೆ.

ಹಣದುಬ್ಬರ ಏರಿಕೆಗೆ ಕಾರಣವೇನು?

ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಪದಾರ್ಥಗಳಾದ ಗೋಧಿ, ಹಣ್ಣುಗಳು ಮತ್ತು ತರಕಾರಿಗಳು, ಮೂಲ ಲೋಹಗಳು ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.

English summary

April WPI inflation at record 15.08% : Wholesale Inflation Jumps To Record High

April WPI inflation : Wholesale inflation (WPI) in the country has spiked to a record high of 15.08 per cent in the month of April.
Story first published: Tuesday, May 17, 2022, 14:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X