For Quick Alerts
ALLOW NOTIFICATIONS  
For Daily Alerts

ಅಶ್ನೀರ್ ಗ್ರೋವರ್ 8 ನಿಮಿಷದಲ್ಲೇ 2.25 ಕೋಟಿ ರೂ ಗಳಿಸಿದ್ದು ಹೇಗೆ?

|

ಭಾರತ್‌ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಈ ಹಿಂದೆ ಅಂದರೆ 2021ರಲ್ಲಿ ಕೇವಲ ಎಂಟು ನಿಮಿಷದಲ್ಲಿಯೇ ಬರೋಬ್ಬರಿ 2.25 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆದರೆ ಅಷ್ಟು ಮೊತ್ತವನ್ನು ಬರೀ ಎಂಟು ನಿಮಿಷದಲ್ಲಿ ಸಂಪಾದಿಸಿದ್ದು ಹೇಗೆ ನೋಡಿ....

 

ಭಾರತ್‌ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ 2021ರಲ್ಲಿ ಷೇರು ಮಾರುಕಟ್ಟೆಯಲ್ಲಿ ನಡೆದ ಜೊಮ್ಯಾಟೊ ಐಪಿಒ ಮೂಲಕ ಬರೀ 8 ನಿಮಿಷದಲ್ಲೇ 2.25 ಕೋಟಿ ರೂಪಾಯಿಯನ್ನು ಸಂಪಾದಿಸಿದ್ದಾರೆ. ಈ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖ ಮಾಡಿದ್ದಾರೆ. ತಾನು ಹೇಗೆ ಇಷ್ಟೊಂದು ಹಣವನ್ನು ಸಂಪಾದನೆ ಮಾಡಿದೆ ಎಂದು ವಿವರಿಸಿದ್ದಾರೆ.

Year Ender 2022: 2023ರಲ್ಲಿ 89 ಕಂಪನಿಗಳ ಐಪಿಒ, ಯಾವುದು ನೋಡಿYear Ender 2022: 2023ರಲ್ಲಿ 89 ಕಂಪನಿಗಳ ಐಪಿಒ, ಯಾವುದು ನೋಡಿ

"ಡಾಗ್‌ಲಾಪ್ಯಾನ್: ದಿ ಹಾರ್ಡ್ ಟ್ರುತ್ ಅಬೌಟ್ ಲೈಫ್ ಆಂಡ್ ಸ್ಟಾರ್ಟ್‌ಅಪ್ಸ್" ಎಂಬ ತನ್ನ ಆತ್ಮಚರಿತ್ರೆಯಲ್ಲಿ ಅಶ್ನೀರ್ ಗ್ರೋವರ್ ಕೆಲವೇ ಕೆಲವು ನಿಮಿಷದಲ್ಲಿ ಕೋಟ್ಯಾಂತರ ರೂಪಾಯಿ ಗಳಿಸಿದ್ದು ಹೇಗೆ ಎಂದು ವಿವರಿಸಿದ್ದಾರೆ. ಹಾಗೆಯೇ ಇದು ಐಪಿಒ ಮೂಲಕ ಎಂದು ಕೂಡಾ ಉಲ್ಲೇಖಿಸಿದ್ದಾರೆ.

 ಐಪಿಒ ಮೂಲಕ ಹಣ ಸಂಪಾದನೆ

ಐಪಿಒ ಮೂಲಕ ಹಣ ಸಂಪಾದನೆ

"ಐಪಿಒ ಹೂಡಿಕೆ ಮೂಲಕ ಈ ಸಂಪಾದನೆಯನ್ನು ಮಾಡಲು ಸಾಧ್ಯವಾಗಿದೆ. ನಾನು 5 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದದಾಗ ವಾರಕ್ಕೆ ಶೇಕಡ 10ರಷ್ಟು ಬಡ್ಡಿದರದಂತೆ 95 ಕೋಟಿ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಅಧಿಕವಾಗಿ 20 ಲಕ್ಷ ರೂಪಾಯಿ ಷೇರಿಗೆ ವೆಚ್ಚವಾಗಲಿದೆ," ಎಂದು ಅಶ್ನೀರ್ ಗ್ರೋವರ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

 8 ನಿಮಿಷದಲ್ಲೇ ಎಲ್ಲ ಷೇರು ಮಾರಾಟ

8 ನಿಮಿಷದಲ್ಲೇ ಎಲ್ಲ ಷೇರು ಮಾರಾಟ

ಅಧಿಕವಾಗಿ ಚಂದಾದಾರಿಕೆ ಮಾಡಿರುವ ಕಾರಣದಿಂದಾಗಿ ಗ್ರೋವರ್‌ ಈ ಆಹಾರ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೊದಲ್ಲಿ 3 ಕೋಟಿ ರೂಪಾಯಿಯ ಷೇರುಗಳು ಅಥವಾ ಪ್ರತಿ ಷೇರಿಗೆ 76 ರೂಪಾಯಿಯಂತೆ ಖರೀದಿಸಲು ಅವಕಾಶ ದೊರೆತಿದೆ. ಈ ಎಲ್ಲ ಷೇರುಗಳನ್ನು ಗ್ರೋವರ್‌ ಪ್ರತಿ ಷೇರಿಗೆ 136 ರೂಪಾಯಿಯಂತೆ 8 ನಿಮಿಷದಲ್ಲಿ ಮಾರಾಟ ಮಾಡಿದ್ದಾರೆ. ಜುಲೈ 2021ರಲ್ಲಿ ಸ್ಟಾಕ್ ಬೆಲೆ 116 ರೂಪಾಯಿ ಆಗಿತ್ತು, ಆದರೆ ಅಧಿಕ ಮೊತ್ತಕ್ಕೆ ಮಾರಾಟ ಮಾಡಿ, ಇಷ್ಟೊಂದು ಹಣವನ್ನು ಸಂಪಾದನೆ ಮಾಡಿದ್ದಾರೆ.

 ಟೀಕೆಗೆ ಒಳಗಾದ ಗ್ರೋವರ್
 

ಟೀಕೆಗೆ ಒಳಗಾದ ಗ್ರೋವರ್

"ಎಲ್ಲ ಷೇರುಗಳ ಮಾರಾಟವಾದ ಬಳಿಕ ನನಗೆ ಪ್ರತಿ ಷೇರಿಗೆ 136 ರೂಪಾಯಿಯಂತೆ ಮೊತ್ತ ಲಭ್ಯವಾಗಿದೆ. ಬಡ್ಡಿದರ ಬಳಿಕ ನಾನು ಸುಮಾರು 2.25 ಕೋಟಿ ರೂಪಾಯಿ ಮೊತ್ತವನ್ನು ಸಂಪಾದನೆ ಮಾಡಿದ್ದೇನೆ," ಎಂದು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಬಳಿಕ 2021ರಲ್ಲೇ ನಾಯ್ಕ ಷೇರುಗಳನ್ನು ನೀಡದಿರುವ ಬ್ಯಾಂಕಿನ ನಿರ್ಧಾರದ ಬಗ್ಗೆ ಕೋಟಾಕ್ ಮಹೀಂದ್ರಾ ಬ್ಯಾಂಕ್‌ನ ಸಿಬ್ಬಂದಿಗಳೊಂದಿಗೆ ವಾದ ಮಾಡಿ ಕಾರಣಕ್ಕೆ ಗ್ರೋವರ್ ವಿರುದ್ಧ ಟೀಕೆ ವ್ಯಕ್ತವಾಗಿದೆ. ಅಶ್ನೀರ್ ಗ್ರೋವರ್ ನೈಕಾ ಐಪಿಒ ಹಂಚಿಕೆಯನ್ನು ಪಡೆಯಲು ಕೋಟಾಕ್ ಬ್ಯಾಂಕ್ ಸಿಬ್ಬಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಶ್ನೀರ್ ಗ್ರೋವರ್ ಅದನ್ನು ಟೀಕೆ ಮಾಡಿದ್ದಾರೆ.

English summary

Ashneer Grover Earned Rs 2.25 Crore in Just 8 minutes, How Explained in Kannada

Ashneer Grover, Former BharatPe MD, earned a nice Rs 2.25 crore in 8 minutes during Zomato's massive IPO on the stock market in 2021.
Story first published: Tuesday, December 27, 2022, 10:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X