ಎಫ್‌ಡಿ ಬಡ್ಡಿದರ ಏರಿಸಿದ ಆಕ್ಸಿಸ್ ಬ್ಯಾಂಕ್, ನೂತನ ದರಪಟ್ಟಿ ನೋಡಿ
ಆಕ್ಸಿಸ್ ಬ್ಯಾಂಕ್ ಶುಕ್ರವಾರ (ಸೆಪ್ಟೆಂಬರ್ 9) ಮತ್ತೆ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್ ಏರಿಕೆ ಮಾಡಿದೆ. ಈ ವಾರದಲ್ಲಿ ಎರಡನೇ ಬಾರಿಗೆ ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸಿದೆ.
2022ರ ಸೆಪ್ಟೆಂಬರ್ 9ರಂದು ಈ ಹೊಸ ಎಫ್‌ಡಿ ಬಡ್ಡಿದರವು ಜಾರಿಗೆ ಬರಲಿದೆ. ಬ್ಯಾಂಕ್‌ನ ಅಧಿಕೃತ ಮಾಹಿತಿ ಪ್ರಕಾರ 7 ದಿನದಿಂದ 6 ತಿಂಗಳ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವು 25 ಮೂಲಾಂಕ ಏರಿಕೆ ಮಾಡಲಾಗಿದೆ. ಇನ್ನು 7ರಿಂದ 19 ದಿನದಲ್ಲೆ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 2.75ರಷ್ಟು ಬಡ್ಡಿದರ ನೀಡುತ್ತದೆ.
ಇನ್ನು 30 ದಿನದಿಂದ 3 ತಿಂಗಳಿನಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 3.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ಈ ನೂತನ ಬಡ್ಡಿದರ ಏರಿಕೆಯು ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕರ ಎಫ್‌ಡಿ ಮೇಲೆ ಅನ್ವಯವಾಗಲಿದೆ. ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಪರಿಷ್ಕರಣೆ ಮಾಡಿದಾಗ ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಹಾಗೂ ಸಾಲದ ಬಡ್ಡಿದರವನ್ನು ಕೂಡಾ ಪರಿಷ್ಕರಿಸುತ್ತದೆ. ಆಕ್ಸಿಸ್ ಬ್ಯಾಂಕ್‌ನ ನೂತನ ಎಫ್‌ಡಿ ದರಪಟ್ಟಿ ಎಷ್ಟಿದೆ ನೋಡಿ.

ಆಕ್ಸಿಸ್ ಬ್ಯಾಂಕ್ ನೂತನ ಬಡ್ಡಿದರ ಪಟ್ಟಿ
7-14 ದಿನ: ಸಾಮಾನ್ಯ ನಾಗರಿಕರು ಶೇಕಡ 2.75, ಹಿರಿಯ ನಾಗರಿಕರು ಶೇಕಡ 2.75
15-29 ದಿನ: ಸಾಮಾನ್ಯ ನಾಗರಿಕರು ಶೇಕಡ 2.75, ಹಿರಿಯ ನಾಗರಿಕರು ಶೇಕಡ 2.75
30-45 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
46-60 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
61 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
3 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
4 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
8.5 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
6 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.65, ಹಿರಿಯ ನಾಗರಿಕರು ಶೇಕಡ 4.9
7 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.4, ಹಿರಿಯ ನಾಗರಿಕರು ಶೇಕಡ 4.65
8 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.65, ಹಿರಿಯ ನಾಗರಿಕರು ಶೇಕಡ 4.9
9 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
10 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
11 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
11 ತಿಂಗಳು 25 ದಿನ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
1 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.45, ಹಿರಿಯ ನಾಗರಿಕರು ಶೇಕಡ 6.2
1 ವರ್ಷ 5 ದಿನ: ಸಾಮಾನ್ಯ ನಾಗರಿಕರು ಶೇಕಡ 5.45, ಹಿರಿಯ ನಾಗರಿಕರು ಶೇಕಡ 6.2
1 ವರ್ಷ 11 ದಿನ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.5
1 ವರ್ಷ 25 ದಿನ: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
13 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
14 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
15 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
16 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
17 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
18 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
2 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
30 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
3 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
5-10 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.5