For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಪರಿಷ್ಕರಿಸಿದ ಬಜಾಜ್ ಫೈನಾನ್ಸ್, ನೂತನ ದರ ಪರಿಶೀಲಿಸಿ

|

ಬಜಾಜ್ ಫಿನ್‌ಸರ್ವ್‌ನ ಹೂಡಿಕೆಗೆ ಅವಕಾಶ ನೀಡುವ ಹಾಗೂ ಸಾಲ ಸೌಲಭ್ಯವನ್ನು ಒದಗಿಸುವ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ ತನ್ನ ಫಿಕ್ಸಿಡ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ನೂತನ ಬಡ್ಡಿದರವು ನವೆಂಬರ್ 8, 2022ರಿಂದಲೇ ಜಾರಿಗೆ ಬರುತ್ತದೆ.

 

ಈ ನೂತನ ಬಡ್ಡಿದರವು 15 ಸಾವಿರ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗಿನ ಫಿಕ್ಸಿಡ್ ಡೆಪಾಸಿಟ್ ಮೇಲೆ ಈ ನೂತನ ಬಡ್ಡಿದರ ಅನ್ವಯವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಬಾರಿಗೆ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 5.9ರಷ್ಟಿದೆ.

ಈ ರೆಪೋ ದರ ಏರಿಕೆ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಆ ಸಂದರ್ಭದಲ್ಲಿ ಬಜಾಜ್ ಫೈನಾನ್ಸ್ ಕೂಡಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಸಿದೆ. ಈಗ ಮತ್ತೆ ಎರಡನೇ ಬಾರಿಗೆ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಬಡ್ಡಿದರ ಎಷ್ಟು ಹೆಚ್ಚಳ?

ಬಡ್ಡಿದರ ಎಷ್ಟು ಹೆಚ್ಚಳ?

ಬಜಾಜ್ ಫೈನಾನ್ಸ್ ಗ್ರಾಹಕರು ಪ್ರಸ್ತುತ ಡೆಪಾಸಿಟ್ ಮೇಲೆ ಶೇಕಡ 7.85ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಮೇ ತಿಂಗಳಿನಿಂದ ಆರ್‌ಬಿಐ ರೆಪೋ ದರವನ್ನು ಸುಮಾರು ನಾಲ್ಕು ಬಾರಿ ಹೆಚ್ಚಿಸಿದೆ. ಇದರಿಂದಾಗಿ ಬಜಾಜ್ ಫೈನಾನ್ಸ್ ಸೆಪ್ಟೆಂಬರ್ 30ರ ಬಳಿಕ ಎರಡನೇ ಬಾರಿಗೆ ಬಡ್ಡಿದರ ಏರಿಸಿದೆ. ಇನ್ನು ಆರ್‌ಬಿಐ ರೆಪೋ ದರವನ್ನು ಮತ್ತಷ್ಟು ಹೆಚ್ಚಳ ಮಾಡಿದರೆ, 2023ರ ವೇಳೆಗೆ ಎಫ್‌ಡಿ ಬಡ್ಡಿದರ ಮತ್ತಷ್ಟು ಏರುವ ಸಾಧ್ಯತೆ ಇದೆ. ಎಫ್‌ಡಿಯಲ್ಲಿ ಎರಡು ರೀತಿ ಇದೆ. ಮೆಚ್ಯೂರಿಟಿ ವೇಳೆಯೇ ಬಡ್ಡಿದರ ಲಭ್ಯವಾಗುವ ಯೋಜನೆ ಹಾಗೂ ಮಾಸಿಕ, ತ್ರೈಮಾಸಿಕವಾಗಿ ಬಡ್ಡಿದರ ಹೂಡಿಕೆದಾರರಿಗೆ ಲಭ್ಯವಾಗುವ ಯೋಜನೆ ಇದೆ. ಸಂಚಿತ ಹೂಡಿಕೆ ಯೋಜನೆ (Cumulative Deposits Plan) ಹಾಗೂ ನಾನ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್ ಎಂಬುವುದು ಇದೆ.

 5 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ

5 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ

ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
12-23 ತಿಂಗಳು: ಶೇಕಡ 6.55 ಬಡ್ಡಿದರ
24-35 ತಿಂಗಳು: ಶೇಕಡ 7.25 ಬಡ್ಡಿದರ
36-60 ತಿಂಗಳು: ಶೇಕಡ 7.50 ಬಡ್ಡಿದರ

ನಾನ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
12-23 ತಿಂಗಳು: ಮಾಸಿಕ ಶೇ.6.36, ತ್ರೈಮಾಸಿಕ ಶೇ.6.40, ಅರ್ಧ ವಾರ್ಷಿಕ ಶೇ.6.45, ವಾರ್ಷಿಕ ಶೇ.6.55
24-35 ತಿಂಗಳು: ಮಾಸಿಕ ಶೇ.7.02, ತ್ರೈಮಾಸಿಕ ಶೇ.7.06, ಅರ್ಧ ವಾರ್ಷಿಕ ಶೇ.7.12, ವಾರ್ಷಿಕ ಶೇ.7.25
36-60 ತಿಂಗಳು: ಮಾಸಿಕ ಶೇ.7.25, ತ್ರೈಮಾಸಿಕ ಶೇ.7.30, ಅರ್ಧ ವಾರ್ಷಿಕ ಶೇ.7.36, ವಾರ್ಷಿಕ ಶೇ.7.50

 

 5 ಕೋಟಿ ರೂಪಾಯಿವರೆಗಿನ ಎಫ್‌ಡಿ ಇತರೆ ಯೋಜನೆ
 

5 ಕೋಟಿ ರೂಪಾಯಿವರೆಗಿನ ಎಫ್‌ಡಿ ಇತರೆ ಯೋಜನೆ

ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
15 ತಿಂಗಳು: ಶೇಕಡ 6.70 ಬಡ್ಡಿದರ
18 ತಿಂಗಳು: ಶೇಕಡ 6.80 ಬಡ್ಡಿದರ
22 ತಿಂಗಳು: ಶೇಕಡ 7.05 ಬಡ್ಡಿದರ
30 ತಿಂಗಳು: ಶೇಕಡ 7.35 ಬಡ್ಡಿದರ
33 ತಿಂಗಳು: ಶೇಕಡ 7.35 ಬಡ್ಡಿದರ
44 ತಿಂಗಳು: ಶೇಕಡ 7.60 ಬಡ್ಡಿದರ

ನಾನ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
15 ತಿಂಗಳು: ಮಾಸಿಕ ಶೇ.6.50, ತ್ರೈಮಾಸಿಕ ಶೇ.6.54, ಅರ್ಧ ವಾರ್ಷಿಕ ಶೇ.6.59, ವಾರ್ಷಿಕ ಶೇ.6.70
18 ತಿಂಗಳು: ಮಾಸಿಕ ಶೇ.6.60, ತ್ರೈಮಾಸಿಕ ಶೇ.6.30, ಅರ್ಧ ವಾರ್ಷಿಕ ಶೇ.6.69, ವಾರ್ಷಿಕ ಶೇ.6.80
22 ತಿಂಗಳು: ಮಾಸಿಕ ಶೇ.6.83, ತ್ರೈಮಾಸಿಕ ಶೇ.6.87, ಅರ್ಧ ವಾರ್ಷಿಕ ಶೇ.6.93, ವಾರ್ಷಿಕ ಶೇ.7.05
30 ತಿಂಗಳು: ಮಾಸಿಕ ಶೇ.7.11, ತ್ರೈಮಾಸಿಕ ಶೇ.7.17, ಅರ್ಧ ವಾರ್ಷಿಕ ಶೇ.7.22, ವಾರ್ಷಿಕ ಶೇ.7.35
33 ತಿಂಗಳು: ಮಾಸಿಕ ಶೇ.7.11, ತ್ರೈಮಾಸಿಕ ಶೇ.7.17, ಅರ್ಧ ವಾರ್ಷಿಕ ಶೇ.7.22, ವಾರ್ಷಿಕ ಶೇ.7.35
44 ತಿಂಗಳು: ಮಾಸಿಕ ಶೇ.7.35, ತ್ರೈಮಾಸಿಕ ಶೇ.7.39, ಅರ್ಧ ವಾರ್ಷಿಕ ಶೇ.7.46, ವಾರ್ಷಿಕ ಶೇ.7.60

 

 ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರ?

ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರ?

ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
12-23 ತಿಂಗಳು: ಶೇಕಡ 6.80 ಬಡ್ಡಿದರ
24-35 ತಿಂಗಳು: ಶೇಕಡ 7.50 ಬಡ್ಡಿದರ
36-60 ತಿಂಗಳು: ಶೇಕಡ 7.75 ಬಡ್ಡಿದರ

ನಾನ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
12-23 ತಿಂಗಳು: ಮಾಸಿಕ ಶೇ.6.60, ತ್ರೈಮಾಸಿಕ ಶೇ.6.63, ಅರ್ಧ ವಾರ್ಷಿಕ ಶೇ.6.69, ವಾರ್ಷಿಕ ಶೇ.6.80
24-35 ತಿಂಗಳು: ಮಾಸಿಕ ಶೇ.7.25, ತ್ರೈಮಾಸಿಕ ಶೇ.7.30, ಅರ್ಧ ವಾರ್ಷಿಕ ಶೇ.7.36, ವಾರ್ಷಿಕ ಶೇ.7.50
36-60 ತಿಂಗಳು: ಮಾಸಿಕ ಶೇ.7.49, ತ್ರೈಮಾಸಿಕ ಶೇ.7.53, ಅರ್ಧ ವಾರ್ಷಿಕ ಶೇ.7.61, ವಾರ್ಷಿಕ ಶೇ.7.75

 ಹಿರಿಯ ನಾಗರಿಕರಿಗಾಗಿ ಬೇರೇನಿದೆ?

ಹಿರಿಯ ನಾಗರಿಕರಿಗಾಗಿ ಬೇರೇನಿದೆ?

ಸೀನಿಯರ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
15 ತಿಂಗಳು: ಶೇಕಡ 6.95 ಬಡ್ಡಿದರ
18 ತಿಂಗಳು: ಶೇಕಡ 7.05 ಬಡ್ಡಿದರ
22 ತಿಂಗಳು: ಶೇಕಡ 7.30 ಬಡ್ಡಿದರ
30 ತಿಂಗಳು: ಶೇಕಡ 7.60 ಬಡ್ಡಿದರ
33 ತಿಂಗಳು: ಶೇಕಡ 7.60 ಬಡ್ಡಿದರ
44 ತಿಂಗಳು: ಶೇಕಡ 7.85 ಬಡ್ಡಿದರ

ನಾನ್ ಕಮ್ಯೂಲೇಟಿವ್ ಡೆಪಾಸಿಟ್ ಪ್ಲ್ಯಾನ್
15 ತಿಂಗಳು: ಮಾಸಿಕ ಶೇ.6.74, ತ್ರೈಮಾಸಿಕ ಶೇ.6.78, ಅರ್ಧ ವಾರ್ಷಿಕ ಶೇ.6.83, ವಾರ್ಷಿಕ ಶೇ.6.95
18 ತಿಂಗಳು: ಮಾಸಿಕ ಶೇ.6.83, ತ್ರೈಮಾಸಿಕ ಶೇ.6.87, ಅರ್ಧ ವಾರ್ಷಿಕ ಶೇ.6.93, ವಾರ್ಷಿಕ ಶೇ.7.05
22 ತಿಂಗಳು: ಮಾಸಿಕ ಶೇ.7.07, ತ್ರೈಮಾಸಿಕ ಶೇ.7.11, ಅರ್ಧ ವಾರ್ಷಿಕ ಶೇ.7.17, ವಾರ್ಷಿಕ ಶೇ.7.30
30 ತಿಂಗಳು: ಮಾಸಿಕ ಶೇ.7.35, ತ್ರೈಮಾಸಿಕ ಶೇ.7.39, ಅರ್ಧ ವಾರ್ಷಿಕ ಶೇ.7.46, ವಾರ್ಷಿಕ ಶೇ.7.60
33 ತಿಂಗಳು: ಮಾಸಿಕ ಶೇ.7.35, ತ್ರೈಮಾಸಿಕ ಶೇ.7.39, ಅರ್ಧ ವಾರ್ಷಿಕ ಶೇ.7.46, ವಾರ್ಷಿಕ ಶೇ.7.60
44 ತಿಂಗಳು: ಮಾಸಿಕ ಶೇ.7.58, ತ್ರೈಮಾಸಿಕ ಶೇ.7.63, ಅರ್ಧ ವಾರ್ಷಿಕ ಶೇ.7.70, ವಾರ್ಷಿಕ ಶೇ.7.85

English summary

Bajaj Finance Revises Interest Rates On Fixed Deposit, Check New Rates

Bajaj Finance Limited, the lending and investment arm of Bajaj Finserv, has revised the interest rates on their fixed deposit (FD) scheme with effect from November 8, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X