For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಆಫ್ ಬರೋಡಾ ಹೊಸ ಎಫ್‌ಡಿ ಯೋಜನೆಗೆ ಶೇ.7.50ರಷ್ಟು ಬಡ್ಡಿದರ!

|

ಹಲವಾರು ಬ್ಯಾಂಕುಗಳು ಪ್ರಸ್ತುತ ಹೊಸ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸ ನಿಶ್ಚಿಯ ಠೇವಣಿ ಅಥವಾ ಎಫ್‌ಡಿಯನ್ನು ಜಾರಿಗೆ ತಂದಿದೆ. ಈಗ ಬ್ಯಾಂಕ್ ಆಫ್ ಬರೋಡಾ ಕೂಡಾ ಹೊಸ ಎಫ್‌ಡಿ ಯೋಜನೆಯನ್ನು ಜಾರಿಗೆ ತಂದಿದೆ.

ನವೆಂಬರ್ 1, 2022ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡಾ ತನ್ನ ಹೊಸ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಆರಂಭ ಮಾಡಿದೆ. ಇದಕ್ಕೆ ಬರೋಡಾ ತಿರಂಗ ಪ್ಲಸ್ ಡೆಪಾಸಿಟ್ ಯೋಜನೆ ಎಂದು ಹೆಸರಿಸಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಹೆಚ್ಚಿನ ಬಡ್ಡಿದರವನ್ನು ಪಡೆಯಲು ಸಾಧ್ಯವಾಗಲಿದೆ.

ಕಂಪನಿ ಹಾಗೂ ಬ್ಯಾಂಕ್ ಎಫ್‌ಡಿ ನಡುವೆ ಏನಿದೆ ವ್ಯತ್ಯಾಸ?ಕಂಪನಿ ಹಾಗೂ ಬ್ಯಾಂಕ್ ಎಫ್‌ಡಿ ನಡುವೆ ಏನಿದೆ ವ್ಯತ್ಯಾಸ?

"ನಾವು ನಮ್ಮ ಗ್ರಾಹಕರಿಗೆ ಅತೀ ಅಧಿಕ ಬಡ್ಡಿದರವನ್ನು ನೀಡುವ ಮೂಲಕ ಉತ್ತಮ ಉಳಿತಾಯವನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಿದ್ದೇವೆ. ಈ ಯೋಜನೆಯು ಗ್ರಾಹಕರಿಗೆ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಉತ್ತಮ ರಿಟರ್ನ್ ಅನ್ನು ಕೂಡಾ ನೀಡುತ್ತದೆ," ಎಂದು ಬ್ಯಾಂಕ್ ಆಫ್ ಬರೋಡಾದ ನಿರ್ದೇಶಕ ಅಜಯ್ ಕೆ ಕುರಾನ ಹೇಳಿದ್ದಾರೆ. ಈ ಯೋಜನೆ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಈ ಯೋಜನೆಯ ಮೆಚ್ಯೂರಿಟಿ ಅವಧಿ ಎಷ್ಟು?

ಈ ಯೋಜನೆಯ ಮೆಚ್ಯೂರಿಟಿ ಅವಧಿ ಎಷ್ಟು?

ಕಾಲೇಬಲ್ ಹಾಗೂ ನಾನ್ ಕಾಲೇಬಲ್ ಡೆಪಾಸಿಟ್‌ಗೆ ಇದು ಅನ್ವಯವಾಗಲಿದೆ. ಇದರ ಮೆಚ್ಯೂರಿಟಿ ಅವಧಿ 399 ದಿನಗಳು ಆಗಿದೆ. ಕಾಲೇಬಲ್ ಡೆಪಾಸಿಟ್ ಮೇಲೆ ಸಾಮಾನ್ಯ ಜನರಿಗೆ ಶೇಕಡ 6.75ರಷ್ಟು ಬಡ್ಡಿದರ ಲಭ್ಯವಾಗಲಿದೆ. ಇನ್ನು ಹಿರಿಯ ನಾಗರಿಕರಿಗೆ ಶೇಕಡ 7.25ರಷ್ಟು ಬಡ್ಡಿದರ ಲಭ್ಯವಾಗಲಿದೆ. ಇನ್ನು ನಾನ್ ಕಾಲೇಬಲ್ ಎಫ್‌ಡಿ ಮೇಲೆ ಶೇಕಡ 7ರಿಂದ ಶೇಕಡ 7.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

 ಈ ಯೋಜನೆಗೆ ಎಷ್ಟು ಬಡ್ಡಿದರವಿರುತ್ತದೆ?

ಈ ಯೋಜನೆಗೆ ಎಷ್ಟು ಬಡ್ಡಿದರವಿರುತ್ತದೆ?

ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ಪ್ರಕಾರ ಬ್ಯಾಂಕ್‌ನ ಬರೋಡ ತಿರಂಗ ಡೆಪಾಸಿಟ್ ಯೋಜನೆಯ ಮೇಲಿನ ಬಡ್ಡಿದರವು ನವೆಂಬರ್ 1ರಿಂದಲೇ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಎರಡು ಅವಧಿಗಳು ಇದೆ. 444 ದಿನಗಳ ಡೆಪಾಸಿಟ್ ಹಾಗೂ 555 ದಿನಗಳ ಎಫ್‌ಡಿ ಇದೆ. 444 ದಿನಗಳ ಕಾಲೇಬಲ್ ಡೆಪಾಸಿಟ್ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 6.25ರಷ್ಟು ಬಡ್ಡಿದರ ನೀಡಲಾಗುತ್ತದೆ. 555 ದಿನಗಳ ಕಾಲೇಬಲ್ ಡೆಪಾಸಿಟ್ ಮೇಲೆ ಶೇಕಡ 6.00ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 6.50ರಷ್ಟು ಬಡ್ಡಿದರ ನೀಡಲಾಗುತ್ತದೆ. ಇದಕ್ಕೂ ಓಲ್ಡ್ ಬರೋಡ ತಿರಂಗ ಡೆಪಾಸಿಟ್ ಯೋಜನೆಯಲ್ಲಿ 555 ದಿನಗಳ ಡೆಪಾಸಿಟ್ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 6.25ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.75ರಷ್ಟು ಬಡ್ಡಿದರ ನೀಡಲಾಗುತ್ತದೆ. 444 ದಿನಗಳ ಎಫ್‌ಡಿ ಮೇಲೆ ಶೇಕಡ 6.00 ಹಾಗೂ ಶೇಕಡ 6.50ರಷ್ಟು ಬಡ್ಡಿದರ ನೀಡಲಾಗುತ್ತದೆ.

 15 ಲಕ್ಷದಿಂದ 2 ಕೋಟಿ ರೂಪಾಯಿವರೆಗೆ ಎಫ್‌ಡಿ
 

15 ಲಕ್ಷದಿಂದ 2 ಕೋಟಿ ರೂಪಾಯಿವರೆಗೆ ಎಫ್‌ಡಿ

ಬರೋಡ ಅಡ್ವಾಂಟೇಜ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ನವೆಂಬರ್ 1ರಿಂದ ಬ್ಯಾಂಕ್ ಬದಲಾವಣೆ ಮಾಡಿದೆ. 1 ವರ್ಷದಿಂದ 399 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಸಾಮಾನ್ಯ ನಾಗರಿಕರ ಡೆಪಾಸಿಟ್ ಮೇಲೆ ಬ್ಯಾಂಕ್ ಆಫ್ ಬರೋಡಾ ಶೇಕಡ 5.75ರಿಂದ ಶೇಕಡ 7.00ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 6.25ರಿಂದ ಶೇಕಡ 7.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಬರೋಡ ಅಡ್ವಾಂಟೇಜ್ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಅತೀ ಹೆಚ್‌ಚಿನ ಬಡ್ಡಿದರ 399 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಯೋಜನೆಗೆ ಆಗಿದೆ. ಇದರಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡ 7.00ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್‌ಡಿ, ಯಾವುದು ಉತ್ತಮ?ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್‌ಡಿ, ಯಾವುದು ಉತ್ತಮ?

English summary

Bank of Baroda New FD Scheme Offering 7.50 Percent Interest Rate

Bank of Baroda new Fixed Deposit Scheme: Bank of Baroda new FD scheme offering 7.50 percent interest from 15 lakh to 2 crore. details here.
Story first published: Friday, November 4, 2022, 15:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X