For Quick Alerts
ALLOW NOTIFICATIONS  
For Daily Alerts

ಫ್ಲ್ಯಾಟ್ ಅಥವಾ ಮನೆ ಖರೀದಿಗೂ ಮುನ್ನ ನೀವು ಗಮನಿಸಲೇಬೇಕಾದ 9 ಅಂಶಗಳು

|

ಪ್ರತಿಯೊಬ್ಬರೂ ತನ್ನದೇ ಆದ ಗುರಿಯನ್ನಿಟ್ಟುಕೊಂಡಿರುತ್ತಾರೆ. ಅದರಲ್ಲಿ ಅತ್ಯಂತ ಹೆಚ್ಚಿನ ಜನರು ಇಟ್ಟುಕೊಂಡಿರುವ ಆಸೆ ಸ್ವಂತ ಮನೆ ನಿರ್ಮಿಸುವುದು. ಹೊಸ ಮನೆ ಅಥವಾ ಪ್ಲ್ಯಾಟ್‌ವೊಂದನ್ನ ಖರೀದಿಸುವುದಾಗಿದೆ.

ಹೊಸ ಮನೆ ಅಥವಾ ಫ್ಲ್ಯಾಟ್‌ನಲ್ಲಿ ಹಣ ಹೂಡಿಕೆ ಮಾಡುವುದು ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ಏಕೆಂದರೆ ನೀವು ಚಿಕ್ಕ ವಯಸ್ಸಿನಿಂದಲೇ ಹೀಗೊಂದು ಕನಸು ಕಂಡಿರಬಹುದು. ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಬೇಕು ಎಂದು. ಇದಕ್ಕಾಗಿ ನೀವು ಕಷ್ಟಪಟ್ಟು ದುಡಿದು ಹಣ ಕೂಡಿಟ್ಟಿರುತ್ತೀರ. ಹೀಗೆ ಅನೇಕ ವರ್ಷಗಳ ಉಳಿತಾಯವು ಕೆಲವೇ ಕ್ಷಣದಲ್ಲಿ ಹಾಳಾಗಲು ಯಾರೂ ಮನಸ್ಸು ಮಾಡುವುದಿಲ್ಲ.

ಆದ್ದರಿಂದ, ನೀವು ಈ ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮನೆಯನ್ನು ಖರೀದಿಸಿದಾಗ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಿ ತೆಗೆದುಕೊಳ್ಳುವುದು ಸಾಧ್ಯವಿಲ್ಲದೇ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಇಎಂಐಗಳ ಪಾವತಿ ಮಾಡಬೇಕಾಗುವುದರಿಂದ ಮಾಸಿಕ ಕಂತುಗಳಲ್ಲಿ ಹಣ ಕಟ್ಟಬೇಕಾಗುತ್ತದೆ. ಹೀಗಾಗಿ ಹಣಕಾಸಿನ ನಿರ್ಧಾರ ಕೈಗೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು.

 

ಹಾಗಿದ್ದರೆ, ಹೊಸ ಫ್ಲ್ಯಾಟ್ ಖರೀದಿಸುವಾಗ ನೀವು ಗಮನಿಸಬೇಕಾದ ಪ್ರಮುಖ ಅಂಶಗಳು ಏನು ಎಂದು ತಿಳಿದುಕೊಳ್ಳಲು ಈ ಕೆಳಗಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಿ.

1.  ಆಸ್ತಿ ಬೆಲೆ ಎಷ್ಟು

1. ಆಸ್ತಿ ಬೆಲೆ ಎಷ್ಟು

ನೀವು ಮನೆ ಅಥವಾ ಫ್ಲ್ಯಾಟ್ ಖರೀದಿಗೂ ಮುನ್ನ ಮೊದಲ ಹಂತವೆಂದರೆ ಬಜೆಟ್ ಅನ್ನು ಹೊಂದಿಸಿಕೊಳ್ಳುವುದು. ಅಂದರೆ ನೀವು ಮನೆಯನ್ನು ಖರೀದಿಸಲು ಎಷ್ಟು ಖರ್ಚು ಮಾಡಲು ಸಿದ್ಧರಿದ್ದೀರಿ ಎಂದು ನಿಮಗೆ ತಿಳಿದಿರಬೇಕು. ಇದರಿಂದ ನೀವು ಎಷ್ಟು ಹಣ ಎಲ್ಲಿ ಹೇಗೆ ಉಳಿತಾಯ ಮಾಡಬೇಕು ಎಂದು ಶಾರ್ಟ್ ಲಿಸ್ಟ್‌ ಮಾಡಲು ಸುಲಭವಾಗುತ್ತದೆ. ನೀವು ಯಾವುದಾದರೂ ಫ್ಲ್ಯಾಟ್ ಖರೀದಿಗೂ ಮುನ್ನ ಆ ಫ್ಲ್ಯಾಟ್‌ನ ಆಸ್ತಿ ಬೆಲೆ ಮತ್ತು ಸುತ್ತಮುತ್ತಲಿನ ಬಿಲ್ಡರ್‌ಗಳಿಂದ ಫ್ಲ್ಯಾಟ್‌ಗಳನ್ನು ಹೋಲಿಕೆ ಮಾಡಿ.

ನೀವು ಹುಡುಕುತ್ತಿರುವ ಪ್ರದೇಶದಲ್ಲಿ ಗುಣಲಕ್ಷಣಗಳ ಹೋಲಿಕೆಯನ್ನು ಪಡೆಯಲು ಹಲವು ಮಾರ್ಗಗಳಿವೆ. ಪೋರ್ಟಲ್ ಪಟ್ಟಿಗಳು, ವೃತ್ತಪತ್ರಿಕೆ ಪಟ್ಟಿಗಳು ಸೇರಿದಂತೆ, ಆ ಪ್ರದೇಶದ ಬ್ರೋಕರ್‌ಗಳಿಂದ ತಿಳಿದುಕೊಳ್ಳಬಹುದು.

2. ಫ್ಲಾಟ್‌ನ ಕಾರ್ಪೆಟ್ ಪ್ರದೇಶ ಗಮನಿಸಬೇಕು

2. ಫ್ಲಾಟ್‌ನ ಕಾರ್ಪೆಟ್ ಪ್ರದೇಶ ಗಮನಿಸಬೇಕು

ಸಾಮಾನ್ಯವಾಗಿ, ಆಸ್ತಿಯ ಪ್ರದೇಶ ಅಥವಾ ಪಟ್ಟಿ ಮಾಡಲಾದ ಸೂಪರ್ ಬಿಲ್ಟ್-ಅಪ್ ಪ್ರದೇಶವೆಂದರೆ ಶಾಫ್ಟ್‌ಗಳು, ಎಲಿವೇಟರ್ ಸ್ಥಳ, ಮೆಟ್ಟಿಲುಗಳು, ಗೋಡೆಗಳ ದಪ್ಪ ಮತ್ತು ಇತರವುಗಳನ್ನು ಒಳಗೊಂಡಿರುತ್ತೆ. ಕಾರ್ಪೆಟ್ ಪ್ರದೇಶವು ಫ್ಲಾಟ್‌ನ ಗೋಡೆಗಳೊಳಗಿನ ನಿಜವಾದ ಪ್ರದೇಶವಾಗಿದೆ. ಇದು ಆಸ್ತಿಯ ಬೆಲೆಯನ್ನು ಲೆಕ್ಕಹಾಕಲು ಬಳಸುವ ಪ್ರದೇಶಕ್ಕಿಂತ 30 ಪರ್ಸೆಂಟ್‌ರಷ್ಟು ಕಡಿಮೆ ಇರಬಹುದು. ಕೆಲವು ಸಂದರ್ಭಗಳಲ್ಲಿ, ಇಬ್ಬರು ಮಾಲೀಕರು ಏನಾದರೂ ಫ್ಲ್ಯಾಟ್ ಖರೀದಿಸಿದ್ದಲ್ಲಿ ಸಾಮಾನ್ಯ ಸ್ಥಳಗಳ ಬೆಲೆಯನ್ನು ಇಬ್ಬರ ನಡುವೆ ಹಂಚಿಕೊಳ್ಳಲಾಗುತ್ತದೆ.

3. ಭೂ ದಾಖಲೆ ಪರಿಶೀಲಿಸಬೇಕು
 

3. ಭೂ ದಾಖಲೆ ಪರಿಶೀಲಿಸಬೇಕು

ನಿಮ್ಮ ಫ್ಲಾಟ್ ಅನ್ನು ನಿರ್ಮಿಸಿದ ಭೂಮಿ ಬಹಳ ನಿರ್ಣಾಯಕವಾಗಿದೆ. ಮನೆ ನಿರ್ಮಿಸಲಾದ ಭೂಮಿಯ ಮಣ್ಣಿನ ಗುಣಮಟ್ಟ ಮತ್ತು ಸ್ಥಳಾಕೃತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಬಹುಮುಖ್ಯವಾಗಿದೆ. ಫ್ಲ್ಯಾಟ್‌ನ ವಿಚಾರವಾಗಿ ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿರಬೇಕು ಮತ್ತು ನೋಂದಾಯಿಸಬೇಕು. ಮನೆ ಖರೀದಿಸುವ ಮೊದಲು, ಶೀರ್ಷಿಕೆ ಪತ್ರವನ್ನು (Title deed) ವಿವರವಾಗಿ ಪರಿಶೀಲಿಸಬೇಕು . ಪತ್ರದಲ್ಲಿ ಆಸ್ತಿಯ ಹಕ್ಕುಗಳು, ಮಾಲೀಕತ್ವ ಮತ್ತು ಕಟ್ಟುಪಾಡುಗಳ ಬಗ್ಗೆ ಎಲ್ಲಾ ವಿವರಗಳನ್ನು ನೀಡುತ್ತದೆ.

ಮನೆ ನಿರ್ಮಾಣ, ಖರೀದಿ ಸಾಲದ ಬಗ್ಗೆ ಇರುವ 5 ಮಿಥ್ಯೆಗಳು; ಹಾಗಿದ್ದರೆ ಸತ್ಯ ಏನು?

4. ಆಸ್ತಿಯ ಕಾನೂನು ಪರಿಶೀಲನೆ

4. ಆಸ್ತಿಯ ಕಾನೂನು ಪರಿಶೀಲನೆ

ನೀವು ಖರೀದಿಗೆ ಮುಂದಾಗುವ ಫ್ಲ್ಯಾಟ್‌ನ ಆಸ್ತಿಯ ಕಾನೂನುಬದ್ಧ ಅಧಿಕಾರ ಯಾರದ್ದು ಎಂದು ಖಚಿತಪಡಿಸಿಕೊಳ್ಳಿ. ಡೆವಲಪರ್‌ಗೆ ಪ್ರದೇಶ ಅಭಿವೃದ್ಧಿ ಅಧಿಕಾರಿಗಳು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು, ವಿದ್ಯುತ್ ಮಂಡಳಿಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಅನುಮೋದನೆಗಳು ಮತ್ತು ಎನ್‌ಒಸಿಗಳು ಇರಬೇಕು. ಆದಾಗ್ಯೂ ನೀವು ಗೃಹ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಸಾಲ ಮಂಜೂರಾತಿಗೆ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕ್ ನಿಮ್ಮ ಆಸ್ತಿ ದಾಖಲೆಗಳನ್ನು ಮೌಲ್ಯೀಕರಿಸುತ್ತದೆ.

5. ಅಪಾರ್ಟ್‌ಮೆಂಟಿನ ಸ್ವಾಧೀನ

5. ಅಪಾರ್ಟ್‌ಮೆಂಟಿನ ಸ್ವಾಧೀನ

ವಾಣಿಜ್ಯ ಮತ್ತು ವಸತಿ ಯೋಜನೆಗಳಲ್ಲಿನ ವಿಳಂಬದಿಂದಾಗಿ ಫ್ಲ್ಯಾಟ್‌ಗಳನ್ನು ನೀಡಲು ವಿಳಂಭವಾಗಬಹುದು. ಖರೀದಿದಾರರಾಗಿ, ನೀವು ಫ್ಲ್ಯಾಟ್ ಸ್ವಾಧೀನಪಡಿಸಿಕೊಳ್ಳಲು ಟೈಮ್‌ಲೈನ್‌ನ ಸ್ಪಷ್ಟ ಅಂದಾಜು ಹೊಂದಿರಬೇಕು. ಸಾಮಾನ್ಯವಾಗಿ, ಡೆವಲಪರ್ ಆರು ತಿಂಗಳ ಗ್ರೇಸ್ ಅವಧಿಯನ್ನು ಕೇಳುತ್ತಾರೆ, ಆದರೆ ಅದಕ್ಕೆ ಮಾನ್ಯ ವಿವರಣೆ ಇರಬೇಕು.

ನಿಮ್ಮ ವಯಸ್ಸು 30ರೊಳಗಿದೆಯೇ? ನೀವು ತೆಗೆದುಕೊಳ್ಳಲೇಬೇಕಾದ 5 ಹಣಕಾಸಿನ ನಿರ್ಧಾರಗಳು ಇಲ್ಲಿವೆ

6. ಸಾಲ ಸಿಗುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದಿರಬೇಕು

6. ಸಾಲ ಸಿಗುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದಿರಬೇಕು

ಕೆಲವು ಬಿಲ್ಡರ್‌ಗಳಿಗೆ ಹಣಕಾಸು ನೀಡಲು ಸಿದ್ಧರಿರುವ ಅಥವಾ ಸಿದ್ಧರಿಲ್ಲದ ಬ್ಯಾಂಕುಗಳ ಬಗ್ಗೆ ನಿಮಗೆ ತಿಳಿದಿರಬೇಕು. ಕೆಟ್ಟ ಖ್ಯಾತಿಯ ಕಾರಣ, ಕೆಲವು ಬ್ಯಾಂಕುಗಳು ಕೆಲವು ಬಿಲ್ಡರ್‌ಗಳಿಗೆ ಸಾಲವನ್ನು ನೀಡುವುದಿಲ್ಲ. ಅಂದರೆ ಬ್ಲ್ಯಾಕ್ ಲಿಸ್ಟ್‌ನಲ್ಲಿಟ್ಟಿರುತ್ತವೆ. ಆದ್ದರಿಂದ, ನೀವು ಹೂಡಿಕೆ ಮಾಡಲು ಯೋಜಿಸುತ್ತಿರುವ ಯೋಜನೆಗೆ ಧನಸಹಾಯಕ್ಕಾಗಿ ಬ್ಯಾಂಕುಗಳೊಂದಿಗೆ ನೀವು ಪರಿಶೀಲಿಸುವುದು ಬಹಳ ಮುಖ್ಯ.

7. ಬಿಲ್ಡರ್-ಖರೀದಿದಾರ ಒಪ್ಪಂದ

7. ಬಿಲ್ಡರ್-ಖರೀದಿದಾರ ಒಪ್ಪಂದ

ನಿಮ್ಮ ಆಯ್ಕೆಯ ಫ್ಲಾಟ್ ಅಥವಾ ಮನೆಯನ್ನು ನೀವು ಆರಿಸಿದಾಗ, ಟೋಕನ್ ಮೊತ್ತವನ್ನು ನೀಡುವ ಮೂಲಕ ನೀವು ಅದನ್ನು ಕಾಯ್ದಿರಿಸಬಹುದು. ಅದಕ್ಕೆ ಪ್ರತಿಯಾಗಿ ನಿಮಗೆ ಹಂಚಿಕೆ ಪತ್ರ ಸಿಗುತ್ತದೆ. ನಂತರ, ಉಳಿದ ಮೊತ್ತಕ್ಕೆ ಖರೀದಿದಾರ, ಬ್ಯಾಂಕ್ ಮತ್ತು ಬಿಲ್ಡರ್ ನಡುವೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅದನ್ನು ವಿವರವಾಗಿ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಷರತ್ತುಗಳು ಸ್ಪಷ್ಟವಾಗಿ ಅರ್ಥಮಾಡಿಕೊಂಡ ಮೇಲೆ ಇಲ್ಲವೇ, ಯಾವುದೇ ಅನುಮಾನಗಳಿದ್ದಲ್ಲಿ ಆ ಹಂತದಲ್ಲಿಯೇ ಅದನ್ನು ಸರಿಪಡಿಸಿಕೊಳ್ಳಬೇಕು.

ಎಷ್ಟೇ ಪ್ರಯತ್ನಿಸಿದ್ರೂ ಹಣ ಉಳಿತಾಯವಾಗದಿದ್ರೆ ಇದನ್ನೊಮ್ಮೆ ಓದಿ ಸಾಕು

8. ಫ್ಲ್ಯಾಟ್‌ನ ಸ್ಥಳವನ್ನು ಗಮನಿಸಿ

8. ಫ್ಲ್ಯಾಟ್‌ನ ಸ್ಥಳವನ್ನು ಗಮನಿಸಿ

ಯಾವುದೇ ಕಾರಣಕ್ಕೂ ಫ್ಲ್ಯಾಟ್‌ನ ಸ್ಥಳವನ್ನು ಮರೆಯುವಂತಿಲ್ಲ. ನೀವು ಅಂತಿಮವಾಗಿ ವಾಸಿಸಲಿರುವ ಪ್ರದೇಶದ ಸುತ್ತಲಿನ ಪ್ರದೇಶವನ್ನು ನೋಡುವುದು ಬಹಳ ಮುಖ್ಯ. ಮೂಲಭೂತ ಸೌಕರ್ಯಗಳು ಸರಿಯಾಗಿವಿಯೇ ಗಮನಿಸಬೇಕು. ಮತ್ತು ಮಕ್ಕಳಿಗೆ ಆಟವಾಡಲು ಜಾಗ, ವಾಕ್ ಮಾಡಲು ಗಾರ್ಡನ್ ಏರಿಯಾ ಇದೆಯೇ ಎಂದೆಲ್ಲಾ ತಿಳಿದುಕೊಳ್ಳುವುದು ಬಹಳ ಮುಖ್ಯ. ಜೊತೆಗೆ ಫ್ಲ್ಯಾಟ್ ಸುರಕ್ಷಿತ ಸ್ಥಳದಲ್ಲಿರಬೇಕು. ಫ್ಲ್ಯಾಟ್‌ನ ಭದ್ರತೆಯು ಕುಟುಂಬಗಳಿಗೆ ಭದ್ರತೆಯನ್ನು ನೀಡುತ್ತದೆ.

9. ಮರೆಮಾಡಿದ ಮತ್ತು ಹೆಚ್ಚುವರಿ ಶುಲ್ಕಗಳು

9. ಮರೆಮಾಡಿದ ಮತ್ತು ಹೆಚ್ಚುವರಿ ಶುಲ್ಕಗಳು

ದಾಖಲೆಗಳ ಎಲ್ಲಾ ಷರತ್ತುಗಳನ್ನು ವಿವರವಾಗಿ ಓದಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಬೇಕು. ಗ್ರೇಸ್ ಅವಧಿಯೊಳಗೆ ನೀವು ಫ್ಲ್ಯಾಟ್‌ನ ಸ್ವಾಧೀನವನ್ನು ಸ್ವೀಕರಿಸದಿದ್ದಲ್ಲಿ ಬಿಲ್ಡರ್ ನಿಮಗೆ ಮಾಸಿಕ ದಂಡವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿ ವೆಚ್ಚಗಳಾದ ಜಿಎಸ್‌ಟಿ, ಸ್ಟ್ಯಾಂಪ್ ಡ್ಯೂಟಿ, ಗೃಹ ಸಾಲ, ಸಂಸ್ಕರಣಾ ಶುಲ್ಕ, ನೋಂದಣಿ ಶುಲ್ಕಗಳು ಮತ್ತು ಇತರ ಎಲ್ಲಾ ಶುಲ್ಕಗಳನ್ನು ಸಹ ಗಮನದಲ್ಲಿರಿಸಿಕೊಳ್ಳಬೇಕು.

ಮನೆಯನ್ನು ಖರೀದಿಸುವುದು ನಿಮ್ಮ ಜೀವನದ ಮಹತ್ವದ ಘಟ್ಟವಾಗಿದೆ. ಹೀಗಾಗಿ ಒಪ್ಪಂದವನ್ನು ಮಾಡಿಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಗಮನವಿಟ್ಟು ತಿಳಿದುಕೊಳ್ಳಿ.

English summary

Before Buying Flat Important Things To Remember

These are some more parameters that need to be looked in to, while purchasing a new flat or home
Story first published: Monday, February 10, 2020, 17:48 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more