For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಉಳಿಸಲು ಯಾವ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಬೆಸ್ಟ್?

|

ಅನೇಕ ಜನರು ಭವಿಷ್ಯದ ಉಳಿತಾಯಕ್ಕಾಗಿ ಹಣವನ್ನು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಜೊತೆಗೆ ಮಾಸಿಕ ಆದಾಯಕ್ಕೂ ನಿಶ್ಚಿತ ಠೇವಣಿ ಅನುಕೂಲಕರ ಹೂಡಿಕೆಯಾಗಿದೆ. ಮತ್ತೆ ಕೆಲವರು ಆದಾಯ ತೆರಿಗೆಯ ಉಳಿತಾಯಕ್ಕಾಗಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಯ ಮೊರೆ ಹೋಗುತ್ತಾರೆ. ತಮ್ಮ ಗ್ರಾಹಕರಿಗೆ ವಿವಿಧ ಬ್ಯಾಂಕುಗಳು ಆಕರ್ಷಕ ಬಡ್ಡಿ ದರದಲ್ಲಿ ಆದಾಯ ತೆರಿಗೆ ಉಳಿಸುವ ನಿಶ್ಚಿತ ಠೇವಣಿ ಯೋಜನೆಗಳನ್ನು ಹೊಂದಿವೆ.

ಈ ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಗಳು ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳನ್ನು ನೀಡುವ ಪ್ರಮುಖ ಆಯ್ಕೆಗಳಲ್ಲಿ ಸೇರಿವೆ. ತೆರಿಗೆ ಉಳಿಸುವ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು 1.5 ಲಕ್ಷದವರೆಗೂ ಆದಾಯ ತೆರಿಗೆ ಕಡಿತವನ್ನು ಪಡೆಯಬಹುದು.

ಈಕ್ವಿಟಿಗೆ ಹೋಲಿಸಿದರೆ ಈ ನಿಶ್ಚಿತ ಠೇವಣಿಗಳು ಕಡಿಮೆ ರಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಎಸ್‌ಬಿಐ, ಹೆಚ್‌ಡಿಎಫ್‌ಸಿ, ಪಿಎನ್‌ಬಿ, ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ತೆರಿಗೆ ಉಳಿತಾಯ ಎಫ್‌ಡಿಗಳನ್ನು ಒಳಗೊಂಡಂತೆ ತಮ್ಮ ನಿಶ್ಚಿತ ಠೇವಣಿ ದರವನ್ನು ಕಡಿತಗೊಳಿಸಿವೆ. ಕನಿಷ್ಠ ಹೂಡಿಕೆ ಮೊತ್ತವು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಿದೆ. ಹಾಗಿದ್ದರೆ ಪ್ರಮುಖ ಬ್ಯಾಂಕುಗಳಲ್ಲಿನ ತೆರಿಗೆ ಉಳಿತಾಯದ ನಿಶ್ಚಿತ ಠೇವಣಿ ಹಾಗೂ ಬಡ್ಡಿ ದರಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿ ಓದಿ.

ಎಸ್‌ಬಿಐ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಎಸ್‌ಬಿಐ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಎಸ್‌ಬಿಐ ತಮ್ಮ ಗ್ರಾಹಕರಿಗೆ ತೆರಿಗೆ ಉಳಿತಾಯ ನಿಶ್ಚಿತ ಠೇವಣಿಗೆ 6.25 ಪರ್ಸೆಂಟ್ ಬಡ್ಡಿಯನ್ನು ನೀಡುತ್ತದೆ. ಸಾಮಾನ್ಯ ಗ್ರಾಹಕರಿಗೆ 6.25 ಪರ್ಸೆಂಟ್ ಬಡ್ಡಿ ನೀಡಿದರೆ, ಹಿರಿಯ ನಾಗರೀಕರಿಗೆ 6.75 ಪರ್ಸೆಂಟ್ ಬಡ್ಡಿ ದರದ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಹೊಂದಿದೆ. ಈ ನಿಶ್ಚಿತ ಠೇವಣಿ ಯೋಜನೆಯಲ್ಲಿ ಕನಿಷ್ಠ 1,000 ಮತ್ತು ಗರಿಷ್ಠ ವರ್ಷಕ್ಕೆ 1.50 ಲಕ್ಷ ರುಪಾಯಿ ಹಣವನ್ನು ಹೂಡಿಕೆ ಮಾಡಬಹುದು.

ಹೆಚ್‌ಡಿಎಫ್‌ಸಿ ಬ್ಯಾಂಕ್‌ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಹೆಚ್‌ಡಿಎಫ್‌ಸಿ ಬ್ಯಾಂಕ್‌ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಹೆಚ್‌ಡಿಎಫ್‌ಸಿ ಬ್ಯಾಂಕ್‌ ತೆರಿಗೆ ಉಳಿತಾಯ ನಿಶ್ಚಿತ ಠೇವಣಿಯನ್ನು ಕನಿಷ್ಠ 100 ರುಪಾಯಿ ಹೂಡಿಕೆಯಿಂದ ಆರಂಭಿಸಿದೆ. ಅಲ್ಲದೆ ಗರಿಷ್ಠ 10 ವರ್ಷದವರೆಗೂ ನಿಶ್ಚಿತ ಠೇವಣಿಯ ಕಾಲಾವಧಿಯನ್ನು ಹೊಂದಿರುವ ಯೋಜನೆಯನ್ನೂ ಒಳಗೊಂಡಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ 6.30 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದ್ದು ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಬಡ್ಡಿಯನ್ನು ಈ ಠೇವಣಿ ಮೂಲಕ ಪಡೆಯಬಹುದು.

ಐಸಿಐಸಿಐ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ
 

ಐಸಿಐಸಿಐ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಐಸಿಐಸಿಐ ಬ್ಯಾಂಕ್ 5 ರಿಂದ 10 ವರ್ಷದವರೆಗಿನ ನಿಶ್ಚಿತ ಠೇವಣಿಗೆ ಸಾಮಾನ್ಯ ಗ್ರಾಹಕರಿಗೆ 6.6 ಪರ್ಸೆಂಟ್ ಬಡ್ಡಿಯನ್ನು ನೀಡುತ್ತದೆ. ಅದೇ ಹಿರಿಯ ನಾಗರೀಕರಿಗೆ 7.7 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದೆ. ಐಸಿಐಸಿಐ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಆರಂಭಿಸಲು ಕನಿಷ್ಠ 10,000 ರುಪಾಯಿ ಮತ್ತು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರುಪಾಯಿ ಮೊತ್ತವನ್ನು ಹೂಡಿಕೆ ಮಾಡಬಹುದು.

ಬ್ಯಾಂಕ್ ಆಫ್ ಬರೋಡಾ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಬ್ಯಾಂಕ್ ಆಫ್ ಬರೋಡಾ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ

ಬ್ಯಾಂಕ್ ಆಫ್ ಬರೋಡಾ 5 ರಿಂದ 10 ವರ್ಷದವರೆಗಿನ ನಿಶ್ಚಿತ ಠೇವಣಿಗೆ ಕ್ರಮವಾಗಿ 6.50 ಪರ್ಸೆಂಟ್ ಹಾಗೂ 6.25 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದೆ. ಕನಿಷ್ಠ 100 ರುಪಾಯಿಯಿಂದ ಗರಿಷ್ಠ 1.50 ಲಕ್ಷ ರುಪಾಯಿ ಮೊತ್ತವನ್ನು ಡೆಪಾಸಿಟ್ ಮಾಡಬಹುದು. ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಬಡ್ಡಿಯನ್ನು ಹೊಂದಿದೆ.

ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ

ಪಂಜಾಬ್‌ ನ್ಯಾಷನಲ್ ಬ್ಯಾಂಕ್

ಪಂಜಾಬ್‌ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ತೆರಿಗೆ ಉಳಿತಾಯ ನಿಶ್ಚಿತ ಠೇವಣಿಯಲ್ಲಿ ಕನಿಷ್ಠ 100 ರುಪಾಯಿಯಿಂದ ಗರಿಷ್ಠ 1.50 ಲಕ್ಷ ರುಪಾಯಿ ಮೊತ್ತವನ್ನು ಡೆಪಾಸಿಟ್ ಮಾಡಬಹುದು. 5 ವರ್ಷದ ಠೇವಣಿಗೆ 6.25 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದ್ದು, ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಬಡ್ಡಿಯನ್ನು ಹೊಂದಿದೆ. 5ರಿಂದ 10 ವರ್ಷದ ನಿಶ್ಚಿತ ಠೇವಣಿಗೆ 6 ಪರ್ಸೆಂಟ್ ಬಡ್ಡಿದರವಿದ್ದು, 1 ರಿಂದ 10 ಕೋಟಿ ರುಪಾಯಿ ಡೆಪಾಸಿಟ್ ಮಾಡಬಹುದು.

ಹಣ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ 8 ಪ್ರಶ್ನೆಗಳುಹಣ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ 8 ಪ್ರಶ್ನೆಗಳು

ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ನಿಯಮ

ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ನಿಯಮ

ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಕನಿಷ್ಠ 5 ವರ್ಷಗಳ ಅವಧಿಯನ್ನು ಹೊಂದಿದೆ. 1.50 ಲಕ್ಷ ರುಪಾಯಿ ಠೇವಣಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತವಾಗಿದ್ದರೂ, ಠೇವಣಿಯಿಂದ ಬರುವ ಬಡ್ಡಿಗೆ ತೆರಿಗೆ ಅನ್ವಯವಾಗುತ್ತದೆ. ಅಲ್ಲದೆ ಈ ಯೋಜನೆಗಳಲ್ಲಿ ಅಕಾಲಿಕ ಹಿಂಪಡೆಯುವಿಕೆಯನ್ನು ಮಾಡಲಾಗುವುದಿಲ್ಲ. ಅಂದರೆ ನೀವು 5 ವರ್ಷದೊಳಗೆ ಹಣ ಹಿಂಪಡೆಯಲು ಸಾಧ್ಯವಿಲ್ಲ ಮತ್ತು ಠೇವಣಿ ಮೇಲೆ ಸಾಲವನ್ನು ಪಡೆಯುವಂತಿಲ್ಲ.

English summary

Best Income Tax Saving FDs

Tax saving deposits are among the saving options that offer income tax benefits under section 80C. These are main banks example of FDs and interest rate
Story first published: Friday, December 6, 2019, 13:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X