For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?

|

ಪರ್ಮನೆಂಟ್ ಅಕೌಂಟ್ ನಂಬರ್ (PAN) ಎಂಬುದು ಸಂಖ್ಯೆ ಮತ್ತು ಅಕ್ಷರವನ್ನು ಒಳಗೊಂಡ ಹತ್ತು ಅಂಶದ ಗುರುತು. ಲ್ಯಾಮಿನೆಟ್ ಆಗಿರುವಂಥ 'ಪ್ಯಾನ್ ಕಾರ್ಡ್' ರೂಪದಲ್ಲಿ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ. ಬಹಳ ಮುಖ್ಯವಾದ ಗುರುತಿನ ಸಾಕ್ಷ್ಯ ಇದು. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದಕ್ಕೆ, ಹಣಕಾಸು ವಹಿವಾಟಿಗೆ PAN ಬಹಳ ಮುಖ್ಯ.

 

ಇಂಥ PAN ಬಗ್ಗೆ ಬಹಳ ಮುಖ್ಯವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುತ್ತಿದೆ. ಇನ್ನು ಹಣಕಾಸು ವಹಿವಾಟಿನಲ್ಲಿ ತೆರಿಗೆ ಕದಿಯುವುದನ್ನು ತಪ್ಪಿಸುವ ಉದ್ದೇಶ ಕೂಡ PAN ಕಾರ್ಡ್ ಹಿಂದಿದೆ. ಭಾರತದಲ್ಲಿ ಎಲ್ಲೇ ವಿಳಾಸಗಳು ಬದಲಾದರೂ PAN ಸಂಖ್ಯೆ ಮೇಲೆ ಮಾತ್ರ ಪರಿಣಾಮ ಬೀರಲ್ಲ.

* PAN ಕಾರ್ಡ್ ಪಡೆಯಲು ಯಾರು ಅರ್ಹರು?

- ಭಾರತದಲ್ಲಿ ತೆರಿಗೆ ವ್ಯಾಪ್ತಿಗೆ ಬರುವಷ್ಟು ಆದಾಯ ಇರುವಂಥವರು. ಅದರಲ್ಲಿ ಭಾರತದಲ್ಲಿ ತೆರಿಗೆ ಪಾವತಿಸುವ ವಿದೇಶೀ ನಾಗರಿಕರು ಸಹ ಸೇರ್ಪಡೆಗೊಳ್ಳುತ್ತಾರೆ.

ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

- ಯಾರಾದರೂ ವ್ಯಾಪಾರ ಮಾಡುವಂಥವರು (ಅದು ರೀಟೇಲ್, ಸೇವೆ ಅಥ ಕನ್ಸಲ್ಟೆನ್ಸಿ ಯಾವುದೇ ಇರಲಿ) ಒಟ್ಟಾರೆ ಮಾರಾಟ, ವಹಿವಾಟು ಅಥವಾ ಸಗಟು ಸ್ಬೀಕೃತಿಯು ಹಿಂದಿನ ಹಣಕಾಸು ವರ್ಷದಲ್ಲಿ ರು. 5 ಲಕ್ಷ ರುಪಾಯಿ ದಾಟಿದಲ್ಲಿ ಅಂಥವರಿಗೆ ಬೇಕು.

ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ?

* PAN ಕಾರ್ಡ್ ಆದಾಯ ತೆರಿಗೆಗೆ ಯಾಕೆ ಮುಖ್ಯ?
- ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದಕ್ಕೆ PAN ಕಾರ್ಡ್ ಅಗತ್ಯ. PAN ಕಾರ್ಡ್ ಬಳಸುವ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯನ್ನು ಸರ್ಕಾರವು ತೆರಿಗೆಯ ದೃಷ್ಟಿಯಿಂದಲೇ ನೋಡುತ್ತದೆ. ಆದ್ದರಿಂದ PAN ಕಾರ್ಡ್ ಮುಖ್ಯ.

- ಆದಾಯ ತೆರಿಗೆ ರೀಫಂಡ್ ಫೈಲ್ ಮಾಡುವುದಕ್ಕೆ PAN ಕಾರ್ಡ್ ಬೇಕು. PAN ಸಂಖ್ಯೆ ನಮೂದಿಸದೆ ಸಲ್ಲಿಸುವ ರೀಫಂಡ್ ಅರ್ಜಿ ಪ್ರಕ್ರಿಯೆ ನಡೆಯುವುದಿಲ್ಲ.

- ಆದಾಯ ತೆರಿಗೆ ರೀಫಂಡ್ ಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ PAN ನಂಬರ್ ಅಗತ್ಯ.

 

- ಟಿಡಿಎಸ್ (ಟ್ಯಾಕ್ಸ್ ಡಿಟಕ್ತೆಡ್ ಅಟ್ ಸೋರ್ಸ್) ಕಡಿಮೆ ಮಾಡುವ ಯಾವುದೇ ಕಂಪೆನಿಗಳು, ವರ್ತಕರು ಅಥವಾ ಯಾವುದೇ ಸಂಸ್ಥೆಗೆ PAN ಮುಖ್ಯ. ಏಕೆಂದರೆ ಎಷ್ಟು ಮೊತ್ತದ ಹಣ ಟಿಡಿಎಸ್ ಕಳೆಯಲಾಗಿದೆ ಎಂದು ತೋರಿಸಬೇಕಾಗುತ್ತದೆ. ಟಿಡಿಎಸ್ ಪ್ರಮಾಣ ಪತ್ರದಲ್ಲಿ PAN ಸಂಖ್ಯೆ ಇರುತ್ತದೆ.

- ಹೆಚ್ಚಿನ ತೆರಿಗೆ ಬೀಳದಂತೆ ಎಚ್ಚರ ವಹಿಸಲು ಸಹಾಯ ಆಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ವೇಳೆಯಲ್ಲಿ ಹೆಚ್ಚಿನ ತೆರಿಗೆ ಕಟ್ಟುವುದು ತಪ್ಪುತ್ತದೆ. PAN ಸಂಖ್ಯೆ ನಮೂದಿಸದಿದ್ದಲ್ಲಿ ಸರ್ಕಾರದಿಂದ ಯಾವ ವಿನಾಯಿತಿ ತೋರಿಸದೆ 30% ಲೆವಿ ಹಾಕಬಹುದು.

* ಒಂದಕ್ಕಿಂತ ಹೆಚ್ಚು PAN ಕಾರ್ಡ್ ಇದ್ದರೆ ಏನಾಗುತ್ತದೆ?
- ಒಬ್ಬ ವ್ಯಕ್ತಿಯ ಹೆಸರಲ್ಲಿ ಒಂದಕ್ಕಿಂತ ಹೆಚ್ಚು PAN ಕಾರ್ಡ್ ಇರುವುದು ಅಪರಾಧ. ಅದಕ್ಕೆ ರು. 10,0000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ PAN ಕಾರ್ಡ್ ಇಟ್ಟುಕೊಳ್ಳುವುದು ಅಪರಾಧ.

* ಆದಾಯ ತೆರಿಗೆ ರಿಟರ್ನ್ಸ್ ಮತ್ತು ಫಾರ್ಮ್ 16 ಇರುವುದಕ್ಕೆ ಮೊದಲು ಆದಾಯ ತೆರಿಗೆ ರಿಟರ್ನ್ಸ್ ವೇಳೆ ಸಲ್ಲಿಸಬೇಕಾದ ದಾಖಲೆಗಳು
- ಬ್ಯಾಂಕ್ ಸ್ಟೇಟ್ ಮೆಂಟ್ಸ್/ ಉಳಿತಾಯ ಖಾತೆ ಮೇಲೆ ಬಡ್ಡಿ ದರಕ್ಕೆ ಪಾಸ್ ಬುಕ್

- ನಿಶ್ಚಿತ ಠೇವಣಿದಾರರಿಗೆ ಬಡ್ಡಿ ಆದಾಯದ ಸ್ಟೇಟ್ ಮೆಂಟ್

- ಟಿಡಿಎಸ್ ಪ್ರಮಾಣಪತ್ರ

- ಫಾರ್ಮ್ 26AS

- ಸೆಕ್ಷನ್ 80C ಹೂಡಿಕೆ ದಾಖಲೆಗಳು

-ಪ್ರಾವಿಡೆಂಟ್ ಫಂಡ್ ಕೊಡುಗೆ

-ಪ್ರಾವಿಡೆಂಟ್ ಫಂಡ್ ಕೊಡುಗೆ

-ಮಕ್ಕಳ ಶಾಲೆ ಟ್ಯೂಷನ್ ಫೀ

-ಜೀವ ವಿಮೆ ಪ್ರೀಮಿಯಮ್ ಮೊತ್ತ

- ಮುದ್ರಾಂಕ ಮತ್ತು ನೋಂದಣಿ ಶುಲ್ಕ

-ಮನೆ ಸಾಲದ ಮೇಲಿನ ಅಸಲು ಮೊತ್ತದ ಮರುಪಾವತಿ

-ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ

-ಮ್ಯೂಚುವಲ್ ಫಂಡ್ಸ್ ಹೂಡಿಕೆ

English summary

Budget 2021: Why PAN Card Is Important In Filing Income Tax Returns?

PAN card is important to file ITR. Know the reasons behind.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X