For Quick Alerts
ALLOW NOTIFICATIONS  
For Daily Alerts

ಕೆನರಾ ಬ್ಯಾಂಕ್ ನಿಂದ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ

|

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ನಿಂದ ವಿಶೇಷ ಗೋಲ್ಡ್ ಲೋನ್ ಯೋಜನೆ ಜಾರಿಗೆ ತರಲಾಗಿದೆ. ಕೊರೊನಾ ವೈರಸ್ ಕಾರಣಕ್ಕೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಸಾಲದ ಮೊತ್ತವನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಈ ಸಾಲವು ಕೃಷಿ, ಕೃಷಿ ಆಧಾರಿತ ವಲಯಗಳು, ವೈದ್ಯಕೀಯ ಮತ್ತು ವೈಯಕ್ತಿಕ ತುರ್ತುಗಳಿಗೆ ಮತ್ತು ಓವರ್ ಡ್ರಾಫ್ಟ್ ವ್ಯವಸ್ಥೆಯಾಗಿ ಚಿನ್ನವನ್ನು ಅಡಮಾನ ಮಾಡಿಕೊಂಡು ಸಾಲ ನೀಡಲಾಗುತ್ತದೆ ಎಂದು ಬ್ಯಾಂಕ್ ನಿಂದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಯೋಜನೆಯ ಆಫರ್ ಜೂನ್ 30ರ ತನಕ ಇರುತ್ತದೆ. ಬಡ್ಡಿ ದರವು ವರ್ಷಕ್ಕೆ 7.85 ಪರ್ಸೆಂಟ್ ಇರುತ್ತದೆ.

ಗ್ರಾಹಕರ ಹಣಕಾಸು ಅಗತ್ಯ ಪೂರೈಸಲು ನೆರವು

ಗ್ರಾಹಕರ ಹಣಕಾಸು ಅಗತ್ಯ ಪೂರೈಸಲು ನೆರವು

ಕೊರೊನಾ ವೈರಸ್ ಸಮಾಜೋ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸಿದೆ. ನಿತ್ಯದ ಖರ್ಚುಗಳ ನಿರ್ವಹಣೆ, ವ್ಯವಹಾರ ಮುಂದುವರಿಸಿಕೊಂಡು ಹೋಗುವುದು, ಆರೋಗ್ಯ ಮತ್ತು ಕುಟುಂಬ ರಕ್ಷಣೆ ಹಲವರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಗ್ರಾಹಕರ ಹಣಕಾಸು ಅಗತ್ಯಗಳನ್ನು ಪೂರೈಸಲು ಈ ಯೋಜನೆ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ದೇಶದಲ್ಲಿರುವ ಎಲ್ಲ ಕೆನರಾ ಬ್ಯಾಂಕ್ ಶಾಖೆಯಲ್ಲೂ ಸಾಲ ಲಭ್ಯ

ದೇಶದಲ್ಲಿರುವ ಎಲ್ಲ ಕೆನರಾ ಬ್ಯಾಂಕ್ ಶಾಖೆಯಲ್ಲೂ ಸಾಲ ಲಭ್ಯ

ದೇಶದಲ್ಲಿರುವ ಎಲ್ಲ ಶಾಖೆಗಳಲ್ಲೂ ಈ ಚಿನ್ನದ ಸಾಲವನ್ನು ನೀಡಲಾಗುತ್ತದೆ. ಗ್ರಾಹಕರ ಬದುಕನ್ನು ಮತ್ತೆ ಮಾಮೂಲಿ ಸ್ಥಿತಿಗೆ ತರಲು, ವ್ಯಾಪಾರ- ವ್ಯವಹಾರಕ್ಕಾಗಿಯೂ ನಗದು ಅವಶ್ಯಕತೆ ಇದೆ ಎಂದು ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಡಿ. ವಿಜಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

10ರಿಂದ 20 ಲಕ್ಷ ರುಪಾಯಿ ತನಕ ಸಾಲ
 

10ರಿಂದ 20 ಲಕ್ಷ ರುಪಾಯಿ ತನಕ ಸಾಲ

ಇನ್ನು ಸಾಲ ಮರು ಪಾವತಿಯನ್ನು ಮೂರು ವರ್ಷಗಳಲ್ಲಿ ಮಾಡುವ ಅವಕಾಶ ಇದೆ. 10ರಿಂದ 20 ಲಕ್ಷ ರುಪಾಯಿ ತನಕ ಸಾಲ ದೊರೆಯುತ್ತದೆ. ಅಂದ ಹಾಗೆ ಚಿನ್ನವನ್ನು ಭಾರತೀಯ ಕುಟುಂಬಗಳು ಆಪತ್ ಕಾಲದ ಆಸ್ತಿ ಎಂದೇ ಭಾವಿಸುತ್ತವೆ. ಆದ್ದರಿಂದ ಆಭರಣ, ನಾಣ್ಯದ ರೂಪದಲ್ಲಿ ಚಿನ್ನವನ್ನು ಇರಿಸಿಕೊಂಡಿರುತ್ತವೆ. ಹಣಕಾಸಿನ ತುರ್ತು ಬಂದಾಗ ಬಳಸಿಕೊಳ್ಳುತ್ತವೆ.

English summary

Canara Bank Offering Cheapest Interest Gold Loan

State owned Canara bank offering cheapest interest gold loan. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X