For Quick Alerts
ALLOW NOTIFICATIONS  
For Daily Alerts

ಸಿಎನ್‌ಜಿ ಬೆಲೆ ಏರಿಕೆ: ನೂತನ ದರ ಪರಿಶೀಲಿಸಿ

|

ದೆಹಲಿ-ಎನ್‌ಸಿಆರ್ ಮತ್ತು ಇತರ ನಗರಗಳಲ್ಲಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ದರಗಳು ಭಾನುವಾರದಿಂದ ಜಾರಿಗೆ ಬರಲಿವೆ. ಏರಿಕೆಯ ಬಳಿಕ ಸಿಎನ್‌ಜಿ ರಾಷ್ಟ್ರ ರಾಜಧಾನಿಯಲ್ಲಿ ರೂ 73.61/ಕೆಜಿ, ನೋಯ್ಡಾದಲ್ಲಿ ರೂ 76.17/ಕೆಜಿ, ಮತ್ತು ಗುರುಗ್ರಾಮದಲ್ಲಿ ರೂ 81.94/ಕೆಜಿ ಆಗಿದೆ.

 

ರಾಜಸ್ಥಾನದ ರೇವಾರಿಯಲ್ಲಿ, ಗ್ರಾಹಕರು ಸಿಎನ್‌ಜಿಗೆ ರೂ 84.07/ಕೆಜಿ ಪಾವತಿಸಬೇಕಾಗುತ್ತದೆ. ಇತರ ಹಲವಾರು ನಗರಗಳಲ್ಲಿ ಸಿಎನ್‌ಜಿ ಬೆಲೆಯಲ್ಲಿ ಏರಿಕೆಯಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರ, ಶಾಮ್ಲಿ ಮತ್ತು ಮೀರತ್‌ನಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 80.84 ರೂ.ಗೆ ಏರಿಸಲಾಗಿದೆ.

ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳ ದರ ಪಟ್ಟಿ

ಈ ನಡುವೆ ಕರ್ನಾಲ್ ಮತ್ತು ಕೈತಾಲ್‌ನಲ್ಲಿ ಹೊಸ ಸಿಎನ್‌ಜಿ ಬೆಲೆಗಳು ರೂ 82.27/ಕೆಜಿ ಆಗಿದೆ. ಗ್ರಾಹಕರು ಕಾನ್ಪುರ, ಫತೇಪುರ್ ಮತ್ತು ಹಮೀರ್‌ಪುರದಲ್ಲಿ ಒಂದು ಕೆಜಿ ಸಿಎನ್‌ಜಿ ಪಡೆಯಲು 85.40 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಸಿಎನ್‌ಜಿ ಬೆಲೆ ಏರಿಕೆ: ನೂತನ ದರ ಪರಿಶೀಲಿಸಿ

ಮಾರ್ಚ್‌ನಿಂದ ಈವರೆಗೆ 13 ಬಾರಿ ಸಿಎನ್‌ಜಿ ದರ ಏರಿಕೆ

ಮೇ 15 ರಂದು ಸಿಎನ್‌ಜಿ ಬೆಲೆಯನ್ನು ಇದೇ ರೀತಿಯಾಗಿ ಎರಡು ರೂಪಾಯಿ ಏರಿಕೆ ಮಾಡಲಾಗಿದೆ. ಮಾರ್ಚ್ 7 ರಿಂದ ಈವರೆಗೆ ಸಿಎನ್‌ಜಿ ಬೆಲೆ ಏರಿಕೆ 13 ನೇ ಏರಿಕೆಯಾಗಿದೆ. ಏಪ್ರಿಲ್ ತಿಂಗಳೊಂದರಲ್ಲೇ ಸಿಎನ್‌ಜಿ ಬೆಲೆ 7.50 ರೂಪಾಯಿ ಹೆಚ್ಚಳವಾಗಿದೆ.

ನೂತನ ಬೆಲೆ ಪರಿಶೀಲಿಸಿ

 • ಬೆಂಗಳೂರು: ಏಪ್ರಿಲ್ ಬೆಲೆ 75.00 ರೂ, ಮೇ ಬೆಲೆ 83.00 ರೂ
 • ಭರತ್‌ಪುರ: ಏಪ್ರಿಲ್ ಬೆಲೆ 83.50 ರೂ, ಮೇ ಬೆಲೆ 87.00 ರೂ
 • ದೇವಾಸ್: ಏಪ್ರಿಲ್ ಬೆಲೆ 82.00 ರೂ, ಮೇ ಬೆಲೆ 89.00 ರೂ
 • ಫಿರೋಜಾಬಾದ್: ಏಪ್ರಿಲ್ ಬೆಲೆ 83.50 ರೂ, ಮೇ ಬೆಲೆ 87.00 ರೂ
 • ಹೈದರಾಬಾದ್: ಏಪ್ರಿಲ್ ಬೆಲೆ 85.00 ರೂ, ಮೇ ಬೆಲೆ 85.00 ರೂ
 • ಮಥುರಾ: ಏಪ್ರಿಲ್ ಬೆಲೆ 75.00 ರೂ, ಮೇ ಬೆಲೆ 87.00 ರೂ
 • ಮೀರತ್: ಏಪ್ರಿಲ್ ಬೆಲೆ 78.84 ರೂ, ಮೇ ಬೆಲೆ 82.84 ರೂ
 • ಮುಂಬೈ: ಏಪ್ರಿಲ್ ಬೆಲೆ 72.00 ರೂ, ಮೇ ಬೆಲೆ 76.00 ರೂ
 • ಎನ್‌ಸಿಆರ್: ಏಪ್ರಿಲ್ ಬೆಲೆ 71.61 ರೂ, ಮೇ ಬೆಲೆ 75.61 ರೂ
 • ನವದೆಹಲಿ: ಏಪ್ರಿಲ್ ಬೆಲೆ 71.61 ರೂ, ಮೇ ಬೆಲೆ 75.61 ರೂ
 • ರೇವಾರಿ: ಏಪ್ರಿಲ್ ಬೆಲೆ 82.07 ರೂ, ಮೇ ಬೆಲೆ 86.07 ರೂ
 • ಸೋನಿಪತ್: ಏಪ್ರಿಲ್ ಬೆಲೆ 75.25 ರೂ, ಮೇ ಬೆಲೆ 82.00 ರೂ

English summary

CNG Prices Rise Again By Rs 2, Check New Rates in Your City

CNG Prices Rise Again By Rs 2 In Delhi And Other Cities, Check New Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X