For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋ 'ಕಾಯಿನ್ ಟ್ರಾಕರ್' ಭಾರತಕ್ಕೆ ಎಂಟ್ರಿ, ಏನಿದು?

|

ಪ್ರಮುಖ ಕ್ರಿಪ್ಟೋಕರೆನ್ಸಿ ತೆರಿಗೆ ಅನುಸರಣೆ ಮತ್ತು ಪೋರ್ಟ್‌ಫೋಲಿಯೋ ಟ್ರ್ಯಾಕಿಂಗ್ ಸಂಸ್ಥೆಗಳಲ್ಲಿ ಒಂದಾದ CoinTracker ಮೇ 25ರಂದು ಅಧಿಕೃತ ಉತ್ಪನ್ನ ಬಿಡುಗಡೆಯೊಂದಿಗೆ ತನ್ನ ಭಾರತ ಪ್ರವೇಶವನ್ನು ಘೋಷಿಸಿದೆ.

 

ಭಾರತೀಯ ಮಾರುಕಟ್ಟೆಗೆ CoinTracker ನ ಮೊದಲ ಪ್ರವೇಶವನ್ನು ಪ್ರಕಟಿಸಿದ ಕಂಪನಿಯ ಸಿಇಒ ಜಾನ್ ಲರ್ನರ್ ಅವರು ಕ್ರಿಪ್ಟೋ ತೆರಿಗೆ ಅನುಸರಣೆ ಮತ್ತು ಪೋರ್ಟ್‌ಪೋಲಿಯೋ ಟ್ರ್ಯಾಕಿಂಗ್ ಉತ್ಪನ್ನಗಳು ಇಂದಿನಿಂದ ಭಾರತದಾದ್ಯಂತ ಎಲ್ಲಾ ಕ್ರಿಪ್ಟೋ ಬಳಕೆದಾರರಿಗೆ ಲಭ್ಯವಿರುತ್ತವೆ ಎಂದು ಹೇಳಿದರು.

ಬಿಟ್‌ಕಾಯಿನ್‌ನಲ್ಲಿ 'ಕಾಯಿನ್' ಇದ್ದ ಮಾತ್ರಕ್ಕೆ ಅದು ಹಣವಲ್ಲ: ಐಎಂಎಫ್ ಮುಖ್ಯಸ್ಥೆ

ಹಣಕಾಸು ಕಾಯಿದೆ 2022 ರ ಮೂಲಕ, ಭಾರತ ಸರ್ಕಾರವು ಕ್ರಿಪ್ಟೋ ವಹಿವಾಟಿನಿಂದ ಬರುವ ಆದಾಯದ ಮೇಲೆ 30 ಪ್ರತಿಶತ ತೆರಿಗೆಯನ್ನು ವಿಧಿಸಿದೆ. ಈ ನಿಯಮದ ಪ್ರಕಾರ ಓರ್ವ ವ್ಯಕ್ತಿ ಒಂದು ಕ್ರಿಪ್ಟೋ ವಹಿವಾಟಿನ ನಷ್ಟವನ್ನು ಮತ್ತೊಂದು ಲಾಭದೊಂದಿಗೆ ಸರಿದೂಗಿಸಲು ಅನುಮತಿ ಇಲ್ಲ. ಹೆಚ್ಚುವರಿಯಾಗಿ, ಕ್ರಿಪ್ಟೋ ವರ್ಗಾವಣೆಗಳ ಮೇಲೆ ಒಂದು ಶೇಕಡಾ ಟಿಡಿಎಸ್ ಅನ್ನು ಜುಲೈ 1, 2022 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಕ್ರಿಪ್ಟೋ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ಬೆಂಬಲ ಇಲ್ಲದಿದ್ದರೂ ಭಾರತೀಯರೇ CoinTracker ನ ಎರಡನೇ ಅತಿದೊಡ್ಡ ಬಳಕೆದಾರರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಕ್ರಿಪ್ಟೋ 'ಕಾಯಿನ್ ಟ್ರಾಕರ್' ಭಾರತಕ್ಕೆ ಎಂಟ್ರಿ, ಏನಿದು?

ಭಾರತೀಯರಿಗೆ CoinTrackerನಿಂದ ಏನು ಪ್ರಯೋಜನ?

ಭಾರತದ ಕ್ರಿಪ್ಟೋ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಟ್ರಾಕ್ ಮಾಡಲು ಈ CoinTracker ಸಹಕಾರಿಯಾಗಿದೆ. ಬಳಕೆದಾರರು ತಮ್ಮ ವ್ಯಾಲೆಟ್ ವಿವರಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಬೇಕಾಗುತ್ತದೆ. ಇದು ತೆರಿಗೆಯನ್ನು ಪಾವತಿಸಲು ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಳಸಬಹುದಾದ ತೆರಿಗೆ ವರದಿಯನ್ನು ಲೆಕ್ಕ ಹಾಕಿ ಜನರಿಗೆ ನೀಡುತ್ತದೆ. ಇದರಿಂದಾಗಿ ಕ್ರಿಪ್ಟೋ ತೆರಿಗೆಯ ಬಗ್ಗೆ ಜನರು ಗೊಂದಲಕ್ಕೆ ಒಳಗಾಗುವ ಸಂಭವವಿಲ್ಲ.

"ಕ್ರಿಪ್ಟೋಕರೆನ್ಸಿ ಖರೀದಿ, ಹೋಲ್ಡಿಂಗ್, ವಹಿವಾಟು ನಡೆಸುವುದನ್ನು ಎಲ್ಲ ಸಂದರ್ಭದಲ್ಲೂ ತಿಳಿಯುವುದು ಜನರಿಗೆ ಸವಾಲಾಗಿದೆ. ಇದಕ್ಕಾಗಿ ಸರಿಯಾದ ಸಾಧನವಿಲ್ಲದೆ ತೆರಿಗೆ ಎಷ್ಟು ಎಂಬುವುದು ಕೂಡಾ ಗೊಂದಲವಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು CoinTracker ಅನ್ನು ನಿರ್ಮಿಸಿದ್ದೇವೆ. ನಮ್ಮ ಕೊಡುಗೆಯನ್ನು ಭಾರತದಲ್ಲಿ ವಿಸ್ತರಿಸಲು ಉತ್ಸುಕರಾಗಿದ್ದೇವೆ," ಎಂದು ಕಂಪನಿಯ ಸಿಇಒ ಜಾನ್ ಲರ್ನರ್ ತಿಳಿಸಿದ್ದಾರೆ.

English summary

CoinTracker makes India entry, aims to help cryptocurrency investors, Here's Details

Crypto tax: CoinTracker makes India entry, aims to help cryptocurrency investors. Here’s how it works.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X