For Quick Alerts
ALLOW NOTIFICATIONS  
For Daily Alerts

ಬ್ಯಾಂಕ್‌ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತೆ ಈ ಯೋಜನೆ!

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಹಾಗೆಯೇ ಸಾಮಾನ್ಯವಾಗಿಯೇ ಎಫ್‌ಡಿ (ಫಿಕ್ಸಿಡ್ ಡೆಪಾಸಿಟ್) ಮೇಲಿನ ಬಡ್ಡಿದರವನ್ನು ಕೂಡಾ ಏರಿಕೆ ಮಾಡಿದೆ.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಐಸಿಐಸಿಐ, ಎಚ್‌ಡಿಎಫ್‌ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಇತ್ತೀಚೆಗೆ ಎಫ್‌ಡಿ ಮೇಲೆ ಬಡ್ಡಿದರವನ್ನು ಏರಿಕೆ ಮಾಡಿದೆ. ಆದರೆ ಈ ಸಂದರ್ಭದಲ್ಲೂ ನಮಗೆ ಈ ಬಡ್ಡಿದರಕ್ಕಿಂತ ಅಧಿಕ ಬಡ್ಡಿದರವನ್ನು ನೀಡುವ ಯೋಜನೆ ಒಂದಿದೆ. ಅದು ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್.

ರೆಪೋ ದರ ಮತ್ತೆ ಏರಿಕೆ: ಇಎಂಐ ಹೊರೆ ಅಧಿಕ ಸೇರಿ ವೈಯಕ್ತಿಕ ಹಣಕಾಸಿನ ಮೇಲೆ ಏನೆಲ್ಲ ಪ್ರಭಾವ?

ನೀವು ಮೇಲೆ ತಿಳಿಸಿದ ಯಾವುದೇ ಬ್ಯಾಂಕಿನಲ್ಲಿ ಎಫ್‌ಡಿ ಮಾಡಿಕೊಳ್ಳಬೇಕು ಎಂದು ಚಿಂತನೆ ನಡೆಸುತ್ತಿದ್ದರೆ, ನೀವು ಖಂಡಿತವಾಗಿ ಅಂಚೆ ಕಚೇರಿಯ ಈ ಯೋಜನೆಯ ಬಗ್ಗೆ ತಿಳಿಯಬೇಕು. ಅಂಚೆ ಕಚೇರಿಯ ಈ ಯೋಜನೆಯಲ್ಲಿ ಬ್ಯಾಂಕ್‌ನ ಎಫ್‌ಡಿಗಿಂತ ಅಧಿಕ ಬಡ್ಡಿದರವಿದೆ. ಈ ಬಗ್ಗೆ ನಾವು ಇಲ್ಲಿ ವಿವರವಾದ ಮಾಹಿತಿ ನೀಡಿದ್ದೇವೆ, ಮುಂದೆ ಓದಿ...

 ಬಡ್ಡಿದರ ಎಷ್ಟಿದೆ ತಿಳಿಯಿರಿ

ಬಡ್ಡಿದರ ಎಷ್ಟಿದೆ ತಿಳಿಯಿರಿ

ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ ಒಂದು ರೀತಿಯಲ್ಲಿ ಎಫ್‌ಡಿ ಕೂಡಾ ಹೌದು. ಇದರಲ್ಲಿ ಒಂದು ನಿರ್ದಿಷ್ಟ ಸಮಯದವರೆಗೆ ಹೂಡಿಕೆ ಮಾಡುವುದರಿಂದಾಗಿ ನೀವು ನಿಗದಿತ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ ಮೂಲಕ ನಾವು ಒಂದರಿಂದ ಐದು ವರ್ಷದ ಅವಧಿಗೆ ಶೇಕಡ 5.5ರಿಂದ ಶೇಕಡ 6.7ರಷ್ಟು ಬಡ್ಡಿದರ ಪಡೆಯಬಹುದು.

 ಎಫ್‌ಡಿಯಲ್ಲಿ ಬಡ್ಡಿಯ ಮೇಲೂ ತೆರಿಗೆ

ಎಫ್‌ಡಿಯಲ್ಲಿ ಬಡ್ಡಿಯ ಮೇಲೂ ತೆರಿಗೆ

ಬ್ಯಾಂಕ್‌ನಲ್ಲಿ ಒಂದು ಹಣಕಾಸು ವರ್ಷದಲ್ಲಿ ಎಫ್‌ಡಿಯಲ್ಲಿ ಪಡೆದ ಬಡ್ಡಿಯು 40 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಅದರ ಮೇಲೆ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಈ ಮಿತಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆಗಿದೆ. ಅದೇ ಸಮಯದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಎಫ್‌ಡಿಯಿಂದ ಪಡೆದ 50 ಸಾವಿರ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಆದರೆ ಅದಕ್ಕಿಂತ ಅಧಿಕ ಆದಾಯದ ಮೇಲೆ ಟಿಡಿಎಸ್ ವಿಧಿಸಲಾಗುತ್ತದೆ.

 5 ವರ್ಷಗಳ ಹೂಡಿಕೆಗೆ ತೆರಿಗೆ ವಿನಾಯಿತಿ
 

5 ವರ್ಷಗಳ ಹೂಡಿಕೆಗೆ ತೆರಿಗೆ ವಿನಾಯಿತಿ

ಈ ಅವಧಿ ಠೇವಣಿ ಯೋಜನೆ ಮತ್ತು 5 ವರ್ಷಗಳ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ ನಾವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದರ ಅಡಿಯಲ್ಲಿ, ನೀವು ರೂ 1.50 ಲಕ್ಷದವರೆಗಿನ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ, 5 ವರ್ಷಗಳವರೆಗೆ ಬ್ಯಾಂಕ್‌ಗಳ ಎಫ್‌ಡಿಗಳಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಲಭ್ಯವಿದೆ.

English summary

Earn up to 6.7pc interest with Post Office National Savings Time Deposit Account

Earn up to 6.7% interest with National Savings Time Deposit Account of the Post Office Scheme. Know more about the scheme in Kannada.
Story first published: Tuesday, June 21, 2022, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X