For Quick Alerts
ALLOW NOTIFICATIONS  
For Daily Alerts

ನಿಶ್ಚಿತ ಠೇವಣಿಯಿಂದ ಹೆಚ್ಚಿನ ರಿಟರ್ನ್ಸ್ ಗಳಿಸಲು ಇಲ್ಲಿದೆ ಸರಳ ಕಾರ್ಯತಂತ್ರ

By ದಿನಿ
|

ಬ್ಯಾಂಕ್ ಮತ್ತು ಹಣಕಾಸು ಸೇವಾ ಸಂಸ್ಥೆಗಳಲ್ಲಿ ಲಭ್ಯವಿರುವ ಉತ್ತಮ ಹೂಡಿಕೆ ಸಾಧನಗಳಲ್ಲಿ ಬೆಸ್ಟ್ ಚಾಯ್ಸ್ ಅಂದರೆ ನಿಶ್ಚಿತ ಠೇವಣಿಗಳು ಅಥವಾ ಫಿಕ್ಸ್ಡ್ ಡಿಪಾಸಿಟ್ಸ್. ಆದಾಗ್ಯೂ, ನಿಶ್ಚಿತ ಠೇವಣಿಗಳನ್ನು ಸಾಂಪ್ರದಾಯಿಕವಾದ ಹಳೇ ಶೈಲಿಯ ಹೂಡಿಕೆ ಸಾಧನ ಎಂದೇ ಪರಿಗಣಿತವಾಗಿದೆ.

ಆದರೆ ವಾಸ್ತವವೆಂದರೆ, ಇಂದಿಗೂ ಸಹ ಇದೇ ಆಕರ್ಷಕ ಮತ್ತು ಹೆಚ್ಚಿನ ಲಾಭ ತಂದುಕೊಡುವ ಅತ್ಯಂತ ನಂಬಿಕೆಯ ಸಾಧನವಾಗಿ ಜನಮಾನಸದಲ್ಲಿ ನೆಲೆಸಿದೆ. ಇದಕ್ಕೆ ಕಾರಣ ಬಹುಸುಲಭ. ಇದು ಸುಭದ್ರ, ಸುರಕ್ಷಿತ, ನಿಮ್ಮ ಹೂಡಿಕೆಗೆ ಗ್ಯಾರಂಟಿ ವರಮಾನ ತಂದುಕೊಡುವ ಆದಾಯ ಮೂಲ.

ಆದರೆ, ಸಮಕಾಲೀನ ಪರಿಸ್ಥಿತಿಯಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿದರಗಳು ಸಾರ್ವಕಾಲಿಕ ಕುಸಿತಕ್ಕೆ ಒಳಗಾಗಿವೆ. ಕೋವಿಡ್-19 ಪರಿಸ್ಥಿತಿಯಿಂದ ಎದುರಾಗಿರುವ ಆರ್ಥಿಕ ರಂಗದ ಏರಿಳಿತಗಳೇ ಇದಕ್ಕೆ ಕಾರಣ.

ನಿಶ್ಚಿತ ಠೇವಣಿ ಹೂಡಿಕೆದಾರರಾಗಿ ನೀವು, ನಿಮ್ಮ ಬಂಡವಾಳಕ್ಕೆ ಹೆಚ್ಚಿನ ಆದಾಯ ಗಳಿಸಲು ಈ ಕೆಳಗಿನ ಕೆಲವೊಂದು ಸರಳ ಕಾರ್ಯತಂತ್ರಗಳನ್ನು ಪಾಲಿಸುವುದು ಅಗತ್ಯ:

ಅಲ್ಪಾವಧಿಯ ನಿಶ್ಚಿತ ಠೇವಣಿಗಳಲ್ಲಿ ಹಣ ತೊಡಗಿಸಿ

ಅಲ್ಪಾವಧಿಯ ನಿಶ್ಚಿತ ಠೇವಣಿಗಳಲ್ಲಿ ಹಣ ತೊಡಗಿಸಿ

ನಿಮ್ಮ ಹತ್ತಿರ ದುಡ್ಡಿದ್ದು, ನಿಶ್ಚಿತ ಠೇವಣಿ ತೆರೆಯಲು ಬಯಸಿದ್ದೇ ಆದರೆ ಅಥವಾ ಈಗಿರುವ ನಿಶ್ಚಿತ ಠೇವಣಿ ಖಾತೆಯನ್ನು ನವೀಕರಿಸಲು ಬಯಸಿ, ಹಾಲಿ ಬಡ್ಡಿದರ ಕಡಿಮೆ ಇದ್ದರೆ ಅಥವಾ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ, ನೀವು ಅಲ್ಪಾವಧಿಯ ನಿಶ್ಚಿತ ಠೇವಣಿಗಳನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ಅಲ್ಪಾವಧಿಯ ನಿಶ್ಚಿತ ಠೇವಣಿಗಳು ದೀರ್ಘಕಾಲೀನ ಅವಧಿಯಲ್ಲಿ ಕಡಿಮೆ ಬಡ್ಡಿದರಕ್ಕೆ ಒಳಪಡದಿದ್ದಾಗ, ನೀವು ದೀರ್ಘಾವಧಿಯ ನಿಶ್ಚಿತ ಠೇವಣಿಗಳಿಗೂ ಮುಂದೆ ಪ್ಲಾನ್ ಮಾಡಬಹುದು. ಅಲ್ಪಾವಧಿಯಿಂದ ಮಧ್ಯಮಾವಧಿಯಲ್ಲಿ ಬಡ್ಡಿದರ ಏರಿಕೆ ಕಂಡಾಗ, ನೀವಾಗ ಠೇವಣಿ ಅವಧಿಯನ್ನು ಹೊಂದಿಸಲು ಪ್ರಾರಂಭಿಸಬಹುದು.

ವಿವಿಧ ನಿಶ್ಚಿತ ಠೇವಣಿಗಳನ್ನು ಹೋಲಿಕೆ ಮಾಡಿ

ವಿವಿಧ ನಿಶ್ಚಿತ ಠೇವಣಿಗಳನ್ನು ಹೋಲಿಕೆ ಮಾಡಿ

ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿರುವ ವಿವಿಧ ನಿಶ್ಚಿತ ಠೇವಣಿಗಳ ಬಡ್ಡಿದರ, ಗಂಡಾಂತರಗಳು, ಅವಧಿ, ಗುಪ್ತ ಶುಲ್ಕಗಳು ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕಿ. ಪ್ರತಿಯೊಂದು ಬ್ಯಾಂಕ್ ವಿಭಿನ್ನ ಬಡ್ಡಿದರ ನೀಡುತ್ತವೆ. ಬಿಸಿನೆಸ್ ನಿಶ್ಚಿತ ಠೇವಣಿಗಳಿಗೂ ಸಹ ಬೇರೆ ಬೇರೆ ಬಡ್ಡಿದರ ನಿಗದಿಯಾಗಿರುತ್ತದೆ. ಹೂಡಿಕೆದಾರರಾಗಿ ನೀವು ಆಯ್ಕೆ ಮಾಡಬೇಕಾದ ವಿಷಯಗಳೆಂದರೆ, ಉತ್ತಮ ಆದಾಯ ಮತ್ತು ಹೂಡಿಕೆ ಭದ್ರತೆ ಖಾತ್ರಿ ಪಡಿಸಿಕೊಳ್ಳಬೇಕು. ಇದನ್ನು ಮಾಡಬೇಕಾದರೆ, ನೀವು ಮಾರುಕಟ್ಟೆಯಲ್ಲಿರುವ ವಿವಿಧ ನಿಶ್ಚಿತ ಠೇವಣಿ ಸಾಧನಗಳ ಒಳಿತು ಕೆಡುಕುಗಳನ್ನು ತೂಕ ಮಾಡಬೇಕು. ಕ್ರಿಸಿಲ್ ನಂತಹ ಮೌಲ್ಯಮಾಪನ ಸಂಸ್ಥೆಗಳು ಕಂಪನಿ ನಿಶ್ಚಿತ ಠೇವಣಿಗಳಿಗೆ ರೇಟಿಂಗ್ ನೀಡುತ್ತವೆ.

ಹಲವು ನಿಶ್ಚಿತ ಠೇವಣಿಗಳ ಆಯ್ಕೆಗೆ ಗಮನ ಕೊಡಿ

ಹಲವು ನಿಶ್ಚಿತ ಠೇವಣಿಗಳ ಆಯ್ಕೆಗೆ ಗಮನ ಕೊಡಿ

ಎಲ್ಲಾ ರೀತಿಯ ಹೂಡಿಕೆಗಳು ಮತ್ತು ಹಣಕಾಸು ಸಾಧನಗಳಲ್ಲಿ ಕೆಲವು ಗಂಡಾಂತರಗಳು ಇದ್ದೇ ಇರುತ್ತವೆ ಎಂಬ ವಾಸ್ತವ ಅಥವಾ ಕಟುಸತ್ಯವನ್ನು ಹೂಡಿಕೆದಾರರು ಅಗ್ರಗಣ್ಯವಾಗಿ ಪರಿಗಣಿಸಬೇಕು. ವಿಶ್ವ ಮಾರುಕಟ್ಟೆಯೇ ಇದೀಗ ಅನಿಶ್ಚಿಯ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಾಗಾಗಿ, ಗಂಡಾಂತರವಿಲ್ಲದ ಯಾವುದೇ ಹೂಡಿಕೆ ಸಾಧನಗಳು ಯಾವುದೇ ದೇಶದ ಮಾರುಕಟ್ಟೆ ಇಲ್ಲ ಎಂಬುದು ಸತ್ಯ. ಪ್ರತಿ ಹೂಡಿಕೆ ಸಾಧನದಲ್ಲೂ ಒಂದು ಮಟ್ಟದಲ್ಲಿ ಅಪಾಯ ಇದ್ದೇ ಇರುತ್ತದೆ, ಆದರೆ ನಾವುಗಳು ವೈಯಕ್ತಿಕವಾಗಿ ಅವುಗಳನ್ನು ಗುರುತಿಸುವುದಿಲ್ಲ. ಹಾಗಾಗಿ ನಾವು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವಾಗ ಹಲವು ಸಾಧನಗಳ ಆಯ್ಕೆಗೆ ಗಮನ ನೀಡಬೇಕು. ಒಂದೇ ಸಾಧನದಲ್ಲಿ ಬೃಹತ್ ಮೊತ್ತ ತೊಡಗಿಸುವ ಬದಲು ಅಲ್ಪಾವಧಿಯ ಹಲವು ನಿಶ್ಚಿತ ಠೇವಣಿ ಸಾಧನಗಳಲ್ಲಿ ಹೂಡಿಕೆ ಮಾಡುವುದು ಜಾಣತನ. ಹೀಗೆ ಮಾಡುವುದರಿಂದ ಬಡ್ಡಿ ವರಮಾನ ಜಾಸ್ತಿ ಬರುವ ಜತೆಗೆ, ಸುರಕ್ಷಿತವೂ ಆಗಿರುತ್ತದೆ.

ಬದಲಾಗುವ ಬಡ್ಡಿದರದ ನಿಶ್ಚಿತ ಠೇವಣಿ ಆಯ್ಕೆ ಸೂಕ್ತ

ಬದಲಾಗುವ ಬಡ್ಡಿದರದ ನಿಶ್ಚಿತ ಠೇವಣಿ ಆಯ್ಕೆ ಸೂಕ್ತ

ಫ್ಲೋಟಿಂಗ್ ರೇಟ್ ನಿಶ್ಚಿತ ಠೇವಣಿ ಸಾಧನಗಳಲ್ಲಿ ಸಿಗುವ ಬಡ್ಡಿ ಆದಾಯ ಅವಧಿ ಮುಕ್ತಾಯವಾಗುವ ತನಕ ಒಂದೇ ತರನಾಗಿರುವುದಿಲ್ಲ. ಅದು ಹಣಕಾಸು ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿರುತ್ತದೆ. ನಿಯಮಿತವಾಗಿ ಬಡ್ಡಿದರ ಬದಲಾಗುತ್ತಿರುತ್ತದೆ. ಫ್ಲೋಟಿಂಗ್ ಅಂದರೆ ಬದಲಾಗುವ ಎಂದರ್ಥ. ಉದಾಹರಣೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರ ಸೇರಿದಂತೆ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲಕ್ಕೆ ಬಡ್ಡಿದರ ಕಡಿಮೆ ಮಾಡಿದಾಗ, ಬ್ಯಾಂಕ್ ಗಳು ಸ್ವಯಂಚಾಲಿತವಾಗಿ ಫ್ಲೋಟಿಂಗ್ ಬಡ್ಡಿದರ ಇಳಿಕೆ ಮಾಡುತ್ತವೆ.

ಆರ್ ಬಿ ಐ ನೀತಿದರ ಹೆಚ್ಚಿಸಿದಾಗಲೂ, ಸಹಜವಾಗಿ ಬಡ್ಡಿದರ ಏರಿಕೆ ಕಾಣುತ್ತದೆ. ಆರ್ ಬಿ ಐ ಪ್ರತಿ 2 ವಾರಗಳಿಗೊಮ್ಮೆ ಬ್ಯಾಂಕ್‌ಗಳ ಖಜಾನೆ ಬಿಲ್ ದರಗಳನ್ನು ಪ್ರಕಟಿಸುತ್ತಿರುತ್ತದೆ. ಹೂಡಿಕೆ ಸಾಧನಗಳ ಬಡ್ಡಿ ದರಗಳು ಇದಕ್ಕೆ ತಕ್ಕಂತೆ ಏರಿಳಿತ ಕಾಣುತ್ತಿರುತ್ತವೆ. ಒಟ್ಟಾರೆ, ನಿಶ್ಚಿತ ಬಡ್ಡಿದರದ ಠೇವಣಿ ಸಾಧನಗಳಿಗಿಂತ ಬದಲಾಗುವ ಬಡ್ಡಿದರಗಳೇ ಹೆಚ್ಚು ವರಮಾನ ನೀಡುತ್ತವೆ.ಕಡಿಮೆ ಗಂಡಾಂತರವಿರುವ ಫ್ಲೋಟಿಂಗ್ ಬಡ್ಡಿದರದ ನಿಶ್ಚಿತ ಠೇವಣಿಗಳು ಸೂಕ್ಷ್ಮ ಆಯ್ಕೆಗಳಾಗಿವೆ. ದೀರ್ಘ ಕಾಲದಲ್ಲಿ ಹೂಡಿಕೆ ಮಾಡುವವರಿಗೆ ಇದು ಬೆಸ್ಟ್ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

English summary

Follow These Simple Strategy To Enhance Return On Fixed Deposit

As an FD investor, you can follow these strategies to enhance return on your capital investment in FDs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X