For Quick Alerts
ALLOW NOTIFICATIONS  
For Daily Alerts

ಜೂನ್‌ನಿಂದ ಉಚಿತ ಸಿಲಿಂಡರ್ ನೀಡಲು ಸಜ್ಜಾಗಿದೆ ಈ ರಾಜ್ಯ!

|

ಈ ರಾಜ್ಯದಲ್ಲಿ ಸರ್ಕಾರವು ಚುನಾವಣಾ ಪೂರ್ವ ಭರವಸೆಯಂತೆ ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲು ಸಜ್ಜಾಗಿದೆ. ಈ ಹಣದುಬ್ಬರದ ನಡುವೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರವು ಭಾರೀ ಏರಿಕೆ ಕಂಡಿದೆ. ಈ ನಡುವೆ ಈ ಒಂದು ರಾಜ್ಯದಲ್ಲಿ ಜನರ ಹೊರೆ ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.

 

ಈಗಾಗಲೇ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಎಲ್ಲಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಭರವಸೆಯನ್ನು ನೀಡಿದೆ. ಗೋವಾದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಭರವಸೆ ನೀಡಿದೆ. ಈಗ ಅಧಿಕಾರಕ್ಕೆ ಬಂದ ಬಳಿ ಭರವಸೆ ಪೂರೈಸಲು ಮುಂದಾಗಿದೆ.

ಎಲ್‌ಪಿಜಿ ಸಬ್ಸಿಡಿ ನಿಯಮ ಬದಲಾವಣೆ: ಇನ್ಮುಂದೆ ಯಾರು ಅರ್ಹರು?

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಅಭಿವೃದ್ಧಿ ಸಚಿವ ಗೋವಿಂದ ಗೌಡೆ, "ನಾವು ಚುನಾವಣಾ ಪೂರ್ವ ಭರವಸೆಯನ್ನು ಪೂರೈಸಲು ಮುಂದಾಗಿದ್ದೇವೆ. ನಮ್ಮ ಭರವಸೆಯಂತೆ ಬಿಪಿಎಲ್ ಕಾರ್ಡ್‌ದಾರರಿಗೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು," ಎಂದು ತಿಳಿಸಿದ್ದಾರೆ.

 ಜೂನ್‌ನಿಂದ ಉಚಿತ ಸಿಲಿಂಡರ್ ನೀಡಲು ಸಜ್ಜಾಗಿದೆ ಈ ರಾಜ್ಯ!

ಗೋವಾ ಸರ್ಕಾರದ ಪ್ರಕಾರ 4 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರುವವರು ಈ ಯೋಜನೆಯಲ್ಲಿ ಫಲಾನುಭವಿಗಳು ಆಗಬಹುದಾಗಿದೆ. "ಸುಮಾರು 37,000 ಜನರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಈ ಹಣಕಾಸು ವರ್ಷದ ಅಂತ್ಯದಲ್ಲಿ ಈ ಫಲಾನುಭವಿಗಳ ಖಾತೆಗೆ ಈ ಹಣವು ಡೆಪಾಸಿಟ್ ಆಗಲಿದೆ," ಎಂದು ಸಚಿವರು ಹೇಳಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ಎಷ್ಟು ಬಳಸಿದ್ದಾರೆ ಎಂಬ ಲೆಕ್ಕ ನೋಡ್ತಾರೆ

"ಈ ಫಲಾನುಭವಿಗಳು ಎಷ್ಟು ಎಲ್‌ಪಿಜಿ ಸಿಲಿಂಡರ್ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ನಾವು ಪರಿಶೀಲನೆ ಮಾಡುತ್ತೇವೆ. ಸಾಮಾನ್ಯವಾಗಿ ಎಲ್ಲಾ ಕುಟುಂಬಕ್ಕೆ ವರ್ಷಕ್ಕೆ ಆರು ಎಲ್‌ಪಿಜಿ ಸಿಲಿಂಡರ್ ಬೇಕಾಗುತ್ತದೆ. ನಾವು ಈ ಪೈಕಿ ಮೂರು ಸಿಲಿಂಡರ್‌ನ ಹಣವನ್ನು ಜನರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತೇವೆ," ಎಂದು ಸಚಿವರು ವಿವರಿಸಿದ್ದಾರೆ.

 

ಈಗಾಗಲೇ ಎಲ್‌ಪಿಜಿ ಬೆಲೆಯು ತೀವ್ರ ಮಟ್ಟಕ್ಕೆ ಏರಿಕೆ ಕಂಡಿದೆ. ಈ ನಡುವೆ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಹೇಳಿದೆ. ವಾರ್ಷಿಕವಾಗಿ ಒಟ್ಟು ಹನ್ನೆರಡು ಸಿಲಿಂಡರ್‌ಗಳಿಗೆ ಸಬ್ಸಿಡಿ ಲಭ್ಯವಾಗಲಿದೆ. ಈ ನಡುವೆ ಗೋವಾ ಸರ್ಕಾರ ವಾರ್ಷಿಕವಾಗಿ ಮೂರು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸಜ್ಜಾಗುತ್ತಿದೆ.

English summary

Goa is Set to provide free LPG cylinders from June end

Goa is Set to provide free LPG cylinders from June end. Here's Details Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X