For Quick Alerts
ALLOW NOTIFICATIONS  
For Daily Alerts

ಚಿನ್ನದ ಸಾಲ ವಿಭಾಗ ಈ ತ್ರೈಮಾಸಿಕದಲ್ಲಿ ಕುಸಿತ ಸಾಧ್ಯತೆ: ಕಾರಣ ಇಲ್ಲಿದೆ

|

ಪ್ರಾಚೀನ ಕಾಲದಿಂದಲೂ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ಪ್ರಮುಖ ಪಾತ್ರ ವಹಿಸಿದೆ. ಚಿನ್ನವನ್ನು ಭಾರತದ ಸಾಂಪ್ರದಾಯಿಕವಾಗಿ ಪ್ರಪಂಚದಲ್ಲಿ ಮೌಲ್ಯಯುತವಾದ ವಿತ್ತೀಯ ಆಸ್ತಿಯೆಂದು ಪರಿಗಣಿಸಲಾಗಿದೆ. ಇದನ್ನು ಭಾರತೀಯರು ಸಮೃದ್ಧಿ ಮತ್ತು ಸ್ಥಾನಮಾನದ ಸಂಕೇತವೆಂದು ಪರಿಗಣಿಸುತ್ತಾರೆ. ಭಾರತೀಯರು ಚಿನ್ನದ ಮೇಲೆ ಭಾವನಾತ್ಮಕ ನಂಟನ್ನು ಕೂಡಾ ಹೊಂದಿದ್ದಾರೆ. ಏಕೆಂದರೆ ಚಿನ್ನವನ್ನು ಮದುವೆಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಬಹಳ ಹಿಂದಿನಿಂದಲೇ ಸ್ಥಾನಮಾನದ ಸಂಕೇತವಾಗಿ ಬಳಸಲಾಗುತ್ತಿದೆ ಮತ್ತು ಚಿನ್ನಕ್ಕೆ ಧಾರ್ಮಿಕವಾಗಿಯೂ ಒಂದು ಸ್ಥಾನಮಾನವಿದೆ.

 

ಚಿನ್ನವು ಭಾರತದ ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಭಾರತದ ಹೆಚ್ಚಿನ ಜನರು ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆಯುವುದು ರೂಢಿ. ಚಿನ್ನವನ್ನು ದೀರ್ಘಕಾಲದವರೆಗೆ ಸುರಕ್ಷಿತ ಹೂಡಿಕೆಯಾಗಿ ನೋಡಲಾಗಿದ್ದು ಅದು ಯಾವುದೇ ಹಣಕಾಸಿನ ಬಿಕ್ಕಟ್ಟಿನ ಚೇತರಿಕೆಗೆ ಸಹಾಯ ಮಾಡುತ್ತದೆ. ಹಲವಾರು ಭಾರತೀಯರು ಹಣವಿದ್ದ ಸಂದರ್ಭದಲ್ಲಿ ಚಿನ್ನವನ್ನು ಮಾಡಿಟ್ಟು ಕಷ್ಟ ಕಾಲದಲ್ಲಿ ಆ ಚಿನ್ನವನ್ನು ಅಡವಿಟ್ಟು ಅಥವಾ ಮಾರಾಟ ಮಾಡಿ ಆರ್ಥಿಕ ಹೊರೆಯನ್ನು ಸರಿದೂಗಿಸು‌ತ್ತಾರೆ.

2021 ರ ಮೊದಲಾರ್ಧದಲ್ಲಿ ಅತ್ಯಧಿಕ ಚಿನ್ನ ಖರೀದಿಸಿದೆ ಆರ್‌ಬಿಐ: ಕಾರಣವೇನು?2021 ರ ಮೊದಲಾರ್ಧದಲ್ಲಿ ಅತ್ಯಧಿಕ ಚಿನ್ನ ಖರೀದಿಸಿದೆ ಆರ್‌ಬಿಐ: ಕಾರಣವೇನು?

ಭಾರತದಲ್ಲಿ ಚಿನ್ನದ ಸಾಲ ವಿಭಾಗವು ಕಳೆದ ವರ್ಷದಿಂದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದವರೆಗೆ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಬದಲಾದ ಲೋನ್ ಟು ವ್ಯಾಲ್ಯೂ (ಎಲ್‌ಟಿವಿ) ಮತ್ತು ಪ್ರಸ್ತುತ ಚಿನ್ನದ ಬೆಲೆಯನ್ನು ಗಮನದಲ್ಲಿರಿಸಿಕೊಂಡ ಮುಂಬರುವ 3 ತ್ರೈಮಾಸಿಕಗಳು ಅದೇ ಬೆಳವಣಿಗೆಯ ಪ್ರವೃತ್ತಿಯನ್ನು ನೋಡುತ್ತವೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕನೆ ಮಾಡಿದಾಗ ದೇಶದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ವಿಭಾಗವೂ ಈ ತ್ರೈಮಾಸಿಕದಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ ಇದಕ್ಕೆ ಮುಖ್ಯ ಕಾರಣಗಳು ಏನು?. ತಿಳಿಯಲು ಮುಂದೆ ಓದಿ.

 ಕಡಿಮೆ ಲೋನ್ ಟು ವ್ಯಾಲ್ಯೂ ದರ

ಕಡಿಮೆ ಲೋನ್ ಟು ವ್ಯಾಲ್ಯೂ ದರ

ಈ ಚಿನ್ನದ ವಲಯದ ಬೆಳವಣಿಗೆಯ ಬಗ್ಗೆ ನಿಖರವಾದ ಕಲ್ಪನೆಯನ್ನು ನೀಡುವುದು ಇನ್ನೂ ಕಠಿಣವಾಗಿದೆ. ಆದರೆ ಕಡಿಮೆ ಎಲ್‌ಟಿವಿ ಚಿನ್ನದ ಸಾಲದ ವಿಭಾಗಕ್ಕೆ ನೆಗೆಟಿವ್‌ ಆಗಿ ಪರಿಣಾಮ ಬೀರುತ್ತದೆ ಎಂದು ಊಹಿಸಬಹುದು. ಲೋನ್ ಟು ವ್ಯಾಲ್ಯೂ ಅನ್ನು ಖರೀದಿಸಿದ ಸ್ವತ್ತಿನ ಮೌಲ್ಯಕ್ಕೆ ಸಾಲದ ಅನುಪಾತವೆಂದು ಗುರುತಿಸಲಾಗಿದೆ. ಈಗಾಗಲೇ ಆರ್‌ಬಿಐನ ಪೂರ್ವ ಕೊರೊನಾ ವೈರಸ್‌ ಸಾಂಕ್ರಾಮಿಕ ಲೋನ್ ಟು ವ್ಯಾಲ್ಯೂ ಅನುಪಾತವು ಶೇ. 90 ರಿಂದ ಶೇ. 75 ಕ್ಕೆ ಹಿಂತಿರುಗಿಸಿದೆ. ಜನರಿಗೆ ಪರಿಹಾರವನ್ನು ಒದಗಿಸಲು ಕೇಂದ್ರ ಬ್ಯಾಂಕ್ ಈ ಮೊದಲು ಆಗಸ್ಟ್ 2020 ರಲ್ಲಿ ಶೇ. 90 ರಷ್ಟು ಲೋನ್ ಟು ವ್ಯಾಲ್ಯೂ ದರವನ್ನು ಮಾಡಿತ್ತು. ಇದು ಅಂದಿನಿಂದ ಈ ವಲಯವನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಈಗ ಜನರು ತಮ್ಮ ಚಿನ್ನದ ಆಭರಣಗಳನ್ನು ಪೂರ್ಣ ಮೌಲ್ಯ ಪಡೆಯಲು ಮಾರಾಟ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ತಮ್ಮ ಚಿನ್ನವನ್ನು ಒತ್ತೆ ಇಟ್ಟರೆ ಅವರು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಹಣಕಾಸಿನ ಒತ್ತಡವು ಜನರು ಚಿನ್ನದ ಸಾಲವನ್ನು ಹೊಂದುವ ಬದಲು ಚಿನ್ನವನ್ನು ಮಾರಾಟ ಮಾಡುವ ಕಡೆಗೆ ಸಾಗುವಂತೆ ಮಾಡುತ್ತದೆ, ಏಕೆಂದರೆ ಈಗ ಅದು ಅದರ ಮೌಲ್ಯವು ಶೇ. 75 ಕ್ಕಿಂತ ಹೆಚ್ಚಿಲ್ಲ.

ಸ್ಪಾಟ್‌ ಗೋಲ್ಡ್‌ ದರಗಳು ಬದಲಾಗುವುದು ಹೇಗೆ?ಸ್ಪಾಟ್‌ ಗೋಲ್ಡ್‌ ದರಗಳು ಬದಲಾಗುವುದು ಹೇಗೆ?

 ಲೋನ್ ಟು ವ್ಯಾಲ್ಯೂಗೆ ಚಿನ್ನದ ಬೆಲೆ ಮುಖ್ಯ
 

ಲೋನ್ ಟು ವ್ಯಾಲ್ಯೂಗೆ ಚಿನ್ನದ ಬೆಲೆ ಮುಖ್ಯ

ಆಗಸ್ಟ್ ತಿಂಗಳಿನಿಂದ, ಭಾರತದ ಚಿನ್ನದ ದರಗಳು ಉತ್ತಮ ಯುಎಸ್ ಉದ್ಯೋಗ ಡೇಟಾ ಮತ್ತು ಯುಎಸ್ ಫೆಡ್‌ನಿಂದ ಹೆಚ್ಚಿನ ಬಡ್ಡಿದರದ ನಿರೀಕ್ಷೆಗಳಿಂದಾಗಿ ತೀವ್ರ ಕುಸಿತವನ್ನು ಕಂಡಿದೆ. ಮುಂಚಿನ ತಿಂಗಳಲ್ಲಿ, ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಿಲ್ಲ. ಹಾಗಾಗಿ, ಚಿನ್ನದ ಬೆಲೆಗಳು ಕುಸಿಯಲಾರಂಭಿಸಿದವು ಮತ್ತು ಚಿನ್ನದ ವಿಭಾಗದ ಮೇಲೆ ಪ್ರಭಾವ ಬೀರಿದವು. ಜನರು ಈಗ ತಮ್ಮ ಚಿನ್ನವನ್ನು ಚಿನ್ನದ ಸಾಲಕ್ಕಾಗಿ ನೀಡುವ ಬದಲು ಮಾರಾಟ ಮಾಡಲು ಆಸಕ್ತಿ ಹೊಂದಿದ್ದಾರೆ, ಏಕೆಂದರೆ ಇದು ತಕ್ಷಣವೇ ಹೆಚ್ಚು ಲಾಭದಾಯಕವಾಗಿರುತ್ತದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯು ಚಿನ್ನದ ಸಾಲಗಳಿಗೆ ಹೊಸ ಸಾಲದ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್ಚುವರಿಯಾಗಿ, ಕೆಲವು ಗ್ರಾಹಕರು ತಮ್ಮ ಚಿನ್ನವನ್ನು ರಿಡೀಮ್ ಮಾಡಲು ಸಾಧ್ಯವಾಗುವುದಿಲ್ಲ, ಇದು ನಂತರ ವಲಯಕ್ಕೆ ಅಡ್ಡಿಯಾಗಬಹುದು. 2020 ಕ್ಕೆ ಹೋಲಿಸಿದರೆ ಈ ವರ್ಷ ಒಟ್ಟಾರೆ ಚಿನ್ನದ ಸಾಲ ಕ್ಷೇತ್ರವು ಬೆಳವಣಿಗೆ ಹೊಂದಿದರೂ, ಉಲ್ಲೇಖಿಸಿದ ಕಾರಣಗಳಿಂದಾಗಿ ಬೆಳವಣಿಗೆಯ ವೇಗವು ನಿಧಾನವಾಗಬಹುದು.

 ಉದಾಹರಣೆ: ಮಣಪ್ಪುರಂನ ವ್ಯಾಪಾರವು ಲಾಭವನ್ನು ತಗ್ಗಿಸಿತು

ಉದಾಹರಣೆ: ಮಣಪ್ಪುರಂನ ವ್ಯಾಪಾರವು ಲಾಭವನ್ನು ತಗ್ಗಿಸಿತು

ಈ ವಲಯದ ಪ್ರಮುಖ ಕಂಪನಿಯಾದ ಮಣಪ್ಪುರಮ್ ಜೂನ್ ತ್ರೈಮಾಸಿಕದಲ್ಲಿ ಕಳಪೆ ಕ್ರೋಡೀಕೃತ ಲಾಭವನ್ನು ಅನುಭವಿಸಿದ್ದು ಅದು ಹೂಡಿಕೆದಾರರನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿದೆ. ಕಳೆದ 3 ತ್ರೈಮಾಸಿಕಗಳಿಗೆ ಹೋಲಿಸಿದರೆ ಅಂದರೆ 8 ಕೋಟಿ, ಫೈನಾನ್ಸ್ ಕಂಪನಿಯು ರೂ. 404 ಕೋಟಿ ಮೌಲ್ಯದ ಚಿನ್ನವನ್ನು 2021 ರ ಆರ್ಥಿಕ ವರ್ಷಾವಾಧಿಯಲ್ಲಿ ಹರಾಜು ಮಾಡಿದೆ. ಕಂಪನಿಯ ಜೂನ್ ತ್ರೈಮಾಸಿಕದ ಚಿನ್ನದ ಸಾಲದ ಪುಸ್ತಕವು ಶೇ. 13.3 ರಷ್ಟು ಕಡಿಮೆಯಾಗಿದೆ. ಅವರ ಒಟ್ಟು ಗ್ರಾಹಕರ ಸಂಖ್ಯೆ 2,00,000 ಕಡಿಮೆಯಾಗಿದೆ ಮತ್ತು ಕಂಪನಿಯು ಆರ್ಥಿಕ ವರ್ಷ 2022 ರ ಸಮಯದಲ್ಲಿ ಒಟ್ಟು ಗ್ರಾಹಕರ ಸಂಖ್ಯೆಯಲ್ಲಿ ಕೇವಲ ಶೇ. 1 ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಮಣಪ್ಪುರಂ ತನ್ನ ಸರಾಸರಿ ಟಿಕೆಟ್ ಗಾತ್ರ ಊಹೆಗಳನ್ನು ಕಡಿಮೆ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಮಣಪ್ಪುರಂನ ಚಿನ್ನದ ಆಸ್ತಿಯ ನಿರ್ವಹಣೆ (ಎಯುಎಮ್‌) ವರ್ಷದಿಂದ ವರ್ಷಕ್ಕೆ ಶೇಕಡ 6.8 ಇಳಿಕೆಯಾಗಿದೆ. ಅಂದರೆ ರೂ. 17700 ಕೋಟಿಯಿಂದ 16500 ಕೋಟಿ ರೂ.ಗೆ ಇಳಿಕೆಯಾಗಿದೆ.

ದೇಶದಲ್ಲಿ ತಿಂಗಳಿಡೀ ಚಿನ್ನ ಬೆಲೆ ದುರ್ಬಲ ಸಾಧ್ಯತೆ: ಹೂಡಿಕೆದಾರರಿಗೆ ಖರೀದಿಗೆ ಸದವಕಾಶದೇಶದಲ್ಲಿ ತಿಂಗಳಿಡೀ ಚಿನ್ನ ಬೆಲೆ ದುರ್ಬಲ ಸಾಧ್ಯತೆ: ಹೂಡಿಕೆದಾರರಿಗೆ ಖರೀದಿಗೆ ಸದವಕಾಶ

 ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?

ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?

ಚಿನ್ನದ ಸಾಲ ವಿಭಾಗದಲ್ಲಿನ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ, "ಚಿನ್ನವಲ್ಲದ ಸಾಲದ ವ್ಯವಹಾರದ ದೃಷ್ಟಿಯಿಂದ ನಾವು ನಮ್ಮ ಕಾರ್ಯತಂತ್ರಗಳನ್ನು ಪುನಃ ರಚಿಸುತ್ತಿದ್ದೇವೆ ಮತ್ತು ಪರಿಸರವು ಸುಧಾರಿಸಿದಂತೆ ನಾವು ಬಲಶಾಲಿಯಾಗಿ ಹೊರಹೊಮ್ಮುವ ವಿಶ್ವಾಸ ಹೊಂದಿದ್ದೇವೆ. ಚಿನ್ನದ ಸಾಲದಲ್ಲಿ, ನಾವು ಉಳಿದ 3 ತ್ರೈಮಾಸಿಕಗಳಲ್ಲಿ ಶೇ. 15 ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದ್ದೇವೆ," ಎಂದು ಹೇಳಿದ್ದಾರೆ. ಇದು ಖಂಡಿತವಾಗಿಯೂ ಆಕ್ರಮಣಕಾರಿ ನಿರೀಕ್ಷೆಯನ್ನು ತೋರಿಸುವುದಿಲ್ಲ ಎಂದು ವರದಿಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕಂಪನಿಯು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬಹುದು. ಚಿನ್ನದ ಕಡಿಮೆ ಬೆಲೆಯೊಂದಿಗೆ ಜನರು ತಮ್ಮ ಅಡವಿಟ್ಟ ಚಿನ್ನವನ್ನು ಮರಳಿ ಪಡೆಯಲು ಆಸಕ್ತಿಯನ್ನು ಕಳೆದುಕೊಳ್ಳಬಹುದು. ಇದು ಯಾವುದೇ ಹಣಕಾಸು ಕಂಪನಿಗೆ ಒತ್ತಡದ ಸ್ಥಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಅಪಾಯವನ್ನು ಕಡಿಮೆ ಮಾಡಲು, ಮಣಪ್ಪುರಂ ಸ್ವತ್ತುಗಳನ್ನು ಹರಾಜು ಹಾಕಬಹುದಿತ್ತು ಎನ್ನಲಾಗಿದೆ.

ದೀರ್ಘಾವಧಿಯಲ್ಲಿ, ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಈ ವಲಯದ ಬಗ್ಗೆ ಹೆಚ್ಚು ಯೋಚಿಸುತ್ತಿರುವುದರಿಂದ ಮತ್ತು ಚಿನ್ನದ ಬೆಲೆಗಳು ಮತ್ತೆ ಬದಲಾಗುತ್ತವೆ, ಪರಿಸ್ಥಿತಿ ಬದಲಾಗಬಹುದು. ಆದರೆ ಪ್ರಸ್ತುತ ಪರಿಸ್ಥಿತಿ ಮತ್ತು ಚೇತರಿಸಿಕೊಳ್ಳುವ ಆರ್ಥಿಕತೆಯು ಚಿನ್ನದ ಸಾಲದ ವಲಯಕ್ಕೆ ಖಂಡಿತವಾಗಿಯೂ ಯೋಗ್ಯವಾದ ವಾತಾವರಣವಾಗಿರುವುದಿಲ್ಲ.

 

English summary

Gold Loan Segment Might Face A Fall This Quarter, Here's Why?

The gold loan segment in India has seen a consistent growth till the first quarter of the current fiscal, since last year. But Might Face A Fall This Quarter. Here's Why?.
Story first published: Saturday, August 14, 2021, 17:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X