For Quick Alerts
ALLOW NOTIFICATIONS  
For Daily Alerts

ಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಏರಿಕೆ ಮಾಡಿದ ಎಚ್‌ಡಿಎಫ್‌ಸಿ

|

ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ತಿಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಫಿಕ್ಸಿಡ್‌ ಡೆಪಾಸಿಟ್‌ಗಳನ್ನು ಹೊಂದಿರುವವರೆ‌ಗೆ ಈ ಸುದ್ದಿಯು ಸಂತಸ ಉಂಟು ಮಾಡುವುದು ಖಂಡಿತ. ಎಚ್‌ಡಿಎಫ್‌ಸಿ ಬ್ಯಾಂಕ್ ಕೆಲವು ಅವಧಿಗಳಲ್ಲಿ ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದನ್ನು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಬ್ಯಾಂಕ್‌ನ ನವೀಕರಣಗಳ ಪ್ರಕಾರ, 2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 5-10 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಲಾಗಿದೆ ಮತ್ತು ಪರಿಷ್ಕೃತ ದರಗಳು ಫೆಬ್ರವರಿ 14 ರಿಂದ ಅನ್ವಯವಾಗುತ್ತವೆ. ಇದಲ್ಲದೆ, ಖಾಸಗಿ ಇನ್ನು ಕೆಲವು ಅವಧಿಗಳ ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಎಚ್‌ಡಿಎಫ್‌ಸಿ ಬ್ಯಾಂಕ್‌ ಒಂದು ವರ್ಷದ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಳ ಮಾಡಿದೆ. ಈ ಹಿಂದೆ 4.9 ಶೇಕಡ ಬಡ್ಡಿ ದರ ಇದ್ದು, ಪ್ರಸ್ತುತ ಅದನ್ನು ಶೇಕಡ 5ಕ್ಕೆ ಏರಿಕೆ ಮಾಡಲಾಗಿದೆ. ಇದಲ್ಲದೆ, 1-2 ವರ್ಷಗಳ ನಡುವಿನ ಅವಧಿಯನ್ನು ಹೊಂದಿರುವ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡ 5 ಆಗಿದೆ. ಎರಡು-ಮೂರು ವರ್ಷಗಳ ಅವಧಿಯ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವು ಶೇಕಡ 5.20 ಎಂದು ಬ್ಯಾಂಕ್ ಹೇಳಿದೆ.

 ಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಏರಿಕೆ ಮಾಡಿದ ಎಚ್‌ಡಿಎಫ್‌ಸಿ

ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಕಾರ, 3-5 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ದರಗಳನ್ನು 5 ಮೂಲ ಅಂಕಗಳಿಂದ ಶೇಕಡ 5.45ಕ್ಕೆ ಹೆಚ್ಚಿಸಲಾಗಿದೆ. 5-10 ವರ್ಷಗಳ ಅವಧಿಯೊಂದಿಗೆ ಠೇವಣಿಗಳ ಮೇಲಿನ ಫಿಕ್ಸಿಡ್‌ ಡೆಪಾಸಿಟ್‌ ದರವು ಪ್ರಸ್ತುತ ಶೇಕಡ 5.60 ಆಗಿದೆ.

ಕಳೆದ ವಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೊ ಬ್ಯಾಂಕ್ ಕೂಡ ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡಾ ತನ್ನ ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

 ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

ಭಾರತದಲ್ಲಿ ರೆಪೋ ದರದಲ್ಲಿ ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರೆಪೋ ದರ ಬದಲಾವಣೆ ಮಾಡದಿರಲು ನಿರ್ಧರಿಸಿದ ಈ ಹಿನ್ನೆಲೆ ರೆಪೋ ದರ ಶೇಕಡಾ 4ರಷ್ಟಾಗಿಯೇ ಉಳಿದುಕೊಂಡಿದೆ. ದೇಶದ ಆರ್ಥಿಕತೆಯು ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದರೂ ರೆಪೋ ದರವನ್ನು ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ 10ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಿದೆ. ಮೇ 2020 ರಲ್ಲಿ, ಬಡ್ಡಿದರವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆ ಹೆಚ್ಚಿಸಲು ಕೇಂದ್ರ ಬ್ಯಾಂಕ್ ತನ್ನ ಪಾಲಿಸಿ ರೆಪೋ ದರ ಅಥವಾ ಅಲ್ಪಾವಧಿಯ ಸಾಲದ ದರವನ್ನು ಪರಿಷ್ಕರಿಸಿತ್ತು.

ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಿಸಿದ್ದ ಎಚ್‌ಡಿಎಫ್‌ಸಿ

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಿದೆ. ಸಾಮಾನ್ಯವಾಗಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಉಳಿಸಿಕೊಳ್ಳುವ ಹಣದ ಮೇಲೆ ಅವಲಂಭಿತವಾಗಿರುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿನ ದೈನಂದಿನ ಹಣದ ಲೆಕ್ಕಾಚಾರ ಮೇಲೆ ತ್ರೈಮಾಸಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

English summary

HDFC Bank Increases Interest Rates on Fixed Deposits, Here's Revised Rates

Bank Customer Alert: HDFC Bank Increases Interest Rates on Fixed Deposits. Revised Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X