ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿ

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂಪಡೆಯಲಾಗದ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಬಡ್ಡಿದರ ಪರಿಷ್ಕರಣೆಯು ಇಂದು ಏಪ್ರಿಲ್ 19, 2022 ರಂದು ಜಾರಿಗೆ ಬಂದಿದೆ.

ಹಿಂತೆಗೆದುಕೊಳ್ಳಲಾಗದ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಅಕಾಲಿಕವಾಗಿ ಹಿಂಪಡೆಯಲು ಸಾಧ್ಯವಿಲ್ಲ. ಅಂದರೆ ಈ ಫಿಕ್ಸಿಡ್ ಡೆಪಾಸಿಟ್ ಅನ್ನು ಅವಧಿ ಮುಗಿಯುವ ಮುನ್ನವೇ ಹಿಂದಕ್ಕೆ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಠೇವಣಿಗಳಿಂದ ಅಕಾಲಿಕವಾಗಿ ಹಿಂಪಡೆಯಲು ಬಯಸುವವರಿಗೆ ಕೆಲವು ಷರತ್ತುಗಳನ್ನು ವಿಧಿಸುತ್ತದೆ. '

"ಯಾವುದೇ ನ್ಯಾಯಾಂಗ / ಶಾಸನಬದ್ಧ ಮತ್ತು / ಯಾವುದೇ ನಿರ್ದೇಶನದ ಸಂದರ್ಭದಲ್ಲಿ ಮಾತ್ರ ಈ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಅಕಾಲಿಕವಾಗಿ ಹಿಂದಕ್ಕೆ ಪಡೆಯಲು ಬ್ಯಾಂಕ್ ಅವಕಾಶ ನೀಡುತ್ತದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಉಲ್ಲೇಖ ಮಾಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿ

ಇನ್ನು ನ್ಯಾಯಾಂಗ / ಶಾಸನಬದ್ಧ ಮತ್ತು / ಯಾವುದೇ ನಿರ್ದೇಶನದ ಸಂದರ್ಭದಲ್ಲಿ ಅಕಾಲಿಕವಾಗಿ ಹಿಂತೆಗೆದುಕೊಳ್ಳಲಾದ ಠೇವಣಿಗಳ ಮೇಲೆ ಬ್ಯಾಂಕ್ ಯಾವುದೇ ಬಡ್ಡಿಯನ್ನು ಪಾವತಿ ಮಾಡಲ್ಲ. ಒಂದು ವೇಳೆ ಅಸಲಿ ಮೊತ್ತಕ್ಕೆ ಬಡ್ಡಿಯನ್ನು ಪಾವತಿ ಮಾಡಿದ್ದರೆ ಅದನ್ನು ಬ್ಯಾಂಕ್ ಕಡಿತ ಮಾಡಿ, ಬರೀ ಅಸಲಿ ಮೊತ್ತವನ್ನು ಮಾತ್ರ ನೀಡುತ್ತದೆ.

"ಸಾವಿನ ಕಾರಣದಿಂದಾಗಿ ಈ ಫಿಕ್ಸಿಡ್ ಡೆಪಾಸಿಟ್‌ಗಳ ಹಣವನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ, ಇದಕ್ಕೆ ನೀವು ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ಅದು ಈ ಮೊದಲೇ ನಿಗದಿ ಮಾಡಿದ ಬಡ್ಡಿದರವಾಗಿರಬಹುದು ಅಥವಾ ಠೇವಣಿಯು ಬ್ಯಾಂಕ್‌ನಲ್ಲಿ ಉಳಿದಿರುವ ಅವಧಿಗೆ ಅನ್ವಯವಾಗುವ ಮೂಲ ದರವಾಗಿರುತ್ತದೆ. ಯಾವುದು ಕಡಿಮೆಯೋ ಅದನ್ನು ಪಾವತಿ ಮಾಡಬೇಕಾಗುತ್ತದೆ," ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿ

ಹಿಂತೆಗೆದುಕೊಳ್ಳಲಾಗದ ಠೇವಣಿಗಳು 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿಗಳಿಗೆ ಪ್ರತ್ಯೇಕವಾಗಿ ಲಭ್ಯವಿವೆ. ಠೇವಣಿಯನ್ನು ''Do Not Renew'' ಎಂಬ ಮೆಚ್ಯೂರಿಟಿ ಸೂಚನೆಯೊಂದಿಗೆ ನೋಂದಾಯಿಸಲಾಗುತ್ತದೆ. ಹಿಂತೆಗೆದುಕೊಳ್ಳಲಾಗದ ಠೇವಣಿಗಳ ಮೇಲೆ ಸ್ವೀಪ್-ಇನ್ ಮತ್ತು ಭಾಗಶಃ ಹಿಂಪಡೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ. ಮೊತ್ತವು 5 ಕೋಟಿಗಳಾಗಿದ್ದರೆ ಮಾತ್ರ ಬಡ್ಡಿ ದರವನ್ನು ಅನ್ವಯಿಸಲಾಗುತ್ತದೆ. ಈ ಫಿಕ್ಸಿಡ್ ಡೆಪಾಸಿಟ್ ಅನ್ನು ಕನಿಷ್ಠ 91 ದಿನಗಳ ಅವಧಿಗೆ ಬುಕ್ ಮಾಡಬಹುದು. 6 ತಿಂಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ತ್ರೈಮಾಸಿಕ ಬಡ್ಡಿಯನ್ನು ನಿರ್ಧಾರ ಮಾಡಲಾಗುತ್ತದೆ.

ಎಚ್‌ಡಿಎಫ್‌ಸಿ ಫಿಕ್ಸಿಡ್ ಡೆಪಾಸಿಟ್ ದರ

91 ದಿನದಿಂದ 6 ತಿಂಗಳು: 3.75 ಬಡ್ಡಿದರ
6 ತಿಂಗಳು 1 ದಿನದಿಂದ 9 ತಿಂಗಳು: 4.00 ಬಡ್ಡಿದರ
9 ತಿಂಗಳು 1 ದಿನದಿಂದ 1 ವರ್ಷ: 4.15 ಬಡ್ಡಿದರ
1 ವರ್ಷದಿಂದ 15 ತಿಂಗಳು: 4.55 ಬಡ್ಡಿದರ
15 ತಿಂಗಳಿನಿಂದ 18 ತಿಂಗಳು: 4.55 ಬಡ್ಡಿದರ
18 ತಿಂಗಳಿನಿಂದ 21 ತಿಂಗಳು: 4.55 ಬಡ್ಡಿದರ
21 ತಿಂಗಳಿನಿಂದ 2 ವರ್ಷ: 4.55 ಬಡ್ಡಿದರ
2 ತಿಂಗಳು 1 ದಿನದಿಂದ 3 ವರ್ಷ: 4.60 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: 4.70 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: 4.70 ಬಡ್ಡಿದರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+