ಕನಸಿನ ಮನೆ ಸ್ವಂತವಾಗಿಸಿಕೊಳ್ಳುವುದು ಸುಲಭದ ಮಾತಲ್ಲ. ಭಾರತದ ಪ್ರಮುಖ ಸಂಸ್ಥೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ - ಈ ಎಲ್ಲವೂ ಗೃಹ ಸಾಲ ಬಡ್ಡಿ ದರವನ್ನು ಕಡಿಮೆ ಮಾಡಿವೆ. ಹಬ್ಬದ ಸೀಸನ್ ಸೇರಿಕೊಂಡು ಭರ್ಜರಿ ಆಫರ್ ಗಳಿವೆ.
ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ ಗೃಹ ಸಾಲದ ಬಡ್ಡಿ ದರ, ಜತೆಗೆ ಪ್ರೊಸೆಸಿಂಗ್ ಶುಲ್ಕ ಮೇಲೆ ರಿಯಾಯಿತಿ ಅಥವಾ ಮಹಿಳೆಯರು ಗೃಹ ಸಾಲ ಪಡೆದುಕೊಳ್ಳುವಂತಿದ್ದರೆ ವಿಶೇಷ ಆಫರ್ ಗಳಿವೆ. ಈ ಲೇಖನದಲ್ಲಿ ಕೆಲವು ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರ ಮತ್ತಿತರ ಮಾಹಿತಿಗಳು ಇಲ್ಲಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 30 ಲಕ್ಷ ರುಪಾಯಿಯೊಳಗಿನ ಸಾಲಕ್ಕೆ ಬಡ್ಡಿ ದರ 6.90 ಪರ್ಸೆಂಟ್ ನಿಂದ ಶುರುವಾಗುತ್ತದೆ. 30 ಲಕ್ಷ ರುಪಾಯಿ ಮೇಲ್ಪಟ್ಟ ಸಾಲಕ್ಕೆ 7 ಪರ್ಸೆಂಟ್ ಬಡ್ಡಿ ದರ. ಸಿಬಿಲ್ ಸ್ಕೋರ್ ಆಧಾರದಲ್ಲಿ 75 ಲಕ್ಷ ರುಪಾಯಿ ಮೇಲ್ಪಟ್ಟ ಸಾಲಕ್ಕೆ 25 bps ಬಡ್ಡಿ ವಿನಾಯಿತಿ ಸಿಗುತ್ತದೆ. ಕ್ರೆಡಿಟ್ ಸ್ಕೋರ್ ಆಧಾರದಲ್ಲಿ 20 bps ಬಡ್ಡಿ ದರದ ವಿನಾಯಿತಿ ಸಿಗುತ್ತದೆ. ಅದು ಈ ಹಿಂದೆ 10 bps ಇತ್ತು. ಅದು ಎಷ್ಟು ಮೊತ್ತಕ್ಕೆ ಗೊತ್ತಾ? 30 ಲಕ್ಷ ರುಪಾಯಿ ಮೇಲ್ಪಟ್ಟು 2 ಕೋಟಿ ರುಪಾಯಿಯೊಳಗೆ ಭಾರತದಲ್ಲಿ ಈ ವಿನಾಯಿತಿ ಸಿಗುತ್ತದೆ. 8 ಮೆಟ್ರೋ ನಗರಗಳಲ್ಲಿ 3 ಕೋಟಿ ರುಪಾಯಿ ತನಕದ ಸಾಲಕ್ಕೆ YONO ಮೂಲಕ ಅಪ್ಲೈ ಮಾಡಿದರೆ ಹೆಚ್ಚುವರಿ 5 bps ವಿನಾಯಿತಿ ಸಿಗುತ್ತದೆ. ಇನ್ನು ಮಹಿಳೆಯರಿಗೆ ಹೆಚ್ಚುವರಿಯಾಗಿ 5 bps ಬಡ್ಡಿ ದರ ವಿನಾಯಿತಿ ದೊರೆಯುತ್ತದೆ.
ಕೊಟಕ್ ಮಹೀಂದ್ರಾ ಬ್ಯಾಂಕ್
ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಗೃಹ ಸಾಲ ಬಡ್ಡಿ ದರ 6.90 ಪರ್ಸೆಂಟ್ ನಿಂದ ಶುರುವಾಗುತ್ತದೆ. ಬೇರೆ ಬ್ಯಾಂಕ್ ನಿಂದ ಸಾಲದ ವರ್ಗಾವಣೆ ಮಾಡಿದರೆ ಇಪ್ಪತ್ತು ಲಕ್ಷ ರುಪಾಯಿ ತನಕ ಉಳಿತಾಯ ಮಾಡಬಹುದು. ಸಾಲದ ಎಲ್ಲ ಉತ್ಪನ್ನಗಳಿಗೆ ಮಹಿಳೆಯರಿಗೆ ವಿಶೇಷ ದರ ದೊರೆಯಲಿದೆ.
ಬ್ಯಾಂಕ್ ಆಫ್ ಬರೋಡಾ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದಿಂದ ಶನಿವಾರ ಘೋಷಣೆ ಮಾಡಿದ ಪ್ರಕಾರ, ರೆಪೋ ಆಧಾರಿತ ಗೃಹ ಸಾಲ ಬಡ್ಡಿ ದರ 15 ಬೇಸಿಸ್ ಪಾಯಿಂಟ್ ಕಡಿಮೆ ಆಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಗೃಹ ಸಾಲ ಬಡ್ಡಿ ದರವು 6.85 ಪರ್ಸೆಂಟ್ ನಿಂದ ಆರಂಭವಾಗುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
30 ಲಕ್ಷ ರುಪಾಯಿ ಮೇಲ್ಪಟ್ಟ ಗೃಹ ಸಾಲಕ್ಕೆ 10 ಬೇಸಿಸ್ ಪಾಯಿಂಟ್ಸ್ ಬಡ್ಡಿ ದರ ಇಳಿಕೆ ಮಾಡಲಾಗಿದೆ. ಇನ್ನು ಮಹಿಳೆಯರು ಸಾಲ ಪಡೆಯುವುದಾದರೆ ಬಡ್ಡಿ ದರದಲ್ಲಿ 5 ಬೇಸಿಸ್ ಪಾಯಿಂಟ್ಸ್ ವಿನಾಯಿತಿ ಸಿಗುತ್ತದೆ. ಯೂನಿಯನ್ ಬ್ಯಾಂಕ್ ನಲ್ಲಿ ಬಡ್ಡಿ ದರವು 7 ಪರ್ಸೆಂಟ್ ನಿಂದ ಶುರುವಾಗುತ್ತದೆ. ಇದೇ ಡಿಸೆಂಬರ್ 31ರ ತನಕ ಗೃಹ ಸಾಲದ ಮೇಲೆ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಆಕ್ಸಿಸ್ ಬ್ಯಾಂಕ್ ನಿಂದ 6.9 ಪರ್ಸೆಂಟ್ ನಿಂದ ಬಡ್ಡಿ ದರ ಶುರು ಆಗುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಕೂಡ ಗ್ರಾಹಕರಿಗೆ 6.9 ಪರ್ಸೆಂಟ್ ದರದಲ್ಲಿ ದೊರೆಯುತ್ತದೆ. ಆ ಬ್ಯಾಂಕ್ ನಿಂದ 0.5 ಪರ್ಸೆಂಟ್ ಪ್ರೊಸೆಸಿಂಗ್ ಫೀ ಆಗುತ್ತದೆ. ಆದರೆ ಶುಲ್ಕವು ಗರಿಷ್ಠ 3000 ರುಪಾಯಿ ಅಷ್ಟೇ. ಇನ್ನು ಐಸಿಐಸಿಐ ಬ್ಯಾಂಕ್ ನಿಂದ 6.95%ನಿಂದ 7.95% ತನಕ ಗೃಹ ಸಾಲ ಬಡ್ಡಿ ದರ ಇದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications