For Quick Alerts
ALLOW NOTIFICATIONS  
For Daily Alerts

ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!

|

ನಾವು ನಮ್ಮ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬಹುದು. ನಮಗೆ ಬೇಕಾದಂತೆ ಇಂಜಿನ್, ಸೀಟ್, ವೀಲ್ ಎಲ್ಲಾ ಮೋಡಿಫಿಕೇಶನ್ ಮಾಡಿಕೊಳ್ಳಬಹುದು. ಆದರೆ ಈ ಬದಲಾವಣೆಯೂ ಕೂಡಾ ಹಲವಾರು ಅಂಶದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಕಾರಿನ ವಿಮಾ ಪಾಲಿಸಿಯ ಮೇಲೆ ಈ ಮೋಡಿಫಿಕೇಶನ್ ಪ್ರಭಾವವನ್ನು ಉಂಟು ಮಾಡುತ್ತದೆ.

ನಿಮ್ಮ ಕಾರನ್ನು ನೀವು ಬದಲಾವಣೆ ಮಾಡುತ್ತಿರಲಿ ಅಥವಾ ಕಾರಿನ ಭದ್ರತೆ, ಕಾರ್ಯಕ್ಷಮತೆಯಲ್ಲಿ ಏನಾದರೂ ಬದಲಾವಣೆ ಮಾಡುತ್ತಿರಲಿ, ನೀವು ಈ ಬದಲಾವಣೆಗಳ ಬಗ್ಗೆ ನಿಮ್ಮ ಕಾರಿನ ವಿಮೆ ಒದಗಿಸಿದವರಿಗೆ ಮಾಹಿತಿ ನೀಡುವುದು ಮುಖ್ಯವಾಗಿದೆ. ನೀವು ಕಾರಿನಲ್ಲಿ ಏನು ಬದಲಾವಣೆ ಮಾಡಿದ್ದೀರಿ ಎಂಬ ಆಧಾರದಲ್ಲಿ ನಿಮ್ಮ ಕಾರಿನ ವಿಮೆಯು ಕೂಡಾ ಬದಲಾವಣೆ ಆಗಲಿದೆ. ಕಾರಿನ ವಿಮಾ ಪ್ರೀಮಿಯಂ ಅಧಿಕವಾಗಬಹುದು ಅಥವಾ ಕಡಿಮೆ ಆಗಬಹುದು.

ಗಮನಿಸಿ: ಕಾರಿನ ಬಳಕೆ ಆಧಾರದಲ್ಲಿ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿಗಮನಿಸಿ: ಕಾರಿನ ಬಳಕೆ ಆಧಾರದಲ್ಲಿ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿ

ಹಾಗಾದರೆ ನೀವು ಕಾರಿಗೆ ಹೊಸ ಪೇಂಟ್ ಹಾಕಿಸಿದರೆ, ಕಾರಿನ ಸೀಟು ಬದಲಾವಣೆ ಮಾಡಿದರೆ, ಇಂಜಿನ್ ಬದಲಾವಣೆ ಮಾಡಿಸಿದರೆ, ಇಂಜಿನ್‌ನಲ್ಲಿ ಮೋಡಿಫಿಕೇಶನ್ ಮಾಡಿಸಿದರೆ, ವೀಲ್ಹ್ ಬದಲಾವಣೆ ಮಾಡಿದರೆ ಕಾರಿನ ಮೇಲಿನ ವಿಮೆ ಹೆಚ್ಚಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ?, ಯಾವ ಬದಲಾವಣೆ ಮಾಡಿದರೆ ಕಾರಿನ ವಿಮಾ ಪ್ರೀಮಿಯಂ ಕಡಿಮೆ ಆಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಕಾರಿಗೆ ಹೊಸ ಬಣ್ಣ ಹಾಕಿಸಿದರೆ?

ಕಾರಿಗೆ ಹೊಸ ಬಣ್ಣ ಹಾಕಿಸಿದರೆ?

ಸಾಮಾನ್ಯವಾಗಿ ಕಾರಿಗೆ ನಾವು ಹೇಗೆ ಬಣ್ಣ ಹಾಕಿಸಿದ್ದೇವೆ ಎಂಬುವುದರ ಮೇಲೆ ಪ್ರೀಮಿಯಂ ನಿರ್ಧಾರವಾಗುತ್ತದೆ. ನೀವು ಕಾರಿಗೆ ಆಕರ್ಷಕವಾದ ಬಣ್ಣ, ಡಿಸೈನ್ ಮಾಡಿಸಿದರೆ ನಿಮ್ಮ ಕಾರಿನ ಕಳ್ಳತನ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದಾಗಿ ಕಾರಿನ ಪ್ರೀಮಿಯಂ ಕೂಡಾ ಹೆಚ್ಚಾಗುತ್ತದೆ.

 ಕಾರಿನ ಸೀಟ್, ಮೊದಲಾದವುಗಳ ಬದಲಾವಣೆ ಮಾಡಿದರೆ?

ಕಾರಿನ ಸೀಟ್, ಮೊದಲಾದವುಗಳ ಬದಲಾವಣೆ ಮಾಡಿದರೆ?

ನೀವು ಕಾರಿನ ಸೀಟು ಮೊದಲಾದ ಕಾರಿನ ಒಳಭಾಗದಲ್ಲಿ ಬದಲಾವಣೆಯನ್ನು ಮಾಡುವಾಗ ನಿಮ್ಮ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗುತ್ತದೆ. ಕಾರಿನ ವೀಲ್, ಕಾರಿನ ಪೆಡಲ್ಸ್, ಕಾರಿನ ಸಿಸ್ಟಮ್, ಕಾರಿನ ಸೀಟು ಬದಲಾವಣೆಯೂ ಈ interior ಬದಲಾವಣೆಯಲ್ಲಿ ಸೇರ್ಪಡೆಯಾಗುತ್ತದೆ. ನೀವು ಬದಲಾವಣೆ ವೇಳೆ ಯಾವ ಗುಣಮಟ್ಟದ ವಸ್ತು ಹಾಕಿಸಿದ್ದೀರಿ ಎಂಬುವುದರ ಮೇಲೆ ನಿಮ್ಮ ವಿಮಾ ಪ್ರೀಮಿಯಂ ನಿರ್ಧಾರವಾಗುತ್ತದೆ.

 ಇಂಜಿನ್ ಮೋಡಿಫಿಕೇಶನ್
 

ಇಂಜಿನ್ ಮೋಡಿಫಿಕೇಶನ್

ಜನರು ಹೆಚ್ಚಾಗಿ ಕಾರಿನ ಇಂಜಿನ್‌ನಲ್ಲಿ ಮೋಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ಹೆಚ್ಚು ಸ್ಪೀಡ್ ಪಡೆಯುವ ಹಿನ್ನೆಲೆಯಿಂದಾಗಿ ಹಲವಾರು ಮಂದಿ ಕಾರಿ ಇಂಜಿನ್ ಮೋಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ಈ ಮೋಡಿಫಿಕೇಶನ್ ಕಾರಿನ ಅಪಘಾತ ಅಥವಾ ಕಾರಿನ ಕಳ್ಳತನದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ವಿಮಾ ಪ್ರೀಮಿಯಂ ಕೂಡಾ ಅಧಿಕವಾಗಬಹುದು.

 ಇಂಜಿನ್ ಬದಲಾವಣೆ ಮಾಡಿದರೆ?

ಇಂಜಿನ್ ಬದಲಾವಣೆ ಮಾಡಿದರೆ?

ವಿಮಾ ಸಂಸ್ಥೆಯು ಮಾದರಿ, ಬ್ರಾಂಡ್ ಮತ್ತು ಉತ್ಪಾದನಾ ವರ್ಷದ ತಯಾರಿಕೆಯ ಆಧಾರದ ಮೇಲೆ ಫ್ಯಾಕ್ಟರಿಯ ಇಂಜಿನ್‌ಗಳ ಮೇಲೆ ಪ್ರಮಾಣಿತ ಕಾರು ವಿಮಾ ಪ್ರೀಮಿಯಂ ಅನ್ನು ವಿಧಿಸುತ್ತದೆ. ಆದ್ದರಿಂದ, ಮೂಲ ತಯಾರಕರ ಎಂಜಿನ್ ಅನ್ನು ಬೇರೆ ಇಂಜಿನ್‌ನೊಂದಿಗೆ ಬದಲಾವಣೆ ಮಾಡುವುದು ಪ್ರೀಮಿಯಂ ಶುಲ್ಕಗಳ ಮೇಲೆ ಪರಿಣಾಮ ಬೀರುತ್ತದೆ.

 ಕಾರಿನ ವೀಲ್ಸ್ ಬದಲಾಯಿಸಿದರೆ ವಿಮೆ ಹೇಗೆ?

ಕಾರಿನ ವೀಲ್ಸ್ ಬದಲಾಯಿಸಿದರೆ ವಿಮೆ ಹೇಗೆ?

ಈ ದಿನಗಳಲ್ಲಿ ಕಾರಿನ ವೀಲ್ಸ್ ಅನ್ನು ಬದಲಾವಣೆ ಮಾಡುವುದು ಸಾಮಾನ್ಯವಾಗಿದೆ. ಈ ರೀತಿಯಾಗಿ ಕಾರಿನ ವೀಲ್ಸ್ ಅನ್ನು ಬದಲಾವಣೆ ಮಾಡುವುದು ಕಾರಿನ ಮೌಲ್ಯ ಹೆಚ್ಚಿಸುವುದು ಮಾತ್ರವಲ್ಲ, ಅಪಘಾತ ಹಾಗೂ ಕಳ್ಳತನದ ಅಪಾಯ ಅಧಿಕ ಮಾಡುತ್ತದೆ. ಇದರಿಂದಾಗಿ ಕಾರಿನ ವಿಮಾ ಪ್ರೀಮಿಯಂ ಅಧಿಕವಾಗುತ್ತದೆ.

 ಸಸ್ಪೆನ್ಷನ್ ಸಿಸ್ಟಮ್ ಮತ್ತು ಬ್ರೇಕ್‌ ಅಪ್‌ಗ್ರೇಡ್

ಸಸ್ಪೆನ್ಷನ್ ಸಿಸ್ಟಮ್ ಮತ್ತು ಬ್ರೇಕ್‌ ಅಪ್‌ಗ್ರೇಡ್

ನಿಮ್ಮ ಕಾರಿನ ಬ್ರೇಕ್, ಸಸ್ಪೆನ್ಷನ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡುವುದು ಅಥವಾ ಬದಲಾವಣೆ ಮಾಡುವುದು ನಿಮ್ಮ ಕಾರಿನಲ್ಲಿ ಅಪಾಯವನ್ನು ಅಧಿಕ ಮಾಡುತ್ತದೆ. ನಿಮ್ಮ ಕಾರಿನಲ್ಲಿ ಯಾವುದೇ ಇಂತಹ ಮಾರ್ಪಾಡು ಇದ್ದರೆ ನೀವು ಕಾರಿನ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗುತ್ತದೆ. ವಿಮಾ ಸಂಸ್ಥೆ ನಿಮ್ಮ ಕಾರಿನ ವಿಮಾ ಪ್ರೀಮಿಯಂ ಮೌಲ್ಯಮಾಪನ ಮಾಡಲಿದೆ.

 ಯಾವ ಬದಲಾವಣೆಯಿಂದ ಕಾರಿನ ವಿಮಾ ಪ್ರೀಮಿಯಂ ಇಳಿಕೆ

ಯಾವ ಬದಲಾವಣೆಯಿಂದ ಕಾರಿನ ವಿಮಾ ಪ್ರೀಮಿಯಂ ಇಳಿಕೆ

ನೀವು ಕಾರಿನಲ್ಲಿ ಮಾಡಿದ ಎಲ್ಲಾ ಬದಲಾವಣೆಗಳಿಂದ ನಿಮ್ಮ ಕಾರಿನ ವಿಮಾ ಪ್ರೀಮಿಯಂ ಅಧಿಕವಾಗದು. ARAI ಅನುಮೋದಿತ anti-theft ಅಲಾರಾಂ ಅನ್ನು ಅಳವಡಿಕೆ ಮಾಡಿದರೆ, ಕಾರಿನಲ್ಲಿ ಟ್ರಾಕಿಂಗ್ ಸಿಸ್ಟಮ್ ಅನ್ನು ನೀವು ಹಾಕಿದರೆ ನಿಮ್ಮ ಕಾರಿನ ವಿಮಾ ಪ್ರೀಮಿಯಂ ಕಡಿಮೆಯಾಗಲಿದೆ. ಪಾರ್ಕಿಂಗ್ ಸೆನ್ಸರ್ ಅನ್ನು ಅಳವಡಿಕೆ ಮಾಡುವುದರಿಂದಾಗಿ ನಿಮ್ಮ ಕಾರು ಕಳ್ಳತನವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದ್ದರಿಂದಾಗಿ ಕಾರಿನ ವಿಮಾ ಪ್ರೀಮಿಯಂ ಕಡಿಮೆಯಾಗಲಿದೆ. ಕೆಲವು ಮೋಡಿಫಿಕೇಶನ್ ಅಪಘಾತ, ಕಳ್ಳತನದ ಅಪಾಯವನ್ನು ಕಡಿಮೆ ಮಾಡುತ್ತದೆ. ಆ ಸಂದರ್ಭದಲ್ಲಿ ವಿಮಾ ಪ್ರೀಮಿಯಂ ಮೊತ್ತ ಕೂಡಾ ಇಳಿಕೆಯಾಗುತ್ತದೆ.

English summary

How Modifications To Your Car Impacts Insurance Policy, Explained in Kannada

Car enthusiasts often modify their car to enhance its aesthetic appeal, add more comfort, or improve performance. These changes can affect the vehicle insurance premium as they may compromise the safety aspect of the vehicle.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X